ವೈರಲ್​ ಆಯ್ತು ರಣಬೀರ್ ಕಪೂರ್​ - ಅಲಿಯಾ ವಿವಾಹದ ಫೋಟೋ..!

ಸಾಮಾಜಿಕ ಜಾಲತಾಣದಲ್ಲಿ ರಣಬೀರ್​ ಹಾಗೂ ಅಲಿಯಾ ವಿವಾಹವಾಗಿರುವ ಸುದ್ದಿ ಹರಿದಾಡುತ್ತಿದೆ. ಜತೆಗೆ ಅವರ ವಿವಾಹದ ಚಿತ್ರವೂ ಸಹ. ಈ ಜೋಡಿಯ ವಿವಾಹದ ಚಿತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹಾಗಾದರೆ ರಹಸ್ಯವಾಗಿ ವಿವಾಹವಾಗಿದ್ದಾರಾ ಈ ಜೋಡಿ..?

Anitha E | news18-kannada
Updated:September 6, 2019, 1:58 PM IST
ವೈರಲ್​ ಆಯ್ತು ರಣಬೀರ್ ಕಪೂರ್​ - ಅಲಿಯಾ ವಿವಾಹದ ಫೋಟೋ..!
ರಣಬೀರ್ ಕಪೂರ್​ ಹಾಗೂ ಅಲಿಯಾ ಭಟ್​
  • Share this:
ರಣಬೀರ್​ ಕಪೂರ್​ ಹಾಗೂ ಅಲಿಯಾ ಭಟ್​ ವಿವಾಹ ಕುರಿತಂತೆ ಈಗಾಗಲೇ ಸಾಕಷ್ಟು ಸುದ್ದಿಗಳು ಹರಿದಾಡುತ್ತವೆ. ಅದರಲ್ಲೂ ಅವರಿಬ್ಬರೂ ತುಂಬಾ ಸಮಯದಿಂದ ಡೇಟಿಂಗ್​ ಮಾಡುತ್ತಿದ್ದು, ಈ ವಿಷಯ ಅವರ ಕುಟುಂಬದವರಿಂದಲೂ ಮರೆಯಾಗಿಲ್ಲ. ಅವರ ವಿವಾಹಕ್ಕೆ ಇಬ್ಬರ ಮನೆಯವರಿಂದಲೂ ಹಸಿರು ನಿಶಾನೆ ಸಿಕ್ಕಿದ್ದು, ಅದಕ್ಕೆ ಈ ಜೋಡಿ ಒಪ್ಪಿಗೆ ನೀಡಬೇಕಿದೆಯಷ್ಟೆ.

ಹೀಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ರಣಬೀರ್​ ಹಾಗೂ ಅಲಿಯಾ ವಿವಾಹವಾಗಿರುವ ಸುದ್ದಿ ಹರಿದಾಡುತ್ತಿದೆ. ಜತೆಗೆ ಅವರ ವಿವಾಹದ ಚಿತ್ರವೂ ಸಹ. ಈ ಜೋಡಿಯ ವಿವಾಹದ ಚಿತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Fan Made photo of Ranbir and Alia Marriage photo
ಅಭಿಮಾನಿಗಳು ಮಾಡಿರುವ ರಣಬೀರ್​ ಹಾಗೂ ಅಲಿಯಾ ವಿವಾಹದ ಚಿತ್ರ


ರಣಬೀರ್ ತಂದೆ ರಿಶಿ ಕಪೂರ್​ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದು, ಈಗ ಅವರ ಕೊಂಚ ಚೇತರಿಸಿಕೊಂಡಿದ್ದಾರೆ. ಈ ಹಿಂದೆ ರಿಶಿ ಕಪೂರ್​ ರಣಬೀರ್​ ವಿವಾಹವಾಗುವ ಸಮಯ ಬಂದಿದೆ ಎಂದೂ ಹೇಳಿಕೆ ನೀಡಿದ್ದರು. ಇದನ್ನೆಲ್ಲ ಗಮನಿಸುತ್ತಿದ್ದ ಅಭಿಮಾನಿಗಳು ಈ ಫೋಟೋ ನೋಡಿ ರಣಬೀರ್​ ಹಾಗೂ ಅಲಿಯಾ ರಹಸ್ಯವಾಗಿ ವಿವಾಹವಾಗಿರಬೇಕು ಎಂದು ಅಂದುಕೊಂಡಿದ್ದರು.

ಇದನ್ನೂ ಓದಿ: ನ್ಯೂಯಾರ್ಕ್​ನ ವಿಶ್ವವಿದ್ಯಾಲಯದಲ್ಲಿ ಶಾರುಖ್​ ಮಗಳ ಎಂಟ್ರಿ: ಧೂಳೆಬ್ಬಿಸುತ್ತಿದೆ ಸುಹಾನಾ​ರ ಹಾಟ್ ಫೋಟೋ..!

ನಂತರ ಈ ಫೋಟೋ ಹಿಂದಿರುವ ಅಸಲಿ ಸತ್ಯ ಬಯಲಾಗಿದ್ದು. ಅದು ಈ ಜೋಡಿಯ ಅಭಿಮಾನಿಗಳು ಫೋಟೋಶಾಪ್​ನಲ್ಲಿ ಈ ಚಿತ್ರವನ್ನು ಮಾಡಿದ್ದು, ರಿಶಿ ಕಪೂರ್​ ಅವರ ಹುಟ್ಟುಹಬ್ಬದಂದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು.

ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೆ ಹಾಟ್​ ಕೇಕ್​ ಮಾರಾಟವಾಗುವಷ್ಟು ಬೇಗ ವೈರಲ್​ ಆಯಿತು. 2018ರಿಂದ ಡೇಟಿಂಗ್​ ಮಾಡುತ್ತಿರುವ ಈ ಜೋಡಿ 2020ಕ್ಕೆ ವಿವಾಹವಾಗಲಿದ್ದಾರೆ ಅನ್ನೋ ಸುದ್ದಿ ಇದೆ. ಜತೆಗೆ ಇತ್ತೀಚೆಗಷ್ಟೆ ರಣಬೀರ್​ ನ್ಯೂಯಾರ್ಕ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ಪ ರಿಶಿ ಹಾಗೂ ಅಮ್ಮ ನೀತು ಅವರನ್ನು ಭೇಟಿಯಾಗಿದ್ದಾರೆ.Riya Sen: ಬಿಕಿನಿ ತೊಟ್ಟು ಬಿಸಿ ಏರಿಸಿದ ಹಾಟ್​ ಬೇಬಿ ರಿಯಾ ಸೇನ್​..!
First published:September 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading