ಟಾಲಿವುಡ್ನ ಹಂಕ್, ಬಾಹುಬಲಿಯ ಬಲ್ಲಾಳದೇವ ರಾಣಾ ಇತ್ತೀಚೆಗಷ್ಟೆ ಬಹುಕಾಲದ ಗೆಳತಿ ಮಿಹಿಕಾರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ರಾಣಾ ಅವರ ವೃತ್ತಿ ಜೀವನವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿತ್ತು. ಬಾಹುಬಲಿ ಸಿನಿಮಾದ ನಂತರ ರಾಣಾಗೆ ಸಿಗುವ ಆಫರ್ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು. ಟಾಲಿವುಡ್ನಲ್ಲಿ ರಾಣಾಗಾಗಿಯೇ ಸಿನಿಮಾ ಕಥೆ ಬರೆಯಲಾರಂಭಿಸಿದ್ದರು. ಯಶಸ್ಸನ ಉತ್ತುಂಗ ತಲುಪಿದ್ದ ರಾಣಾಗೆ ಕಾದಿತ್ತು ಒಂದು ಆಘಾತಕಾರಿ ವಿಷಯ. ಒಂದು ಕಡೆ ಕೈಯಲ್ಲಿ ಸಾಲು ಸಾಲು ಸಿನಿಮಾಗಳು, ಮತ್ತೊಂದು ಕಡೆ ರಾಣಾ ದಗ್ಗುಬಾಟಿ ಆರೋಗ್ಯದ ಸಮಸ್ಯೆಯಿಂದಾಗಿ ಆಸ್ಪತ್ರೆಪಾಲಾಗಿದ್ದರು. ಅನಾರೋಗ್ಯ ಎಂದರೆ ಜೀವನ ಹಾಗೂ ಮರಣದ ನಡುವೆ ಹೋರಾಟ ನಡೆಸುತ್ತಿದ್ದರು ರಾಣಾ. ಜೀವವೇ ಹೋಗುವ ಸಾಧ್ಯತೆ ಇದೆ ಎಂದು ತಿಳಿದಿದ್ದರೂ ರಾಣಾ ಯಾವ ವಿಷಯವನ್ನುಆಗ ಅಭಿಮಾನಿಗಳಿಂದ ಮುಚ್ಚಿಟ್ಟಿದ್ದರು.
ಲಾಕ್ಡೌನ್ ಆರಂಭಕ್ಕೂ ಮುನ್ನ ಅಂದರೆ, ಫೆಬ್ರವರಿಯಲ್ಲಿ ರಾಣಾ ಅವರಿಗೆ ಕಿಡ್ನಿ ವೈಫಲ್ಯವಾಗಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಅಭಿಮಾನಿಗಳು ರಾಣಾ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಆದರೆ ರಾಣಾ ಎಲ್ಲ ವಿಷಯಗಳು ಗಾಳಿಸುದ್ದಿ ಎಂದು ತಳ್ಳಿ ಹಾಕಿದ್ದರು.
View this post on Instagram
View this post on Instagram
ಈ ಹಿಂದೆ ತನಗೇನೂ ಆಗಿಲ್ಲ ಎಂದು ಹೇಳುತ್ತಿದ್ದ ರಾಣಾ, ಈಗ ಇದೇ ಮೊದಲ ಬಾರಿಗೆ ತಮ್ಮ ಅನಾರೋಗ್ಯದ ಕುರಿತು ಮಾತನಾಡಿದ್ದಾರೆ. ಸ್ಯಾಮ್ಜಾಮ್ ಟಾಕ್ ಶೋನ ಪ್ರೊಮೊದಲ್ಲಿ ರಾಣಾ ಮಾತನಾಡಿರುವ ಕ್ಲಿಪ್ ಇದ್ದು, ವಿಡಿಯೋ ವೈರಲ್ ಆಗುತ್ತಿದೆ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ