ಸಂಜಯ್ ಲೀಲಾ ಬನ್ಸಾಲಿ ಅವರ ಸಾವರಿಯಾ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಸ್ಪುರದ್ರೂಪಿ ಮತ್ತು ತಮ್ಮ ಮುದ್ದಾದ ನಗುವಿನಿಂದ ಲಕ್ಷಾಂತರ ಹುಡುಗಿಯರ ಮನಸ್ಸನ್ನು ಕದ್ದಿರುವಂತಹ ನಟ ರಣಬೀರ್ ಕಪೂರ್. ಈ ನಟ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಮದುವೆಯ ಬಗ್ಗೆ ಮತ್ತು ಒಂದು ಪರಿಪೂರ್ಣವಾದ ಸಂಬಂಧದ ಬಗ್ಗೆ ಮುಕ್ತವಾಗಿ ಮಾತಾಡಿದ್ದು ತುಂಬಾ ಜನ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದೆ. ಬಾಲಿವುಡ್ ನಟ ರಣಬೀರ್ ಮತ್ತು ನಟಿ ದೀಪಿಕಾ ಪಡುಕೋಣೆ ಜೊತೆಗೆ ಪ್ರೇಮ ಸಂಬಂಧದಲ್ಲಿ ಇದ್ದೇನೆ ಎಂದು ಹೇಳಿದಾಗ ಅನೇಕ ಹುಡುಗಿಯರ ಕನಸು ನುಚ್ಚು ನೂರಾಗಿತ್ತು. ಇವರಿಬ್ಬರೂ ಜೊತೆ ಜೊತೆಗೆ ಕಾಣಿಸಿಕೊಂಡು ಇನ್ನೇನು ಮದುವೆ ಆಗುತ್ತಾರೆ ಎನ್ನುವಾಗ ಇಬ್ಬರೂ ದೂರಾಗಿಬೇರೆ ದಾರಿ ಆರಿಸಿಕೊಂಡರು.
ನನಗೆ ಪ್ರೀತಿಯಲ್ಲಿ ಮೋಸ ಆಗಿದೆ ಎಂದು ದೀಪಿಕಾ ಅನೇಕ ಸಂದರ್ಶನಗಳಲ್ಲಿ ರಣಬೀರ್ ಕಪೂರ್ ಅವರ ಹೆಸರು ತೆಗೆದುಕೊಳ್ಳದೆಯೇ ಹೇಳಿಕೊಂಡಿದ್ದಾರೆ. ದೀಪಿಕಾ ತನ್ನ ಬದುಕಿನಿಂದ ದೂರ ಹೋದ ನಂತರ ರಣಬೀರ್ ಸಂದರ್ಶನವೊಂದರಲ್ಲಿ ಮದುವೆಯ ಬಗ್ಗೆ ಮತ್ತು ತಮ್ಮನ್ನು ಮದುವೆಯಾಗುವ ಹುಡುಗಿ ಹೇಗಿರಬೇಕು ಎನ್ನುವುದರ ಬಗ್ಗೆ ಮುಕ್ತವಾಗಿ ಮಾತಾಡಿದ್ದರು.
ಸಿಮಿ ಗೆರೆವಾಲ್ ನಡೆಸಿದ ಸಂದರ್ಶನವೊಂದರಲ್ಲಿ ರಣಬೀರ್ಗೆ ತಾವು ಎಂತಹ ಹುಡುಗಿಗೆ ಆಕರ್ಷಿತರಾಗುತ್ತೀರಿ ಎಂದು ಕೇಳಿದಂತಹ ಪ್ರಶ್ನೆಗೆ, ನಟ "ನನಗೆ ಇದರ ಬಗ್ಗೆ ಯಾವುದೇ ಪೂರ್ವಾಪರ ಯೋಚನೆಗಳಿಲ್ಲ ಮತ್ತು ನನ್ನ ಮದುವೆಯಾಗುವ ಹುಡುಗಿ ಹೀಗೆ ಇರಬೇಕು ಅಂತ ನನಗೆ ಅನ್ನಿಸುವುದಿಲ್ಲ. ಒಂದು ಬಾರಿ ಹುಡುಗಿ ಪ್ರೇಮಿಸಿದ ನಂತರ ಅದು ಮದುವೆಯಲ್ಲಿಯೇ ಕೊನೆಗೊಳ್ಳಬೇಕು. ಮಧ್ಯೆದಲ್ಲಿ ನಡೆಯುವುದೆಲ್ಲವೂ ಅಂತಹ ಮುಖ್ಯವಾದ ವಿಷಯವಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada Season 8 Finale: ಫಿನಾಲೆಗೂ ಮುನ್ನವೇ ದೊಡ್ಡ ಮೊತ್ತದ ಹಣ ಪಡೆದ ಅರವಿಂದ್ ಕೆ ಪಿ
ನೀವು ಒಂದು ಹುಡುಗಿಯ ಕಡೆಗೆ ತುಂಬಾ ಆಕರ್ಷಿತರಾಗುವುದು ಹೇಗೆ ಎಂದು ಕೇಳಿದಂತಹ ಪ್ರಶ್ನೆಗೆ, ರಣಬೀರ್ "ನನಗೆ ಇದನ್ನು ಹೇಳಲು ತುಂಬಾ ಸಂಕೋಚವೆನಿಸುತ್ತದೆ. ಹುಡುಗಿಯ ತುಟಿಗಳು ನನ್ನನ್ನು ತುಂಬಾ ಆಕರ್ಷಿಸುತ್ತವೆ" ಎಂದು ಹೇಳಿದ್ದರು.
ತಮ್ಮ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವಂತಹ ಮತ್ತು ಹರಿದಾಡುವಂತಹ ಸುದ್ದಿಗಳನ್ನು ಓದಿದರೆ ಹೇಗೆನ್ನಿಸುತ್ತದೆ ಎಂದು ಕೇಳಿದ ಪ್ರಶ್ನೆಗೆ, ಪ್ರತಿಕ್ರಿಯಿಸಿದ್ದ ರಣಬೀರ್ "ನಾನು ತುಂಬಾ ಒಳ್ಳೆಯ ಮನುಷ್ಯ ಅಂತ ಹೊರಗಡೆ ತೋರಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ನನ್ನಲ್ಲಿ ಕೆಲವು ಅವಗುಣಗಳಿವೆ. ಅದನ್ನು ಮಾಧ್ಯಮದವರು ತೋರಿಸಿದರೆ ಅದನ್ನು ನಾನು ತಪ್ಪು ಅಂತ ಹೇಳುವುದಿಲ್ಲ. ನನಗೆ ಈಗ 28 ವರ್ಷ ವಯಸ್ಸು ಮತ್ತು ಸದ್ಯಕ್ಕೆ ಯಾರು ಪ್ರೇಯಸಿ ಇಲ್ಲ. ಈ ಹಿಂದೆ ನನಗೆ ಪ್ರೇಯಸಿ ಇದ್ದಾಗ ನಾನು ಮುಕ್ತವಾಗಿಯೇ ಹೇಳಿಕೊಂಡಿದ್ದೇನೆ. ನಾನು ಒಬ್ಬ ನಟನಾಗಿದ್ದು, ನನ್ನ ಅಭಿಮಾನಿಗಳು ನಾನು ಮಾಡುವಂತಹ ಪಾತ್ರಗಳ ಬಗ್ಗೆ ಇಷ್ಟ ಪಡುತ್ತಾರೆ. ನೀವು ಕೇವಲ ನನ್ನ ಬಗ್ಗೆ ಪತ್ರಿಕೆಯಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಆಧಾರವಾಗಿಟ್ಟುಕೊಂಡು ನನ್ನ ಬಗ್ಗೆ ತಪ್ಪು ತಿಳಿದುಕೊಂಡರೆ ಅದು ತಪ್ಪಾಗುತ್ತದೆ" ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Priyanka Timmesh: ತುಂಡುಡುಗೆಯಲ್ಲಿ ಪ್ರಿಯಾಂಕಾ ತಿಮ್ಮೇಶ್: ಬಿಗ್ ಬಾಸ್ ಫಿನಾಲೆಯಲ್ಲಿ ಮಿಂಚಲಿರುವ ಪಿಂಕಿ..!
ಸದ್ಯಕ್ಕೆ ರಣಬೀರ್ ನಟಿ ಆಲಿಯಾ ಭಟ್ ಜೊತೆ ಪ್ರೇಮ ಸಂಬಂಧದಲ್ಲಿದ್ದು, ಕೋವಿಡ್ ಬರದೇ ಹೋಗಿದ್ದರೇ ಈಗಾಗಲೇ ಇಬ್ಬರೂ ಮದುವೆ ಆಗುತ್ತಿದ್ದರು ಎಂದು ನಟ ಹೇಳಿದ್ದಾರೆ. ಇನ್ನು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರ ಮೂರು ಭಾಗಗಳಲ್ಲಿ ರಿಲೀಸ್ ಆಗಬೇಕಿದೆ. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಹಾಗೂ ಮೌನಿ ರಾಯ್ ಸಹ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ