- ಅನಿತಾ ಈ,
ನಟಿ ರಾಣಿ ಮುಖರ್ಜಿ ನಿರ್ದೇಶಕ ಹಾಗೂ ನಿರ್ಮಾಪಕ ಆದಿತ್ಯ ಚೋಪ್ರಾ ಅವರನ್ನು ವಿವಾಹವಾಗಿ ಒಂದು ಮಗುವಾದ ನಂತರ 'ಹಿಚ್ಕಿ' ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು. ಕಳೆದ ವರ್ಷ ಅಂದರೆ 2018ರ ಮಾರ್ಚ್ 23ರಂದು ಈ ಚಿತ್ರ ತೆರೆಕಂಡಿತ್ತು. ಬಾಕ್ಸಾಫಿಸ್ನಲ್ಲಿ ತಕ್ಕ ಮಟ್ಟಿಗೆ ಸದ್ದು ಮಾಡಿತ್ತಾದರೂ, ಅಂದುಕೊಂಡ ಮಟ್ಟಕ್ಕೆ ಹಿಟ್ ಆಗಲಿಲ್ಲ. ಇದಾದ ನಂತರ ರಾಣಿ ಯಾವುದೇ ಸಿನಿಮಾಗಳಿಗೆ ಸಹಿ ಮಾಡಿರಲಿಲ್ಲ.
2014 ಆಗಸ್ಟ್ 22ರಂದು ರಾಣಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದ 'ಮರ್ದಾನಿ' ಚಿತ್ರ ಬಿಡುಗಡೆಯಾಗಿತ್ತು. ಪ್ರದೀಪ್ ಸರ್ಕಾರ್ ನಿರ್ದೇಶನದ ಈ ಸಿನಿಮಾ 21 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಬಾಕ್ಸಾಫಿಸ್ನಲ್ಲಿ 57 ಕೋಟಿ ಚಾಚಿಕೊಂಡಿತ್ತು.
![Rani Mukerji in Hikchki movie]()
'ಹಿಚ್ಕಿ' ಸಿನಿಮಾದಲ್ಲಿ ರಾನಿ ಮುಖರ್ಜಿ
ಈ ಸಿನಿಮಾ ಬಿಡುಗಡೆಯಾದ ನಂತರ, ಇದರ ಸೀಕ್ವೆಲ್ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಈ ಮಧ್ಯೆ 'ಮರ್ದಾನಿ 2' ಚಿತ್ರ ಕುರಿತ ಸುದ್ದಿಗಳು ಹರಿದಾಡುತ್ತಿದ್ದವು. ಈಗ ಈ ಸುದ್ದಿಗೆ ಮತ್ತೆ ಇದಕ್ಕೆ ಜೀವ ಬಂದಿದೆ.
ಹೌದು, ರಾಣಿ ಅವರ ಗಂಡ ಆದಿತ್ಯ ಚೋಪ್ರಾ ನಿರ್ಮಾಣದಲ್ಲಿ 'ಮರ್ದಾನಿ 2' ಸೆಟ್ಟೇರಿದೆ. ಈ ಸಿನಿಮಾವನ್ನು ಗೋಪಿ ಪುತ್ರಾನಿ ನಿರ್ದೇಶನ ಮಾಡುತ್ತಿದ್ದು, ಇದರ ಬಿಡುಗಡೆ ದಿನಾಂಕ ಇಂದು ಪ್ರಕಟವಾಗಿದೆ.
Release date finalized... #Mardaani2 to release on 13 Dec 2019... Stars Rani Mukerji... Will be her next film release, after the smash HIT #Hichki... #Mardaani2 launches a new face as the antagonist... Directed by Gopi Puthran... Produced by Aditya Chopra. pic.twitter.com/BKIvptEZYp
ಸಿನಿಮಾ ವ್ಯವಹಾರಗಳ ವಿಶ್ಲೇಷಕ ತರನ್ ಆದರ್ಶ್ ಅವರು ಇದನ್ನು ಟ್ವೀಟ್ ಮಾಡಿಕೊಂಡಿದ್ದಾರೆ. ರಾಣಿ ಮತ್ತೆ ಪೊಲೀಸ್ ಅಧಿಕಾರಿಯಾಗಿ ತೆರೆ ಮೇಲೆ ಮಿಂಚಲಿದ್ದು, ಅದಕ್ಕೆ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಈ ಸಿನಿಮಾ ಇದೇ ವರ್ಷ ಡಿಸೆಂಬರ್ 13ರಂದು ತೆರೆ ಕಾಣಲಿದೆ.
ಇದನ್ನೂ ಓದಿ: Rakhi Sawanth: ರಾಖಿ ಸಾವಂತ್ರ ಗಂಡ ಮಾಧ್ಯಮಗಳ ಮುಂದೆ ಬರದೇ ಇರುವುದಕ್ಕೆ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ..!
2015 ಡಿಸೆಂಬರ್ ರಾಣಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದು, ಅವರು ಅದಕ್ಕೆ ಅದಿರಾ ಎಂದು ನಾಮಕರಣ ಮಾಡಿದ ವಿಷಯ ಹಳೆಯದು. ಇದಾದ ನಂತರ 2018ರಲ್ಲಿ 'ಹಿಚ್ಕಿ' ಸಿನಿಮಾದಲ್ಲಿ ಅಭಿನಯಿಸಿದ್ದರು. ನಂತರ ಅವರು ಎರಡನೇ ಮಗುವಿಗಾಗಿ ಪ್ಲಾನ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳೂ ಹರಿದಾಡುತ್ತಿದ್ದವು. ಆದರೆ ಈಗ ಅವೆಲ್ಲದಕ್ಕೂ ಬ್ರೇಕ್ ಬಿದ್ದಿದೆ.
Shah Rukh Khan: ಕಿಂಗ್ ಖಾನ್ ಶಾರುಕ್ಗೆ ಡಾಕ್ಟರೇಟ್ ನೀಡಿ ಗೌರವಿಸಿದ ಮೆಲ್ಬೋರ್ನ್ನ ವಿಶ್ವವಿದ್ಯಾಲಯ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ