Rana Daggubati: ಬಲ್ಲಾಳದೇವ ರಾಣಾರನ್ನೂ ಕಾಡಿದ ಕೊರೋನಾ: ಅರಣ್ಯ ಸಿನಿಮಾ ರಿಲೀಸ್​ ಮುಂದಕ್ಕೆ..!

Coronavirus Effect: Haati Mere Saathi Release Postponed: ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಾಣಾ ಅಭಿನಯದ ಅರಣ್ಯ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಚಿತ್ರ ಹಿಂದಿಯಲ್ಲಿ ಹಾತಿ ಮೇರೆ ಸಾಥಿ ಎಂಬ ಟೈಟಲ್​ನಲ್ಲಿ ಬಿಡುಗಡೆಯಾಗಲಿದೆ. ಇನ್ನೇನು ಚಿತ್ರೀಕರಣ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗೂ ಕೊನೆಯ ಹಂತದಲ್ಲಿವೆ. ಇತ್ತೀಚೆಗಷ್ಟೆ ರಾಣಾ ತೆಲುಗು ವರ್ಷನ್​ನ ಡಬ್ಬಿಂಗ್​ ಸಹ ಮುಗಿಸಿದ್ದರು.

Anitha E | news18-kannada
Updated:March 17, 2020, 11:25 AM IST
Rana Daggubati: ಬಲ್ಲಾಳದೇವ ರಾಣಾರನ್ನೂ ಕಾಡಿದ ಕೊರೋನಾ: ಅರಣ್ಯ ಸಿನಿಮಾ ರಿಲೀಸ್​ ಮುಂದಕ್ಕೆ..!
ಅರಣ್ಯ ಚಿತ್ರದಲ್ಲಿ ರಾಣಾ ದಗ್ಗುಬಾಟಿ
  • Share this:
ಬಲ್ಲಾಳದೇವನಾಗಿ ಬೆಳ್ಳಿತೆರೆ ಮೇಲೆ ಮಿಂಚಿದ್ದ ರಾಣಾ ದಗ್ಗುಬಾಟಿಗೂ ಈಗ ಕೊರೋನಾ ಕಾಟ ತಪ್ಪಿಲ್ಲ. ರಾಣಾ ಇತ್ತೀಚೆಗಷ್ಟೆ ಅನಾರೋಗ್ಯದಿಂದಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆದು ಮರಳಿದ್ದರು. ಅಷ್ಟರಲ್ಲೇ ಅವರಿಗೆ ಈಗ ಕೊರೋನಾ ಕಾಟ ಶುರುವಾಗಿದೆ.

ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ರಾಣಾ ಅಭಿನಯದ 'ಅರಣ್ಯ' ಸಿನಿಮಾ ನಿರ್ಮಾಣವಾಗುತ್ತಿದೆ. ಈ ಚಿತ್ರ ಹಿಂದಿಯಲ್ಲಿ 'ಹಾಥಿ ಮೇರೆ ಸಾಥಿ' ಎಂಬ ಟೈಟಲ್​ನಲ್ಲಿ ಬಿಡುಗಡೆಯಾಗಲಿದೆ. ಇನ್ನೇನು ಚಿತ್ರೀಕರಣ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗೂ ಕೊನೆಯ ಹಂತದಲ್ಲಿವೆ. ಇತ್ತೀಚೆಗಷ್ಟೆ ರಾಣಾ ತೆಲುಗು ವರ್ಷನ್​ನ ಡಬ್ಬಿಂಗ್​ ಸಹ ಮುಗಿಸಿದ್ದರು.




 



View this post on Instagram




 

And done with the Telugu dubb!! 👊👊👊


A post shared by Rana Daggubati (@ranadaggubati) on






ಆದರೆ ದೇಶದಲ್ಲಿ ಕೊರೋನಾ ವೈರಸ್​ನಿಂದಾಗಿ ಆಗುತ್ತಿರುವ ದುಷ್ಪರಿಣಾಮದಿಂದಾಗಿ ಸಿನಿಮಾದ ರಿಲೀಸ್​ ದಿನಾಂಕವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಎಲ್ಲ ಸರಿ ಇದ್ದಿದ್ದರೆ ಇದು ಏ. 2ಕ್ಕೆ ತೆರೆ ಕಾಣಬೇಕಿತ್ತು.




ಆದರೆ ಈಗ ಪ್ರೇಕ್ಷಕರ ಆರೋಗ್ಯದ ದೃಷ್ಟಿಯಿಂದ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಪರಿಸ್ಥಿತಿ ತಿಳಿಗೊಂಡ ನಂತರ ಹೊಸ ದಿನಾಂಕವನ್ನು ಪ್ರಕಟಿಸುವುದಾಗಿ ಚಿತ್ರತಂಡ ಪ್ರಕಟಿಸಿದೆ.



#HaathiMereSaathi release postponed... OFFICIAL statement... #CoronaVirus #COVID19 pic.twitter.com/34pGDarAd1



ರಾಣಾ ದಗ್ಗುಬಾಟಿ ಈ ಸಿನಿಮಾದಲ್ಲಿ ಅರಣ್ಯದ ರಕ್ಷಕನಾಗಿ ಕಾಣಿಸಿಕೊಂಡಿದ್ದಾರೆ. ರಾಣಾ ಜೊತೆ ಪುಲಕಿತ್ ಸಾಮ್ರಾಟ್​ ಸಹ ಇದರಲ್ಲಿ ಅಭಿನಯಿಸಿದ್ದಾರೆ. ಎರೋಸ್​ ಇಂಟರ್​ನ್ಯಾಷನಲ್​ ನಿರ್ಮಾಣದ ಈ ಚಿತ್ರವನ್ನು ಪ್ರಭು ಸೊಲೊಮನ್​ ನಿರ್ದೇಶನ ಮಾಡಿದ್ದಾರೆ.

Meghana Raj: ಮತ್ತೆ ಮದುಮಗಳಾದ ಮೇಘನಾರಾಜ್​: ವೈರಲ್​ ಆಯ್ತು ಫೋಟೋಗಳು..!
First published: March 17, 2020, 11:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading