Rana Daggubati: ಟಾಲಿವುಡ್​ ಹಂಕ್​ ರಾಣಾಗೆ ಒಂದು ಕಣ್ಣು ಕಾಣುವುದಿಲ್ಲವಂತೆ..!

ಬಾಹುಬಲಿಯಂತಹ ಹಿಟ್ ಸಿನಿಮಾದಲ್ಲಿ ನಟಿಸಿರುವ ನಟ ರಾಣಾಗೆ ಒಂದು ಕಣ್ಣು ಕಾಣಿಸುವುದಿಲ್ಲವಂತೆ. ಹೌದು, ಹೀಗೆಂದು ರಾಣಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Anitha E | news18-kannada
Updated:May 23, 2020, 7:02 AM IST
Rana Daggubati: ಟಾಲಿವುಡ್​ ಹಂಕ್​ ರಾಣಾಗೆ ಒಂದು ಕಣ್ಣು ಕಾಣುವುದಿಲ್ಲವಂತೆ..!
ನಟ ರಾಣಾ ದಗ್ಗುಬಾಟಿ
  • Share this:
ಟಾಲಿವುಡ್​ ಹಂಕ್​ ರಾಣಾ ದಗ್ಗುಬಾಟಿ ಇನ್ನೇನು ಹೊಸ ಜೀವನಕ್ಕೆ ಕಾಲಿಡುವ ಕಾತುರದಲ್ಲಿದ್ದಾರೆ. ಬಾಳ ಸಂಗಾತಿಯಾಗಿ ಮಿಹಿಕಾ ಬಜಾಜ್​ ಅವರನ್ನು ಆರಿಸಿಕೊಂಡಿದ್ದು, ಮದುವೆ ಮಾತುಕತೆ ನಡೆಯುತ್ತಿದೆ.

ಬಾಹುಬಲಿಯಂತಹ ಹಿಟ್ ಸಿನಿಮಾದಲ್ಲಿ ನಟಿಸಿರುವ ನಟ ರಾಣಾಗೆ ಒಂದು ಕಣ್ಣು ಕಾಣಿಸುವುದಿಲ್ಲವಂತೆ. ಹೌದು, ಹೀಗೆಂದು ರಾಣಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Rana daggubatu and Miheeka bajaj To Get Engaged Today Evening
ಮಿಹಿಕಾ-ರಾಣಾ


ಬಾಹುಬಲಿ ಸಮಯದಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಕ್ಕೆ ಹೋಗಿದ್ದಾಗ ರಾಣಾ ತಮಗಿರುವ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಬಾಲ್ಯದಲ್ಲೇ ಕಣ್ಣಿನ ಸಮಸ್ಯೆ ಇದ್ದು, ಯಾರೋ ಕಣ್ಣು ದಾನ ಮಾಡಿದ್ದರಂತೆ. ಆದರೆ ಆ ಕಣ್ಣಿನಿಂದಲೂ ನೋಡಲು ಸಾಧ್ಯವಿಲ್ಲ ಎಂದು ರಾಣಾ ಹೇಳಿಕೊಂಡಿದ್ದಾರೆ. ನಮ್ಮ ಸಮಸ್ಯೆಗಳು ನಮ್ಮ ಬೆಳವಣಿಗೆಗೆ ಯಾವತ್ತೂ ತೊಡಕಾಗಬಾರದು. ಅದನ್ನೆಲ್ಲ ಮೀರಿ ಅಂದುಕೊಂಡಿದ್ದನ್ನು ಸಾಧಿಸಬೇಕು ಎಂದಿದ್ದಾರೆ ರಾಣಾ.ರಾಣಾ ಅವರ ಈ ಹಳೇ ವಿಡಿಯೋ ಈಗ ವೈರಲ್​ ಆಗುತ್ತಿದೆ. ರಾಣಾ ಅವರ ಮದುವೆ ಹಾಗೂ ನಿಶ್ಚಿತಾರ್ಥದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವಾಗಲೇ ಈ ವಿಡಿಯೋ ಸಹ ಮತ್ತೆ ವೈರಲ್​ ಆಗುತ್ತಿದೆ.

Adah Sharma: ಹೊಸ ಚಾಲೆಂಜ್​ ಕೊಟ್ಟ ಅದಾ ಶರ್ಮಾ: ಹಾಟ್​ ಫೋಟೋಗಳು ವೈರಲ್​..!
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading