ಆಲಿಯಾ ಭಟ್​ಗಾಗಿ ಫೋಟೋಗ್ರಾಫರ್​ ಆದ ರಣಬೀರ್ ಕಪೂರ್​!

news18
Updated:July 26, 2018, 1:09 PM IST
ಆಲಿಯಾ ಭಟ್​ಗಾಗಿ ಫೋಟೋಗ್ರಾಫರ್​ ಆದ ರಣಬೀರ್ ಕಪೂರ್​!
news18
Updated: July 26, 2018, 1:09 PM IST
ನ್ಯೂಸ್​ 18 ಕನ್ನಡ 

ನಿರ್ದೇಶಕ ಅಯಾನ್​ ಮುಖರ್ಜಿ ಅವರ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಸದ್ಯ ರಣಬೀರ್​ ಹಾಗೂ ಆಲಿಯಾ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣದಿಂದಾಗಿ ಇವರ ನಡುವೆ ಒಂದು ರೀತಿಯ ವಿಶೇಷ ಸಂಬಂಧ ಬೆಳೆದಿದ್ದು, ಕಳೆದ ಕೆಲ ತಿಂಗಳಿನಿಂದ ಇವರಿಬ್ಬರು ಸಾಕಷ್ಟು ಕಡೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಿನ ಇವರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಫೋಟೋದಲ್ಲಿ ಕೇವಲ ಆಲಿಯಾ ಹಾಗೂ ಅವರ ಸ್ನೇಹಿತೆ ಇದ್ದಾರೆ. ಆದರೆ ಈ ಫೋಟೋಯ ವಿಶೇಷತೆ ಅಂದರೆ, ಅದನ್ನು ತೆಗೆದಿದ್ದು ಮಾತ್ರ ರಣಬೀರ್​ ಕಪೂರ್​. ಅದನ್ನು ಆಲಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರೀತಿಯ ವಿಷಯಕ್ಕೆ ಬಂದರೆ ಹುಡುಗರು ತನ್ನ ಪ್ರೇಯಸಿಗಾಗಿ ಏನು ಬೇಕಾದರೂ ಆಗುತ್ತಾರೆ. ಹೀಗಾಗಿಯೇ ರಣಬೀರ್​ ಈಗ ಆಲಿಯಾಗಾಗಿ ಫೋಟೋಗ್ರಾಫರ್​ ಆಗಿದ್ದಾರೆ.


Loading...


the view and her too.. 📸photo credit - RK


A post shared by Alia ✨⭐️ (@aliaabhatt) on


ಮಹೇಶ್​ ಭಟ್​ ಇತ್ತೀಚೆಗೆ ಹಿಂದೂಸ್ತಾನ್​ ಟೈಮ್ಸ್​ಗೆ ನೀಡಿರುವ ಸಂದರ್ಶನದಲ್ಲಿ ಆಲಿಯಾ-ರಣಬೀರ್​ ಅವರ ಸಂಬಂಧದ ಕುರಿತಾಗಿ ಬಾಯಿಬಿಟ್ಟಿದ್ದಾರೆ. 'ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಅವರು ಯಾವಾಗ ಜಗತ್ತಿಗೆ ಹೇಳಲು ಬಯಸುತ್ತಾರೋ ಆಗಲೇ ಹೇಳಲಿ' ಎಂದಿದ್ದಾರೆ.

ರಣಬೀರ್​ ಕಪೂರ್​ ಅವರ ತಂದೆ ರಿಷಿ ಸಹ ಈ ವಿಷಯದಲ್ಲಿ ಮೌನ ಮುರಿದಿದ್ದಾರೆ. ಮಿಡ್​ ಡೇಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, 'ಇದು ಮಗನಿಗೆ ಮದುವೆ ಆಗಲು ಸರಿಯಾದ ಸಮಯ. ನಾನು 27 ವರ್ಷಕ್ಕೆ ಸೆಟಲ್​ ಆಗಿದ್ದೆ, ಈಗ ರಣಬೀರ್​ಗೆ 35 ವರ್ಷ. ಅವನಿಗೆ ಇಷ್ಟವಾದ ಹುಡುಗಿಯೊಂದಿಗೆ ವಿವಾಹವಾಗಲಿ, ನಮಗೆ ಏನೂ ಸಮಸ್ಯೆ ಇಲ್ಲ. ಅವನ ಖುಷಿಯಲ್ಲೇ ನಮ್ಮ ಖುಷಿ ಇದೆ. ಅವನು ವಿವಾಹಕ್ಕೆ ರೆಡಿಯಾದರೆ ಸಾಕು . ನಾನು ಸಾಯುವುದರೊಳಗೆ ಮೊಮ್ಮಕ್ಕಳೊಂದಿಗೆ ಆಟವಾಡಲು ಬಯಸುತ್ತೇನೆ' ಎಂದಿದ್ದಾರೆ.

ಅವರ ಸಂಬಂಧದ ಕುರಿತು ಖುದ್ದು ರಣಬೀರ್​ ಅವರನ್ನು ಕೇಳಿದಾಗ ಕೊಟ್ಟ ಉತ್ತರ, 'ಏನು ಬೇಕೋ ಅದು ಇದೆ. ಇರುವುದು ಎಲ್ಲರಿಗೂ ಗೊತ್ತಿದೆ. ಇದರ ಬಗ್ಗೆ ಇನ್ನೇನು ಹೇಳಬೇಕಿಲ್ಲ' ಎಂದಿದ್ದಾರೆ.

ಅಮಿತಾಭ್​, ನಾಗಾರ್ಜುನ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಬ್ರಹ್ಮಾಸ್ತ್ರ' ಆಗಸ್ಟ್​ 15ಕ್ಕೆ ತೆರೆ ಕಾಣಲಿದೆ.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626