ಸೋಶಿಯಲ್ ಮೀಡಿಯಾ (Social Media) ಅನೇಕರ ಪಾಲಿಗೆ ವರವಾಗಿದೆ. ರಾತ್ರೋ ರಾತ್ರಿ ಅನೇಕರು ಸ್ಟಾರ್ (Star) ಆಗಿದ್ದಾರೆ. ತನ್ನ ವಿಶಿಷ್ಠ, ವಿಚಿತ್ರ ವಿಡಿಯೋಗಳ ಮೂಲಕ ಅನೇಕರು ಹೆಸರು ಮಾಡಿದ್ದಾರೆ. ಏಕ್ ಪ್ಯಾರ್ ಕಾ ನಗ್ಮಾ ಹಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆದ ರಾನು ಮಂಡಲ್ (Ranu Mondal) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ವಿಡಿಯೋದಲ್ಲಿ ರಾನು ಮಂಡಲ್ ವಧುವಿನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಯೇ ಕ್ಯಾ ಹುವಾ, ಕೈಸೈ ಹುವಾ ಎಂದು ಹಾಡು ಹಾಡಿದ್ದಾರೆ. ಈ ಹಾಡಿನ ವಿಡಿಯೋ ಇದೀಗ ವೈರಲ್ (Video Viral) ಆಗಿದೆ.
ರಾನು ಮಂಡಲ್ ಹಾಡುಗಳು ವೈರಲ್
ವಧುವಿನಂತೆ ರೆಡಿಯಾಗಿ ಬಂದು ಹಾಡಿದ ರಾನು ಮಂಡಲ್ ವಿಡಿಯೋ ವೈರಲ್ ಆಗಿದ್ದು. ಈ ಹೊಸ ಅವತಾರವನ್ನು ನೋಡಿದ ನೆಟಿಜನ್ಗಳು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಈಕೆ ದೇಶಕ್ಕೆ ಕರೋನಾಗಿಂತ ಹೆಚ್ಚು ಅಪಾಯವಿದೆ, ಶಾಂತವಾಗು ತಾಯಿ, ನಿಜವಾಗಿಯೂ ನಿನಗೆ ಏನಾಯಿತು. ಯಾರೋ ನಿಮ್ಮನ್ನುಈ ರೀತಿ ಮಾಡಿದವರು. ನಿಮ್ಮ ಧ್ವನಿಗೆ ಏನಾಯಿತು, ಇದು ಹುಚ್ಚುತನ ಎಂದೆಲ್ಲಾ ಕಮೆಂಟ್ ಮಾಡ್ತಿದ್ದಾರೆ.
View this post on Instagram
ಟ್ರೋಲ್ಗೆ ಗುರಿಯಾದ ರಾನು ಮಂಡಲ್
ರಾನು ಮಂಡಲ್ ಅವರ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗಷ್ಟೇ ಆಕೆ ಹುಡುಗನ ಜೊತೆಗಿನ ಮಾಡಿದ ವಿಡಿಯೋ ವೈರಲ್ ಆಗಿತ್ತು. ಆಗ ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ದಕ್ಕೆ ಅನೇಕರು ಆಕೆಯನ್ನು ಟ್ರೋಲ್ ಮಾಡಿದ್ದರು. ಹಾಗಾಗಿ ರಾನು ಮಂಡಲ್ ಟ್ರೋಲ್ಗೆ ಗುರಿಯಾಗುತ್ತಿದ್ದಾರೆ. ರಾನು ಮಂಡಲ ರಾತ್ರೋರಾತ್ರಿ ಸ್ಟಾರ್ ಆದ್ರು ಆದ್ರೆ, ಅವರ ವರ್ತನೆ, ವಿಡಿಯೋಗಳಿಂದ ಭಾರಿ ಸುದ್ದಿಯಾಗಿದ್ದಾರೆ.
ರಾನು ಮಂಡಲ್ ಅನೇಕ ವಿಡಿಯೋಗಳು ವೈರಲ್
ರಾನು ಮಂಡಲ್ ಅವರು 'ಕಚ್ಚಾ ಬಾದಮ್' ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಹಿಂದೆ ರಾನು ಮಂಡಲ್ ಹಾಡಿದ ಹಾಡು ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಇದಾದ ನಂತರ ಅವರು ಹಾಡಿದ ಹಾಡು, ಅವರ ಧ್ವನಿಯನ್ನು ಕೇಳಲು ಜನ ಇಷ್ಟಪಡುತ್ತಿದ್ದರು. ಹಾಡು ಬೇರೆ ಬೇರೆ ವೇದಿಕೆಗಳಲ್ಲಿ ಸದ್ದು ಮಾಡಿತು.
View this post on Instagram
ಹಾಡು , ವಿಡಿಯೋ ಅಷ್ಟೇ ಅಲ್ಲ ರಾನು ಮಂಡಲ್ ಬೇರೆ ಬೇರೆ ಕಾರಣಗಳಿಗೆ ಟ್ರೋಲ್ ಆದರು. ಇದೀಗ ರಾನು ಮಂಡಲ್ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಈ ವಿಡಿಯೋವನ್ನು ನೆಟಿಜನ್ಗಳು ಎಂಜಾಯ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ಹಲವರು ಕಾಮೆಂಟ್ಗಳನ್ನೂ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ