HOME » NEWS » Entertainment » RANA DAGGUBATI SHARES HOE ARANYA MOVIE PLAYED A CRUCIAL ROLE IN HIS HEALTH HEALING SGT AE

Aranya: ಅನಾರೋಗ್ಯದ ವಿರುದ್ಧದ ಹೋರಾಡಲು ಅರಣ್ಯ ಸಿನಿಮಾ ಸಹಕಾರಿಯಾದ ಬಗ್ಗೆ ಹಂಚಿಕೊಂಡ ರಾಣಾ ದಗ್ಗುಬಾಟಿ

ಈ ಸಿನಿಮಾದಲ್ಲಿ ರಾಣಾ, ಬಂದೇವ್​ ಎನ್ನುವ ಮಾತ್ರ ಮಾಡುತ್ತಿದ್ದು, ಪ್ರಕೃತಿ ಮತ್ತು ಪ್ರಾಣಿಗಳ ಪರವಾಗಿ ಹೋರಾಡುವ ಪಾತ್ರವಾಗಿದೆ. ಈ ಸಿನಿಮಾ ಚಿತ್ರೀಕರಣದ ಬಹುತೇಕ ಸಮಯವನ್ನು ಕಾಡಿನಲ್ಲಿ ಕಳೆದಿದ್ದರಿಂದ ರಾಣಾ ಅವರಿಗೆ ನಿರಾಳತೆ ಮತ್ತು ನೆಮ್ಮದಿಯನ್ನು ಅನುಭವಿಸಲು ಸಾಧ್ಯವಾಯಿತಂತೆ.

news18-kannada
Updated:March 25, 2021, 12:28 PM IST
Aranya: ಅನಾರೋಗ್ಯದ ವಿರುದ್ಧದ ಹೋರಾಡಲು ಅರಣ್ಯ ಸಿನಿಮಾ ಸಹಕಾರಿಯಾದ ಬಗ್ಗೆ ಹಂಚಿಕೊಂಡ ರಾಣಾ ದಗ್ಗುಬಾಟಿ
ರಾಣಾ ದಗ್ಗುಬಾಟಿ
  • Share this:
ಬಾಹುಬಲಿಯ ಬಲ್ಲಾಳದೇವನಾಗಿ ವಿಶ್ವಕ್ಕೆ ಪರಿಚಯವಾದವರು ಟಾಲಿವುಡ್​ ನಟ ರಾಣಾ ದಗ್ಗುಬಾಟಿ. ರಾಣಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅರಣ್ಯ. ಈ ಸಿನಿಮಾ ಹಿಂದಿಯಲ್ಲಿ 'ಹಾತಿ ಮೇರೆ ಸಾತಿ' ಟೈಟಲ್​ನಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿಯೊಂದನ್ನು ಕೊಟ್ಟಿದ್ದರು. ಹೃದಯ ಸಮಸ್ಯೆ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವಿಷಯವನ್ನು ಅವರು ಹಂಚಿಕೊಂಡಿದ್ದರು. ಈ ಬೆಳವಣಿಗೆಗಳ ನಂತರ ಸಿನಿಮಾ ಹೇಗೆ ಅವರ ಬದುಕಿನಲ್ಲಿ ಖುಷಿಯನ್ನು ತಂದಿದೆ ಎನ್ನುವುದನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಹಿಂದಿಯ 'ಹಾತಿ ಮೇರೆ ಸಾತಿ' ಸಿನಿಮಾ ರಾಣಾ ದಗ್ಗುಬಾಟಿಯವರ ಆರೋಗ್ಯ ಸುಧಾರಣೆಯಲ್ಲಿ ಹೇಗೆ ಪ್ರಮುಖ ಪಾತ್ರವಹಿಸಿದೆ ಎನ್ನುವುದನ್ನು ರಾಣಾ ಹೇಳಿಕೊಂಡಿದ್ದಾರೆ. 

ಸಮಸ್ಯೆಗಳಿಂದ ಹೊರಬಂದು ಒಬ್ಬ ನಾಯಕನಾಗಿ ಬೆಳೆಯುವುದು ಹೇಗೆ ಎನ್ನುವುದನ್ನು ಅರಣ್ಯ ಸಿನಿಮಾ ಕಲಿಸಿದೆ ಎಂದು ಸಂದರ್ಶನವೊಂದರಲ್ಲಿ ರಾಣಾ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಾಣಾ ಅವರ ಆರೋಗ್ಯ ಸುಧಾರಿಸಿ, ಶೂಟಿಂಗ್​ಗೆ ಮರಳುವವರೆಗೆ ಸಹನೆಯಿಂದ ಕಾದು ಅವರಿಗೆ ಧೈರ್ಯ ತುಂಬಿದ ಆ ಸಿನಿಮಾದ ನಿರ್ದೇಶಕರಾದ ಪ್ರಭು ಸೋಲೋಮನ್​ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

'ಪ್ರಭು ಸರ್​​ ನನಗಾಗಿ ಕಾದು, ಸಮಯವನ್ನು ಮೀಸಲಿರಿಸಿ, ನನ್ನ ಆರೋಗ್ಯ ಸುಧಾರಿಸಿಕೊಳ್ಳುವರೆಗೆ ಕಾಲವಕಾಶವನ್ನು ನೀಡಿದ್ದು ನನಗೆ ಬಹಳ ಸಂತೋಷವನ್ನುಂಟು ಮಾಡಿತು. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅಷ್ಟೇ ಅಲ್ಲದೇ ಕಾಡು ಕೂಡ ನಾನು ಗುಣಮುಖವಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ' ಎಂದು ರಾಣಾ ಹೇಳಿದ್ದಾರೆ.

ಈ ಸಿನಿಮಾದಲ್ಲಿ ರಾಣಾ, ಬಂದೇವ್​ ಎನ್ನುವ ಮಾತ್ರ ಮಾಡುತ್ತಿದ್ದು, ಪ್ರಕೃತಿ ಮತ್ತು ಪ್ರಾಣಿಗಳ ಪರವಾಗಿ ಹೋರಾಡುವ ಪಾತ್ರವಾಗಿದೆ. ಈ ಸಿನಿಮಾ ಚಿತ್ರೀಕರಣದ ಬಹುತೇಕ ಸಮಯವನ್ನು ಕಾಡಿನಲ್ಲಿ ಕಳೆದಿದ್ದರಿಂದ ರಾಣಾ ಅವರಿಗೆ ನಿರಾಳತೆ ಮತ್ತು ನೆಮ್ಮದಿಯನ್ನು ಅನುಭವಿಸಲು ಸಾಧ್ಯವಾಯಿತಂತೆ.

ಇದನ್ನೂ ಓದಿ: ಮದಗಜ ನಿರ್ದೇಶಕರಿಗೆ ದುಬಾರಿ ಉಡುಗೊರೆ ಕೊಟ್ಟ ರಾಬರ್ಟ್ ನಿರ್ಮಾಪಕ ಉಮಾಪತಿ..!

'ನೀವೇನಾದ್ರೂ ಒಂದು ವಾರ ಕಾಡಿನಲ್ಲಿ ಸಮಯ ಕಳೆದು ಮರಳಿ ಬಂದರೆ ನೀವು ವಿಭಿನ್ನ ಮನಸ್ಥಿಯನ್ನು ಸಾಧಿಸಿರುತ್ತೀರಿ. ನೀವು ಸಾಕಷ್ಟು ನಿರಾಳವಾಗಿ, ನೆಮ್ಮದಿಯಾಗಿ ಇರುತ್ತೀರಿ. ಫೋನ್ ಇಲ್ಲದೆ ಕಾಡಿನಲ್ಲಿ ಸಮಯ ಕಳೆದಿದ್ದರಿಂದ ಕೇವಲ ಪಾತ್ರದ ಕುರಿತು ಮಾತ್ರವೇ ನಮ್ಮ ಆಲೋಚನೆಗಳಿದ್ದವು. ಆದ್ದರಿಂದಲೇ ಪಾತ್ರದ ಆಳಕ್ಕಿಳಿದು ನಿಭಾಯಿಸಲು ಸಾಧ್ಯವಾಯಿತು. ಜೊತೆಗೆ ಪಾತ್ರದೊಂದಿಗೆ ತನ್ಮಯತೆ ಸಾಧಿಸುವುದು ನಮಗೆ ಬಹಳ ಮುಖ್ಯವಾಗಿತ್ತು. ಹೌದು, ಹೊರಗಿನ ಪ್ರಪಂಚದಲ್ಲಿ ನಾನು ಸಾಕಷ್ಟು ನಿಭಾಯಿಸುತ್ತಿದ್ದೇನೆ. ಆದರೆ ಕಾಡು ಮತ್ತು ಸಾಹಸ​​ ಅನ್ನೋದು ನಿಜಕ್ಕೂ ವರದಾನ' ಎಂದು ಇಂಗ್ಲಿಷ್​ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಇದಿಷ್ಟೇ ಅಲ್ಲದೆ ಸಿನಿಮಾಗಳು ರಾಣಾ ಅವರ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸಿವೆ. 'ವಾಸ್ತವ ಜಗತ್ತಿನಲ್ಲಿ ಏನೇ ನಡೆದರೂ ರೀಲ್ ಪ್ರಪಂಚದಲ್ಲಿ ಅದು ಲೆಕ್ಕಕ್ಕೆ ಬರುವುದಿಲ್ಲ, ಇದೇ ನೋಡಿ ರೀಲ್ ಪ್ರಪಂಚದ ತಮಾಷೆ ' ಎಂದು ಹೇಳಿಕೊಂಡಿದ್ದಾರೆ.
ಇದಕ್ಕೂ ಮೊದಲು ನಟಿ ಸಮಂತಾ ಅಕ್ಕಿನೇನಿ ಅವರ ಟಾಕ್​ ಶೋನಲ್ಲಿ ತಮ್ಮ ಆರೋಗ್ಯ ಸಮಸ್ಯೆ ಕುರಿತು ರಾಣಾ ದಗ್ಗುಬಾಟಿ ಮಾತನಾಡಿದ್ದರು. ರಕ್ತದೊತ್ತಡ, ಹೃದಯದ ಸಮಸ್ಯೆ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದೆ, ಬದುಕುಳಿದಿದ್ದೇ ಹೆಚ್ಚು ಎಂದು ರಾಣಾ ಹಂಚಿಕೊಂಡಿದ್ದರು.

ಇದನ್ನೂ ಓದಿ: Govinda: ಮತ್ತೊಮ್ಮೆ ಅಣ್ಣಾವ್ರ ಹಾಡು ಹಾಡಿ ಮನಗೆದ್ದ ಬಾಲಿವುಡ್​ ನಟ ಗೋವಿಂದ..!

ಇನ್ನು, 'ಹಾತಿ ಮೇರೆ ಸಾತಿ' ಚಿತ್ರದ ಬಿಡುಗಡೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಣಾ ತಮಿಳು ಮತ್ತು ತೆಲುಗುವಿನಲ್ಲಿ ಮಾರ್ಚ್​ 26 ರಂದು ಚಿತ್ರ ತೆರೆಗೆ ಬರಲಿದ್ದು, ಹಿಂದಿಯಲ್ಲಿ ಸಹ ಚಿತ್ರ ಬಿಡುಗಡೆಯಾಗಬೇಕಿತ್ತು. ಕೋವಿಡ್ ​19 ಕೇಸ್‌ಗಳ ಏರಿಕೆಯ ಹಿನ್ನೆಲೆ ಇದು ಮುಂದಕ್ಕೆ ಹೋಗಿದೆ. ಈ ಸಿನಿಮಾ ತಮಿಳಿನಲ್ಲಿ ಕಾದನ್, ಕನ್ನಡದಲ್ಲಿ ಅರಣ್ಯ ಎನ್ನುವ ಟೈಟಲ್​ ಹೊಂದಿದೆ.

ರಾಣಾ ದಗ್ಗುಬಾಟಿ ದಕ್ಷಿಣ ಮತ್ತು ಹಿಂದಿ ಚಿತ್ರರಂಗದ ಪ್ರಸಿದ್ಧ ನಟರಾಗಿದ್ದಾರೆ. 2020ರಲ್ಲಿ ಕೊರೋನಾ ಲಾಕ್​ಡೌನ್​ನಲ್ಲೇ ಮಿಹಿಕಾ ಬಜಾಜ್​ ಅವರನ್ನು ಖಾಸಗಿ ಸಮಾರಂಭದಲ್ಲಿ ವಿವಾಹವಾದರು.
Published by: Anitha E
First published: March 25, 2021, 12:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories