Ranu Mondal: ರೈಲ್ವೆ ಸಿಂಗರ್​ ರಾನು ಮಂಡಲ್​ ಹಾಡಿದ ಮೊದಲ ಹಾಡು ಬಿಡುಗಡೆ..!

Ranu Mondal: ಸಂಗೀತ ನಿರ್ದೇಶಕ ಹಿಮೇಶ್​ ರೇಶಮಿಯಾ 18 ಗಂಟೆಗಳ ಹಿಂದೆಯೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ರಾನು ಹಾಡಿರುವ ಹಾಡಿನ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ರಾನು ಹಾಡಿರುವ ಮೊದಲ ಹಾಡು ಇವತ್ತು ಬಿಡುಗಡೆಯಾಗಲಿದೆ ಎನ್ನುವ ಸೂಚನೆ ಸಹ ನೀಡಿದ್ದಾರೆ.

Anitha E | news18-kannada
Updated:September 11, 2019, 11:14 AM IST
Ranu Mondal: ರೈಲ್ವೆ ಸಿಂಗರ್​ ರಾನು ಮಂಡಲ್​ ಹಾಡಿದ ಮೊದಲ ಹಾಡು ಬಿಡುಗಡೆ..!
ರೈಲ್ವೆ ಸಿಂಗರ್ ರಾನು ಹಾಗೂ ಹಿಮೇಶ್​
Anitha E | news18-kannada
Updated: September 11, 2019, 11:14 AM IST
ರೈಲ್ವೆ ನಿಲ್ದಾಣದಿಂದ ಸಾಮಾಜಿಕ ಜಾಲತಾಣದ ಮೂಲಕ ಸೆಲೆಬ್ರಿಟಿಯಾಗಿ ಮಿಂಚುವ ಮೂಲಕ ಜನಗಳ ಮನಸ್ಸಿನಲ್ಲಿ ತನ್ನದೇ ಆದ ಸ್ಥಾನ ಸಂಪಾದಿಸಿಕೊಂಡಿರುವ ರಾನು ಈಗ ಸ್ಟಾರ್​ ಗಾಯಕಿ. ಹೌದು, ರಾನು ಹಾಡಿರುವ 'ತೇರಿ ಮೇರಿ ತೇರಿ ಮೇರಿ ತೇರಿ ಮೇರಿ ಕಹಾನಿ...' ಹಾಡಿನ ಟೀಸರ್ ಬಿಡುಗಡೆಯಾಗಿದೆ.

ಸಂಗೀತ ನಿರ್ದೇಶಕ ಹಿಮೇಶ್​ ರೇಶಮಿಯಾ 18 ಗಂಟೆಗಳ ಹಿಂದೆಯೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ಹಾಡಿನ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ರಾನು ಹಾಡಿರುವ ಮೊದಲ ಹಾಡು ಇವತ್ತು ಬಿಡುಗಡೆಯಾಗಲಿದೆ ಎನ್ನುವ ಸೂಚನೆ ಸಹ ನೀಡಿದ್ದಾರೆ.




 


Loading...



View this post on Instagram




 

Official teaser By GOD’S Grace🙏 Of our epic blockbuster track Teri meri kahani from Happy hardy and heer , Full song coming out tom Thanks for all your love and support Always❤🙏 Blessed💫✨ #terimerikahani #happyhardyandheer #instadaily #instalike #viral #trending #himeshreshammiya #ranumondal #GOD🙏


A post shared by Himesh Reshammiya (@realhimesh) on






ದೇವರ ಕೃಪೆಯಿಂದ ಎಪಿಕ್​ ಬ್ಲಾಕ್​ಬಸ್ಟರ್​ 'ತೇರಿ ಮೇರಿ ಕಹಾನಿ' ಹಾಡನ್ನು ನಾಳೆ ರಿಲೀಸ್ ಮಾಡಲಿದ್ದೇವೆ ಎಂದು ಬರೆದುಕೊಂಡಿದ್ದಾರೆ. 'ಹಾರ್ಡಿ ಆ್ಯಂಡ್ ಹೀರ್​' ಸಿನಿಮಾದ ಈ ಹಾಡನ್ನು ರಾನು ಹಾಡಿದ್ದು, ಅದರ ಸಂಪೂರ್ಣ ಹಾಡು ಇಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: Lata Mangeshkar: ರೈಲ್ವೆ ಸಿಂಗರ್ ರಾನು ಬಗ್ಗೆ ಕಮೆಂಟ್​ ಮಾಡಿ ಟ್ರಾಲ್​ ಆದ ಸ್ವರ ಕೋಗಿಲೆ ಲತಾ ಮಂಗೇಶ್ಕರ್​

ಇದೇ ವರ್ಷ ಡಿಸೆಂಬರ್​ನಲ್ಲಿ ತೆರೆ ಕಾಣಲಿರುವ ಈ ಸಿನಿಮಾವನ್ನು ಹಿಮೇಶ್​ ಅವರೇ ನಿರ್ಮಿಸಿ, ನಿರ್ದೇಶಿಸಿದ್ದು, ನಾಯಕನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಮೂಲಕವೇ ರೈಲ್ವೆ ಸಿಂಗರ್​ ರಾನು ಅವರು ಬಾಲಿವುಡ್​ಗೆ ಪಾದಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ: 'ಪೈಲ್ವಾನ್'​ ಚಿತ್ರಕ್ಕಾಗಿ ಕಿಚ್ಚ ಸುದೀಪ್​ ಜಿಮ್​ನಲ್ಲಿ ಬೆವರಿಳಿಸಿದ ವಿಡಿಯೋ ಇಲ್ಲಿದೆ..!

ರಾನು ಅವರ ಮಧುರವಾದ ಕಂಠ ಸಿರಿಗೆ ಇಡೀ ದೇಶವೇ ಅವರನ್ನು ಮೆಚ್ಚಿಕೊಳ್ಳುತ್ತಿದೆ. ಅವರು ಲತಾ ಮಂಗೇಶ್ಕರ್​ ಅವರ 'ಏಕ್​ ಪ್ಯಾರ್​ ಕಾ ನಗ್ಮಾ ಹೈ....' ಹಾಡನ್ನು ಹಾಡುವ ಮೂಲಕ ಮುನ್ನಲೆಗೆ ಬಂದವರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ನಂತರವೇ ಹಿಮೇಶ್​ ಅವರು ರಾನುಗೆ ಹಾಡುವ ಅವಕಾಶ ನೀಡಿದ್ದು.

Evelyn Sharma: ವೈರಲ್​ ಆಯ್ತು 'ಸಾಹೋ' ಬ್ಯೂಟಿಯ ಬಿಕಿನಿ ಫೋಟೋಗಳು

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...