HOME » NEWS » Entertainment » RANA DAGGUBATI AND SAI PALLAVI STARRER MOVIE VIRAATA PARVAM WILL BE RELEASING ON APRIL 30TH AE

Viraata Parvam: ರಿವೀಲ್​ ಆಯ್ತು ರಾಣಾ ದಗ್ಗುಬಾಟಿ-ಸಾಯಿ ಪಲ್ಲವಿ ಅಭಿನಯದ ವಿರಾಟ ಪರ್ವಂ ಚಿತ್ರದ ರಿಲೀಸ್ ಡೇಟ್​

ಟಾಲಿವುಡ್​ನಲ್ಲಿ ನಕ್ಸಲ್​ ಹೋರಾಟದ ಜೊತೆ ಲವ್​ ಸ್ಟೋರಿ ಇರುವ ಚಿತ್ರಗಳಿಗೇನೂ ಕಡಿಮೆ ಇಲ್ಲ. ಇಂತಹದ್ದೇ ಸಿನಿಮಾಗಳ ಲಿಸ್ಟ್​ಗೆ ಸೇರಲಿದೆ ಈ ವಿರಾಟ ಪರ್ವಂ. ಈಗ ಎರಡು ಹೊಸ ಪೋಸ್ಟರ್​ಗಳ ಜೊತೆಗೆ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಿದೆ ಚಿತ್ರತಂಡ.

Anitha E | news18-kannada
Updated:January 29, 2021, 3:45 PM IST
Viraata Parvam: ರಿವೀಲ್​ ಆಯ್ತು ರಾಣಾ ದಗ್ಗುಬಾಟಿ-ಸಾಯಿ ಪಲ್ಲವಿ ಅಭಿನಯದ ವಿರಾಟ ಪರ್ವಂ ಚಿತ್ರದ ರಿಲೀಸ್ ಡೇಟ್​
ವಿರಾಟ ಪರ್ವಂ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಹಾಗೂ ಸಾಯಿ ಪಲ್ಲವಿ
  • Share this:
ಸಹಜ ಸುಂದರಿ ಸಾಯಿ ಪಲ್ಲವಿ ಹಾಗೂ ಟಾಲಿವುಡ್​ ಹಂಕ್​ ರಾಣಾ ದಗ್ಗುಬಾಟಿ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ವಿರಾಟ ಪರ್ವಂ. ವಿರಾಟ ಪರ್ವಂ ಸಿನಿಮಾ ಅನೌನ್ಸ್​ ಆದಾಗಿನಿಂದ ಸಿನಿಮಾ ನಾಯಕಿಯ ಆಯ್ಕೆ ಕುರಿತಾಗಿ ಸಾಕಷ್ಟು ಚರ್ಚೆಯಲ್ಲಿತ್ತು. ಈ ಸಿನಿಮಾದಲ್ಲಿ ರಾಣಾ ಜೊತೆ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ. ನಂತರದಲ್ಲಿ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರ ಹೆಸರು ಕೇಳಿಬಂತು. ನಕ್ಸಲ್​ ಹಿನ್ನಲೆಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ವೇಣು ಉಡುಗುಲ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್​ ರಿಲೀಸ್​ ಆದಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಅದರಲ್ಲೂ ನ್ಯಾಚುರಲ್​ ಬ್ಯೂಟಿ ಸಾಯಿ ಪಲ್ಲವಿ ಅವರನ್ನು ಪಕ್ಕಾ ಹಳ್ಳಿ ಹುಡುಗಿಯಂತೆ ಚಿತ್ರೀಕರಿಸಲಾಗಿದ್ದು, ಅವರ ದೇಸಿ ಲುಕ್​ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಇತ್ತೀಚೆಗಷ್ಟೆ ಅಂದರೆ ಸಂಕ್ರಾಂತಿ ಹಬ್ಬದಂದು ಹೊಸ ಪೋಸ್ಟರ್ ಜೊತೆಗೆ ಬೇಸಿಗೆಯಲ್ಲಿ ಸಿನಿಮಾ ರಿಲೀಸ್​ ಆಗಲಿದೆ ಎಂದು ಪ್ರಕಟಿಸಿತ್ತು ಚಿತ್ರತಂಡ. 

ಈಗಾಗಲೇ ಟಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ನಕ್ಸಲ್​ ಹಿನ್ನಲೆಯಲ್ಲಿ ನಿರ್ಮಾಣಗೊಂಡಿರುವ ಸಾಕಷ್ಟು ಸಿನಿಮಾಗಳು ಬಂದಿವೆ. ಟಾಲಿವುಡ್​ನಲ್ಲಿ ನಕ್ಸಲ್​ ಹೋರಾಟದ ಜೊತೆ ಲವ್​ ಸ್ಟೋರಿ ಇರುವ ಚಿತ್ರಗಳಿಗೇನೂ ಕಡಿಮೆ ಇಲ್ಲ. ಇಂತಹದ್ದೇ ಸಿನಿಮಾಗಳ ಲಿಸ್ಟ್​ಗೆ ಸೇರಲಿದೆ ಈ ವಿರಾಟ ಪರ್ವಂ. ಈಗ ಎರಡು ಹೊಸ ಪೋಸ್ಟರ್​ಗಳ ಜೊತೆಗೆ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸಿದೆ ಚಿತ್ರತಂಡ.





ಈಗಾಗಲೇ ಸಿನಿಮಾದ ಶೂಟಿಂಗ್​ ಪೂರ್ಣಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಏಪ್ರಿಲ್​ 30ಕ್ಕೆ ವಿರಾಟ ಪರ್ವಂ ರಿಲೀಸ್​ ಆಗಲಿದೆ. 1980-1990ರ ನಡುವೆ ತೆಲಂಗಾಣದಲ್ಲಿ ಇದ್ದ ಸಾಮಾಜಿಕ ಪರಿಸ್ಥಿತಿಯ ಚಿತ್ರಣವನ್ನು ನೀಡಲಿದೆ ವಿರಾಟ ಪರ್ವಂ. ಆಗಿನ ಪರಿಸ್ಥಿತಿ ಹಾಗೂ ನಡೆದ ಘಟನೆಗಳ ಆಧಾರದ ಮೇಲೆಯ ಈ ಸಿನಿಮಾದ ಕಥೆ ಬರೆಯಲಾಗಿದಯಂತೆ. ಇನ್ನು ಈ ಸಿನಿಮಾ ತೆಲುಗಿನ ಜೊತೆಗೆ ಹಿಂದಿ ಹಾಗೂ ತಮಿಳಿನಲ್ಲೂ ತೆರೆ ಕಾಣಲಿದೆ.






ಸಾಯಿ ಪಲ್ಲವಿ ಹಳ್ಳಿ ಹುಡುಗಿ ಸ್ಟೈಲ್​ನಲ್ಲಿ ಸೈಕಲ್​ ತುಳಿಯುತ್ತಿರುವ ಹೊಸ ಪೋಸ್ಟರ್ ಹಂಚಿಕೊಂಡಿರುವ ರಾಣಾ, ಸಹಜ ಸುಂದರಿಯ ಪಾತ್ರದ ಪರಿಚಯ ಮಾಡಿಕೊಟ್ಟಿದ್ದಾರೆ. ವೆನ್ನೆಲ್ಲ ಎಂಬ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Upasana Konidela: ಕೊರೋನಾ ಲಸಿಕೆ ಪಡೆದ ಉಪಾಸನಾ ಕೋನಿದೇಲ: ವ್ಯಾಕ್ಸಿನ್ ಪಡೆಯಲು ಹಿಂಜರಿಕೆ ಬೇಡ ಎಂದ ಮೆಗಾ ಸೊಸೆ

ಸಾಯಿ ಪಲ್ಲವಿ ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಗ ಚೈತನ್ಯ ಜೊತೆ ನಟಿಸಿರುವ ಲವ್ ಸ್ಟೋರಿ ಸಿನಿಮಾದ ಟೀಸರ್​ ಇತ್ತೀಚೆಗಷ್ಟೆ ರಿಲೀಸ್​ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನು ರಾಣಾ ಅಭಿನಯದ ಅರಣ್ಯ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟವಾಗಿದೆ.
Published by: Anitha E
First published: January 29, 2021, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories