ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಅವರ ನಿಶ್ಚಿತಾರ್ಥ ನಿನ್ನೆ ಸಂಜೆಯೇ ನಡೆಯಲಿದೆ ಅನ್ನೋದು ಸುದ್ದಿಯಾಗಿತ್ತು. ಅದರಂತೆ ಇಂದು ಬೆಳಿಗ್ಗೆ ರಾಣಾ ದಗ್ಗುಬಾಟಿ ಸಹ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಿಹಿಕಾ ಜೊತೆ ಇರುವ ಚಿತ್ರವೊಂದನ್ನು ಹಂಚಿಕೊಂಡು ಇದು ಅಧಿಕೃತ ಎಂದು ಪೋಸ್ಟ್ ಮಾಡಿದ್ದರು.
ರಾಣಾ ಹಾಗೂ ಮಿಹಿಕಾ ಕೆಲ ಸಮಯದಿಂದ ಗುಟ್ಟಾಗಿ ಪ್ರೀತಿಸುತ್ತಿದ್ದು, ಕೆಲವೇ ದಿನಗಳ ಹಿಂದೆಯಷ್ಟೆ ಅದನ್ನು ರಾಣಾ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದರು. ಇದಾದ ಕೂಡಲೇ ರಾಣಾ ಅವರ ತಂದೆ ಸುರೇಶ್ ಬಾಬು ಅವರೂ ಆದಷ್ಟು ಬೇಗೆ ಮದುವೆ ಮಾಡುವುದಾಗಿ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.
ರೊಕಾ ಎಂದರೆ ಗಂಡು ಹಾಗೂ ಹೆಣ್ಣಿನ ಕಡೆಯವರು ಒಂದೆಡೆ ಸೇರಿ ನಿಶ್ಚಿತಾರ್ಥ, ಮೆಹೆಂದಿ ಹಾಗೂ ಮದುವೆ ಬಗ್ಗೆ ಚರ್ಚಿಸುತ್ತಾರೆ. ಯಾವಾಗ ನಿಶ್ಚಿತಾರ್ಥ ಹಾಗೂ ಮದುವೆ ಮಾಡಬೇಕು ಎಂದು ಈ ಕಾರ್ಯಕ್ರಮದಲ್ಲಿ ನಿರ್ಧಾರವಾಗುತ್ತದೆ. ಅಲ್ಲಿದೆ ರಾಣಾ ಹಾಗೂ ಮಿಹಿಕಾ ನಿಶ್ಚಿತಾರ್ಥಕ್ಕೆ ಇನ್ನೂ ಸಮಯವಿದೆ ಎಂದಾಯಿತು.
ಇದನ್ನೂ ಓದಿ: ರಶ್ಮಿಕಾಗೂ ಕಾಡುತ್ತಿದೆಯಂತೆ ವೃತ್ತಿ ಜೀವನದ ಅಭದ್ರತೆ..!
ನಿನ್ನೆ ನಡೆದ ರೊಕಾದಲ್ಲಿ ರಾಣಾ ಸಿಂಪಲ್ ಆಗಿ ಬಿಳಿ ಬಣ್ಣದ ಪಂಚೆ ಹಾಗೂ ಶರ್ಟ್ ತೊಟ್ಟಿದ್ದರೆ, ಮಿಹಿಕಾ ಸರಳವಾಗಿ ರೇಷ್ಮೆ ಸೀರೆಯುಟ್ಟು ಕ್ಲಾಸಿ ಲುಕ್ನಲ್ಲಿದ್ದರು. ಸದ್ಯ ರಾಣಾ ಅಭಿನಯದ 'ಅರಣ್ಯ' ಸಿನಿಮಾ ಒಟಿಟಿಯಲ್ಲಿ ತೆರೆ ಕಾಣಲಿದೆ ಎನ್ನಲಾಗುತ್ತಿದೆ. ಜೊತೆಗೆ ರಾಣಾ ಹಾಗೂ ಸಾಯಿ ಪಲ್ಲವಿ ಅಭಿನಯದ 'ವಿರಾಟ ಪರ್ವಂ' ಲಾಕ್ಡೌನ್ ನಂತರ ಚಿತ್ರೀಕರಣ ಆರಂಭಿಸಲಿದೆ.
ಭಾವಿ ಪತ್ನಿಗೆ ಮುತ್ತಿಟ್ಟ ರಾಣಾ: ಭಾವಿ ಪತಿಯ ಹೆಸರಿನ ಟ್ಯಾಟೂ ಹಾಕಿಸಿಕೊಂಡ ಮಿಹಿಕಾ ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ