Ranbir-Alia: ವೈರಲ್​ ಆಯ್ತು ಹೊಸ ರಣಬೀರ್​-ಆಲಿಯಾ ಫೋಟೋ! ಮದುವೆ ಚಿತ್ರ ಅಂತೂ ಅಲ್ಲ, ಮತ್ತಿನ್ನೇನು? ನೀವೇ ನೋಡಿ

ಕುದುರೆಗಳ ಫೋಟೋ ಶೇರ್​ ಮಾಡಿಕೊಂಡಿರುವ ಪೂಜಾ ಭಟ್​ "ಇದು ಅದ್ಭುತವಾಗಿದೆ" ಎಂದು ಹೇಳಿದ್ದಾರೆ. ಆಲಿಯಾ ರಣಬೀರ್‌ಗೆ ಪ್ರಾಣಿ ಕಲ್ಯಾಣದಿಂದ ಉಡುಗೊರೆಯಾಗಿ ನೀಡಲಾದ ಕುದುರೆ ಮೇರ್ ಜೋಡಿಗೆ ರಣಬೀರ್ ಆಲಿಯಾ ಎಂದು ಹೆಸರಿಡಲಾಗಿದೆ.

ಆಲಿಯಾ, ರಣಬೀರ್​

ಆಲಿಯಾ, ರಣಬೀರ್​

  • Share this:
ಸಾಮಾಜಿಕ ಮಾಧ್ಯಮ(Social Media), ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ (Alia Bhatt And Ranbir Kapoor Marriage) ಮದುವೆಯ ಕುರಿತ ಸುದ್ದಿಗಳಿಂದ ತುಂಬಿ ತುಳುಕುತ್ತಿದೆ. ಅಭಿಮಾನಿಗಳಿಂದ, ರಲಿಯಾ (Ralia) ಎಂಬ ಪ್ರೀತಿಯ ಹೆಸರಿನಿಂದ ಕರೆಸಿಕೊಳ್ಳುವ ಈ ಜೋಡಿಯ ಮದುವೆಯ ಸುದ್ದಿಗಳನ್ನು ಎಷ್ಟು ಓದಿದರೂ ಅಭಿಮಾನಿಗಳಿಗೆ ತೃಪ್ತಿಯಿಲ್ಲವಂತೆ. ಬಾಲಿವುಡ್ (Bollywood)ನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಜನಪ್ರಿಯರಾಗಿರುವ ಆಲಿಯಾ ಭಟ್ – ರಣಬೀರ್ ಕಪೂರ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಮೆಚ್ಚಿನ ಈ ಜೋಡಿ (Couple) ಯಾವಾಗ ಸತಿಪತಿಗಳಾಗಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗಿತ್ತು. ಕೊನೆಗೂ ಅವರಿಬ್ಬರು ವಿವಾಹ ಬಂಧನದಲ್ಲಿ ಒಂದಾಗಿದ್ದಾರೆ. ಇದೀಗ ಇವರು ಮದುವೆಯಾದ ಬಳಿಕ ಇಬ್ಬರು ಪರಸ್ಪರ್​ ಗಿಫ್ಟ್​ ಮಾಡಿಕೊಂಡಿದ್ದಾರೆ. ಅದೇನು ಅಂತ ಗೊತ್ತಾದರೆ ನೀವು ಕೂಡ ಖುಷಿ ಪಡುತ್ತೀರಾ..

ಎರಡು ಕುದುರೆ ಖರೀದಿಸಿದ ಆಲಿಯಾ-ರಣಬೀರ್​!

ಇದೀಗ ಆಲಿಯಾ ಭಟ್​ ಹಾಗೂ ರಣಬೀರ್​​ ಉಡುಗೊರೆಯು ಎಲ್ಲರ ಗಮನವನ್ನು ಸೆಳೆದಿದೆ. ವಾಸ್ತವವಾಗಿ, ರಣಬೀರ್ ಕಪೂರ್ ಆಲಿಯಾ ಭಟ್ ಅವರಿಗೆ ಪ್ರಾಣಿ ಕಲ್ಯಾಣ ಸರ್ಕಾರೇತರ ಸಂಸ್ಥೆಯಿಂದ ಕುದುರೆ ಮೇರ್ ಜೋಡಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೌದು, ಈ ಮಾಹಿತಿಯನ್ನುಆಲಿಯಾ ಸಹೋದರಿ ಪೂಜಾ ಭಟ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಕುದುರೆಗಳಿಗೆ ಆಲಿಯಾ-ರಣಬೀರ್​ ಅಂತ ಹೆಸರು!

ಕುದುರೆಗಳ ಫೋಟೋ ಶೇರ್​ ಮಾಡಿಕೊಂಡಿರುವ ಪೂಜಾ ಭಟ್​ "ಇದು ಅದ್ಭುತವಾಗಿದೆ" ಎಂದು ಹೇಳಿದ್ದಾರೆ. ಆಲಿಯಾ ರಣಬೀರ್‌ಗೆ ಪ್ರಾಣಿ ಕಲ್ಯಾಣದಿಂದ ಉಡುಗೊರೆಯಾಗಿ ನೀಡಲಾದ ಕುದುರೆ ಮೇರ್ ಜೋಡಿಗೆ ರಣಬೀರ್ ಆಲಿಯಾ ಎಂದು ಹೆಸರಿಡಲಾಗಿದೆ. ಇಬ್ಬರನ್ನೂ ಬೇರೆ ಬೇರೆ ಸ್ಥಳಗಳಿಂದ ರಕ್ಷಿಸಲಾಗಿದೆ. ಈಗ ಎರಡು ಕುದುರೆಗಳು ಒಟ್ಟಿಗೆ ವಾಸಿಸುತ್ತಿವೆ. ಈ ಸುಂದರ ಉಡುಗೊರೆಯ ಚಿತ್ರ ಹೊರಬಂದಾಗಿನಿಂದ, ಎಲ್ಲೆಡೆ ಅದರ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಸಪ್ತಪದಿ ಬದಲು ನಾಲ್ಕು ಹೆಜ್ಜೆ ಇಟ್ಟ ರಣ್ ಬೀರ್-ಆಲಿಯಾ; ಕಾರಣ ತಿಳಿಸಿದ ಸೋದರ

ಇನ್ನಷ್ಟು ನೆನಪುಗಳನ್ನು ಕಟ್ಟಿಕೊಳ್ಳುವ ತವಕ

ಇನ್‍ಸ್ಟಾಗ್ರಾಂನಲ್ಲಿ ತನ್ನ ಮದುವೆಯ ಕೆಲವು ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುತ್ತಾ, “ಇಂದು, ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ, ನಾವು ಕಳೆದ 5 ವರ್ಷಗಳಿಂದ ಸಂಬಂಧದ ಕ್ಷಣಗಳನ್ನು ಕಳೆದ ನಮ್ಮ ಮನೆಯ ನೆಚ್ಚಿನ ಜಾಗವಾದ ಬಾಲ್ಕನಿಯಲ್ಲಿ ವಿವಾಹವಾಗಿದ್ದೇವೆ. ನಮ್ಮ ಹಿಂದೆ ಬಹಳಷ್ಟು ನೆನಪುಗಳಿದ್ದರೂ, ಜೊತೆಯಾಗಿ ಇನ್ನಷ್ಟು ನೆನಪುಗಳನ್ನು ಕಟ್ಟಿಕೊಳ್ಳುವ ತವಕದಲ್ಲಿದ್ದೇವೆ.. ಪ್ರೀತಿ, ನಗು, ಅನುಕೂಲಕರ ಮೌನಗಳು, ಮೂವಿ ನೈಟ್ಸ್, ಸಿಲ್ಲಿ ಫೈಟ್ಸ್, ವೈನ್ ಡಿಲೈಟ್ಸ್ ಮತ್ತು ಚೈನೀಸ್ ಬೈಟ್ಸ್‌ನಿಂದ ತುಂಬಿಕೊಂಡಿರುವ ನೆನಪುಗಳು. ನಮ್ಮ ಜೀವನದ ಈ ಸ್ಮರಣೀಯ ಕ್ಷಣದಲ್ಲಿ, ಪ್ರೀತಿ ಮತ್ತು ಹಾರೈಕೆಗಳನ್ನು ನೀಡಿದ್ದಕ್ಕೆ ಧನ್ಯವಾದಗಳು. ಇದು ಈ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಿದೆ. ಪ್ರೀತಿಯಿಂದ, ರಣಬೀರ್ ಮತ್ತು ಆಲಿಯಾ” ಎಂದು ಬರೆದುಕೊಂಡಿದ್ದಾರೆ ಆಲಿಯಾ ಭಟ್.

ಸಪ್ತಪದಿ ಬದಲು ಕೇವಲ ನಾಲ್ಕು ಸುತ್ತು!

ಆಲಿಯಾ ಮತ್ತು ರಣಬೀರ್‌ ಮದುವೆಯ ಕುರಿತ ವಿವಿಧ ಸುದ್ದಿಗಳು ಹರಿದಾಡುತ್ತಿರುವ ಈ ಸಂದರ್ಭದಲ್ಲಿ, ಅಚ್ಚರಿಯ ಸಂಗತಿಯೊಂದು ಗಮನ ಸೆಳೆಯುತ್ತಿದೆ. ಸಪ್ತಪದಿಗೆ ಸಂಬಂಧಿಸಿದ ಸುದ್ದಿಯದು. ಸಾಮಾನ್ಯವಾಗಿ ಮದುವೆಯಲ್ಲಿ ವಧುವರರು ಆಗ್ನಿಗೆ ಏಳು ಸುತ್ತು ಸುತ್ತಿದ್ದರೆ, ಆಲಿಯಾ ಮತ್ತು ರಣ್‍ಬೀರ್ ತಮ್ಮ ಮದುವೆಯಲ್ಲಿ ಕೇವಲ ನಾಲ್ಕು ಸುತ್ತನ್ನಷ್ಟೇ ಸುತ್ತಿದ್ದಾರೆ..!

ಇದನ್ನೂ ಓದಿ: ಸಿನಿಮಾ ಹಿಟ್​ ಅಂತ ಖರೀದಿ ಮಾಡಿಬಿಟ್ರು, ಈಗ ವರ್ಕೌಟ್​ ಆಗುತ್ತಾ ಅಂತ ಚಿಂತೆ ಮಾಡ್ತಿದ್ಯಂತೆ ನೆಟ್​ಫ್ಲಿಕ್ಸ್​!

ಆಲಿಯಾ ಭಟ್ ಮಲ ಸಹೋದರ ರಾಹುಲ್ ಭಟ್ , ಮಾಧ್ಯಮ ಒಂದಕ್ಕೆ ಈ ಮಾಹಿತಿಯನ್ನು ನೀಡಿದರು. ಅವರು , ಅದರ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ, ಕಪೂರ್ ಕುಟುಂಬಕ್ಕೆ ವಿಶೇಷವಾದ ಪಂಡಿತರೊಬ್ಬರು ಇದ್ದಾರೆ ಮತ್ತು ಕಪೂರ್ ಸಹೋದರರು ಕೈಗೊಂಡಿರುವ ಎಲ್ಲಾ ಧಾರ್ಮಿಕ ಆಚರಣೆಗಳಲ್ಲಿ ಆ ಪಂಡಿತರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
Published by:Vasudeva M
First published: