Rana Daggubatiಗೆ ದಿಗ್ಗಜ ಸಂಸ್ಥೆಗಳಿಂದ ಹಣ ಹೂಡಿಕೆ, ಯಾಕಪ್ಪ ಅಂತೀರಾ? ಈ ಸ್ಟೋರಿ ನೋಡಿ

ತೆಲುಗು ಚಿತ್ರರಂಗದ ಖ್ಯಾತ ನಟ ರಾಣಾ ದಗ್ಗುಬಾಟಿ(Rana Daggubati)ಅವರೀಗ ಸಂತಸಗಳ ಮೋಡಗಳಲ್ಲಿ ತೇಲಾಡುತ್ತಿದ್ದರೆಂದರೂ ತಪ್ಪಿಲ್ಲ. ಅರೇ ಇದೇನಪ್ಪಾ.. ಅವರ ಮತ್ತೊಂದು ಚಿತ್ರ ಸೆಟ್ಟೇರಿತೇ ಅಥವಾ ಹಿಟ್(Hit) ಆಯಿತೇ ಎಂದು ತಿಳಿದುಕೊಳ್ಳಬೇಡಿ. ಈ ವಿಚಾರ ಚಿತ್ರಕ್ಕೆ ಸಂಬಂಧಿಸಿದ್ದೇ ಅಲ್ಲ

ರಾಣಾ ದಗ್ಗುಬಾಟಿ

ರಾಣಾ ದಗ್ಗುಬಾಟಿ

  • Share this:
ಬಾಹುಬಲಿ(Bahubali) ಖ್ಯಾತಿಯ ‘ಬಲ್ಲಾಳದೇವ’ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದೈತ್ಯ ಕಾಯ, ಗಟ್ಟಿಮುಟ್ಟಾದ ದೇಹ ಹಾಗೂ ಖಳ ನಾಯಕನಂತೆ ಭಯ ಹುಟ್ಟಿಸುವಂತಹ ಮನೋಜ್ಞ ಅಭಿನಯದಿಂದಾಗಿ ನಮ್ಮೆಲ್ಲರನ್ನು ರಂಜಿಸಿರುವ ತೆಲುಗು ಚಿತ್ರರಂಗದ ಖ್ಯಾತ ನಟ ರಾಣಾ ದಗ್ಗುಬಾಟಿ(Rana Daggubati)ಅವರೀಗ ಸಂತಸಗಳ ಮೋಡಗಳಲ್ಲಿ ತೇಲಾಡುತ್ತಿದ್ದರೆಂದರೂ ತಪ್ಪಿಲ್ಲ. ಅರೇ ಇದೇನಪ್ಪಾ.. ಅವರ ಮತ್ತೊಂದು ಚಿತ್ರ ಸೆಟ್ಟೇರಿತೇ ಅಥವಾ ಹಿಟ್(Hit) ಆಯಿತೇ ಎಂದು ತಿಳಿದುಕೊಳ್ಳಬೇಡಿ. ಈ ವಿಚಾರ ಚಿತ್ರಕ್ಕೆ ಸಂಬಂಧಿಸಿದ್ದೇ ಅಲ್ಲ..! ಹಾಗಾದರೆ, ಏನಪ್ಪಾ ವಿಷಯ ಎಂದರೆ, ರಾಣಾ ಅವರು ಸಹ-ಸಂಸ್ಥಾಪಕ(Co-founder) ರಾಗಿರುವ ಅವರ ಹೊಸ ಸಂಸ್ಥೆಯಾದ ಐಕಾಂಜ್ (Ikonz) ಸ್ಟಾರ್ಟಪ್ ಸಂಸ್ಥೆಗೆ ಈಗ ಜಾಗತಿಕ ಮಟ್ಟದಲ್ಲಿರುವ ದಿಗ್ಗಜ ಸಂಸ್ಥೆಗಳಿಂದ ಹೂಡಿಕೆಯ ಹಣ ಹರಿದು ಬಂದಿದೆ.

ಬಲ್ಲಾಳ ದೇವನ ಕಂಪನಿಗೆ ಫಂಡಿಗ್​ ಮಾಡಿದ ದಿಗ್ಗಜರು!

ಹೌದು, ರಾಣಾ ಸಹ ಮಾಲಿಕತ್ವವಿರುವ ಐಕಾಂಜ್ ಎಂಬ ಬ್ಲಾಕ್ ಚೈನ್ ಕ್ಷೇತ್ರಕ್ಕೆ ಸಂಬಂಧಿಸಿದಂತಹ ಸಂಸ್ಥೆಗೆ ಮೆಟಾದ ಜುಕರ್‌ಬರ್ಗ್‌, ಜಗತ್ತಿನ ಅತಿ ಸಿರಿವಂತ ವ್ಯಕ್ತಿಗಳ ಪೈಕಿ ಒಬ್ಬರಾದ ಬಿಲ್ ಗೇಟ್ಸ್ ಹಾಗೂ ಅಮೆಜಾನ್ ಸಂಸ್ಥೆಯ ಜೆಫ್ ಬೆಜೋಸ್ ಅವರಿಂದ ಫಂಡಿಂಗ್ ಸಿಕ್ಕಿದ್ದು ಅದರಿಂದಾಗಿ ರಾಣಾ ಅವರಿಗೆ ತುಂಬ ಸಂತಸವಾಗಿದೆ ಎಂದು ಹೇಳಲಾಗಿದೆ.

ಮಾರ್ಕ್​ ಜುಕರ್​ಬರ್ಗ್​, ಗೇಟ್ಸ್​, ಜೆಫ್​ ಬೆಜೋಸ್​ರಿಂದ ಫಂಡಿಂಗ್!

ಈ ಬಗ್ಗೆ ಸ್ವತಃ ರಾಣಾ ಅವರು ಪ್ರತಿಕ್ರಯಿಸಿದ್ದು, "ಒಬ್ಬ ಐಪಿ ಮಾಲೀಕನಾಗಿ ಹೇಳಬಯಸುವುದೇನೆಂದರೆ, ಬ್ಲಾಕ್‌ಚೈನ್‌ನ ಪ್ರಪಂಚವು ನಂಬಲಾಗದ ಸಾಧ್ಯತೆಗಳನ್ನು ಮತ್ತು ಅತ್ಯುತ್ತಮ ಹಾಗೂ ಅತ್ಯಂತ ವಿಶ್ವಾಸಾರ್ಹ ಅವಕಾಶಗಳನ್ನು ಗುರುತಿಸಲು ಮತ್ತು ಕೇಂದ್ರೀಕರಿಸಲು ಉತ್ತಮ ರೀತಿಯಲ್ಲಿ ಸವಾಲುಗಳನ್ನು ಒದಗಿಸುತ್ತದೆ. NFTಗಳು, ಅವತಾರಗಳು ಅಥವಾ ಮೂಲಭೂತ ಹಕ್ಕುಗಳ ನಿರ್ವಹಣೆಯಂತಹ ಬಹು ಸ್ವರೂಪಗಳಲ್ಲಿ ಜಾಗತಿಕ ಹಂತದಲ್ಲಿ IP (Intellectual Property) ಸ್ವತ್ತುಗಳನ್ನು ನಿರ್ವಹಿಸಲು ಮತ್ತು ಹಣಗಳಿಸಲು ಪ್ರಾರಂಭಿಸಲು ನಾನು ಮತ್ತು ಇತರ IP ಮಾಲೀಕರು ಕಂಡುಕೊಂಡ ಅತ್ಯುತ್ತಮ ಮಾರ್ಗವೆಂದರೆ ವಿಶ್ವ ದರ್ಜೆಯ ಬ್ಲಾಕ್‌ಚೈನ್ ಒಟ್ಟುಗೂಡಿಸುವ ಕಂಪನಿ ಎಂದು ಅವರು ಹೇಳಿದ್ದಾರೆ.

ಮೆಟಾವರ್ಸ್​ ಜಗತ್ತಿಗೆ ಕಾಲಿಡುತ್ತಿರುವ ನಟ ರಾಣಾ!

ಮುಂದಿನ ಪೀಳಿಗೆಯ ಭವಿಷ್ಯ ಎಂದೇ ವ್ಯಾಖ್ಯಾನಿಸಲಾಗುವ ಮೆಟಾವರ್ಸ್ ಕ್ಷೇತ್ರಕ್ಕೆ ಕಾಲಿಡಲು ಪೂರಕವಾಗಿರುವಂತಹ ಕ್ಷಮತೆ ಸಾಮರ್ಥ್ಯ ರೂಪಿಸಿಕೊಳ್ಳುವಲ್ಲಿ ಇದೀಗ ರಾಣಾ ಅವರ ಈ ಹೊಸ ಸಂಸ್ಥೆಯು ಕಾರ್ಯಮಗ್ನವಾಗಿದ್ದು ಈಗಾಗಲೇ ಅದು ಭಾರತದ ಪ್ರತಿಷ್ಠಿತ ಬೌದ್ಧಿಕ ಆಸ್ತಿಗಳೆಂದು ಕರೆಸಿಕೊಳಲ್ಪಡುವ ಅಮರ ಚಿತ್ರ ಕಥಾ, ಟಿಂಕಲ್, ಹಾಗೂ ಸುರೇಶ್ ಪ್ರೊಡಕ್ಷನ್ಸ್‌ನೊಂದಿಗೆ ಸಹಭಾಗಿತ್ವ ಪಡೆದುಕೊಂಡಿದೆ. ಬ್ಲಾಕ್‍ಚೈನ್ ವಲಯದಲ್ಲಿ Ikonz ಡಿಜಿಟಲ್ ಸಂಪತ್ತನ್ನು ನಿರ್ವಹಿಸಲು ವೇದಿಕೆ ಒದಗಿಸಲಿದ್ದು ಮೆಟಾವರ್ಸ್ ವಲಯದಾದ್ಯಂತ NFTಗಳ ನಿರ್ವಹಣೆ ಹಾಗೂ ಕಾರ್ಯತಂತ್ರಗಳಿಗೆ ತನ್ನ ಸೇವೆ ಒದಗಿಸಲಿದೆ.

ಇದನ್ನೂ ಓದಿ: LIC IPO ಬಿಡುಗಡೆ ಯಾವಾಗ ಗೊತ್ತಾಯ್ತಾ? ಕಾದು ಕಾದು ಸಾಕಾಯ್ತು ಅಂತಿರೋ ನಾಗರಿಕರು!

ಕೆಲ ದಶಕಗಳ ಹಿಂದೆ ಕಂಪ್ಯೂಟರ್ ಹಾಗೂ ಅದರಿಂದ ಹುಟ್ಟಬಹುದಾಗಿದ್ದ ಅಸಂಖ್ಯ ಅದ್ಭುತ ಅವಕಾಶಗಳ ಬಗ್ಗೆ ಭಾರತದಂತಹ ದೇಶದಲ್ಲಿ ಅಷ್ಟೊಂದು ಜಾಗೃತಿಜನರಲ್ಲಿ ಇರಲಿಲ್ಲ. ಸಾಂಪ್ರದಾಯಿಕ ಮಟ್ಟದಲ್ಲೇ ಹಲವು ವ್ಯವಹಾರಗಳು ನಡೆಯಲ್ಪಡುತ್ತಿದ್ದವು. ಆದರೆ, 2000 ದ ನಂತರ ಜಗತ್ತು ನಿಧಾನವಾಗಿ ಡಿಜಿಟಲ್ ಯುಗದ ಮಹತ್ವ ಹಾಗೂ ಅಲ್ಲಿರಬಹುದಾದ ಅನಿಯಮಿತ ಅವಕಾಶಗಳ ಬಗ್ಗೆ ಮನಗಾಣಲು ಆರಂಭಿಸಿತು.

ಇದನ್ನೂ ಓದಿ: ಮಕಾಡೆ ಮಲಗಿದ ರಾಧೆ-ಶ್ಯಾಮ್​ ಸಿನಿಮಾ.. ಇದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ರವಿ ತೇಜ

ಸದ್ಯ, ಈಗ ತಂತ್ರಜ್ಞಾನವು ಮತ್ತೊಂದು ಆಯಾಮದಲ್ಲಿ ಪ್ರಗತಿ ಸಾಧಿಸಿದ್ದು ವಾಸ್ತವಿಕ ನೆಲಗಟ್ಟಿಲ್ಲದ ವರ್ಚ್ಯುವಲ್ ಜಗತ್ತಿನಲ್ಲೂ ಸಾಧನೆಗಳನ್ನು ಮಾಡುತ್ತಿದ್ದು ಇದೇ ಮುಂದಿನ ಭವಿಷ್ಯ ಎಂದು ಹೇಳಲಾಗುತ್ತಿದೆ. ಇಲ್ಲಿ ಭೌತಿಕಕ್ಕಿಂತಲೂ ವರ್ಚ್ಯೂವಲ್ ಆಗಿ ಕಾರ್ಯನಿರ್ವಹಿಸುವ ತಂತ್ರಜ್ಞಾನಗಳಿದ್ದು, ಹಲವು ಬಗೆಯ ವೈವಿಧ್ಯಮಯ ವಸ್ತುಗಳು, ವಿಷಯಗಳು ಅಭಿವೃದ್ಧಿಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿ ಹಾಗೂ NFTಗಳು ಸಾಕಷ್ಟು ಜನಪ್ರಿಯವಾಗುತ್ತಿವೆ.
Published by:Vasudeva M
First published: