Rana Daggubati: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ರಾಣಾಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

Rana Daggupati: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರಾಣಾ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂಬ ಸುದ್ದಿ ಲಭ್ಯವಾಗಿದೆ.

Anitha E | news18
Updated:July 24, 2019, 12:04 PM IST
Rana Daggubati: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ರಾಣಾಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
ನಟ ರಾಣಾ ದಗ್ಗುಬಾಟಿ
  • News18
  • Last Updated: July 24, 2019, 12:04 PM IST
  • Share this:
ಟಾಲಿವುಡ್​ ಹಂಕ್​ ನಟ ರಾಣಾ ದಗ್ಗುಬಾಟಿ ಕಿಡ್ನಿ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿರುವ ಘಟನೆ ಕುರಿತಂತೆ ನಿನ್ನೆಯಷ್ಟೆ ನಿಮಗೆ ತಿಳಿಸಿದ್ದೆವು. ಈಗ ಅವರ ಆರೋಗ್ಯದ ಕುರಿತಾದ ಮತ್ತಷ್ಟು ಮಾಹಿತಿ ಲಭ್ಯವಾಗಿದೆ.

ಕಳೆದ ಒಂದು ವರ್ಷದಿಂದ ಭಾರತದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ರಾಣಾ, ಚೇತರಿಕೆ ಕಾಣದ ಕಾರಣ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರೆಳೆದಿದ್ದರು ಎಂಬ ಸುದ್ದಿ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿತ್ತು. ಜತೆಗೆ ರಾಣಾ ಅವರ ಕಿಡ್ನಿ ಹಾಳಾಗಿದ್ದು, ಅವರಿಗೆ ಅವರ ತಾಯಿ ಲಕ್ಷ್ಮಿ ಅವರೇ ತಮ್ಮ ಮೂತ್ರಪಿಂಡವನ್ನು ದಾನ ಮಾಡಿದ್ದಾರೆ ಎನ್ನಲಾಗುತ್ತಿದೆ.ಸದ್ಯ ಚಿಕಾಗೋದ ಖಾಸಗಿ ಆಸ್ಪತ್ರೆಯಲ್ಲಿ ಜು.18ರಂದು ಶಸ್ತ್ರ ಚಿಕಿತ್ಸೆ ನಡೆದಿದೆ ಎನ್ನಲಾಗುತ್ತಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ರಾಣಾ ಮತ್ತೆ ಚಿತ್ರೀಕರಣದ ಸೆಟ್​ಗೆ ಮರಳಿದ್ದಾರೆ ಎನ್ನೋ ಸುದ್ದಿ ಸಹ ಲಭ್ಯವಾಗಿದೆ.

ಇನ್ನು ರಾಣಾ ಅವರ ಕುಟುಂಬದವರು ಸದ್ಯ ಚಿಕಾಗೋದಲ್ಲೇ ಇದ್ದು, ಈ ಕುರಿತಂತೆ ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ರಾಣಾ ಅವರಿಗೆ ಒಂದು ಕಣ್ಣಿನ ಸಮಸ್ಯೆ ಇದ್ದು, ಅದಕ್ಕೂ ಈ ಹಿಂದೆ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ ಎಂದು ಖುದ್ದು ರಾಣಾ ಹೇಳಿಕೊಂಡಿದ್ದರು.

ಇದನ್ನೂ ಓದಿ: Rana Daggubati: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಟಾಲಿವುಡ್​ ಹಂಕ್: ಮಗನಿಗಾಗಿ ಮೂತ್ರಪಿಂಡ ದಾನಕ್ಕೆ ಸಿದ್ಧರಾದ ರಾಣಾ ತಾಯಿ..!

ಆದರೆ ರಾಣಾ ಆರೋಗ್ಯದ ಕುರಿತು ಅವರ ಕುಟುಂಬದವರಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೂ ಟಾಲಿವುಡ್​ನಲ್ಲಿ ಸದ್ಯ ರಾಣಾ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಅವರು ಆರೋಗ್ಯದಿಂದ ಮರಳಿ ಬರಲೆಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
Loading...

ರಾಣಾ ಸದ್ಯ 'ವಿರಾಟ ಪರ್ವ' ಸಿನಿಮಾದಲ್ಲಿ ಪೊಲೀಸ್​ ಅಧಿಕಾರಿಯಾಗಿ ಅಭಿನಯಿಸುತ್ತಿದ್ದು, ಇದರಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿದ್ದಾರೆ. ಜತೆಗೆ ಗುಣಶೇಖರ್​ ನಿರ್ದೇಶನದ 'ಹಿರಣ್ಯ ಕಶ್ಯಪ' ಸಿನಿಮಾದಲ್ಲೂ ರಾಣಾ ಅಭಿನಯಿಸುತ್ತಿದ್ದಾರೆ. ಒಮ್ಮೆ ಅಮೆರಿಕದಿಂದ ಬಂದ ನಂತರ ರಾಣಾ ಈ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ.

 

Rashmika Mandanna: ಹೊಸ ಫೋಟೋಶೂಟ್​ನಲ್ಲಿ ಮುದ್ದಾಗಿ ಮಿಂಚಿದ ರಶ್ಮಿಕಾ ಮಂದಣ್ಣ
First published:July 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...