Ranbir-Alia Bhatt: ಜೊತೆಯಾಗಿರೋಕೆ ಮನೆ ಕೂಡ ರೆಡಿಯಾಯ್ತು.. ಮದ್ವೆ ಊಟ ಯಾವಾಗ ಹಾಕಿಸ್ತೀರಾ ಎಂದ ನೆಟ್ಟಿಗರು!

ಈ ಕಪೂರ್ ಮತ್ತು ಭಟ್ ಕುಟುಂಬದ ಕುಡಿಗಳಿಬ್ಬರು ಯಾವಾಗ ಮದುವೆ(Marriage)ಯ ಬಂಧನದಲ್ಲಿ ಒಂದಾಗುತ್ತಾರೋ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ರಣಬೀರ್​ ಕಪೂರ್​, ಆಲಿಯಾ ಭಟ್​

ರಣಬೀರ್​ ಕಪೂರ್​, ಆಲಿಯಾ ಭಟ್​

  • Share this:
ಕತ್ರೀನಾ ಕೈಫ್ –ವಿಕ್ಕಿ ಕೌಶಲ್(Katrina Kaif- Vikcy Kaushal), ರಾಜ್‍ಕುಮಾರ್ ರಾವ್(Rajkummar Rao) - ಪತ್ರಲೇಖಾ(Patralekhaa)... ಹೀಗೆ ಬಾಲಿವುಡ್‍ನ ಕೆಲವು ಯುವಜೋಡಿಗಳು ಸಪ್ತಪದಿ ತುಳಿದಾಯ್ತು. ಇದೀಗ ಬಾಕಿ ಉಳಿದಿರುವ ಯುವ ತಾರಾ ಜೋಡಿಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ರಣ್‍ಬೀರ್ ಕಪೂರ್(Ranbir Kapoor) ಮತ್ತು ಆಲಿಯಾ ಭಟ್(Alia Bhatt) ಜೋಡಿ. ಈ ಕಪೂರ್ ಮತ್ತು ಭಟ್ ಕುಟುಂಬದ ಕುಡಿಗಳಿಬ್ಬರು ಯಾವಾಗ ಮದುವೆ(Marriage)ಯ ಬಂಧನದಲ್ಲಿ ಒಂದಾಗುತ್ತಾರೋ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಳೆದ ಕೆಲವು ತಿಂಗಳಿಂದ ಅವರಿಬ್ಬರು ಮದುವೆಯಾಗಲಿದ್ದಾರೆ ಮತ್ತು ಮದುವೆಯ ದಿನಾಂಕ(Marriage Date)ವು ಕೂಡ ನಿಗದಿಯಾಗಿದೆ ಎಂಬ ಸಂಗತಿ ತುಂಬಾ ಸುದ್ದಿ ಮಾಡುತ್ತಿದೆ.

ಶೀಘ್ರದಲ್ಲೇ ಮದುವೆ ದಿನಾಂಕ ಘೋಷಣೆ!

ಮಾಧ್ಯಮದ ಸಂದರ್ಶನಗಳಲ್ಲಿ ಅಥವಾ ಯಾವುದಾದರೂ ಕಾರ್ಯಕ್ರಮಗಳಲ್ಲಿ ರಣ್‍ಬೀರ್ ಕಪೂರ್ ಅವರ ಸುದ್ದಿ ಎತ್ತಿದಾಗಲೆಲ್ಲಾ ಆಲಿಯಾ ಕೆನ್ನೆ ಕೆಂಪಾಗಿಸಿಕೊಂಡು, ನಾಚಿ ನೀರಾಗುತ್ತಾರೆ ಎನ್ನುವುದನ್ನು ಬಿಟ್ಟರೆ, ಅವರಿಬ್ಬರು ಅಧಿಕೃತವಾಗಿ ಎಲ್ಲೂ ತಮ್ಮ ಮದುವೆಯ ದಿನಾಂಕದ ಬಗ್ಗೆ ತುಟಿ ಬಿಚ್ಚಿಲ್ಲ. ಆದರೆ, ಅವರ ಮದುವೆಯ ಆಮಂತ್ರಣ ಪತ್ರವನ್ನು ಕಾಣುವ ದಿನ ದೂರವಿಲ್ಲ ಎನ್ನುತ್ತಿವೆ ಮೂಲಗಳು.

ರಣಬೀರ್​-ಆಲಿಯಾ ಹೊಸ ಮನೆ ಬಹುತೇಕ ರೆಡಿ!

ಕಪೂರ್‌ಗಳು ಮಾತ್ರ ತಮ್ಮ ಕುಟುಂಬದ ಮನೆ ಕೃಷ್ಣ ರಾಜ್‍ನ ನಿರ್ಮಾಣದ ಕೆಲಸವನ್ನು ತ್ವರಿತವಾಗಿ ಮುಗಿಸುವ ತರಾತುರಿಯಲ್ಲಿ ಇದ್ದಾರಂತೆ. ಮಗ ರಣ್‍ಬೀರ್ ಮತ್ತು ಸೊಸೆ ಆಲಿಯಾ ಗೃಹಪ್ರವೇಶ ನೂತನ ಮನೆಯಲ್ಲಿಯೇ ನಡೆಯಲಿ ಎಂಬುವುದು ಅವರ ಆಸೆ. ಮುಂಬೈನ ಐಷಾರಾಮಿ ಪ್ರದೇಶವಾದ ಬಾಂದ್ರಾದಲ್ಲಿ ಕಟ್ಟಲಾಗುತ್ತಿರುವ ಈ ಮನೆ 15 ಮಹಡಿಗಳನ್ನು ಹೊಂದಿದೆ. ಈ ವಸತಿ ಗೋಪುರದ ಮೊದಲ 5 ಮಹಡಿಗಳನ್ನು ಕಪೂರ್ ಕುಟುಂಬದ ವಾಸಕ್ಕಾಗಿ ಮೀಸಲಿಡಲಾಗುವುದಂತೆ.

ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಬಿಗ್​ಬಿ-ಡಿಪ್ಪಿ-ಪ್ರಭಾಸ್​, ಯಪ್ಪೋ.. ಬಜೆಟ್ ಎಷ್ಟು ಅಂತ ಕೇಳಿದ್ರೆ ದಂಗಾಗ್ತೀರಾ!

“ಇಡೀ ಕಟ್ಟಡವು ಪೂರ್ಣಗೊಳ್ಳಲು 6 ವರ್ಷ ಬೇಕಾಗುತ್ತದೆ. ಆದರೆ, ಮೊದಲ 5 ಅಪಾರ್ಟ್‍ಮೆಂಟ್‍ಗಳ ಕಾಮಗಾರಿ ಜಾರಿಯಲ್ಲಿದೆ. ಮೊದಲ ಮತ್ತು ಎರಡನೇ ಅಪಾರ್ಟ್‍ಮೆಂಟ್‍ಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಆ ಎರಡು ಮಹಡಿಗಳು ಕ್ರಮವಾಗಿ ಆಲಿಯಾ – ರಣ್‍ಬೀರ್ ಮತ್ತು ನೀತು ಕಪೂರ್‌ಗೆ ಸೇರಿದ್ದು ಎಂದು ನಂಬಲಾಗಿದೆ” ಎಂದು ಕಪೂರ್ ಕುಟುಂಬಕ್ಕೆ ಹತ್ತಿರ ಇರುವ ಮೂಲಗಳು ತಿಳಿಸಿವೆ.

ರಣಬೀರ್​-ಆಲಿಯಾ ಮಹಡಿ ಕೆಲಸ ಸಂಪೂರ್ಣ!

ಆಲಿಯಾ-ರಣ್‍ಬೀರ್ ಮತ್ತು ನೀತು ಸಿಂಗ್ ಅವರ ಮಹಡಿಗಳು ಸಿದ್ಧವಾಗುತ್ತಿರುವುದನ್ನು ನೋಡಿದರೆ, ಮದುವೆಯ ದಿನಾಂಕ ಸದ್ಯದಲ್ಲೇ ಘೋಷಣೆ ಆಗಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೇ, ನೀತು ಕಪೂರ್ ಹೊಸದಾಗಿ ನವೀಕರಿಸಿದ ತಮ್ಮ ಮನೆಯ ಗೃಹ ಪ್ರವೇಶಕ್ಕೂ ಮುನ್ನ ಕುಟುಂಬದ ಗುರೂಜಿಯ ಸಲಹೆಯನ್ನು ಪಡೆಯಲು ಬಯಸುತ್ತಿದ್ದಾರೆ ಎಂಬುವುದು ತಿಳಿದುಬಂದಿದೆ.

ಬಾಂದ್ರಾದ ಪಾಲಿ ಹಿಲ್​ನಲ್ಲಿರುವ ಬಂಗಲೇ!

ಬಾಂದ್ರಾದ ಪಾಲಿ ಹಿಲ್‍ನಲ್ಲಿ ಇರುವ ಕೃಷ್ಣರಾಜ್ ಬಂಗ್ಲೆಯನ್ನು , 1980ರಲ್ಲಿ ದಿವಂಗತ ರಿಷಿ ಕಪೂರ್ ಮತ್ತು ನೀತು ಕಪೂರ್ ಖರೀದಿಸಿದ್ದರು. ಅದೇ ಬಂಗಲೆಯಲ್ಲಿ ಈ ತಾರಾ ದಂಪತಿ, ಸುಮಾರು 35 ವರ್ಷಗಳಿಂದ ತಮ್ಮ ಮಕ್ಕಳಾದ ರಣ್‍ಬೀರ್ ಕಪೂರ್ ಮತ್ತು ರಿಧಿಮಾ ಕಪೂರ್ ಜೊತೆ ವಾಸವಾಗಿದ್ದರು. ಅಷ್ಟೊಂದು ಮಧುರ ನೆನಪುಗಳನ್ನು ತನ್ನೊಳಗಿಟ್ಟುಕೊಂಡಿರುವ ಆ ಕುಟುಂಬದ ಮನೆಯಲ್ಲೇ , ರಣ್‍ಬೀರ್ ಅವರ ಮೊದಲ ಪೂಜೆಯನ್ನು ಮಾಡಬೇಕು ಎಂದು ಕಪೂರ್ ಕುಟುಂಬ ಬಯಸುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಇದನ್ನೂ ಓದಿ: ಸಪೂರ ಸುಂದರಿ ಆಲಿಯಾ ಭಟ್​.. ವೈಟ್​ ಗೌನ್​ನಲ್ಲಿ ಕಂಗೊಳಿಸಿದ ಬಾಲಿವುಡ್​ ಏಂಜೆಲ್​!

ಮದುವೆಯ ದಿನಾಂಕದ ಬಗ್ಗೆ ಆಲಿಯಾ – ರಣ್‍ಬೀರ್ ಜೋಡಿ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದರೂ, ತಮ್ಮ ಪ್ರೇಮ ಸಂಬಂಧ ಮತ್ತು ಮದುವೆಯ ಇರಾದೆಯ ಇತರ ಕುರಿತ ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ಪ್ರವಾಸಗಳಲ್ಲಿ, ಕುಟುಂಬ ಮತ್ತು ಖಾಸಗಿ ಸಮಾರಂಭಗಳಲ್ಲಿ ಕೂಡ ಇಬ್ಬರೂ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ.
Published by:Vasudeva M
First published: