Ranbir Kapoor - Alia Bhatt: ಗರ್ಭಿಣಿ ಪತ್ನಿ ಬಗ್ಗೆ ಕ್ಯಾಮೆರಾ ಮುಂದೆಯೇ ಹೀಗನ್ನಬಾರದಿತ್ತು ರಣಬೀರ್ ಕಪೂರ್!

Ranbir Kapoor Comments on Wife: ಗರ್ಭಿಣಿ ಪತ್ನಿ ಆಲಿಯಾ ಭಟ್ ಬಗ್ಗೆ ಕ್ಯಾಮೆರಾ ಮುಂದೆಯೇ ಕಮೆಂಟ್ ಮಾಡಿ ಈಗ ತೀವ್ರ ಟೀಕೆಗೆ ಒಳಗಾಗಿದ್ದಾರೆ ರಣಬೀರ್ ಕಪೂರ್. ಹೆಂಡತಿಯ ತೂಕದ ಬಗ್ಗೆ ಈ ರೀತಿ ಹೇಳೋದು ಸರೀನಾ?

ಆಲಿಯಾ ಭಟ್

ಆಲಿಯಾ ಭಟ್

  • Share this:
ಬಾಲಿವುಡ್​ನಲ್ಲಿ ಶೀಘ್ರ ಅಪ್ಪ-ಅಮ್ಮನಾಗಲಿರೋ ಸೆಲೆಬ್ರಿಟಿ ಜೋಡಿ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhatt). ಇವರು ತಮ್ಮ ಮಗುವನ್ನು ನಿರೀಕ್ಷಿಸುತ್ತಿರುವುದರ ಜೊತೆ ಜೊತೆಗೆ ತಮ್ಮ ಬಹುನಿರೀಕ್ಷಿತ ಸಿನಿಮಾ ಬ್ರಹ್ಮಾಸ್ತ್ರದ (Brahmastra) ಪ್ರಮೋಷನ್​ (Promotion) ಕೆಲಸದಲ್ಲಿಯೂ ತುಂಬಾ ಬ್ಯುಸಿಯಾಗಿದ್ದಾರೆ. ಬಾಲಿವುಡ್​ನ (Bollywood) ಬಹುನಿರೀಕ್ಷಿತ ಸಿನಿಮಾ, ಬಿಗ್​ ಬಜೆಟ್ ಮೂವಿ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದ್ದು ಗರ್ಭಿಣಿಯಾಗಿದ್ದರೂ (Pregnant) ಆಲಿಯಾ ಭಟ್ ನಿರಂತರವಾಗಿ ಸಿನಿಮಾ ಪ್ರಮೋಷನ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಸಿನಿಮಾ ಪ್ರಮೋಷನ್ ಮಾಡುವಾಗ ರಣಬೀರ್ ಕಪೂರ್ ಗರ್ಭಿಣಿ ಪತ್ನಿ ಆಲಿಯಾ ಭಟ್ ಬಗ್ಗೆ ಮಾಡಿರುವ ಕಮೆಂಟ್ ತೀವ್ರ ಟೀಕೆಯನ್ನು ಎದುರಿಸುತ್ತಿದೆ.

ನಟ ರಣಬೀರ್ ಕಪೂರ್ ಅವರು ತಮ್ಮ ಗರ್ಭಿಣಿ ಪತ್ನಿ ಆಲಿಯಾ ಭಟ್ ಬಗ್ಗೆ ಮಾಡಿದ ಕಮೆಂಟ್​ಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆಲಿಯಾ ಭಟ್ ಮತ್ತು ಅಯಾನ್ ಮುಖರ್ಜಿ ಅವರೊಂದಿಗೆ ಮುಂಬರುವ ಬಿಗ್​ ಬಜೆಟ್ ಸಿನಿಮಾ ಬ್ರಹ್ಮಾಸ್ತ್ರದ ಪ್ರಚಾರದ ಸಂದರ್ಭದಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆಯನ್ನು ಕ್ಯಾಮೆರಾ ಮುಂದೆ ಹೇಳಿದ್ದಾರೆ.

ಸಿನಿಮಾದಲ್ಲಿ ರಣಬೀರ್ ಮತ್ತು ಆಲಿಯಾ ಮೊದಲ ಬಾರಿಗೆ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್, ನಾಗಾರ್ಜುನ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು ಈ ವರ್ಷ ಸೆಪ್ಟೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಮೋಷನ್ ಸಂದರ್ಭ ರಣಬೀರ್ ಹೇಳಿಕೆ

ಚಿತ್ರದ ಪ್ರಚಾರದ ಲೈವ್ ಸೆಷನ್‌ನಲ್ಲಿ ಸೆಲೆಬ್ರಿಟಿ ಜೋಡಿ ಇತರ ಸಿನಿಮಾಗಳಿಗೆ ಮಾಡುವ ಹಾಗೆ ಬ್ರಹ್ಮಾಸ್ತ್ರವನ್ನು ಏಕೆ ಪ್ರಚಾರ ಮಾಡುತ್ತಿಲ್ಲ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಆಲಿಯಾ ಭಟ್ ಮಾತನಾಡಿ, ನಾವು ಚಿತ್ರವನ್ನು ಪ್ರಚಾರ ಮಾಡುತ್ತೇವೆ. ನಾವು ಎಲ್ಲೆಡೆ ಇರುತ್ತೇವೆ. ಆದರೆ ಇದೀಗ ನಮ್ಮ ಗಮನ ಇಲ್ಲಿದೆ ಎಂದು ಆಲಿಯಾ ಹೇಳುವಾಗ ರಣಬೀರ್ ಕಪೂರ್ ತಕ್ಷಣ ಮಧ್ಯಪ್ರವೇಶಿಸಿ ಯಾರಿಗಾದರೂ ಫೈಲೋಡ್ ಇದೆ ಎಂದು ನಾನು ಹೇಳಬಲ್ಲೆ ಎಂದಿದ್ದಾರೆ. ರಣಬೀರ್ ಕಪೂರ್ ಇಲ್ಲಿ ಸ್ಪಷ್ಟವಾಗಿ ಪತ್ನಿಯ ತೂಕ ಹೆಚ್ಚಾಗುತ್ತಿರುವ ಬಗ್ಗೆ ಉಲ್ಲೇಖಿಸಿದ್ದು ಒಂದು ಕ್ಷಣ ಆಲಿಯಾ ಮಾತು ನಿಲ್ಲಿಸಿ ಅಚ್ಚರಿಗೊಂಡಿದ್ದಾರೆ.ಇದನ್ನೂ ಓದಿ: Vijay Deverakonda: ಕನ್ನಡದಲ್ಲೇ ಮಾತನಾಡಿದ ತೆಲುಗು ನಟ! ಪುನೀತ್ ಅಣ್ಣನನ್ನು ಮಿಸ್ ಮಾಡಿಕೊಳ್ತಿದ್ದಾರಂತೆ ವಿಜಯ್ ದೇವರಕೊಂಡ

ಸಂವಾದದ ಕ್ಲಿಪ್ ರೆಡ್ಡಿಟ್‌ನಲ್ಲಿ ವೈರಲ್ ಆಗುತ್ತಿದೆ. ಕೆಲವು ಬಳಕೆದಾರರು ರಣಬೀರ್ ಕಪೂರ್ ಅವರ ಕಾಮೆಂಟ್‌ಗೆ ಆಘಾತವನ್ನು ವ್ಯಕ್ತಪಡಿಸಿದರೆ, ಇತರರು ಅದನ್ನು ತಮಾಷೆಯಾಗಿಯೇ ತೆಗೆದುಕೊಂಡಿದ್ದಾರೆ.

ನೆಟ್ಟಿಗರಿಗೆ ಅಸಮಾಧಾನ

ರಣಬೀರ್ ಇದನ್ನು ಕ್ಯಾಮೆರಾ ಮುಂದೆಯೇ ಈ ರೀತಿ ಹೇಳುತ್ತಿದ್ದರೆ, ಅವರು ಖಾಸಗಿಯಾಗಿ ಏನು ಹೇಳುತ್ತಾರೆಂದು ಯೋಚಿಸಿ. ಅವರು ಕತ್ರಿನಾ ಮತ್ತು ಅನುಷ್ಕಾ ಅವರೊಂದಿಗೆ ಇಂತಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆ ನಟಿಯರಿಬ್ಬರೂ ಅಂತಹ ಕಮೆಂಟ್​ಗೆ ಆ ಕ್ಷಣವೇ ತಿರುಗೇಟು ಕೊಟ್ಟಿದ್ದಾರೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Shraddha Kapoor: ತಿಳಿ ಕೇಸರಿ ಬಣ್ಣದ ಸಲ್ವಾರ್​ನಲ್ಲಿ ಮಿಂಚಿದ ಶ್ರದ್ಧಾ! ಫೊಟೋಸ್ ವೈರಲ್

ನನ್ನ ಮಾಜಿ ಗೆಳೆಯ ಹೀಗೆಯೇ ಇದ್ದ. ಅವನು ನನ್ನ ತೂಕ ಮತ್ತು ವ್ಯಕ್ತಿತ್ವದ ಕುರಿತ ವಿಷಯ ಕಮೆಂಟ್ ಮಾಡುತ್ತಿದ್ದ. ಅವುಗಳನ್ನು ತಮಾಷೆಯಾಗಿ ವಿಷಯ ಬದಲಾಯಿಸಲು ಪ್ರಯತ್ನಿಸುತ್ತಿದ್ದ. ಆಲಿಯಾ ಅವನಿಂದ ದೂರವಾಗುವುದು ಒಳಿತು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಏಪ್ರಿಲ್‌ನಲ್ಲಿ ತಮ್ಮ ಮನೆಯಲ್ಲಿ ಕುಟುಂಬ ಮತ್ತು ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಆಲಿಯಾ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಜೂನ್‌ನಲ್ಲಿ ತನ್ನ ಗರ್ಭಧಾರಣೆಯನ್ನು ಎನೌನ್ಸ್​ ಮಾಡಿದರು.
Published by:Divya D
First published: