Viral video: ರಣಬೀರ್ ಕಪೂರ್​ಗೆ ಐ ಲವ್ ಯೂ ಅಂದ ಫ್ಯಾನ್​, ಹೇಗಿತ್ತು ನೋಡಿ ಅವರ ಕ್ಯೂಟ್​ ರಿಯಾಕ್ಷನ್

ಅಭಿಮಾನಿಗಳ ಹೃದಯ ಚೋರ ಬಾಲಿವುಡ್ ನಟ ರಣಬೀರ ಕಪೂರ್ ಕಣ್ಣು ಮಿಟುಕಿಸಿ ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋಗಳು ಭಾರಿ ಸದ್ದು ಮಾಡುತ್ತಿದ್ದು, ನೋಡುಗರ ಮನಸ್ಸನ್ನು ಕದಿಯುವಂತೆ ಇವೆ.

ನಟ ರಣಬೀರ್ ಕಪೂರ್

ನಟ ರಣಬೀರ್ ಕಪೂರ್

 • Share this:
  ಬಾಲಿವುಡ್ (Bollywood) ನಟರು (Actor) ಸದಾ ಒಂದಿಲ್ಲಾ ಒಂದು ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ನಿನ್ನೆಯಷ್ಟೆ ಆಮಿರ್ ಖಾನ್ (Aamir Khan) ಮಗಳು ಇರಾ ಖಾನ್ (Ira Khan) ವಿನೂತನವಾಗಿ ಹುಟ್ಟುಹಬ್ಬ (Birthday) ಆಚರಿಸಿ ಸಿಕ್ಕಾಪಟ್ಟೆ ಟ್ರೋಲ್ (Troll) ಆಗಿದೆ.  ಈಗ ಅಭಿಮಾನಿಗಳ ಹೃದಯ (Heart) ಚೋರ್ ಬಾಲಿವುಡ್ ನಟ ರಣಬೀರ್ ಕಪೂರ್ (Ranbir kapoor) ಕಣ್ಣು ಮಿಟುಕಿಸಿ (Wink) ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಆ ವಿಡಿಯೋಗಳು (Video) ಭಾರಿ ಸದ್ದು ಮಾಡುತ್ತಿದ್ದು, ನೋಡುಗರ ಮನಸ್ಸನ್ನು ಕದಿಯುವಂತೆ ಇವೆ.  ಹಾಗಾದ್ರೆ ಮುಂದೆ ಓದಿ.  

   ನಟ ರಣಬೀರ್ ಗೆ ಐ ಲವ್ ಯೂ ಎಂದು ಕೂಗಿದ ಅಭಿಮಾನಿ
  ಹೀಗೆ ಬಾಲಿವುಡ್ ನಟರು ಅಪಾರ ಪ್ರಮಾಣದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಅಷ್ಟೆ ಅಲ್ದೇ  ಅವರು ಕಂಡ ತಕ್ಷಣ ಅವರೊಂದಿಗೆ ಸೆಲ್ಫಿ ತೆಗದುಕೊಳ್ಳಲು ಮುಂದಾಗುತ್ತಾರೆ. ಹೀಗೆ ಸೆಲೆಬ್ರೇಟಿ ಫುಟಬಾಲ್ ಕ್ಲಬ್‍ನಲ್ಲಿ ಅಭಿಮಾನಿಯೊಬ್ಬರು  ನಟ ರಣಬೀರ್ ಕಪೂರ್ ಅವರನ್ನು ಐ ಲವ್ ಯೂ ಎಂದು ಕೂಗಿ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಆಗ ರಣಬೀರ್ ಕಪೂರ್ ಹಿಂತಿರುಗಿ ಕಣ್ಣು ಮಿಟುಕಿಸುವ ಮೂಲಕ ಎಕ್ಷನ್‍ಗೆ ರಿಯಾಕ್ಷನ್ ನೀಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ನಟ ರಣಬೀರ್ ಈ ಮೂಲಕ ಅಭಿಮಾನಿಗಳ ಹೃದಯ ಚೋರ್ ಎಂಬುದನ್ನು ಮತ್ತೆ ಸಾಬೀತು ಪಡೆಸಿದ್ದಾರೆ.

  ಸೆಲೆಬ್ರೇಟಿ ಫುಟ್ ಬಾಲ್ ಕ್ಲಬ್‍ನಲ್ಲಿ ನಡೆದ ಈ ಸೀನ್
  ದುಬೈನಲ್ಲಿ ನಡೆಯುತ್ತಿರುವ ಸೆಲೆಬ್ರೇಟಿ ಫುಟ್ ಬಾಲ್ ಪಂದ್ಯಾವಳಿಯಲ್ಲಿ ನಿರ್ಮಾಪಕ ನಿರ್ಮಾಪಕ ಬಂಟಿ ವಾಲಿಯಾ ಟೀಮ್‍ನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚಿಗೆ ಪಂದ್ಯಾವಳಿಯನ್ನು ಆಡಲು ಬಂದಿದ್ದ ನಟ ರಣಬೀರ ಕಪೂರ್ ಅವರನ್ನು ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಅವರ ತಂಡಕ್ಕೆ ಸಪೋರ್ಟ್ ಮಾಡುವ ಜೊತೆಗೆ ಐ ಲವ್ ಯೂ ಎಂದು ಕೂಗಿದ್ದಾರೆ. ಇದರಿಂದ ಹಿಂತಿರುಗಿ ನೋಡಿದ ರಣಬೀರ್ ಕಪೂರ್ ಕಣ್ಣು ಮಿಟುಕಿಸುವ ಮೂಲಕ ಅಭಿಮಾನಿಗಳಿಗೆ ಉತ್ತರ ನೀಡಿದ್ದಾರೆ.

  ಇದನ್ನು ಓದಿ: Alia Bhatt: ದೀಪಿಕಾ ಪಡುಕೋಣೆ ಸ್ಟೈಲ್​ ಕಾಪಿ ಮಾಡಿದ್ರಂತೆ ಆಲಿಯಾ! ಸಣ್ಣ ಮ್ಯಾಟ್ರು ಬಿಟ್ಬಿಡಿ ಎಂದ ಫ್ಯಾನ್ಸ್​​

  ರಣಬೀರ್ ರಿಯಾಕ್ಷನ್‍ಗೆ ಎಕ್ಷನ್ ಕಟ್ ಹೇಳಿದ ಅಭಿಮಾನಿಗಳು
  ನಟ ಅಭಿಷೇಕ್ ಬಚನ್ ಹಾಗೂ ಕಾರ್ತಿಕ ಆರ್ಯನ್ ಇರುವ ಈ ವಿಡಿಯೋದಲ್ಲಿ ನಟ ರಣಬೀರ್ ಕಪೂರ್ ಕಣ್ಣು ಮಿಟುಕಿಸುವ ಮೂಲಕ ಮಾಡಿರುವ ರಿಯಾಕ್ಷನ್ ಸಾಮಾಜಿಕ ಜಾಲತಾಣದಲ್ಲಿ ತುಂಬ ವೈರಲ್ ಆಗುತ್ತಿದೆ. ನೋಡುವ ನೆಟ್ಟಿಗರು ಕಮೆಂಟ್‍ಗಳನ್ನು ಹರಿಬಿಡುತ್ತಿದ್ದಾರೆ. ಓಮೈ ಗಾಡ್ ಎಂದು ಕೆಲವರು ಕಮೆಂಟ್ ಮಾಡಿದ್ರೆ, ಇನ್ನು ಕೆಲವು ಅಭಿಮಾನಿಗಳು ಕಣ್ಣು ಮಿಟುಕಿಸುವುದು ಸೂಪರ್ ಎಂದು ಪ್ರತಿಕ್ರಿಯಿಸಿದ್ದಾರೆ. ಅಷ್ಟೆ ಅಲ್ದೇ ಹಲವರು ಸೋ ಕ್ಯೂಟ್ ಎಂದು ಕಮೆಂಟ್ ಬಾಕ್ಸ್ ನಲ್ಲಿ  ಬರೆದು ಹಾಕಿದ್ದಾರೆ.

  ಕಳೆದ ತಿಂಗಳಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣಬೀರ್
  ಹೌದು ಬಾಲಿವುಡ್ ನಟ ರಣಬೀರ್ ಕಪೂರ್ ಇತ್ತೀಚಿಗೆ ಬಾಲಿವುಡ್ ಫೇಮಸ್ ನಟಿ ಆಲಿಯಾ ಭಟ್ ಅವರೊಂದಿಗೆ ಮುಂಬೈನಲ್ಲಿ ಮದುವೆಯಾಗಿದ್ದಾರೆ. ಈಗಷ್ಟೆ ಮದುವೆಯಾದ ಈ ನವ ಜೋಡಿ ಸೆಲಿಬ್ರೇಟಿ ಫುಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗಿಯಾಗಲು ದುಬೈಗೆ ತೆರಳಿದ್ದರು. ಆಗ ಪಂದ್ಯಾವಳಿಯ ಸಮಯದಲ್ಲಿ ಅಭಿಮಾನಿಯೊಬ್ಬರು ಐ ಲವ್ ಯೂ ಎಂದು ಕೂಗಿದ್ದಕ್ಕೆ ರಣಬೀರ್ ಕಪೂರ್ ಕಣ್ಣು ಮಿಟುಕಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈಗ ಆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

  ಪ್ರೇಕ್ಷಕರನ್ನು ಹೃದುಂಬಿಸಿದ ನಟ ರಣಬೀರ್ ಕಪೂರ್
  ಇನ್ನು ಪಂದ್ಯದ ಜೊತೆಗೆ ತಮ್ಮ ನೆಚ್ಚಿನ ನಟ ರಣಬೀರ್ ಕಪೂರ್ ಅವರನ್ನು ನೋಡಲು ಬಂದ ಅಭಿಮಾನಿಗಳಿಗೆ ರಣಬೀರ್ ಕಪೂರ್ ಸಖತ್ ಆಗಿ ರೆಸ್ಪಾನ್ಸ್ ನೀಡಿದ್ದಾರೆ. ಆಟದ ಬಳಿಕ ಗ್ಯಾಲರಿ ಹತ್ತಿರ ಬಂದ ನಟ ರಣಬೀರ್ ಕಪೂರ್ ಗ್ಯಾಲರಿ ಹತ್ತಿರಿದ್ದ ಅಭಿಮಾನಿಗಳೊಂದಿಗೆ ಮಾತ ನಾಡುತ್ತಾ ಸೆಲ್ಫಿ ತೆಗೆದುಕೊಂಡಿದ್ದಾರೆ. ಅಭಿಮಾನಿಗಳ ಮೊಬೈಲ್‍  ನ್ನು ತಾವೆ ತೆಗೆದುಕೊಂಡು ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ. ಇನ್ನು ಅಭಿಮಾನಿಗಳೊಂದಿಗೆ ತೋರಿರುವ ಸ್ಪಂದನೆ ಕ್ಯಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯಗಳು ಭಾರಿ ಸದ್ದು ಮಾಡುತ್ತಿವೆ.
  ಇದನ್ನು ಓದಿ: Aamir Khan ಮಗಳ ಹುಟ್ಟುಹಬ್ಬದ ಫೋಟೋ ಟ್ರೋಲ್​​! ಕೇಕ್​ ಕಟ್​ ಮಾಡೋಕೆ ಈ ಬಟ್ಟೆನಾ ಹಾಕೋದು ಅಂತ ಕ್ಲಾಸ್​

  ನಿರ್ಮಾಪಕ ಬಂಟಿ ವಾಲಿಯಾ ಮಾಲಿಕತ್ವದ ತಂಡ
  ನಿರ್ಮಾಪಕ ಬಂಟಿ ವಾಲಿಯಾ ಎಎಸ್‍ಎಫ್‍ಸಿ ತಂಡದ ಮಾಲೀಕರಾಗದಿದು, ತಂಡದ ಉಪ ನಾಯಕ ರಣಬೀರ್ ಕಪೂರ್ ಆಗಿದ್ದಾರೆ. ಇನ್ನು ಅಭಿಷೇಕ್ ಬಚನ್ ನಾಯಕರಾಗಿದ್ದಾರೆ. ಕಾರ್ತಿಕ ಆರ್ಯನ್, ಡಿಯೋನ್ ಮೋರಿಯಾ ಸೇರಿದಂತೆ ಇತರ ಬಾಲಿವುಡ್ ನಟರು  ತಂಡದ ಆಟಗಾರರು ಆಗಿದ್ದಾರೆ.
  Published by:Ashwini Prabhu
  First published: