Brahmastra Movie: 360 ಕೋಟಿ ಬಾಚಿಕೊಂಡ ಬ್ರಹ್ಮಾಸ್ತ್ರ; ರಣಬೀರ್ ಕಪೂರ್, ಆಲಿಯಾ ಭಟ್ ಫುಲ್​ ಖುಷ್​

ನಟ ರಣಬೀರ್‌ ಕಪೂರ್‌ ಹಾಗೂ ನಟಿ ಆಲಿಯಾ ಭಟ್‌ ನಟನೆಯ ಬ್ರಹ್ಮಾಸ್ತ್ರ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಒಟ್ಟು 10 ದಿನಗಳಲ್ಲಿ 360 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಸೆಪ್ಟೆಂಬರ್ 9 ರಂದು ಬಿಡುಗಡೆಯಾದ ಈ ಚಿತ್ರ ಆರಂಭದಲ್ಲಿ ಕುಂಟುತ್ತ ಸಾಗಿತ್ತು. ಮೊದಲ ಎರಡ್ಮೂರು ದಿನ ಚಿತ್ರದ ಬಗ್ಗೆ ಚಿತ್ರ ಚೆನ್ನಾಗಿಲ್ಲ ಎನ್ನುವಂಥ ನೆಗೆಟಿವ್‌ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಂಡು ಬಂದಿತ್ತು.

ಬ್ರಹ್ಮಾಸ್ತ್ರ ಚಿತ್ರ

ಬ್ರಹ್ಮಾಸ್ತ್ರ ಚಿತ್ರ

  • Share this:
ಬಾಲಿವುಡ್‌ ನಲ್ಲಿ ಭಾರೀ ಕುತೂಹಲ ಮೂಡಿಸಿ ಬಿಡುಗಡೆಯಾದ ಬ್ರಹ್ಮಾಸ್ತ್ರ ಚಿತ್ರ (Brahmastra Movie) ರಿಲೀಸ್‌ ಆದ 10 ದಿನಕ್ಕೆ ಸಖತ್‌ ಕಲೆಕ್ಷನ್‌ ಮಾಡಿದೆ. ನಟ ರಣಬೀರ್‌ ಕಪೂರ್‌ ಹಾಗೂ ನಟಿ ಆಲಿಯಾ ಭಟ್‌ ನಟನೆಯ ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಒಟ್ಟು 10 ದಿನಗಳಲ್ಲಿ 360 ಕೋಟಿ ರೂಪಾಯಿ ಕಲೆಕ್ಷನ್‌ (Collection) ಮಾಡಿದೆ. ಸೆಪ್ಟೆಂಬರ್ 9 ರಂದು ಬಿಡುಗಡೆಯಾದ ಈ ಚಿತ್ರ ಆರಂಭದಲ್ಲಿ ಕುಂಟುತ್ತ ಸಾಗಿತ್ತು. ಮೊದಲ ಎರಡು ಮೂರು ದಿನ ಚಿತ್ರದ ಬಗ್ಗೆ ಚಿತ್ರ ಚೆನ್ನಾಗಿಲ್ಲ ಎನ್ನುವಂಥ ನೆಗೆಟಿವ್‌ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹೆಚ್ಚಾಗಿ ಕಂಡು ಬಂದಿತ್ತು. ಗ್ರಾಫಿಕ್ಸ್‌ ಚೆನ್ನಾಗಿಲ್ಲ, ಕಥೆ ಅಷ್ಟಕ್ಕಷ್ಟೇ ಅಂತೆಲ್ಲ ನೆಟ್ಟಿಗರು ಕಾಮೆಂಟ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಡಲ್‌ ಆಗಿದ್ದ ಚಿತ್ರದ ಕಲೆಕ್ಷನ್‌ ಸದ್ಯ ನಾಗಾಲೋಟದಲ್ಲಿ ಸಾಗಿದೆ.

10 ದಿನಗಳಲ್ಲಿ ವಿಶ್ವದಾದ್ಯಂತ 360 ಕೋಟಿ ರೂಪಾಯಿ ಕಲೆಕ್ಷನ್ 
ಚಿತ್ರದ ಗಳಿಕೆಯ ಬಗ್ಗೆ ನಿರ್ದೇಶಕ ಅಯನ್ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ. ಚಿತ್ರವು ಕೇವಲ 10 ದಿನಗಳಲ್ಲಿ ವಿಶ್ವದಾದ್ಯಂತ 360 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಬಹಿರಂಗಪಡಿಸಿದ್ದಾರೆ. ಇನ್ನು ಟ್ರೇಡ್ ವರದಿಗಳ ಪ್ರಕಾರ, ಸೋಮವಾರ ಅಂದ್ರೆ ಸೆಪ್ಟೆಂಬರ್ 19 ರಂದು ಬಾಕ್ಸ್ ಆಫೀಸ್‌ನಲ್ಲಿ ಸಖತ್ ಗಳಿಕೆ ಕಂಡ ಬ್ರಹ್ಮಾಸ್ತ್ರ ತನ್ನ ಕನಸಿನ ಓಟವನ್ನು ಮುಂದುವರೆಸುತ್ತಿದೆ. ಚಿತ್ರವು ಸೋಮವಾರದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಾರಣ, ಅದು ವಾರದ ಉಳಿದ ದಿನಗಳಲ್ಲಿಯೂ ಚೆನ್ನಾಗಿ ಓಡುವ ಸಾಧ್ಯತೆಯಿದೆ.

ಹಿಂದಿ ಸೇರಿದಂತೆ ಐದು ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಬ್ರಹ್ಮಾಸ್ತ್ರ ಚಿತ್ರ 2ನೇ ಸೋಮವಾರ ನಾಗಾಲೋಟದಲ್ಲಿ ಓಡುತ್ತಿದೆ. ಇನ್ನು ವಿವೇಕ್ ಅಗ್ನಿಹೋತ್ರಿಯವರ ದಿ ಕಾಶ್ಮೀರ್ ಫೈಲ್ಸ್ ನಂತರ, ಬ್ರಹ್ಮಾಸ್ತ್ರ ಭಾರತದಲ್ಲಿ 200 ಕೋಟಿ ನಿವ್ವಳ ಕಲೆಕ್ಷನ್‌ ದಾಟಿದ ಎರಡನೇ ಚಿತ್ರವಾಗಿದೆ. ಜಾಗತಿಕವಾಗಿ, ಚಿತ್ರವು 10 ದಿನಗಳಲ್ಲಿ 360 ಕೋಟಿ ರೂಪಾಯಿಗಳನ್ನು ಗಳಿಸಿದೆ ಮತ್ತು ಮುಂದಿನ ಹತ್ತು ದಿನಗಳಲ್ಲಿ ಸಂಖ್ಯೆಗಳು ಕ್ರಮೇಣ ಇಳಿಮುಖವಾಗುವ ಸಾಧ್ಯತೆಯೂ ಇದೆ.

ಈ ವಾರಾಂತ್ಯದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ 
ಅಂದಹಾಗೆ, ಬ್ರಹ್ಮಾಸ್ತ್ರ ಎರಡನೇ ಸೋಮವಾರ (ಸೆಪ್ಟೆಂಬರ್ 19) ಭಾರತದಲ್ಲಿ 4.25 ರಿಂದ 4.75 ಕೋಟಿ (ನೆಟ್) ಗಳಿಸುವ ಮೂಲಕ ಸಖತ್ ಫೈಟ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಕಲೆಕ್ಷನ್ 212 ಕೋಟಿ ರೂ. ಈ ದರದಲ್ಲಿ, ಈ ವಾರಾಂತ್ಯದಲ್ಲಿ ಬ್ರಹ್ಮಾಸ್ತ್ರ 225 ಕೋಟಿ ರೂಪಾಯಿಗಳನ್ನು ದಾಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Bhushan Choreographer ಅಂದು ಡ್ಯಾನ್ಸರ್, ಇಂದು ಹೀರೋ! ಭೂಷಣ್ ಬೆಳವಣಿಗೆ ಸೂಪರೋ ಸೂಪರ್!

ಇನ್ನು, ಅಯನ್ ಮುಖರ್ಜಿ ನಿರ್ದೇಶಿಸಿದ ಬ್ರಹ್ಮಾಸ್ತ್ರವು ಬೆಂಕಿಯೊಂದಿಗೆ ವಿಶೇಷ ಬಂಧವನ್ನು ಹೊಂದಿರುವ ಸರಳ ವ್ಯಕ್ತಿಯ ಸುತ್ತ ಹೆಣೆಯಲಾದ ಫ್ಯಾಂಟಸಿ ಚಿತ್ರವಾಗಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಜೊತೆಗೆ ಬಾಲಿವುಡ್‌ ಬಿಗ್‌ ಬಿ ಅಮಿತಾಬ್ ಬಚ್ಚನ್, ನಟ ನಾಗಾರ್ಜುನ ಮತ್ತು ನಟಿ ಮೌನಿ ರಾಯ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ರಹ್ಮಾಸ್ತ್ರ ಭಾಗ 2 ಮತ್ತು ಭಾಗ 3 ರ ಬಗ್ಗೆ ಏನಂದ್ರು ಚಿತ್ರ ತಯಾಕರು 
ಇನ್ನು ಚಿತ್ರದ ತಯಾರಕರು ಬ್ರಹ್ಮಾಸ್ತ್ರ ಭಾಗ 2 ಮತ್ತು ಭಾಗ 3 ಅನ್ನು ಏಕಕಾಲದಲ್ಲಿ ಚಿತ್ರೀಕರಿಸುತ್ತಾರೆ ಎಂಬ ಬಗ್ಗೆ ವರದಿಗಳು ಹರಡಿವೆ. ಶೀಘ್ರದಲ್ಲೇ, ಇದರ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ಸದ್ಯ ಬಾಯ್ಕಾಟ್‌ ಬಾಲಿವುಡ್‌ ಬಿಸಿ ಅನುಭವಿಸುತ್ತಿರುವ ಹಿಂದಿ ಚಿತ್ರರಂಗ ಕೋಟಿ ಕೋಟಿ ಬಂಡವಾಳ ಹಾಕಿ ಸೋಲಿನ ರುಚಿ ಅನುಭವಿಸುತ್ತಿದೆ. ಸಾಲು ಸಾಲು ಚಿತ್ರಗಳು ತೋಪೆದ್ದು ಹೋಗುತ್ತಿವೆ.

ಇದನ್ನೂ ಓದಿ:  Actor Dhananjaya: ಡಾಲಿ ಧನಂಜಯ್ 26ನೇ ಸಿನಿಮಾ! ಕನ್ನಡ ಮಾತ್ರವಲ್ಲ ತೆಲುಗಿನಲ್ಲೂ ರಿಲೀಸ್

ಇದರ ಮಧ್ಯೆ ಮಖಾಡೆ ಮಲಗಿತು ಎನ್ನುವಷ್ಟರಲ್ಲಿ ಬ್ರಹ್ಮಾಸ್ತ್ರ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ತಿದೆ. ನೂರಾರು ಕೋಟಿ ರೂ ಬಂಡವಾಳ ಹಾಕಿ ವರ್ಷಾನುಗಟ್ಟಲೆ ಚಿತ್ರೀಕರಣ ಮಾಡಿ ಸೋತು ಹೋಯ್ತೇನೋ ಎಂಬ ಚಿಂತಿತರಾಗಿದ್ದ ಚಿತ್ರತಂಡಕ್ಕೆ ಇದು ಸಮಾಧಾನ ತಂದಿದೆ.
Published by:Ashwini Prabhu
First published: