ಮತ್ತೆ ಮುಂದಕ್ಕೆ ಹೋಯ್ತು Ranbir Kapoor- Alia Bhatt ಮದುವೆ

ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಮದುವೆ ಮುಂದಿನ ವರ್ಷ ಏಪ್ರಿಲ್​ವರೆಗೆ ಮುಂದೂಡಲಾಗಿದೆಯಂತೆ. ರಣಬೀರ್​ ಕಪೂರ್​ ಅವರು ಕ್ಲಿನಿಕ್​ಗೆ ಬಂದಾಗ ಹಾಗೂ ಆಲಿಯಾ ಭಟ್​ ಅವರು ಏರ್​ ಪೋರ್ಟ್​ನಲ್ಲಿ ಕಾಣಿಸಿಕೊಂಡಾಗ ತೆಗೆದಿದ್ದ ಚಿತ್ರಗಳನ್ನು ಕೊಲಾಜ್​ ಮಾಡಿ ಹಂಚಿಕೊಂಡಿದ್ದಾರೆ. ಈ ವರ್ಷ ಈ ಸ್ಟಾರ್​ ಜೋಡಿ ಹಸಮಣೆ ಏರುವಿದಲ್ಲ ಅನ್ನೋದು ಖಚಿತವಾಗಿದೆ.

ರಣಬೀರ್ ಕಪೂರ್-ಆಲಿಯಾ ಭಟ್

ರಣಬೀರ್ ಕಪೂರ್-ಆಲಿಯಾ ಭಟ್

  • Share this:
ಬಾಲಿವುಡ್​ನಲ್ಲಿ ಈಗ ಮದುವೆಯ ಸಂಭ್ರಮ ಮನೆ ಮಾಡಿದಂತೆ ಇದೆ. ಇನ್ನೂ ವಿವಾಹವಾಗದೇ ಇರುವ ಕೆಲವು ಜೋಡಿಗಳು ತಮ್ಮ ಮದುವೆಯ ಪ್ಲಾನ್​ ಮಾಡಿಕೊಂಡಿದ್ದಾರೆ. ಹೌದು, ನಟ ವಿಕ್ಕಿ ಕೌಶಲ್​-ಕತ್ರಿನಾ ಕೈಫ್​, ರಾಜ್​ಕುಮಾರ್​ ರಾವ್​-ಪತ್ರಲೇಖಾ ಅವರ ವಿವಾಹದ ಸುದ್ದಿ ಬಾಲಿವುಡ್​ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆ ರಣಬೀರ್​ ಕಪೂರ್​  (Ranbir Kapoor) ಹಾಗೂ ಆಲಿಯಾ ಭಟ್​  (Alia Bhatt) ಮದುವೆ ಸುದ್ದಿ ಕಳೆದ ಕೆಲವು ವರ್ಷಗಳಿಂದ ಆಗಾಗ ಸುದ್ದಿಯಾಗಿ ಮಾಯವಾಗುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಈ ಜೋಡಿಯ ಮದುವೆ  (Ranbir Kapoor-Alia Bhatt Wedding)ಇದೇ ವರ್ಷ ನಡೆಯಲಿದೆ ಅನ್ನೋದು ಸುದ್ದಿಯಾಗಿತ್ತು. ಆದರೆ ಈಗ ಅವರ ಮದುವೆ ಮುಂದೂಡಿರುವ ವಿಷಯ ಸದ್ದು ಮಾಡುತ್ತಿದೆ. ಹೌದು, ತಮ್ಮ ನೆಚ್ಚಿನ ಜೋಡಿಯ ಮದುವೆ ನೋಡಲು ಅಭಿಮಾನಿಗಳು ಇನ್ನೂ ಕಾಯಬೇಕಾಗಿದೆ.

ಪಾಪರಾಜಿ ವಿರಲ್​ ಭಯಾನಿ ಎಂಬುವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಅವರ ವಿವಾಹದ ಬಗ್ಗೆ ಒಂದು ಪೋಸ್ಟ್​ ಮಾಡಿದ್ದಾರೆ. ಅದರಲ್ಲಿ ರಣಬೀರ್​ ಹಾಗೂ ಆಲಿಯಾ ಭಟ್​ ಅವರ ಮದುವೆ (Ranbir Kapoor Alia Bhatt Wedding) ಮುಂದೂಡಲಾಗಿದೆ ಎಂದು ಬರೆದಿದ್ದಾರೆ.
ರಣಬೀರ್​ ಕಪೂರ್ ಹಾಗೂ ಆಲಿಯಾ ಭಟ್​ ಮದುವೆಯ ಕುರಿತಾಗಿ ಮಾಡಿರುವ ಪೋಸ್ಟ್​ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್​ ಅವರ ಮದುವೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈ ವರ್ಷಾಂತ್ಯಕ್ಕಾದರೂ ಇವರ ಮದುವೆಯಾಗಲಿ ಎಂದು ಆಶಿಸೋಣ ಎಂದು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Viral Video; ಸಲ್ಮಾನ್ ಮುಂದೆಯೇ ಕತ್ರಿನಾಗೆ ಪ್ರಪೋಸ್ ಮಾಡಿದ ನಟ ವಿಕ್ಕಿ ಕೌಶಲ್; ವೈರಲ್ ವಿಡಿಯೋ ನೋಡಿ

ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಎಂದಿಗೂ ಮದುವೆಯಾಗೋದಿಲ್ಲ. ಇವರು ಕೇಲವ ಪ್ರಚಾರಕ್ಕಾಗಿ ತಮ್ಮ ಮದುವೆಯ ವಿಷಯವನ್ನು ಹಬ್ಬಿಸುತ್ತಿದ್ದಾರೆ. ಇನ್ನು ಮುಂದಿನ ವರ್ಷದವರೆಗೆ ರಣಬೀರ್​ ಕಪೂರ್​ ಅವರಿಗೆ ಬೇರೆ ಯಾತೂ ಇಷ್ಟವಾಗದೆ ಹೋದರೆ ಮಾತ್ರ ಆಲಿಯಾ ಭಟ್​ ಜತೆ ನಟನ ಮದುವೆ ನಡೆಯುತ್ತದೆ ಎಂದು ಕೆಲ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಾಲಿವುಡ್‍ನಲ್ಲಿ ಮತ್ತೊಂದು ಮದುವೆ ಸುದ್ದಿ: ಬಹುಕಾಲದ ಗೆಳತಿಯನ್ನು ರಾಜಸ್ಥಾನದಲ್ಲಿ ವರಿಸಲಿರುವ Rajkumar Rao

ರಣಬೀರ್​ ಕಪೂರ್​ ಅವರ ಲವ್​ ಲೈಫ್​ ಕುರಿತಾಗಿ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಹಿಂದೆ ಅವರು ಕತ್ರಿನಾ ಕೈಫ್​ ಹಾಗೂ ದೀಪಿಕಾ ಪಡುಕೋಣೆ ಜತೆ ಡೇಟಿಂಗ್​ ಮಾಡಿದ್ದು, ಅವರ ಜತೆಗಿನ ಬ್ರೇಕಪ್​ ಎಲ್ಲವೂ ತಿಳಿದೇ ಇದೆ. ಇನ್ನು ರಣಬೀರ್​ ಕಪೂರ್​ ತನಗೆ ಪ್ರೀತಿಸಿ ಮೋಸ ಮಾಡಿ, ಬೇರೆ ಹುಡುಗಿಯ ಜತೆ ರಿಲೇಷನ್​ ಶಿಪ್​ನಲ್ಲಿದ್ದರು ಎಂದು ಈ ಹಿಂದೆ ದೀಪಿಕಾ ಪಡುಕೋಣೆ ಪರೋಕ್ಷವಾಗಿ ರಣಬೀರ್​ ಕಪೂರ್​ ಹೆಸರು ತೆಗೆಯದೆ ಹೇಳಿಕೊಂಡಿದ್ದರು. ದೀಪಿಕಾ ಪಡುಕೋಣೆ ನಂತರ ರಣಬೀರ್​ ಹಾಗೂ ಕತ್ರಿನಾ ತುಂಬಾ ಸಮಯ ಡೇಟಿಂಗ್​ ಮಾಡಿದ್ದರು. ಇವರ ಈ ಸಂಬಂಧ ರಣಬೀರ್​ ಕಪೂರ್​ ಅವರ ತಂದೆ ರಿಷಿ ಕಪೂರ್​ ಅವರಿಗೆ ಚೂರೂ ಇಷ್ಟವಿರಲಿಲ್ಲವಂತೆ.

ರಾಜ್​ಕುಮಾರ್​ ರಾವ್​-ಪತ್ರಲೇಖಾ ಮದುವೆ

ನಟ ರಾಜ್‍ಕುಮಾರ್ ರಾವ್ (Rajkumar Rao) ಮದುವೆಯದ್ದು. ವರದಿಗಳ ಪ್ರಕಾರ, ರಾಜ್ ಕುಮಾರ್ ರಾವ್ ತಮ್ಮ ಬಹುಕಾಲದ ಗೆಳತಿ ಪತ್ರಲೇಖಾ ಅವರನ್ನು (Patralekaa) ಸದ್ಯದಲ್ಲಿಯೇ ವರಿಸಲಿದ್ದಾರೆ. ರಾಜ್ ಕುಮಾರ್ ರಾವ್‌ ಮದುವೆ ಮುಂದಿನ ವರ್ಷವೋ, ಮುಂದಿನ ತಿಂಗಳೋ ಅಲ್ಲ, ಇದೇ ನವಂಬರ್ 10, 11 ಮತ್ತು 12ರಂದು ನಡೆಯಲಿದೆಯಂತೆ. ಹೊಸ ಮಾಹಿತಿಗಳ ಪ್ರಕಾರ, ರಾಜಸ್ಥಾನದ ಜೈಪುರದಲ್ಲಿ ಸಾಂಪ್ರದಾಯಿಕವಾಗಿ ವಿಧಾನದಲ್ಲಿ ಮದುವೆಯಾಗಬೇಕು ಎಂದು ಈ ಸಿಟಿಲೈಟ್ಸ್ ಸಿನಿಮಾದ ಜೋಡಿ ನಿರ್ಧರಿಸಿದೆಯಂತೆ.
Published by:Anitha E
First published: