ನಿತ್ಯ 'ಸಂಜು' ಆಗಲು ಆರು ಗಂಟೆ ಮೇಕಪ್​ ಮಾಡಿಕೊಳ್ಳುತ್ತಿದ್ದ ನಟ ರಣಬೀರ್​ ಕಪೂರ್​!

news18
Updated:July 11, 2018, 12:41 PM IST
ನಿತ್ಯ 'ಸಂಜು' ಆಗಲು ಆರು ಗಂಟೆ ಮೇಕಪ್​ ಮಾಡಿಕೊಳ್ಳುತ್ತಿದ್ದ ನಟ ರಣಬೀರ್​ ಕಪೂರ್​!
news18
Updated: July 11, 2018, 12:41 PM IST
ನ್ಯೂಸ್​ 18 ಕನ್ನಡ 

ಇತ್ತಿಚೆಗಷ್ಟೆ 'ಸಂಜು' ಸಿನಿ ತಂಡ ಮೇಕಿಂಗ್​ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ರಣಬೀರ್ ಸಂಜಯ್​ ದತ್​ ಆಗಲು ಸವೆಸಿದ ಕಷ್ಟದ ಹಾದಿಯನ್ನು ತೋರಿಸಲಾಗಿದೆ. ಇದರಲ್ಲಿ ಹಿರಾನಿ ಹೇಳುವಂತೆ ಸಿನಿಮಾ ಮಾಡುವ ನಿರ್ಧಾರ ತೆಗೆದುಕೊಂಡಾಗ ಇದರಲ್ಲಿ ಸಂಜಯ್​ ದತ್​ ಪಾತ್ರವನ್ನು ನಿರ್ವಹಿಸುವ ನಟ ಯಾರು ಎಂಬುದೇ ದೊಡ್ಡ ಸವಾಲಾಗಿತ್ತು.

ಕೃತಕ ಅಂಗಾಂಗಗಳನ್ನು ಮಾಡುವವರಿಂದ ಹಿಡಿದು ಕೇಶ ವಿನ್ಯಾಸಕ ಪರಿಣತರನ್ನು ಮೊದಲು ಸಂಪರ್ಕಿಸಲಾಗಿತ್ತು. ನಂತರ ಅವರೊಂದಿಗೆ ಚರ್ಚೆ ನಡೆಯುತ್ತಲೇ ಇತ್ತು. ಒಂದು ವೇಳೆ ಸಂಜಯ್​ ದತ್​ರಂತೆ ಕಾಣುವ ಲುಕ್​ ಹೋಲಿಕೆಯಾಗದಿದ್ದಲ್ಲಿ ಈ ಸಿನಿಮಾ ಆಗುವುದೇ ಇಲ್ಲ ಎಂಬ ನಿರ್ಧಾರಕ್ಕೂ ಬರಲಾಗಿತ್ತಂತೆ.ಕೃತಕ ಅಂಗಾಂಗಗಳನ್ನು ಮಾಡುವವ ತಜ್ಞರು ರಣಬೀರ್​ಗೆ ಸಂಜು ಲುಕ್​ ನೀಡುವಲ್ಲಿ ಯಶಸ್ವಿಯಾಗಿದ್ದರು. ಅದಕ್ಕೆ ನಿತ್ಯ ರಣಬೀರ್​ 6 ಗಂಟೆ ಮೇಕಪ್​ ಮಾಡಿಕೊಳ್ಳುತ್ತಿದ್ದರಂತೆ.  ಲುಕ್​ ವಿಷಯ ಹೀಗಾದರೆ, ಬಾಡಿ ಬಿಲ್ಡಿಂಗ್​ ವಿಷಯ ಸಂಪೂರ್ಣವಾಗಿ ರಣಬೀರ್​ ಮೇಲೆ ನಿಂತಿತ್ತು. ಅದಕ್ಕೆ ರಣಬೀರ್​ ಬೆಳಿಗ್ಗೆ 3ಕ್ಕೆ ಎದ್ದು ಪ್ರೊಟೀನ್​ ಶೇಕ್​ ಕುಡಿದು ವ್ಯಾಯಾಮ ಆರಂಭಿಸುತ್ತಿದ್ದರಂತೆ. ನಂತರ ದಿನಕ್ಕೆ 8 ಸತಿ ಆಹಾರ ಸೇವಿಸುತ್ತಿದ್ದರಂತೆ. ಇದರಿಂದಾಗಿಯೇ ಸಿನಿಮಾದಲ್ಲಿ ರಣಬೀರ್​ರನ್ನು ನೋಡಿದೊಡನೆ ಸಂಜಯ್​ ಕಣ್ಮುಂದೆ ಬರುತ್ತಿದ್ದರು. ಇದೂ ಸಹ ಸಿನಿಮಾದ ಯಶಸ್ಸಿಗೆ ಒಂದು ಕಾರಣವಾಯಿತ್ತು.

 

 
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ