Brahmastra: ಚೆನ್ನೈನಲ್ಲಿ ಬ್ರಹ್ಮಾಸ್ತ್ರ ಚಿತ್ರತಂಡ; ಬಾಳೆ ಎಲೆಯೂಟ ಬೊಂಬಾಟ್​ ಅಂದ್ರು ರಣಬೀರ್!​

ಸಿನಿಮಾ ಪ್ರಚಾರ ತೊಡಗಿರೋ ನಟ ರಣಬೀರ್ ಕಪೂರ್ ಅವರು ಸೂಪರ್​ ಸ್ಟಾರ್ ನಾಗಾರ್ಜುನ ಮತ್ತು ತೆಲುಗಿನಲ್ಲಿ ಚಿತ್ರವನ್ನು ಪ್ರಸ್ತುತಪಡಿಸಲಿರುವ ನಿರ್ಮಾಪಕ ಎಸ್ಎಸ್ ರಾಜಮೌಳಿ ಜೊತೆ ಇಂದು (ಆಗಸ್ಟ್​ 24) ರಂದು ಚೆನ್ನೈಗೆ ಭೇಟಿ ನೀಡಿದರು.

ಬ್ರಹ್ಮಾಸ್ತ್ರ ಚಿತ್ರ ಪ್ರಚಾರ

ಬ್ರಹ್ಮಾಸ್ತ್ರ ಚಿತ್ರ ಪ್ರಚಾರ

  • Share this:
ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ (Alia bhatt) ಅಭಿನಯದ ಬಹುನಿರೀಕ್ಷಿತ ಬ್ರಹ್ಮಾಸ್ತ್ರ (Brahmastra) ಸಿನಿಮಾ ಸೆಪ್ಟೆಂಬರ್​ 9 ರಂದು ಬಿಡುಗಡೆಯಾಗಲಿದೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಸಿನಿಮಾವನ್ನು 300 ಕೋಟಿ ರೂ.ಗಳಿಗೂ ಅಧಿಕ ಬಂಡವಾಳ ಹಾಕಿ ನಿರ್ಮಾಣ ಮಾಡಲಾಗಿದೆ. ಸೆ.9ರಂದು ಚಿತ್ರವು ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲೂ ಈ ಸಿನಿಮಾ ತೆರೆಕಾಣಲಿದ್ದು, ಶಿವ ತ್ರಿಪಾಠಿ ಎಂಬ ಪಾತ್ರದಲ್ಲಿ ರಣ್‌ಬೀರ್ ಕಪೂರ್ ( Ranbir Kapoor) ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರತಂಡ ಪ್ರಚಾರದಲ್ಲಿ ಫುಲ್​ ಬ್ಯುಸಿಯಾಗಿದೆ.

ಚೆನ್ನೈನಲ್ಲಿ ಅದ್ಧೂರಿ ಸ್ವಾಗತ

ಸಿನಿಮಾ ಪ್ರಚಾರ ತೊಡಗಿರೋ ನಟ ರಣಬೀರ್ ಕಪೂರ್ ಅವರು ಸೂಪರ್​ ಸ್ಟಾರ್ ನಾಗಾರ್ಜುನ ಮತ್ತು ತೆಲುಗಿನಲ್ಲಿ ಚಿತ್ರವನ್ನು ಪ್ರಸ್ತುತಪಡಿಸಲಿರುವ ನಿರ್ಮಾಪಕ ಎಸ್ಎಸ್ ರಾಜಮೌಳಿ ಜೊತೆ ಇಂದು (ಆಗಸ್ಟ್​ 24) ರಂದು ಚೆನ್ನೈಗೆ ಭೇಟಿ ನೀಡಿದರು. ರಣಬೀರ್ ಕಪೂರ್, ನಾಗಾರ್ಜುನ ಮತ್ತು ಎಸ್‌ಎಸ್ ರಾಜಮೌಳಿ ಅವರಿಗೆ ಚೆನ್ನೈನಲ್ಲಿ ಆತ್ಮೀಯ ಸ್ವಾಗತ ಸಿಕ್ಕಿದೆ.

 Ranbir Kapoor And Nagarjuna Promote Brahmastra In Chennai With SS Rajamouli pvn
ಬ್ರಹ್ಮಾಸ್ತ್ರ ಚಿತ್ರ ಪ್ರಚಾರ


ನಿರ್ದೇಶಕರ ಬಗ್ಗೆ ನಾಗಾರ್ಜುನ್ ಮೆಚ್ಚುಗೆ

ಇದೇ ವೇಳೆ ಮಾತನಾಡಿದ ನಾಗಾರ್ಜುನ, ಭಾರತೀಯ ಪುರಾಣ ಮತ್ತು ವೇದಗಳ ಜೊತೆಯಾಗಿ ಬ್ರಹ್ಮಾಸ್ತ್ರ ಚಿತ್ರ ಮೂಡಿ ಬಂದಿದೆ. ಹೀಗಾಗಿ ಚಿತ್ರವನ್ನು ಒಪ್ಪಿಕೊಂಡೆ. ಅಯನ್ ಕಲ್ಪನೆಗಳನ್ನು ಚಿತ್ರದಲ್ಲಿ ಅಳವಡಿಸಿದ ರೀತಿ ನನ್ನ ಮನಸ್ಸನ್ನು ಬೆಚ್ಚಿಬೀಳಿಸಿದೆ ಎಂದು ನಾಗಾರ್ಜುನ ಹೇಳಿದರು.

ಬಾಳೆ ಎಲೆ ಊಟ ಸವಿದ ರಣಬೀರ್ ಕಪೂರ್
ಇದೇ ವೇಳೆ ರಣಬೀರ್ ಕಪೂರ್ , ನಾಗಾರ್ಜುನ್​ ಹಾಗೂ ನಿರ್ಮಾಪಕ ಎಸ್ಎಸ್ ರಾಜಮೌಳಿ ಅವರು ಸೌತ್​ ಇಂಡಿಯಾದ ಸಂಪ್ರಾದಾಯಿಕ ಊಟ ಸವಿದಿದ್ದಾರೆ. ಸ್ಟಾರ್​ಗಳು ಬಾಳೆ ಎಲೆಯಲ್ಲಿ ಬಡಿಸಿದ ಊಟ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


 ಭರ್ಜರಿ 'ಬ್ರಹ್ಮಾಸ್ತ್ರ' ಟ್ರೇಲರ್ 


'ಬ್ರಹ್ಮಾಸ್ತ್ರ' ಟ್ರೇಲರ್ ಅದ್ದೂರಿಯಾಗಿದೆ. ಈ ಸಿನಿಮಾದಲ್ಲಿ ವಿಎಫ್‌ಎಕ್ಸ್‌ಗೆ ಭಾರಿ ಮನ್ನಣೆ ನೀಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪಂಚಭೂತಗಳ ಕಥೆಯನ್ನು ಈ ಸಿನಿಮಾ ಹೊಂದಿದೆ. ವಾಯು, ಅಗ್ನಿ, ನೀರು ಹೀಗೆ ಸಾಕಷ್ಟು ಅಂಶಗಳು ಕಾಣಿಸುತ್ತವೆ. ನಾಯಕನಿಗೆ ಅಸಾಧಾರಣ ಶಕ್ತಿ ಇರುತ್ತದೆ. ಆತನನ್ನು ಬೆಂಕಿಯೂ ಸುಡುವುದಿಲ್ಲ. ಅಷ್ಟೊಂದು ಶಕ್ತಿಶಾಲಿ ಆಗಿರುತ್ತಾನೆ.
ಒಟ್ಟಾರೆ, ಥಿಯೇಟರ್‌ನಲ್ಲಿ ಒಂದು ದೃಶ್ಯ ವೈಭವ ನೀಡುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಸಾಬೀತಾಗಿದೆ. ಈ ಟ್ರೇಲರ್‌ನಲ್ಲಿ ರಣ್‌ಬೀರ್ ಜೊತೆಗೆ ಆಲಿಯಾ ಭಟ್, ಅಮಿತಾಭ್ ಬಚ್ಚನ್‌, ನಾಗಾರ್ಜುನ ಕೂಡ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಶಾರುಖ್ ಖಾನ್ ಇರುವಿಕೆಯ ಬಗ್ಗೆ ಸೂಕ್ಷ್ಮವಾಗಿ ತೋರಿಸಲಾಗಿದೆ ರಣ್‌ಬೀರ್ ಮತ್ತು ಆಲಿಯಾ ಮೊದಲ ಬಾರಿಗೆ ಒಟ್ಟಿಗೆ ಈ ಸಿನಿಮಾದಲ್ಲಿ ನಟಿಸಿದ್ದಾರೆ.


ಬ್ರಹ್ಮಾಸ್ತ್ರಕ್ಕೆ ಬಾಯ್ಕಾಟ್​ ಭೀತಿ


ಅಂದಹಾಗೆ, ಟ್ರೇಲರ್‌ನ ಒಂದು ದೃಶ್ಯದಲ್ಲಿ ರಣ್‌ಬೀರ್ ಕಪೂರ್ ದೇವಸ್ಥಾನದ ಗಂಟೆ ಬಾರಿಸುತ್ತಾರೆ. ಆದರೆ ವೇಳೆ ಅವರು ಶೂ ಧರಿಸಿದ್ದಾರೆ. ಇದೇ ಈಗ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ. ದೇವಸ್ಥಾನದ ಒಳಗೆ ಯಾರಾದರೂ ಶೂ ಧರಿಸಿಕೊಂಡು ಹೋಗುತ್ತಾರಾ? ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಣ್‌ಬೀರ್‌ ಶೂ ಧರಿಸಿರುವ ಸೀನ್‌ನ ಸ್ಕ್ರೀನ್‌ ಶಾಟ್ ಅನ್ನು ವೈರಲ್ ಮಾಡಲಾಗಿದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Published by:Pavana HS
First published: