Ranbir Kapoor: ಮುಗಿದೇ ಹೋಯ್ತಾ ಹನಿಮೂನ್! ರಶ್ಮಿಕಾ ಜೊತೆ ಕಾಣಿಸಿಕೊಂಡಿದ್ದೇಕೆ ರಣಬೀರ್‌?

ರಣಬೀರ್ ಕಪೂರ್ ಪತ್ನಿ ಜೊತೆ ಹನಿಮೂನ್‌ಗೆ ಹೋಗಿಲ್ವಂತೆ. ಬದಲಾಗಿ ಅವರು ಮನಾಲಿಯಲ್ಲಿದ್ದಾರೆ! ಹೋ ಹಾಗಿದ್ರೆ ಅಲ್ಲಿಯೇ ಹನಿಮೂನ್ ಮಾಡಿಕೊಳ್ಳುತ್ತಿರಬೇಕು ಅಂತ ನೀವು ಲೆಕ್ಕಹಾಕಿದ್ರೆ ಅದು ತಪ್ಪು, ಅವರು ಅಲ್ಲಿ ನಟಿ ರಶ್ಮಿಕಾ ಮಂದಣ್ಣ (Actress Rashmika Mandanna) ಜೊತೆ ಇರೋ ಫೋಟೋಗಳು ವೈರಲ್ ಆಗಿವೆ. ಅಯ್ಯೋ, ನೀವು ಏನೇನೋ ಅಂದುಕೊಳ್ಳಬೇಡಿ, ಅದೇನು ವಿಚಾರ ಅಂತ ಕೂಲ್ ಆಗಿ ಮುಂದೆ ಓದಿ…

ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ

ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ

  • Share this:
ಬಾಲಿವುಡ್‌ ನಟ (Bollywood Hero) ರಣಬೀರ್ ಕಪೂರ್ (Ranbir Kapoor) ಹಾಗೂ ಬಾಲಿವುಡ್ ಚೆಲುವೆ ಆಲಿಯಾ ಭಟ್ (Alia Bhatt) ಈಗಷ್ಟೇ ಮದುವೆ (Marriage) ಆಗಿದ್ದಾರೆ. ಬಹುಶಃ ಮದುವೆ ಬಳಿಕ ರಣಬೀರ್‌ ಎಲ್ಲಿಗೆ ಹೋಗಿರಬಹುದು ಅಂತ ಅಭಿಮಾನಿಗಳು (Fans) ಕೇಳ್ತಿದ್ದಾರೆ. ಇನ್ನೆಲ್ಲಿಗೆ ಹೋಗ್ತಾರೆ, ಪತ್ನಿ ಆಲಿಯಾ ಭಟ್ ಜೊತೆ ಹನಿಮೂನ್‌ಗೆ (Honeymoon) ಹೋಗಿರಬಹುದು ಅಂತ ಅವರೇ ಉತ್ತರವನ್ನೂ ನೀಡ್ತಾರೆ. ಆದ್ರೆ ರಣಬೀರ್ ಕಪೂರ್ ಪತ್ನಿ ಜೊತೆ ಹನಿಮೂನ್‌ಗೆ ಹೋಗಿಲ್ವಂತೆ. ಬದಲಾಗಿ ಅವರು ಮನಾಲಿಯಲ್ಲಿದ್ದಾರೆ (Manali). ಹೋ ಹಾಗಿದ್ರೆ ಅಲ್ಲಿಯೇ ಹನಿಮೂನ್ ಮಾಡಿಕೊಳ್ಳುತ್ತಿರಬೇಕು ಅಂತ ನೀವು ಲೆಕ್ಕಹಾಕಿದ್ರೆ ಅದು ತಪ್ಪು, ಅವರು ಅಲ್ಲಿ ನಟಿ ರಶ್ಮಿಕಾ ಮಂದಣ್ಣ (Actress Rashmika Mandanna) ಜೊತೆ ಇರೋ ಫೋಟೋಗಳು (Photos) ವೈರಲ್ (Viral) ಆಗಿವೆ. ಅಯ್ಯೋ, ನೀವು ಏನೇನೋ ಅಂದುಕೊಳ್ಳಬೇಡಿ, ಅದೇನು ವಿಚಾರ ಅಂತ ಕೂಲ್ ಆಗಿ ಮುಂದೆ ಓದಿ…

 ಮನಾಲಿಯಲ್ಲಿ ರಶ್ಮಿಕಾ ಜೊತೆ ರಣಬೀರ್ ಕಪೂರ್

ಬಾಲಿವುಡ್‌ ಸೂಪರ್‌ಸ್ಟಾರ್‌ ರಣಬೀರ್ ಕಪೂರ್ ಹಾಗೂ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಅವರು ‘ಅನಿಮಲ್‌’ ಸಿನಿಮಾದ ಚಿತ್ರೀಕರಣಕ್ಕಾಗಿ ಹಿಮಾಚಲ ಪ್ರದೇಶದ ಮನಾಲಿ ತಲುಪಿದ್ದಾರೆ. ರಣಬೀರ್‌ ಕಪೂರ್‌ ಹಾಗೂ ರಶ್ಮಿಕಾ ಮಂದಣ್ಣ ಅವರು ತಮ್ಮ ಅಭಿಮಾನಿಗಳೊಂದಿಗೆ ಪೋಸ್‌ ನೀಡಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.



758234

ಸಾಂಪ್ರದಾಯಿಕ ಡ್ರೆಸ್‌ನಲ್ಲಿ ಮಿಂಚಿಂಗ್

ರಣಬೀರ್ ಮತ್ತು ರಶ್ಮಿಕಾ ‘ಅನಿಮಲ್’ ಹೆಸರಿನ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಹಿಮಾಚಲ ಪ್ರದೇಶದ ಮನಾಲೆಯಲ್ಲಿ ನಡೆಯುತ್ತಿದೆ. ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅವರು ನಿನ್ನೆ ಮನಾಲೆಗೆ ಬಂದು ಇಳಿದಿದ್ದಾರೆ. ಇವರನ್ನು ಅಲ್ಲಿನ ಸಿಬ್ಬಂದಿಗಳು ಟೋಪಿಹಾಕಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡಿದ್ದಾರೆ. ಹಿಮಾಚಲದ ಸಾಂಪ್ರದಾಯಿಕ ಟೋಪಿಯನ್ನು ಧರಿಸಿರುವ ಈ ಇಬ್ಬರು ತಾರೆಯರಿಗೆ ಸ್ವಾಗತ ಕೋರಿರುವುದನ್ನು ಚಿತ್ರಗಳಲ್ಲಿ ಕಾಣಬಹುದು.

ಇದನ್ನೂ ಓದಿ: Video: ರಶ್ಮಿಕಾ ಮಂದಣ್ಣ ಲೈಫ್‌ನಲ್ಲಿ ಹಿಂಗೆಲ್ಲಾ ಆಗುತ್ತಾ? ಖ್ಯಾತ ಜ್ಯೋತಿಷಿ ನುಡಿದ ಭಯಾನಕ ಭವಿಷ್ಯ ಇಲ್ಲಿದೆ

ಮೊದಲ ಬಾರಿಗೆ ರಣಬೀರ್‌ ಜೊತೆ ರಶ್ಮಿಕಾ ನಟನೆ

ಇದೇ ಮೊದಲ ಬಾರಿಗೆ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಶೇಷ ಕಥಾವಸ್ತುವಿದ್ದು, ರಶ್ಮಿಕಾಗೆ ಬಾಲಿವುಡ್ ನಲ್ಲಿ ಒಂದೊಳ್ಳೆ ಬ್ರೇಕ್ ಕೊಡಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ವಿಶೇಷ ಪಾತ್ರವನ್ನೂ ರಶ್ಮಿಕಾ ನಿರ್ವಹಿಸುತ್ತಿದ್ದಾರಂತೆ.

‘ಅರ್ಜುನ್ ರೆಡ್ಡಿ’ ಖ್ಯಾತಿಯ ನಿರ್ದೇಶಕನ ಸಿನಿಮಾ

‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ‘ಅನಿಮಲ್‌’ ಚಿತ್ರವನ್ನು  ನಿರ್ದೇಶಿಸಲಿದ್ದಾರೆ. ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಆಗಸ್ಟ್ 11, 2023 ರಂದು  ಬಿಡುಗಡೆಯಾಗಲಿದೆ.

ಇದರಲ್ಲೂ ಇರುತ್ತಂತೆ ರೊಮ್ಯಾಂಟಿಕ್ ದೃಶ್ಯಗಳು!

ತೆಲುಗಿನ ಅರ್ಜುನ್ ರೆಡ್ಡಿ ಚಿತ್ರಖ್ಯಾತಿಯ ಸಂದೀಪ್ ರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಅರ್ಜುನ್ ರೆಡ್ಡಿ ರೀತಿಯ ಯಾವ ದೃಶ್ಯಗಳೂ ಸಿನಿಮಾದಲ್ಲಿ ಇರುವುದಿಲ್ಲವಂತೆ. ಆದರೆ, ರೊಮ್ಯಾಂಟಿಕ್ ದೃಶ್ಯಗಳಿಗೆ ಈ ಸಿನಿಮಾದಲ್ಲಿಯೂ ಅವಕಾಶ ಕೊಟ್ಟಿದ್ದಾರಂತೆ ನಿರ್ದೇಶಕರು.

 ಇದನ್ನೂ ಓದಿ: Alia Yoga: ಪ್ರತಿದಿನ ಈ ಯೋಗಾಸನ ಮಾಡಿದ್ರೆ ಬೆಸ್ಟ್ ಅಂತೆ! ಈ ಬಗ್ಗೆ ಟಿಪ್ಸ್ ಕೊಟ್ರು ಆಲಿಯಾ ಭಟ್ ಟ್ರೈನರ್

ಸಿನಿಮಾದಲ್ಲಿದ್ದಾರೆ ಘಟಾನುಘಟಿ ಕಲಾವಿದರು

ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಕೂಡ ತಾರಾ ಬಳಗದಲ್ಲಿ ಇದ್ದಾರೆ. ಇವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಣಬೀರ್, ರಶ್ಮಿಕಾ, ಬಾಬಿ ಮತ್ತು ಅನಿಲ್ ರೀತಿಯ ಹೆಸರಾಂತ ಕಲಾವಿದರೇ ಈ ಸಿನಿಮಾದಲ್ಲಿ ಇರುವುದರಿಂದ ಅಭಿಮಾನಿಗಳು ಈಗಿನಿಂದಲೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Published by:Annappa Achari
First published: