Randeep Hooda: ದಲ್‍ಬೀರ್ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು, ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದ ನಟ ರಣ್‍ದೀಪ್ ಹೂಡಾ

ನಿಜ ಜೀವನದಲ್ಲಿ ಸರಬ್‍ಜೀತ್ ಅವರ ಸಹೋದರಿಯಾಗಿದ್ದ ದಲ್‍ಬೀರ್ ಕೌರ್ ಜೊತೆ ರಣ್‍ದೀಪ್‍ಗೆ ಉತ್ತಮ ಬಾಂಧವ್ಯವಿತ್ತು. ಇತ್ತೀಚೆಗೆ ದಲ್‍ಬೀರ್ ಅವರು ಸಾವನ್ನಪ್ಪಿದ್ದು, ಈ ಹಿಂದೆ ಅವರಿಗೆ ನೀಡಿದ್ದ ಮಾತಿನಂತೆ, ನಟ ರಣ್‍ದೀಪ್ ಹೂಡಾ ಅವರು, ಆಕೆಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.

ರಣ್‍ದೀಪ್ ಹೂಡಾ ಮತ್ತು ದಲ್‍ಬೀರ್ ಕೌರ್ ರಣ್‍ದೀಪ್

ರಣ್‍ದೀಪ್ ಹೂಡಾ ಮತ್ತು ದಲ್‍ಬೀರ್ ಕೌರ್ ರಣ್‍ದೀಪ್

  • Share this:
ಬಾಲಿವುಡ್ ಸಿನಿಮಾ ಸರಬ್‍ಜೀತ್ (Sarabjit) ಅಪಾರ ಜನಪ್ರಿಯತೆ ಗಳಿಸಿತ್ತು. ಸರಬ್‍ಜೀತ್ ಅವರ ಪಾತ್ರವನ್ನು ನಿರ್ವಹಿಸಿದ್ದ ನಟ ರಣ್‍ದೀಪ್ ಹೂಡಾ (Randeep Hooda)  ಅವರಿಗಂತೂ ಸಾಕಷ್ಟು ಪ್ರಶಂಸೆ ದೊರಕಿತ್ತು. ಆ ಸಿನಿಮಾದಲ್ಲಿ ಸರಬ್‍ಜೀತ್ ಸಹೋದರಿ ದಲ್‍ಬೀರ್ ಕೌರ್ (Dalbir Kaur) ಪಾತ್ರದಲ್ಲಿ ನಟಿ ಐಶ್ವರ್ಯ ರೈ ( Aishwarya Rai) ಅಭಿನಯಿಸಿದ್ದರು. ನಿಜ ಜೀವನದಲ್ಲಿ ಸರಬ್‍ಜೀತ್ ಅವರ ಸಹೋದರಿಯಾಗಿದ್ದ ದಲ್‍ಬೀರ್ ಕೌರ್ ಜೊತೆ ರಣ್‍ದೀಪ್‍ಗೆ ಉತ್ತಮ ಬಾಂಧವ್ಯವಿತ್ತು. ಇತ್ತೀಚೆಗೆ ದಲ್‍ಬೀರ್ ಅವರು ಸಾವನ್ನಪ್ಪಿದ್ದು, ಈ ಹಿಂದೆ ಅವರಿಗೆ ನೀಡಿದ್ದ ಮಾತಿನಂತೆ, ನಟ ರಣ್‍ದೀಪ್ ಹೂಡಾ ಅವರು, ಆಕೆಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.

ಸರಬ್‍ಜೀತ್ ಸಿನೆಮಾದಲ್ಲಿ ಏನಿದೆ?
ಸರಬ್‍ಜೀತ್ ಸಿನಿಮಾ 2016 ರಲ್ಲಿ ತೆರೆ ಕಂಡಿತ್ತು. ಗೂಢಾಚಾರಿಕೆಯ ಆರೋಪದ ಮೇಲೆ ಪಾಕಿಸ್ತಾನದ ಜೈಲು ಸೇರಿದ್ದ ಸರಬ್‍ಜೀತ್ ಸಿಂಗ್ ಎಂಬ ಪಂಜಾಬಿನ ವ್ಯಕ್ತಿಯ ಜೀವನದ ಕಥೆಯನ್ನು ಆಧರಿಸಿದ ಸಿನಿಮಾ ಇದಾಗಿತ್ತು.

ಗೂಢಾಚಾರಿಕೆ ಮತ್ತು ಭಯೋತ್ಪಾದನೆಯ ಆಪಾದನೆಯನ್ನು ಹೋರಿಸಿ, ಪಾಕಿಸ್ತಾನದ ಕೋರ್ಟ್ ಸರಬ್‍ಜೀತ್‍ಗೆ ಮರಣ ದಂಡನೆಯ ಶಿಕ್ಷೆ ವಿಧಿಸಿತ್ತು. ಸರಬ್‍ಜೀತ್ ಅವರ ಸಹೋದರಿ ದಲ್‍ಬೀರ್ ಅವರು ತನ್ನ ಸಹೋದರನಿಗೆ ನ್ಯಾಯ ಒದಗಿಸುವಂತೆ ದೊಡ್ಡ ಹೋರಾಟವನ್ನೇ ನಡೆಸಿದ್ದರು. ಆದರೆ ಕೊನೆಗೂ ಸರಬ್‍ಜೀತ್‍ಗೆ ನ್ಯಾಯ ಸಿಗದೆ, ದಾರುಣ ಚಿತ್ರಹಿಂಸೆ ಅನುಭವಿಸಿ ಆತ ಪಾಕಿಸ್ತಾನದ ಜೈಲಿನಲ್ಲಿಯೇ ನಿಧನರಾಗಿದ್ದರು.

ದಲ್‍ಬೀರ್ ಕೌರ್ ಜೊತೆ ಒಂದು ಅನ್ಯೋನ್ಯ ಸಂಬಂಧ ಬೆಳೆಸಿದ್ದ ರಣ್‍ದೀಪ್
ರಣ್‍ದೀಪ್ ಹೂಡಾ ಅವರು ಸಿನಿಮಾದಲ್ಲಿ ಸರಬ್‍ಜೀತ್ ಅವರ ಪಾತ್ರ ಮಾಡಿದ ಬಳಿಕ, ನಿಜ ಜೀವನದಲ್ಲಿ ಸರಬ್‍ಜೀತ್ ಅವರ ಸಹೋದರಿಯಾಗಿದ್ದ ದಲ್‍ಬೀರ್ ಕೌರ್ ಜೊತೆ ಒಂದು ಅನ್ಯೋನ್ಯ ಸಂಬಂಧ ಬೆಳೆದಿತ್ತು.

ಇದನ್ನೂ ಓದಿ: Beauty Secret: ನಟಿ ಕರಿಷ್ಮಾ ಕಪೂರ್ ಆಗಲೂ, ಈಗಲೂ ಬ್ಯೂಟಿಫುಲ್! ಸೌಂದರ್ಯದ ರಹಸ್ಯ ಏನ್ ಗೊತ್ತಾ?

ರಣ್‍ದೀಪ್‍ನಲ್ಲಿ ನಾನು ಸರಬ್‍ಜೀತ್ ಅನ್ನು ಕಾಣುತ್ತಿದ್ದೇನೆ ಎಂದು ಆಕೆ ಹೇಳಿಕೆ ನೀಡಿದ್ದರೂ ಕೂಡ. ತಾನು ಮರಣಿಸಿದ ಬಳಿಕ ರಣ್‍ದೀಪ್ ಹೂಡಾ, ಸಹೋದರನ ಸ್ಥಾನದಲ್ಲಿ ಆಕೆಯ ಚಟ್ಟಕ್ಕೆ ಹೆಗಲು ಕೊಡಬೇಕು ಎಂಬುವುದು ದಲ್‍ಬೀರ್ ಆಸೆಯಾಗಿತ್ತು.

ದಲ್‍ಬೀರ್ ಕೌರ್ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡ ರಣ್‍ದೀಪ್
ರಣ್‍ದೀಪ್ ಅವರು ದಲ್‍ಬೀರ್ ಅವರ ಈ ಕೋರಿಕೆಯನ್ನು ಒಪ್ಪಿಕೊಂಡು, ಅದನ್ನು ನೆರವೇರಿಸುವುದಾಗಿ ಮಾತು ಕೊಟ್ಟಿದ್ದರು. ದಲ್‍ಬೀರ್ ಕೌರ್ ಅವರು ಪಂಜಾಬಿನ ಅಮೃತಸರದ ಸಮೀಪವಿರುವ ಭೀಖಿವಿಂಡ್ ಎಂಬ ಹಳ್ಳಿಯಲ್ಲಿ ಭಾನುವಾರ ಜೂನ್ 26 ರಂದು ಹೃದಯಾಘಾತದಿಂದ ಸಾವನ್ನಪ್ಪಿದರು. ಈ ಸುದ್ದಿ ತಿಳಿಯುತ್ತಲೇ, ಅವರ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ರಣ್‍ದೀಪ್ ಹೂಡಾ ಕೂಡಲೇ ಮುಂಬೈನಿಂದ ಆಕೆಯ ಹಳ್ಳಿಗೆ ಧಾವಿಸಿದರು. ದಲ್‍ಬೀರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು ಮತ್ತು ಚಿತೆಗೆ ಅಗ್ನಿ ಸ್ಪರ್ಶ ಮಾಡುವ ವಿಧಿಯಲ್ಲೂ ಪಾಲ್ಗೊಂಡರು. ಈ ಮೂಲಕ ಅವರು ದಲ್‍ಬೀರ್ ಕೌರ್ ಅವರಿಗೆ ಕೊಟ್ಟ ಮಾತನ್ನು ನೆರವೇರಿಸಿದ್ದಾರೆ.

ಸರಬ್‍ಜೀತ್ ಸಿನಿಮಾವನ್ನು ಒಮಂಗ್ ಕುಮಾರ್ ನಿರ್ದೇಶಿಸಿದ್ದರು. ರೀಚಾ ಚಡ್ಡಾ ಮತ್ತು ದರ್ಶನ್ ಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದರು. ಬಾಕ್ಸ್ ಆಫೀಸ್‍ನಲ್ಲಿ ಜಯಬೇರಿ ಭಾರಿಸಿದ್ದ ಈ ಸಿನಿಮಾ, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಲಾಹೋರಿನ ಕೋಟ್ ಲಖ್‍ಪತ್ ಜೈಲಿನಲ್ಲಿ ಸಹ ಕೈದಿಗಳ ಆಕ್ರಮಣಕ್ಕೆ ತುತ್ತಾಗಿ ಸರಬ್‍ಜೀತ್ ಸಾವನ್ನಪಿದ ಸುಮಾರು ಮೂರು ವರ್ಷಗಳ ಬಳಿಕ ಈ ಸಿನಿಮಾ ಬಿಡುಗಡೆ ಆಗಿತ್ತು.

ದಲ್‍ಬೀರ್ ಕೌರ್ ರಣ್‍ದೀಪ್ ಗೆ ಏನು ಹೇಳಿದ್ರು ಗೊತ್ತಾ?
ಆಕೆ ತನ್ನ ಸಹೋದರನ ಸಾವಿನ ಮೂರು ವರ್ಷಗಳ ಸ್ಮರಣಾರ್ಥ ನಡೆದ ಸಮಾರಂಭದಲ್ಲಿ, ರಣ್‍ದೀಪ್ ಹೂಡಾ ಕುರಿತು ಮಾತನಾಡುತ್ತಾ, “ನಾನು ರಣ್‍ದೀಪ್‍ಗೆ ಹೇಳಬಯಸುವುದು ಏನೆಂದರೆ, ನಾನು ನಿಜಕ್ಕೂ ಆತನಲ್ಲಿ ಸರಬ್‍ಜೀತ್‍ನನ್ನು ಕಂಡಿದ್ದೆ. ನನಗೊಂದು ಆಸೆಯಿದೆ ಮತ್ತು ನಾನು ಸತ್ತಾಗ ನನ್ನ ಚಟ್ಟಕ್ಕೆ ಆತ ಖಂಡಿತಾ ಹೆಗಲು ನೀಡಬೇಕು ಎಂಬ ವಾಗ್ದಾನವನ್ನು ಆತನಿಂದ ಪಡೆಯಲು ಇಚ್ಚಿಸುತ್ತೇನೆ” ಎಂದು ಹೇಳಿದ್ದರು.

ಇದನ್ನೂ ಓದಿ:  Milind Soman: ತನ್ನ ಟ್ರೈಸೆಪ್ಸ್ ಬಗ್ಗೆ ನಟ ಮಿಲಿಂದ್ ಸೋಮನ್ ಏನು ಹೇಳಿದ್ದಾರೆ ನೋಡಿ

“ನಾನು ರಣ್‍ದೀಪ್ ರೂಪದಲ್ಲಿ ನನ್ನ ಸಹೋದರನನ್ನು ಕಂಡುಕೊಂಡಿದ್ದು ನಿಜಕ್ಕೂ ಸಂತೋಷದ ಸಂಗತಿ. ಸಿನಿಮಾದಲ್ಲಿ ಅವನು ಹೀರೋ ಮಾತ್ರವಲ್ಲ ನನ್ನ ಸಹೋದರ ಕೂಡ” ಎಂದು ಆಕೆ ಹೇಳಿದ್ದರು.
Published by:Ashwini Prabhu
First published: