Puneeth Rajkumar​ ಜೊತೆ Come Back ಮಾಡುವ ಮಾತುಕತೆ ಮಾಡಿದ್ದ ನಟಿ ರಮ್ಯಾ..!

ಪುನೀತ್​ ರಾಜ್​ ಕುಮಾರ್​ ಅವರ ಜತೆಗೆ ರಮ್ಯಾ/ದಿವ್ಯಸ್ಪಂದನಾ ಅವರು ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದು.  2003ರಲ್ಲಿ ತೆರೆಕಂಡಿದ್ದ ಅಭಿ ಚಿತ್ರದಲ್ಲಿ ರಮ್ಯಾ ಅವರು ಪುನೀತ್​ ರಾಜ್​ಕುಮಾರ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಮೂಲಕ ಕನ್ನಡಿಗರಿಗೆ ನಾಯಕಿಯಾಗಿ ರಮ್ಯಾ ಪರಿಚಯವಾದರು. ಇಂತಹ ನಟನ ಜೊತೆಗೆ ಮತ್ತೆ ಕಮ್​ಬ್ಯಾಕ್​ ಮಾಡುವ ಆಲೋಚನೆ ಇತ್ತಂತೆ ಈ ನಟಿಗೆ.

ಅಭಿ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್ ಹಾಗೂ ರಮ್ಯಾ

ಅಭಿ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್ ಹಾಗೂ ರಮ್ಯಾ

  • Share this:
ಕನ್ನಡದ ಮೋಹಕ ತಾರೆ ರಮ್ಯಾ ಸಿನಿರಂಗದಿಂದ ದೂರಾಗಿ ತುಂಬಾ ಸಮಯವಾಗಿದೆ. ಆದರೂ ಈ ನಟಿಗೆ ದೊಡ್ಡ ಅಭಿಮಾನಿಗಳವೇ ಇದೆ. ಇನ್ನೂ ಸಹ ಇವರು ಯಾವಾಗ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಅಂತ ಸಿನಿಪ್ರಿಯರು ಕಾಯುತ್ತಿದ್ದಾರೆ. ಈ ಹಿಂದೆಯೇ ಸಿನಿಮಾ ತನ್ನ ಜೀವನದಲ್ಲಿ ಮುಗಿದ ಅಧ್ಯಾಯ ಎಂದಿದ್ದ ರಮ್ಯಾ ಅವರು ಇಂದು ಮತ್ತೆ ತಮ್ಮ ಕಮ್​ಬ್ಯಾಕ್​ ವಿಷಯದ ಬಗ್ಗೆ ಮಾತನಾಡಿದ್ದಾರೆ. ಹೌದು, ಪುನೀತ್ ರಾಜ್​ಕುಮಾರ್​ ಅವರ ಅಗಲಿಕೆಯ ದುಃಖದಲ್ಲಿರುವ ನಟಿ, ನಟನ ಕುರಿತಾಗಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ತಮ್ಮ ಕಮ್​ಬ್ಯಾಕ್​ ಹಾಗೂ ಪುನೀತ್​ ಅವರ ಜತೆಗೆ ಮಾಡಲು ಬಯಸಿದ್ದ ಸಿನಿಮಾ ಬಗ್ಗೆಯೂ ಸುದ್ದಿ ಮಾಧ್ಯಮದ ಜತೆ ಮಾತನಾಡುತ್ತಾ ನೋವಿನಿಂದ ನೆನಪಿಸಿಕೊಂಡಿದ್ದಾರೆ. 

ಹೌದು, ಪುನೀತ್​ ರಾಜ್​ ಕುಮಾರ್​ ಅವರ ಜತೆಗೆ ರಮ್ಯಾ/ದಿವ್ಯಸ್ಪಂದನಾ ಅವರು ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದು.  2003ರಲ್ಲಿ ತೆರೆಕಂಡಿದ್ದ ಅಭಿ ಚಿತ್ರದಲ್ಲಿ ರಮ್ಯಾ ಅವರು ಪುನೀತ್​ ರಾಜ್​ಕುಮಾರ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಮೂಲಕ ಕನ್ನಡಿಗರಿಗೆ ನಾಯಕಿಯಾಗಿ ರಮ್ಯಾ ಪರಿಚಯವಾದರು. ಇಂತಹ ನಟನ ಜೊತೆಗೆ ಮತ್ತೆ ಕಮ್​ಬ್ಯಾಕ್​ ಮಾಡುವ ಆಲೋಚನೆ ಇತ್ತಂತೆ ಈ ನಟಿಗೆ.

ಹೌದು, ಪುನೀತ್​ ರಾಜ್​ಕುಮಾರ್​ ಅವರ ಜೊತೆ ಸಿನಿಮಾ ಮಾಡುವ ಆಲೋಚನೆ ಇತ್ತು. ಈ ಕುರಿತಾಗಿ ನಾನು ಮತ್ತು ಪುನೀತ್ ರಾಜ್​ಕುಮಾರ್ ಚರ್ಚಿಸಿದ್ದೆವು ಎಂದು ರಮ್ಯಾ ಹೇಳಿಕೊಂಡಿದ್ದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: RIP Puneeth Rajkumar: ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ..!

'ಅಪ್ಪು' ಸಿನಿಮಾದ ನಂತರ ಪುನೀತ್ ಅಭಿನಯಿಸಿದ ಚಿತ್ರ 'ಅಭಿ'. ಈ ಸಿನಿಮಾವನ್ನು ದಿನೇಶ್‌ ಬಾಬು ಅವರು ನಿರ್ದೇಶನ ಮಾಡಿದ್ದು, ಪುನೀತ್​ ರಾಜ್​ಕುಮಾರ್ ಅವರ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್ ಅವರು ನಿರ್ಮಿಸಿದ್ದಾರೆ. ಮಕ್ಕಳ ಸಿನಿಮಾಗಳಿಗೆ ಹೊಸ ಹೊಸ ನಾಯಕಿಯರನ್ನ ಪರಿಚಯಿಸುತ್ತಿದ್ದ ಪಾರ್ವತಮ್ಮ ಅವರು ರಮ್ಯಾ ಅವರನ್ನು ತಾವೇ ಆಯ್ಕೆ ಮಾಡಿದ್ದರು. ಆಗಲೇ ದಿವ್ಯಸ್ಪಂದನಾ ಆಗಿದ್ದವರು ರಮ್ಯಾ ಆಗಿದ್ದು. ಆಗಲೇ ಅವರಿಗೆ ರಮ್ಯಾ ಎಂಬ ಹೊಸ ಹೆಸರು ನೀಡಲಾಯಿತು. ದೊಡ್ಡ ಬ್ಯಾನರ್​, ಸ್ಟಾರ್​ ನಟನ ಜೊತೆ ಎಂಟ್ರಿ ಕೊಟ್ಟ ರಮ್ಯಾ ನಂತರದಲ್ಲಿ ಟಾಪ್​ ನಟಿಯಾಗಿ ಮಿಂಚಿದರು.

 ಹಿಟ್ ಆಗಿತ್ತು ಅಭಿ ಸಿನಿಮಾ

2003ರಲ್ಲಿ ತೆರೆಕಂಡ 'ಅಭಿ' ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್​ ಮಾಡುವ ಮೂಲಕ ಜೋರಾಗಿ ಸದ್ದು ಮಾಡಿತ್ತು. ಅಷ್ಟೇ ಅಲ್ಲದೆ  25 ವಾರ ಯಶಸ್ವಿ ಪ್ರದರ್ಶನ ಕಂಡಿತ್ತು. ಅದೇ ವರ್ಷ 'ಅಭಿ' ತೆಲುಗಿಗೆ 'ಅಭಿಮನ್ಯು' ಹೆಸರಲ್ಲಿ ರಿಮೇಕ್ ಸಹ ಆಗಿತ್ತು. ಅದರಲ್ಲಿ ಹೀರೋ ಆಗಿ ನಂದಮೂರಿ ಕಲ್ಯಾಣ್ ರಾಮ್ ನಟಿಸಿದ್ದರು. ವಿಶೇಷವೆಂದರೆ, ರಿಮೇಕ್‌ನಲ್ಲೂ ನಾಯಕಿಯಾಗಿ ರಮ್ಯಾ ನಟಿಸಿದ್ದರು. ಅದೇ ಅವರ ಮೊದಲ ಹಾಗೂ ಕೊನೆಯ ತೆಲುಗು ಚಿತ್ರವಾಗಿತ್ತು. ಆನಂತರ ರಮ್ಯಾ ಅವರು ಕನ್ನಡ ಹಾಗೂ ತಮಿಳಿನಲ್ಲಿ ಬ್ಯುಸಿಯಾದರು.




ರಮ್ಯಾ ಅವರು ಪುನೀತ್ ಅಗಲಿಕೆಗೆ ಇನ್​ಸ್ಟಾಗ್ರಾಂನಲ್ಲಿ ಭಾರವಾದ ಮನಸ್ಸಿನಿಂದ ಒಂದು ಪೋಸ್ಟ್​ ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ಆತ ನನಗೆ ಅತ್ಯಂತ ಆಪ್ತ ಸ್ನೇಹಿತ. ಅಪ್ಪು ನೀವು ಎಂದೆಂದಿಗೂ ಮಾಸದ ನೆನಪು. ಸದಾ ನನ್ನ ನೆನಪಿನಲ್ಲಿ ಎಂದೆಂದೂ ಇರುವಿರಿ ಅಪ್ಪು ಎಂದು ನೋವಿನಿಂದ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಅಪ್ಪನಂತೆಯೇ ನೇತ್ರದಾನ ಮಾಡಿದ ಅಪ್ಪು: ಇಲ್ಲಿವೆ Puneeth Rajkumarರ ಅಪರೂಪದ ಚಿತ್ರಗಳು

ಆದರೆ ಈಗ ಸಿನಿರಂಗಕ್ಕೆ ಕಮ್​ಬ್ಯಾಕ್​ ಮಾಡುವ ಆಲೋಚನೆಯಲ್ಲಿದ್ದ ರಮ್ಯಾ ಅವರ ಕನಸು ಕನಸಾಗಿಯೇ ಉಳಿಯಿತು. ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದ ಪುನೀತ್​ ರಾಜ್​ಕುಮಾರ್​ ಅವರ ಜೊತೆಯಲ್ಲೇ ರೀ-ಎಂಟ್ರಿ ಮಾಡುವ ಪ್ಲಾನ್​ ಸಹ ಇತ್ತು. ಆದರೆ ಇದೆಲ್ಲ ಇನ್ನು ಕನಸಷ್ಟೆ.
Published by:Anitha E
First published: