• Home
  • »
  • News
  • »
  • entertainment
  • »
  • Ramya-Dhananjay: ಡಾಲಿಗೆ ಜೋಡಿಯಾಗ್ತಿದ್ದಾರೆ ಕ್ವೀನ್ ರಮ್ಯಾ!

Ramya-Dhananjay: ಡಾಲಿಗೆ ಜೋಡಿಯಾಗ್ತಿದ್ದಾರೆ ಕ್ವೀನ್ ರಮ್ಯಾ!

ರಮ್ಯಾ-ಡಾಲಿ ಧನಂಜಯ್

ರಮ್ಯಾ-ಡಾಲಿ ಧನಂಜಯ್

ನಟಿ ರಮ್ಯಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ನಟ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಮೋಹಕ ತಾರೆ. ಇಲ್ಲಿದೆ ಅಪ್ಡೇಟ್ಸ್.

  • News18 Kannada
  • Last Updated :
  • Bangalore, India
  • Share this:

ಸ್ಯಾಂಡಲ್​​ವುಡ್ (Sandalwood) ಮೋಹಕ ತಾರೆ ರಮ್ಯಾ (Ramya) ಅವರು ಯಾರ ಜೊತೆ ನಟಿಸುತ್ತಾರೆ ಎನ್ನುವ ಬಗ್ಗೆ ಭಾರೀ ಕುತೂಹಲವಿತ್ತು. ನಟಿ ರಮ್ಯಾ ಅವರ ಕಂ ಬ್ಯಾಕ್​​ಗಾಗಿ ಕಾಯುತ್ತಿದ್ದರು ಅಭಿಮಾನಿಗಳು. ನಟನೆಯಿಂದ ದೂರ ಸರಿದು ರಾಜಕೀಯಕ್ಕೆ (Politics) ಎಂಟ್ರಿ ಕೊಟ್ಟು ನಂತರ ಅಲ್ಲಿಂದಲೂ ದೂರ ಸರಿದು ಸಿನಿಮಾ, ರಾಜಕೀಯ ಯಾವುದೂ ಬೇಡ ಎಂದು ಸ್ವಲ್ಪ ಸಮಯ ಸೈಲೆಂಟಾಗಿದ್ದ ಸ್ಯಾಂಡಲ್​ವುಡ್ (Sandalwood) ಕ್ವೀನ್ ಆಮೇಲೆ ಸೋಷಿಯಲ್ ಮೀಡಿಯಾದಲ್ಲಿ  (Social Media) ಸ್ವಲ್ಪ ಆ್ಯಕ್ಟಿವ್ ಆದರು. ಹೆಚ್ಚಾಗಿ ಇವೆಂಟ್​​ಗಳಲ್ಲಿ, ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಆದರೂ ರಮ್ಯಾ ಅವರು ತೆರೆ ಮೇಲೆ ಬರಬೇಕೆಂಬ ಅಭಿಮಾನಿಗಳ ಆಸೆ ಮಾತ್ರ ನೆರವೇರಲಿಲ್ಲ.


ಹೀಗಿದ್ದಾಗಲೇ ರಮ್ಯಾ ಅವರ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಸುದ್ದಿಯಾಯಿತು. ರಾಜ್. ಬಿ ಶೆಟ್ಟಿ ಅವರಿಗೆ ರಮ್ಯಾ ಜೋಡಿಯಾಗಿ ತೆರೆ ಮೇಲೆ ಬರುತ್ತಿದ್ದಾರೆ ಎನ್ನುವ ಸುದ್ದಿ ಸಖತ್ ಥ್ರಿಲ್ಲಿಂಗ್ ಆಗಿತ್ತು. ಇನ್ನೇನು ಎಲ್ಲವೂ ಓಕೆ, ಶೂಟಿಂಗ್ ಶುರುವಾಗಬೇಕು ಎನ್ನುವಾಗ ರಮ್ಯಾ ಸಿನಿಮಾದಿಂದ ಹೊರಬಂದರು.
ಈಗ ಮತ್ತೆ ಗುಡ್​ನ್ಯೂಸ್ ಕೊಟ್ಟಿದ್ದಾರೆ ರಮ್ಯಾ. ಮೋಹಕ ತಾರೆ ನಟ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಉತ್ತರಾಕಾಂಡ ಸಿನಿಮಾಗಾಗಿ ಇವರಿಬ್ಬರೂ ತೆರೆಯ ಮೇಲೆ ಒಂದಾಗುತ್ತಿದ್ದು ಸ್ಯಾಂಡಲ್​ವುಡ್ ಕ್ವೀನ್ ಜೊತೆ ಡಾಲಿ ಸ್ಕ್ರಿನ್ ಶೇರ್ ಮಾಡಲಿದ್ದಾರೆ.


Will ramya get back to politics career tweet creating buzz mrq
ನಟಿ ರಮ್ಯಾ


ಮುಹೂರ್ತದಲ್ಲಿ ಭಾಗಿಯಾದ ರಮ್ಯಾ


ನಟಿ ರಮ್ಯಾ ಧನಂಜಯ್ ಜೊತೆ ಕಂ ಬ್ಯಾಕ್ ಮಾಡುತ್ತಾರೆನ್ನುವ ಸುದ್ದಿ ಕೇಳಿ ಬಂದಿತ್ತು. ಈಗ ಆ ವಿಚಾರ ನಿಜವಾಗಿದೆ. ಧನಂಜಯ್ ಅವರ ಜೊತೆ ಉತ್ತರಾಕಾಂಡ ಸಿನಿಮಾ ಮೂಲಕ ರಮ್ಯಾ ಹೀರೋಯಿನ್ ಆಗಿ ಕಂ ಬ್ಯಾಕ್ ಮಾಡುತ್ತಿದ್ದಾರೆ. ಭಾನುವಾರ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮದಲ್ಲಿ ರಮ್ಯಾ ಭಾಗಿಯಾಗಿದ್ದಾರೆ. ಈಗ ರಮ್ಯಾ-ಧನಂಜಯ್ ಫೊಟೋ ಎಲ್ಲೆಡೆ ವೈರಲ್ ಆಗಿದೆ.
ಈ ಬಗ್ಗೆ ನಟ ಧನಂಜಯ್ ಅವರೂ ಟ್ವೀಟ್ ಮಾಡಿದ್ದು ಸುದ್ದಿಯನ್ನು ದೃಢಪಡಿಸಿದ್ದಾರೆ. “ಉತ್ತರಕಾಂಡ” ಮುಹೂರ್ತ ಸಮಾರಂಭ. “ರತ್ನನ್ ಪ್ರಪಂಚ” ತಂಡದೊಂದಿಗೆ ಮತ್ತೊಂದು ವಿಶೇಷ ಪ್ರಯತ್ನ ಎಂದು ನಟ ಟ್ವೀಟ್ ಮಾಡಿ ಫೋಟೋಸ್ ಶೇರ್ ಮಾಡಿದ್ದಾರೆ.ಸಿನಿಮಾ ಮೂಹರ್ತ ಕಾರ್ಯಕ್ರಮದಲ್ಲಿ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್​ಕುಮಾರ್ ಸೇರಿ ಗಣ್ಯರು ಭಾಗಿಯಾಗಿದ್ದರು. ವಿಜಯ್ ಕಿರಗಂದೂರು ಅರ್ಪಿಸುವ ಈ ಸಿನಿಮಾವನ್ನು ಕೆಆರ್​ಜಿ ಸ್ಟುಡಿಯೋಸ್ ಸಂಸ್ಥೆ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ನಿರ್ಮಿಸುತ್ತಿದ್ದಾರೆ.
ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದು ಇದು ಧನಂಜಯ್ ಹಾಗೂ ರೋಹಿತ್ ಕಾಂಬಿನೇಷನ್​​ನ ಎರಡನೇ ಸಿನಿಮಾ ಆಗಿದೆ. ಇದಕ್ಕೂ ಮುನ್ನ ಇವರ ರತ್ನನ್ ಪ್ರಪಂಚ ಸಿನಿಮಾ ಹಿಟ್ ಆಗಿತ್ತು.
ನಿರ್ಮಾಪಕಿಯಾಗಿ ರಮ್ಯಾ


ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದಿಂದ ರಮ್ಯಾ ಹೀರೋಯಿನ್ ಆಗಿ ಹೊರಬಂದರೂ ಅವರು ಸಿನಿಮಾಗೆ ನಿರ್ಮಾಪಕಿಯಾಗಿದ್ದಾರೆ. ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಮೂಲಕ ಅವರು ನಿರ್ಮಿಸುವ ಮೊದಲ ಸಿನಿಮಾ ಇದಾಗಿದ್ದು ಇದರಲ್ಲಿ ರಾಜ್ ಬಿ. ಶೆಟ್ಟಿ ಹಾಗೂ ಸಿರಿ ರವಿಕುಮಾರ್ ಅಭಿನಯಿಸುತ್ತಿದ್ದಾರೆ.

Published by:Divya D
First published: