Bollywood: ರಣಬೀರ್ ನೆಚ್ಚಿನ ಕೋ-ಸ್ಟಾರ್ ಆಲಿಯಾ ಅಲ್ವಂತೆ! ಕಪೂರ್ ಮೆಚ್ಚಿದ ನಟಿ ಯಾರು?

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್

ನಾನು ಇಲ್ಲಿಯವರೆಗೆ ಅನುಷ್ಕಾ ಶರ್ಮಾ ಅವರೊಂದಿಗೆ ಕೆಲಸ ಮಾಡಿರುವುದನ್ನು ಹೆಚ್ಚು ಆನಂದಿಸಿದ್ದೇನೆ ಮತ್ತು ಅವರು ನನ್ನ ಉತ್ತಮ ಸ್ನೇಹಿತೆ ಕೂಡ ಎಂದು ನಟ ರಣಬೀರ್​ ಕಪೂರ್ ಹೇಳಿದ್ದಾರೆ.

  • Trending Desk
  • 2-MIN READ
  • Last Updated :
  • Karnataka, India
  • Share this:

‘ತು ಜೂಟಿ ಮೈ ಮಕ್ಕಾರ್’ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿರುವ ಬಾಲಿವುಡ್ ನಟ ರಣಬೀರ್ ಕಪೂರ್​ಗೆ (Ranbir Kapoor) ಇಷ್ಟವಾದ ಸಹ ನಟಿ ಆಲಿಯಾ (Actress Alia Bhatt) ಅಂತ ಅಂದುಕೊಂಡರೆ ಅದು ತಪ್ಪು ಅಂತ ಹೇಳಬಹುದು. ಏಕೆಂದರೆ ಇಲ್ಲಿಯವರೆಗೆ ರಣಬೀರ್ ಅವರು ನಟಿಸಿದ ಚಿತ್ರಗಳಲ್ಲಿ ಅವರ ನೆಚ್ಚಿನ ಸಹ ನಟಿ ಎಂದರೆ ಅನುಷ್ಕಾ ಶರ್ಮಾ (Anushka Sharma) ಅಂತೆ. ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ನಟಿಸುವುದನ್ನು ಅಥವಾ ಕೆಲಸ ಮಾಡುವುದನ್ನು ರಣಬೀರ್ ಹೆಚ್ಚು ಆನಂದಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.


ಪ್ರಸ್ತುತ, ಮುಂಬರುವ ಚಿತ್ರದ ಪ್ರಚಾರದ ಉತ್ಸಾಹದಲ್ಲಿರುವ ನಟ ರಣಬೀರ್ ಭಾನುವಾರ ತಮ್ಮ ‘ತು ಜೂಟಿ ಮೈ ಮಕ್ಕಾರ್’ ಸಹ ನಟಿ ಶ್ರದ್ಧಾ ಕಪೂರ್ ಅವರೊಂದಿಗೆ ಸಿಂಗಿಂಗ್ ರಿಯಾಲಿಟಿ ಶೋ ಇಂಡಿಯನ್ ಐಡಲ್ 13 ಶೋ ಗೆ ಬರಲಿದ್ದಾರೆ.


actor ranbir kapoor reacts sourav ganguly biopic stg mrq
ರಣ್​ಬೀರ್ ಕಪೂರ್


ಆದ್ದರಿಂದ, ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬರಾದ ಬಿದಿಪ್ತಾ ಚಕ್ರವರ್ತಿ, ಅವರು ತಮ್ಮ ಪ್ರದರ್ಶನದ ನಂತರ ರಣಬೀರ್ ಅವರನ್ನು ಕುರಿತು ನೆಚ್ಚಿನ ಸಹ ನಟಿ ಯಾರೆಂದು ಕೇಳಿದಾಗ ರಣಬೀರ್ ಈ ಉತ್ತರ ನೀಡಿದ್ದಾರೆ.


ನಟಿ ಅನುಷ್ಕಾ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆಯಂತೆ..


"ನಾನು ಮನೆಗೆ ಹೋಗಬೇಕಾಗಿರುವುದರಿಂದ, ನನ್ನ ನೆಚ್ಚಿನ ನಟಿ ಯಾರು ಎಂದು ಇಲ್ಲಿ ಹೇಳಲು ಸಾಧ್ಯವಿಲ್ಲ. ನಾನು ಇಲ್ಲಿಯವರೆಗೆ ಅನುಷ್ಕಾ ಶರ್ಮಾ ಅವರೊಂದಿಗೆ ಕೆಲಸ ಮಾಡಿರುವುದನ್ನು ಹೆಚ್ಚು ಆನಂದಿಸಿದ್ದೇನೆ ಮತ್ತು ಅವರು ನನ್ನ ಉತ್ತಮ ಸ್ನೇಹಿತೆ ಕೂಡ.


ನಾವು ಒಬ್ಬರನ್ನೊಬ್ಬರು ನಗಿಸುವುದನ್ನು ತುಂಬಾನೇ ಇಷ್ಟಪಡುತ್ತೇವೆ, ಅದಕ್ಕೆ ನಾನು ಅವಳೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ” ಅಂತ ರಣಬೀರ್ ಹೇಳಿದರು.


ಇನ್ನು ಈ ಸಂಗೀತ ರಾತ್ರಿಯನ್ನು ಇನ್ನಷ್ಟು ಉತ್ಸಾಹಭರಿತವಾಗಿಸಲು, ವಿಶೇಷ ಭಾನುವಾರದ ಸಂಚಿಕೆಯಲ್ಲಿ ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ಸಹ ಆಚರಿಸಲಾಯಿತು.


ಆದ್ದರಿಂದ, ವಿಶೇಷ ಅತಿಥಿಗಳಾದ ರಣಬೀರ್ ಮತ್ತು ಶ್ರದ್ಧಾ ಅವರನ್ನು ಮಂತ್ರಮುಗ್ಧರನ್ನಾಗಿಸಲೆಂದು ಪ್ರತಿಭಾವಂತ ಸ್ಪರ್ಧಿಗಳು ಒಂದರ ನಂತರ ಇನ್ನೊಂದು ಎಂಬಂತೆ ಅದ್ಭುತ ಪ್ರದರ್ಶನಗಳನ್ನು ನೀಡಿದರು.


‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’ ಮತ್ತು ‘ಅಂಜಾನಾ ಅಂಜಾನಿ’ ಚಿತ್ರಗಳಿಂದ ‘ತು ಜಾನೆ ನಾ’ ಮತ್ತು ‘ಆಸ್ ಪಾಸ್ ಹೈ ಖುದಾ’ ಹಾಡುಗಳನ್ನು ಹಾಡುವ ಮೂಲಕ ಬಿದಿಪ್ತಾ ನಟರ ಹೃದಯಗಳನ್ನು ಗೆದ್ದರು.


ಇಂಡಿಯನ್ ಐಡಲ್ ಗಾಯಕಿಯನ್ನು ಹೊಗಳಿದ ರಣಬೀರ್


ಆ ಸ್ಪರ್ಧಿಯು ತೀರ್ಪುಗಾರರು ಮತ್ತು ನಟರನ್ನು ಎಷ್ಟರ ಮಟ್ಟಿಗೆ ರಂಜಿಸಿದಳೆಂದರೆ, ಅವರು ಆಕೆಗೆ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಆಕೆಯ ಹಾಡುಗಾರಿಕೆಯನ್ನು ಹೊಗಳಿದ ರಣಬೀರ್ "ನಾನು ಕೇಳಿದ ಅತ್ಯಂತ ಅದ್ಭುತ ಗಾಯಕರಲ್ಲಿ ನೀವು ಒಬ್ಬರು!


ನನ್ನ ಸೀಮಿತ ಸಂಗೀತ ಜ್ಞಾನದ ಹೊರತಾಗಿಯೂ, ನೀವು ‘ತು ಜಾನೆ ನಾ’ ನೋಟ್ ಅನ್ನು ಹೇಗೆ ಬದಲಾಯಿಸಿದ್ದೀರಿ ಎಂಬುದನ್ನು ನಾನು ನೋಡಿದೆ. ನಿಮ್ಮ ಧ್ವನಿ ತುಂಬಾನೇ ಇಂಪಾಗಿದೆ" ಎಂದು ಹೇಳಿದರು.


ರಣಬೀರ್ ಮತ್ತು ಶ್ರದ್ಧಾ ಅವರ ಮುಂಬರುವ ಚಿತ್ರ ‘ತು ಜೂಟಿ ಮೈ ಮಕ್ಕಾರ್’ ಅನ್ನು ಲವ್ ರಂಜನ್ ನಿರ್ದೇಶಿಸಿದ್ದಾರೆ ಮತ್ತು ಮಾರ್ಚ್ 8 ರಂದು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅನುಭವ್ ಸಿಂಗ್ ಬಸ್ಸಿ ಮತ್ತು ಡಿಂಪಲ್ ಕಪಾಡಿಯಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.




ನಟ ರಣಬೀರ್ ಕೊನೆಯ ಬಾರಿಗೆ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ತು ಜೂಟಿ ಮೈ ಮಕ್ಕಾರ್’ ಹೊರತಾಗಿ, ನಟ ಸಂದೀಪ್ ರೆಡ್ಡಿ ವಂಗಾ ಅವರ ‘ಅನಿಮಲ್’ ಚಿತ್ರವನ್ನು ಸಹ ಹೊಂದಿದ್ದಾರೆ, ಇದರಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು