777 Charlie ಗೆ ತೆಲುಗು ನಟ ರಾಣಾ ದಗ್ಗುಬಾಟಿ ಸಾಥ್​! ರಕ್ಷಿತ್​ ಶೆಟ್ಟಿ ಸಿನಿಮಾ ನೋಡಿ 'ಬಲ್ಲಾಳದೇವ' ಫಿದಾ!

ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ‘777 ಚಾರ್ಲಿ’ ಜೂನ್‌ 10ರಂದು ಬಿಡುಗಡೆಯಾಗಲಿದೆ. ಚಿತ್ರಕ್ಕೆ ತೆಲುಗಿನ ರಾಣಾ ದಗ್ಗುಬಾಟಿ ಸಾಥ್‌ ನೀಡಿದ್ದಾರೆ.

ನಟ ರಾಣಾ ದಗ್ಗುಬಾಟಿ

ನಟ ರಾಣಾ ದಗ್ಗುಬಾಟಿ

  • Share this:
ರಕ್ಷಿತ್​ ಶೆಟ್ಟಿ (Rakshit Shetty)... ನಟನೆ, ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಸ್ಯಾಂಡಲ್​ವುಡ್(Sandalwood)ನಲ್ಲಿ ತಮ್ಮದೇ ಆದ ಟ್ರೆಂಡ್ (Trend)​ ಸೃಷ್ಟಿ ಮಾಡಿದವರು. ರಕ್ಷಿತ್​ ಶೆಟ್ಟಿ ಅಭಿನಯಕ್ಕೆ ಮನಸೋತವರೇ ಇಲ್ಲ. ವಿಭಿನ್ನ ಮ್ಯಾನರಿಸಂ, ಕಿಕ್​ ಕೊಡುವ ಡೈಲಾಗ್ಸ್​ ರಕ್ಷಿತ್​ ಶೆಟ್ಟಿ ಅವರ ಟ್ರೇಡ್​​ ಮಾರ್ಕ್ (Trade Mark) ​. 'ತುಘಲಕ್'​ನಿಂದ ತಮ್ಮ ಸಿನಿಮಾ ಜರ್ನಿ ಆರಂಭಿಸಿ ಈಗ '777 ಚಾರ್ಲಿ'(777 Charlie)ಗೆ ಬಂದು ನಿಂತಿದ್ದಾರೆ. ಅವರ ಪ್ರತಿ ಸಿನಿಮಾವೂ ಡಿಫ್ರೆಂಟ್​. ಇದೀಗ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ‘777 ಚಾರ್ಲಿ’ ಜೂನ್‌ 10ರಂದು ಬಿಡುಗಡೆಯಾಗಲಿದೆ. ಚಿತ್ರಕ್ಕೆ ತೆಲುಗಿನ ರಾಣಾ ದಗ್ಗುಬಾಟಿ ಸಾಥ್‌ ನೀಡಿದ್ದಾರೆ.

777 ಚಾರ್ಲಿಗೆ ರಾಣಾ ದಗ್ಗುಬಾಟಿ ಸಾಥ್​

ಬಹು ಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ರಾಣಾ ದಗ್ಗುಬಾಟಿ ಅವರು ಪ್ರಸ್ತುತ ಪಡಿಸುತ್ತಿದ್ದು, ತಮ್ಮ ಸುರೇಶ್‌ ಪ್ರೊಡಕ್ಷನ್‌ ಮೂಲಕ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ಆ ಮೂಲಕ ರಕ್ಷಿತ್‌ ಶೆಟ್ಟಿಅವರ ಈ ಚಿತ್ರವನ್ನು ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಸಿಂಪಲ್​ ಸ್ಟಾರ್​ ರಕ್ಷಿತ್‌  ಶೆಟ್ಟಿ ಮಾಡಿದ್ದಾರೆ. ಹೀಗಾಗಿ ‘ಕೆಜಿಎಫ್‌ 2’ ಚಿತ್ರದ ನಂತರ ಮತ್ತೊಂದು ಕನ್ನಡ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತಯಾರಾಗುತ್ತಿದೆ. ಅದರಲ್ಲೂ ಬೇರೆ ಭಾಷೆಗಳಲ್ಲಿ ಕಮಾಲ್​ ಮಾಡುವುದಕ್ಕೆ ರಕ್ಷಿತ್ ಶೆಟ್ಟಿ ಸಿನಿಮಾ ಸಜ್ಜಾಗಿ ನಿಂತಿದೆ.


ಜೂನ್​ 10ಕ್ಕೆ 777 ಚಾರ್ಲಿ ರಿಲಿಸ್​!

ಜೂನ್‌ 10ಕ್ಕೆ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಂಗೀತ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ. ತಮಿಳಿನ ಬಾಬಿ ಸಿಂಹ, ಡ್ಯಾನಿಶ್‌ ಸೇಠ್‌ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ 777 ಚಾರ್ಲಿ ಚಿತ್ರವನ್ನು ರಾಣಾ ದಗ್ಗುಬಾಟಿ ಅವರು 10 ಜನರ ತಂಡದೊಂದಿಗೆ ಸಿನಿಮಾ ನೋಡಿದ ನಂತರ ಅಲ್ಲಿ ವಿತರಣೆ ಮಾಡಲು ಒಪ್ಪಿದ್ದಾರೆ.

ಇದನ್ನೂ ಓದಿ: ವೆಬ್ ಸಿರೀಸ್ ಲೋಕಕ್ಕೆ ಶಿವಣ್ಣ ಎಂಟ್ರಿ! ಮಗಳ ನಿರ್ಮಾಣದಲ್ಲೇ ನಟಿಸ್ತಿದ್ದಾರೆ ಸೆಂಚುರಿ ಸ್ಟಾರ್​

21 ಕೋಟಿಗೆ ಸೇಲಾಯ್ತು ಚಾರ್ಲಿ ಟಿವಿ ರೈಟ್ಸ್​!

ರಕ್ಷಿತ್‌ ಶೆಟ್ಟಿ ನಟಿಸಿರುವ, ಕಿರಣ್‌ರಾಜ್‌ ಕೆ (Kiran Raj K) ನಿರ್ದೇಶನದ ಈ ಚಿತ್ರದ ಕನ್ನಡ (Kannada) ಭಾಷೆಯ ಪ್ರಸಾರ ಹಕ್ಕುಗಳು ರೂ .21 ಕೋಟಿಗೆ ಕಲರ್ಸ್‌ ಕನ್ನಡ (Colors Kannada) ದ ಪಾಲಾಗಿದೆ ಎಂದು ಮೂಲಗಳು ತಿಳಿಸಿವೆ. ಡಿಜಿಟಲ್‌ ಹಕ್ಕು (Digital Rights) ಕಲರ್ಸ್‌ ಸಂಸ್ಥೆಯ ಒಡೆತನದ ವೂಟ್‌ (Voot) ಓಟಿಟಿಗೆ ದಕ್ಕಿದೆ. ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರೂ .21 ಕೋಟಿಗೆ ಕಲರ್ಸ್‌ ಕನ್ನಡದ ಪಾಲಾಗಿದೆ.

ಇದನ್ನೂ ಓದಿ: Rashmika Mandanna ಈ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇದ್ದಿದ್ದು ಒಳ್ಳೆದಾಯ್ತು! ಅಟ್ಟರ್​ ಫ್ಲಾಪ್ ರೀ​

ಬೇರೆ ಭಾಷೆಗಳ ಸ್ಯಾಟಲೈಟ್‌ ಮತ್ತು ಡಿಜಿಟಲ್‌ ಹಕ್ಕು ಪಡೆದುಕೊಳ್ಳಲು ದೊಡ್ಡ ದೊಡ್ಡ ಸಂಸ್ಥೆಗಳೇ ಮುಂದೆ ಬರುತ್ತಿವೆ ಎನ್ನಲಾಗಿದೆ. ರಿಲಯನ್ಸ್‌, ಹಾಟ್‌ಸ್ಟಾರ್‌ ಸಂಸ್ಥೆಗಳು ಸಿನಿಮಾ ನೋಡಲು ಆಸಕ್ತಿ ತೋರಿದೆ. ಸಿನಿಮಾ ನೋಡಿದ ಬಳಿಕ ಅವರೇ ಈ ರೈಟ್ಸ್​ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ರಕ್ಷಿತ್‌ ಶೆಟ್ಟಿಅವರು ಪರಮ್‌ವಃ ಸ್ಟುಡಿಯೋದ ಮೂಲಕ ನಿರ್ಮಿಸಿರುವ ಈ ಸಿನಿಮಾದ ಟ್ರೇಲರ್‌ ಮೇ 10ರಂದು ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಮೇಕಿಂಗ್​ ವಿಡಿಯೋ ಹಾಗೂ ಹಾಡುಗಳು ಸಖತ್​ ಸೌಂಡ್ ಮಾಡುತ್ತಿದೆ. ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Published by:Vasudeva M
First published: