ಇತ್ತೀಚಿನ ದಿನಗಳಲ್ಲಿ'ಗಂಗೂಬಾಯಿ ಕಥಿಯಾವಾಡಿ (Gangubai Kathiawadi)' ಚಿತ್ರದ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಚಿತ್ರದಲ್ಲಿ (Movie) ನಟ ಅಜಯ್ ದೇವಗನ್ ಜೊತೆಗೆ ನಟಿ ಆಲಿಯಾ ಭಟ್ (Alia Bhat) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿದೆ. ಇದೇ ಫೆಬ್ರವರಿ 24ಕ್ಕೆ ಸಿನಿಮಾ ತೆರೆಕಾಣಲಿದೆ. ಕೈಯಲ್ಲಿ ಕಾರ್ಡ್ (Card), ಹಣೆಯ ಮೇಲೆ ದೊಡ್ಡ ಕೆಂಪು ಕುಂಕುಮ, ಕಣ್ಣುಗಳಲ್ಲಿ ಕಾಜಲ್, ಬೆಳ್ಳಿ ಉಂಗುರ ಮತ್ತು ಕಿವಿಯೋಲೆ, ಆಲಿಯಾ (Alia) ಅವರ ಪ್ರೇಮ ಭರಿತ ನೋಟ, ಪ್ರಮುಖ ಅಂಶವೆಂದರೆ ಕೆನ್ನೆಯ ಮೇಲಿನ ಗುರುತು. ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿ ಆಲಿಯಾ ಅವರ ಬಿಳಿ ಸೀರೆ (White Saree) ಮತ್ತು ಅತ್ಯಾಕರ್ಷಕ ಶೈಲಿಯು ಈಗಾಗಲೇ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ಸಿನಿಮಾ ನೋಡಲು ಬಾಲಿವುಡ್ (Bollywood) ಮಂದಿ ಕಾಯುತ್ತಿದ್ದಾರೆ. ಕೆಲವೊಂದು ಪಾತ್ರಗಳಿಂದ ಹೊರಬರುವುದ ಕಷ್ಟ ಎಂದು ಎಲ್ಲರಿಗೂ ಗೊತ್ತೆ ಇದೆ. ಇದೀಗ ಆಲಿಯಾ ಕೂಡ ಗಂಗೂಬಾಯಿ ಪಾತ್ರದಿಂದ ಹೊರಬರದೇ ಅದನ್ನೆ ಕ್ಯಾರಿ ಮಾಡುತ್ತಿದ್ದಾರಂತೆ.
ಮನೆಯಲ್ಲೂ ಗಂಗೂಬಾಯಿ ಥರಾನೇ ಆಡ್ತಾರಂತೆ ಆಲಿಯಾ!
ನಟಿ ಆಲಿಯಾ ಭಟ್ ತನ್ನ ನಟನೆ ಮೂಲಕವೇ ಬಾಲಿವುಡ್ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅಪ್ಪನ ಹೆಸರನ್ನು ಬಳಸದೇ ತನ್ನದೇ ಹವಾ ಸೃಷ್ಟಿ ಮಾಡಿದ್ದಾರೆ. ಯಾವುದೇ ಪಾತ್ರ ಕೊಟ್ಟರು ಅರಿದು ಕುಡಿದು ಬಿಡುತ್ತಾರೆ ಆಲಿಯಾ. ಇದೀಗ ಅವರು ಗಂಗೂಬಾಯಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಹೀಗಾಗಿ ಈ ಪಾತ್ರದಿಂದ ಇನ್ನೂ ಆಲಿಯಾ ಆಚೆ ಬಂದಿಲ್ಲ. ಮನೆಯಲ್ಲೂ ಗಂಗೂಬಾಯಿಯ ರೀತಿ ಹಾವ-ಭಾವ ತೋರುತ್ತಿದ್ದಾರಂತೆ ಆಲಿಯಾ ಭಟ್.
ಬನ್ಸಾಲಿ ಬಳಿ ಕಂಪ್ಲೇಂಟ್ ಮಾಡಿದ್ರಂತೆ ರಣಬೀರ್ ಕಪೂರ್!
ಇತ್ತೀಚೆಗೆ ನಡೆದ 72ನೇ ಬರ್ಲಿನ್ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕೂಡ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಪ್ರದರ್ಶನ ಆಗಿದೆ. ರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ನಟಿ ಆಲಿಯಾ ಭಟ್ ಕೂಡ ಹಾಜರಿ ಹಾಕಿದ್ದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಲೀಲಾ ಬನ್ಸಾಲಿ ಅವರು ಕೆಲವು ಫನ್ನಿ ವಿಚಾರಗಳನ್ನು ಹಂಚಿಕೊಂಡರು. ‘ಮನೆಯಲ್ಲಿ ಕೂಡ ಆಲಿಯಾ ಗಂಗೂಬಾಯಿ ಥರ ಮಾತನಾಡುತ್ತಾರೆ ಅಂತ ಅವರ ಬಾಯ್ಫ್ರೆಂಡ್ (ರಣಬೀರ್ ಕಪೂರ್) ನನಗೆ ಕಂಪ್ಲೇಂಟ್ ಮಾಡಿದ್ದಾರೆ’ ಎಂದು ಸಂಜಯ್ ಲೀಲಾ ಬನ್ಸಾಲಿ ಹೇಳಿದ್ದಾರೆ. ಪಕ್ಕದಲ್ಲೇ ಕುಳಿತಿದ್ದ ಆಲಿಯಾ ಭಟ್ ಅವರು ಈ ಮಾತು ಕೇಳಿ ನಕ್ಕಿದ್ದಾರೆ.
ಇದನ್ನೂ ಓದಿ: ಸಪೂರ ಸುಂದರಿ ಆಲಿಯಾ ಭಟ್.. ವೈಟ್ ಗೌನ್ನಲ್ಲಿ ಕಂಗೊಳಿಸಿದ ಬಾಲಿವುಡ್ ಏಂಜೆಲ್!
ಚಿತ್ರತಂಡದ ಮೇಲೆ ಗುಡುಗಿದ ಗಂಗೂಬಾಯಿ ಪುತ್ರ
ಮುಂಬೈನ ಕಾಮಾಟಿಪುರದ ಡಾನ್ ಆಗಿ ಮೆರೆದಿದ್ದ ಗಂಗೂಬಾಯಿ ಕಾಥಿಯಾವಾಡಿಯ ಕಥೆ ತೆರೆಯ ಮೇಲೆ ಹೇಗೆ ಮೂಡಿಬಂದಿರಬಹುದು ಎಂಬ ಕುತೂಹಲ ಎಲ್ಲರದ್ದು. ಗಂಗೂಬಾಯಿ ಅವರ ದತ್ತು ಪುತ್ರ ಎಂದು ಹೇಳಿಕೊಂಡಿರುವ ಬಾಬು ರಾವ್ಜೀ ಶಾ ಮತ್ತು ಮೊಮ್ಮಗಳು ಭಾರತಿ ಚಿತ್ರದ ಟ್ರೇಲರ್ ನೋಡಿ ಕೋಪಕೊಂಡಿದ್ದಾರೆ.“ನನ್ನ ತಾಯಿಯನ್ನು ವೇಶ್ಯೆಯನ್ನಾಗಿ ಪರಿವರ್ತಿಸಲಾಗಿದೆ. ಜನರು ಈಗ ನನ್ನ ತಾಯಿಯ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡತೊಡಗಿದ್ದಾರೆ” ಎಂದು ಬಾಬು ರಾವ್ಜೀ ಶಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಮೋಡಿ ಮಾಡಿದ ಆಲಿಯಾ; Gangubai Kathiawadi ಚಿತ್ರದ ಜಬ್ ಸೈಯಾನ್ ಹಾಡಿಗೆ ಪ್ರೇಕ್ಷಕರು ಫಿದಾ
ಚಿತ್ರದ ಬಿಡುಗಡೆಗೆ ತಡೆಯನ್ನು ಕೋರಿ ಗಂಗೂಬಾಯಿ ಕುಟುಂಬಸ್ಥರು ನೋಟಿಸ್ ಕಳುಹಿಸಿದ್ದಾರೆ.
ಗಂಗೂಬಾಯಿ ಅವರ ಕುಟುಂಬಸ್ಥರು ಸಂಜಯ್ ಲೀಲಾ ಭನ್ಸಾಲಿ ಹಾಗೂ ಲೇಖಕ ಎಸ್.ಹುಸೇನ್ ಜೈದಿ ವಿರುದ್ಧ ಮಾನನಷ್ಟ ಹಾಗೂ ಚಾರಿತ್ರ್ಯ ಹರಣದ ಆರೋಪ ಮಾಡಿದ್ದಾರೆ. ನೋಟಿಸ್ನಲ್ಲಿ ನಾಯಕಿ ಆಲಿಯಾ ಭಟ್ ಹೆಸರೂ ಕೂಡ ಇದೆ. 2020ರಲ್ಲಿ ಚಿತ್ರದ ಮೊದಲ ಪ್ರೋಮೋ ಹೊರಬಂದಾಗಲೇ ಗಂಗೂಬಾಯಿ ಅವರ ದತ್ತುಪುತ್ರರು ನ್ಯಾಯಾಲಯದ ಮೊರೆ ಹೋಗಿದ್ದರು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ