Randeep Hooda: ಸ್ವತಂತ್ರ ವೀರ್ ಸಾವರ್ಕರ್ ಚಿತ್ರದ ಫಸ್ಟ್​ ಲುಕ್ ಬಿಡುಗಡೆ, ರಣದೀಪ್ ಹೂಡಾ ನೋಡಿ ಅಭಿಮಾನಿಗಳು ಫಿದಾ

Bollywood New Film: ಮಹೇಶ್ ಮಂಜ್ರೇಕರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು. ಸದ್ಯದಲ್ಲಿಯೇ ಅದರ ಪ್ರೊಡಕ್ಷನ್​ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದ ಫಸ್ಟ್​ ಲುಕ್

ಚಿತ್ರದ ಫಸ್ಟ್​ ಲುಕ್

  • Share this:
ಇಂದು ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ('Swatantra Veer Savarkar') ಅವರ ಜನ್ಮದಿನದಂದು ರಣದೀಪ್ ಹೂಡಾ (Randeep Hooda) ಅವರು ತಮ್ಮ ಮುಂಬರುವ ಚಿತ್ರ 'ಸ್ವತಂತ್ರ ವೀರ್ ಸಾವರ್ಕರ್' ಚಿತ್ರದ ಫಸ್ಟ್​ ಲುಕ್​ ಇರುವ ಸಣ್ಣ ವಿಡಿಯೋ (Video) ಹಂಚಿಕೊಂಡಿದ್ದಾರೆ. ಈ ಚಿತ್ರವು ವೀರ್ ಸಾವರ್ಕರ್ ಎಂದು ಜನಪ್ರಿಯವಾಗಿರುವ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ (Vinayak Damodar Savarkar) ಅವರ ಜೀವನಚರಿತ್ರೆಯಾಗಿದೆ. ಸರ್ಬ್ಜಿತ್ ಸಿನಿಮಾ ನಟ ತನ್ನ ಇನ್ಸ್ಟಾಗ್ರಾಮ್  ಖಾತೆಯಲ್ಲಿ ಚಿತ್ರದ ಮೊದಲ ಪೋಸ್ಟರ್ ಅನ್ನು ಶೇರ್​ ಮಾಡಿಕೊಂಡಿದ್ದಾರೆ.

ಈ ಚಿತ್ರದಲ್ಲಿ ರಣದೀಪ್​ ಹೂಡಾ ಅವರು ವಿನಾಯಕ್ ದಾಮೋದರ್ ಸಾವರ್ಕರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫಸ್ಟ್​ ಲುಕ್ ಹಂಚಿಕೊಂಡ ರಣದೀಪ್ ಅವರು, "ಭಾರತದ ಸ್ವಾತಂತ್ರ್ಯ ಮತ್ತು ಸ್ವಯಂ ವಾಸ್ತವೀಕರಣದ ಹೋರಾಟದ ಅತ್ಯಂತ ಎತ್ತರದ ಹಾಗೂ ಅಸಾಧಾರಣ ವೀರರಲ್ಲಿ ಒಬ್ಬರಿಗೆ ಇದು ಒಂದು ಸೆಲ್ಯೂಟ್. ನಿಜವಾದ ಕ್ರಾಂತಿಕಾರಿಯ ಬದುಕು ಆಧಾರಿತ ಚಿತ್ರದಲ್ಲಿ ನಾನು ನಟಿಸಿ, ಅವರಿಗೆ ನ್ಯಾಯ ಒದಗಿಸಿದ್ದೇನೆ ಎಂದು ನಂಬುತ್ತೇನೆ. ಭಾರತದ ವೀರನ ನೈಜ ಕಥೆ ನಿಮ್ಮ ಮುಂದೆ ಬರಲಿದೆ. ವೀರ ಸಾರ್ವಕರ್ ಅವರಿಗೆ ಹುಟ್ಟುಹಬ್ಬದ ಶುಭಾಷಯಗಳು ಎಂದು ಬರೆದುಕೊಂಡಿದ್ದಾರೆ.
ರಣ್ ದೀಪ್ ಹೂಡ ಅವರು ಫಸ್ಟ್​ ಲುಕ್​ನಲ್ಲಿ ಥೇಟ್ ಸಾವರ್ಕರ್ ರೀತಿಯಲ್ಲಿ ಕಾಣಿಸುತ್ತಿದ್ದು, ಫಸ್ಟ್ ಲುಕ್ ಜನರ ಮನಸ್ಸು ಗೆದ್ದಿದೆ ಎನ್ನುವುದರಲ್ಲಿ9 ಯಾವುದೇ ಅನುಮಾನವಿಲ್ಲ. ಅವರ ತಲೆಯ ಮೇಲಿನ ಟೋಪಿ, ಅವರು ಹಾಕಿರುವ ಕನ್ನಡಕ, ಬಟ್ಟೆ, ಮೀಸೆ ಎಲ್ಲವೂ ಸೇಮ್​ ಇದ್ದು, ಅದ್ಭುತವಾಗಿ ಮೂಡಿ ಬಂದಿದೆ ಎನ್ನಬಹುದು.  ಈ ಪೋಸ್ಟ್​ ಮಾಡಿದ ಕೆಲವೇ ಸಮಯದಲ್ಲಿ, ರಣದೀಪ್ ಅಭಿಮಾನಿಗಳು ಹಾಗೂ ಫಾಲೋವರ್ಸ್ ಕಾಮೆಂಟ್​ಗಳ ಮಳೆ ಸುರಿಸಿದ್ದಾರೆ.
ಒಂದು ರೀತಿಯಿಂದ ಕಾಮೆಂಟ್​ಗಳ ಸ್ಫೋಟವಾಗಿದೆ ಎನ್ನಬಹುದು. "ರಣದೀಪ್ ಹೂಡಾ ಹೊರತುಪಡಿಸಿ ಬೇರೆ ಯಾರೂ ಸಾವರ್ಕರ್ ಜಿ ಅವರ ನಿಜವಾದ ಹೀರೋಯಿಸಂಗೆ ಜೀವ ತುಂಬುವುದಿಲ್ಲಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ."  ಮತ್ತೊಬ್ಬರು "ನೀವು ಇದನ್ನು ರಾಕ್ ಮಾಡಲಿದ್ದೀರಿ!!!! ಭಾರತದ ಶ್ರೇಷ್ಠರಲ್ಲಿ ಒಬ್ಬರ ಪಾತ್ರಕ್ಕೆ ನೀವು ಸಂಪೂರ್ಣ ನ್ಯಾಯವನ್ನು ನೀಡುತ್ತೀರಿ ಎಂದು ನನಗೆ ಹೆಚ್ಚು ವಿಶ್ವಾಸವಿದೆ ಎಂದಿದ್ದಾರೆ.

ಅಭಿಮಾನಿಗಳಿಂದ ಕಾಮೆಂಟ್​ಗಳ ಸುರಿಮಳೆ

ಅಭಿಮಾನಿಯೊಬ್ಬರು " ಈ ಚಿತ್ರ ಕ್ರಾಂತಿಕಾರಿ ಹೋರಟಕ್ಕೆ ಸಾಕ್ಷಿಯಾಗಲಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಮಹೇಶ್ ಮಂಜ್ರೇಕರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು. ಸದ್ಯದಲ್ಲಿಯೇ ಅದರ ಪ್ರೊಡಕ್ಷನ್​ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ: ಹಸೆಮಣೆ ಏರಿದ ನಟಿ ಲಾವಣ್ಯಾ, ನಟ ಶಶಿ ಹೆಗ್ಡೆ ಜೊತೆ ಮದುವೆ

ವಿನಾಯಕ ದಾಮೋದರ್ ಸಾವರ್ಕರ್ ಅವರು 28 ಮೇ 1883 ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಜನಿಸಿದರು. ಅವರು ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲದೇ, ರಾಜಕಾರಣಿ, ವಕೀಲ ಮತ್ತು ಬರಹಗಾರರಾಗಿದ್ದರು. ಅವರ ಬದುಕು ಆಧಾರಿತ ಈ ಚಿತ್ರ ಮೋಡಿ ಮಾಡಲಿದೆ ಎನ್ನಲಾಗುತ್ತಿದೆ.
Published by:Sandhya M
First published: