Ranbir Kapoor-Alia Bhatt: ರಣಬೀರ್- ಆಲಿಯಾ ರೊಮ್ಯಾಂಟಿಕ್ ಡೇಟ್!  ಡೆಸ್ಟಿನೇಷನ್ ಮ್ಯಾರೇಜ್​​ಗೆ ಹಾಟ್ ಕಪಲ್ ಪ್ಲಾನ್?

ನಿನ್ನೆ ರಣಬೀರ್ ಹುಟ್ಟುಹಬ್ಬ ಹಿನ್ನೆಲೆ ಆಲಿಯಾ ಭಟ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಜೊತೆ "ಹ್ಯಾಪಿ ಬರ್ತಡೇ ಮೈ ಲೈಫ್"(Happy Birthday my Life) ಎಂಬ ಪೋಸ್ಟ್ ಒಂದನ್ನು ಹಾಕಿದ್ದಾರೆ.

ರಣಬೀರ್ ಕಪೂರ್-ಆಲಿಯಾ ಭಟ್

ರಣಬೀರ್ ಕಪೂರ್-ಆಲಿಯಾ ಭಟ್

  • Share this:
    ಬಾಲಿವುಡ್ ನ ಕ್ಯೂಟೆಸ್ಟ್, ಹಾಟೆಸ್ಟ್, ಟ್ರೆಂಡಿಂಗ್ ಕಪಲ್ಸ್ ಅಂದ್ರೆ, ಅದು ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhatt) ಜೋಡಿ. ನಿನ್ನೆ ನಟ ರಣಬೀರ್ ಕಪೂರ್ 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಣಬೀರ್ ಕಪೂರ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಈ ಜೋಡಿ ಎರಡು ದಿನದ ಹಿಂದೆಯೇ ಜೋಧ್​ಪುರಗೆ ಆಗಮಿಸಿದ್ದರು. ಅದರಂತೆ ಆಲಿಯಾ ಭಟ್ ತನ್ನ ಪ್ರಿಯತಮ ರಣಬೀರ್ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿದ್ದಾರೆ. ಸುಜನ್ ಜವಾಯಿ (Sujan Jawai)ರೆಸಾರ್ಟ್ ನಲ್ಲಿ ಈ ಜೋಡಿ ರೋಮ್ಯಾಂಟಿಕ್ ಡೇಟ್ ಮಾಡಿದೆ.

    ಸರೋವರ ಮತ್ತು ಬೆಟ್ಟಗಳ ಮನಮೋಹಕ ದೃಶ್ಯಗಳನ್ನು ನೋಡುತ್ತಾ ಈ ಜೋಡಿ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಆಲಿಯಾ ಭಟ್ ಶೇರ್ ಮಾಡಿಕೊಂಡಿದ್ದಾರೆ. ನಿನ್ನೆ ರಣಬೀರ್ ಹುಟ್ಟುಹಬ್ಬ ಹಿನ್ನೆಲೆ ಆಲಿಯಾ ಭಟ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಜೊತೆ "ಹ್ಯಾಪಿ ಬರ್ತಡೇ ಮೈ ಲೈಫ್"(Happy Birthday my Life) ಎಂಬ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇದರ ಜೊತೆ ಈ ಜೋಡಿಯ ರೋಮ್ಯಾಂಟಿಕ್ ಡೇಟ್ ನ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.




    2018 ರಿಂದ ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ. 2019ರಲ್ಲಿ ಈ ಜೋಡಿ ಮದುವೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಇವರು ರಾಜಸ್ಥಾನದಲ್ಲಿ ಮದುವೆಯಾಗಲಿದ್ದಾರೆ ಎಂಬ ಗಾಸಿಪ್ ಕೇಳಿಬಂದಿದೆ. ಹೀಗಾಗಿ ಮದುವೆ ಲೊಕೇಶನ್ ಹುಡುಕಲೆಂದೇ ರಾಜಸ್ಥಾನಕ್ಕೆ ಬಂದಿದ್ದಾರೆ ಅಂತ ಹೇಳಲಾಗುತ್ತಿದೆ. ಈ ಜೋಡಿಯ ಮದುವೆಗೆ ಆಗಲೇ ಇವರ ಮನೆಯ ಒಪ್ಪಿಗೆ ಸಹ ಸಿಕ್ಕಿದೆ. ರಣಬೀರ್ ಹಾಗೂ ಆಲಿಯಾ ಭಟ್ ಡೆಸ್ಟಿನೇಶನ್ ಮದುವೆಯಾಗಲು ಡಿಸೈಡ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈಗಾಗಲೇ ಈ ಜೋಡಿಯು ಜೋಧ್​ಪುರದಲ್ಲಿ ಕೆಲಸ್ಥಳಗಳನ್ನು ವೀಕ್ಷಣೆ ಮಾಡಿ, ಮಾಹಿತಿ ಪಡೆದುಕೊಂಡಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ ಮದುವೆ ಸ್ಥಳವನ್ನು ಫೈನಲ್ ಮಾಡಲಿದ್ದಾರಂತೆ. ಹಾಗೇನಾದ್ರೂ ಆದ್ರೆ ಈ ವರ್ಷವೇ ಹಾಟೆಸ್ಟ್ ಕಪಲ್ಸ್ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿಯ ಮದುವೆಯನ್ನು ಕಣ್ತುಂಬಿಕೊಳ್ಳಬಹುದು.

    2020ರಲ್ಲಿ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಇವರ ಪ್ಲಾನ್ ಗಳನ್ನು ಮಹಾಮಾರಿ ಕೊರೋನಾ ಹಾಳುಮಾಡಿತ್ತು. ಅಷ್ಟೇ ಅಲ್ಲದೆ 2020 ಏಪ್ರಿಲ್ 30ರಂದು ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಕೊನೆಯುಸಿರೆಳೆದಿದ್ದರು. ಇದು ಬಾಲಿವುಡ್ ಚಿತ್ರರಂಗ ಹಾಗೂ ಅವರ ಕುಟುಂಬಕ್ಕೆ ಆಘಾತ ನೀಡಿತ್ತು. ಹೀಗಾಗಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ವಿಚಾರವನ್ನು ಮುಂದೂಡಲಾಗಿತ್ತು. ಇದೀಗ ಈ ಕಪಲ್ಸ್ ಸದ್ಯ ರಾಜಸ್ಥಾನದಲ್ಲಿ ಬೀಡು ಬಿಟ್ಟಿರುವುದು ಮತ್ತೆ ಮದುವೆ ವಿಚಾರ ಮುನ್ನೆಲೆಗೆ ಬರುವಂತೆ ಮಾಡಿದೆ.

    ಇತ್ತ ನಟ ರಣಬೀರ್ ಕಪೂರ್ 39 ವರ್ಷವಾಗಿದ್ದು, ಮದುವೆ ವಯಸ್ಸು ಮೀರಿ ಹೋಗಿದೆ. ಇದರ ನಡುವೆ ಮದುವೆಗೆ ಹಲವಾರು ವಿಘ್ನಗಳು ಎದುರಾಗಿದ್ದವು. ಇದೀಗ ಎರಡು ಕಡೆಯ ಕುಟುಂಬಸ್ಥರು ಇವರಿಬ್ಬರ ಮದುವೆಯನ್ನು ಬೇಗ ಮಾಡಿ ಮುಗಿಸಲು ಪ್ಲಾನ್ ಮಾಡಿಕೊಂಡಿದ್ದಾರಂತೆ.

    ಇನ್ನು ರಣಬೀರ್ ಕಪೂರ್ ಶಂಶೇರಾ (Shamshera) ಹಾಗೂ ಬ್ರಹ್ಮಾಸ್ತ್ರ (Brahmastra) ಸಿನಿಮಾಗಳಲ್ಲಿ ನಡೆಸಿದ್ದಾರೆ. ವಿಶೇಷ ಅಂದ್ರೆ ನಿಜಜೀವನದಲ್ಲಿ ಜೋಡಿಯಾಗಿದ್ದ ಆಲಿಯಾ ಭಟ್, ಈ ಸಿನಿಮಾಗಳಲ್ಲೂ ರಣಬೀರ್ ಗೆ ಜೊತೆಯಾಗಲಿದ್ದಾರೆ.

    • ವರದಿ - ವಾಸುದೇವ್. ಎಂ

    Published by:Latha CG
    First published: