HOME » NEWS » Entertainment » RANA DAGGUBATI AND MIHIKA WEDDING DATE FIXED HG

ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್​ ವಿವಾಹ ಯಾವಾಗ ಗೊತ್ತಾ?

ಬಾಹುಬಲಿ ಸಿನಿಮಾ ಖ್ಯಾತಿಯ ರಾಣಾ ಮೇ 12ರಂದು ಮಿಹಿಕಾರ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಅವರನ್ನು ವಿವಾಹವಾಗುತ್ತಿದ್ದೇನೆ ಎಂದಿದ್ದರು. ಏಪ್ರಿಲ್​​ 22ರಂದು ಹೈದರಾಬಾದ್​ನಲ್ಲಿ ಎಂಗೇಜ್​ಮೆಂಟ್​ ನಡೆಯಿತು. ವರ್ಷದ ಕೊನೆಯಲ್ಲಿ ವಿವಾಹವಾಗುವ ಸಾಧ್ಯತೆ ಇದೆ ಎಂದು ರಾಣಾ ಹೇಳಿದ್ದರು

news18-kannada
Updated:June 1, 2020, 11:47 AM IST
ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್​ ವಿವಾಹ ಯಾವಾಗ ಗೊತ್ತಾ?
ರಾಟಾ ದಗ್ಗುಬಾಟಿ -ಮಿಹಿಕಾ ಬಜಾಜ್
  • Share this:
ಟಾಲಿವುಡ್​ ನಟ ರಾಟಾ ದಗ್ಗುಬಾಟಿ ಗೆಳತಿ ಮಿಹಿಕಾ ಬಜಾಜ್​ ಅವರನ್ನು ಪ್ರೀತಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಅದಾದ ಕೆಲವು ದಿನಗಳ ನಂತರ ಇವರಿಬ್ಬರು ಎಂಜೇಗ್​ಮ್ಮೆಂಟ್​ ಕೂಡ ಆದರು. ಲಾಕ್​ಡೌನ್​ ಸಮಯದಲ್ಲಿ ಎರಡು ಕುಟುಂಬಗಳು ಸೇರಿ ಸಿಂಪಲ್ಲಾಗಿ ರಾಣಾ ಮತ್ತು ಮಿಹಿಕಾ ನಿಶ್ಚಿತಾರ್ಥ ನೆರವೇರಿತು. ಆದರೆ ಇವರ ವಿವಾಹ ಯಾವಾಗ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿರಲಿಲ್ಲ.

ಬಾಹುಬಲಿ ಸಿನಿಮಾ ಖ್ಯಾತಿಯ ರಾಣಾ ಮೇ 12ರಂದು ಮಿಹಿಕಾರ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಅವರನ್ನು ವಿವಾಹವಾಗುತ್ತಿದ್ದೇನೆ ಎಂದಿದ್ದರು. ಏಪ್ರಿಲ್​​ 22ರಂದು ಹೈದರಾಬಾದ್​ನಲ್ಲಿ ಎಂಜೇಗ್​ಮ್ಮೆಂಟ್​ ನಡೆಯಿತು. ವರ್ಷದ ಕೊನೆಯಲ್ಲಿ ವಿವಾಹವಾಗುವ ಸಾಧ್ಯತೆ ಇದೆ ಎಂದು ರಾಣಾ ಹೇಳಿದ್ದರು

ಇದೀಗ ಟಾಲಿವುಡ್​ನಲ್ಲಿ ಕೇಳಿ ಬಂದಿರುವ ಮಾಹಿತಿಗಳ ಪ್ರಕಾರ ರಾಣಾ ಮತ್ತು ಮಿಹಿಕಾ ಬಜಾಜ್​​ ಅಗಸ್ಟ್​ ತಿಂಗಳಿನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಅಗಸ್ಟ್ 8 ರಂದು ವಿವಾಹವಾಗುವ ಸಾಧ್ಯತೆ ಇದೆ. ಆದರೆ ರಾಣಾ ಕಡೆಯಿಂದ ಯಾವುದೇ ಪ್ರಕಟನೆ ಹೊರಬಿದ್ದಿಲ್ಲ.

ರಾಣಾ ‘ವಿರಾಟಪರ್ವ‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಆದರೆ ರಾಣಾ ವಿವಾಹವಾಗಿ ‘ವಿರಾಟ ಪರ್ವ‘ ಸಿನಿಮಾದ ಶೂಟಿಂಗ್​ ಮುಗಿಸಲಿದ್ದಾರಾ? ಅಥವಾ  ಸಿನಿಮಾ ಬಿಡುಗಡೆಗೊಂಡ ನಂತರ ವಿವಾಹವಾಗಲಿದ್ದಾರಾ ಎಂದು ಕಾದುನೋಡಬೇಕಿದೆ.

KSP Recruitment 2020: ಸಬ್ ಇನ್​​​​​ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
First published: May 31, 2020, 1:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories