• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Ramya: ಸಚಿವೆ ಮಾಡುವುದಾಗಿ ನಟಿ ರಮ್ಯಾಗೆ ಆಫರ್ ಕೊಟ್ಟ ಬಿಜೆಪಿ! ಕಾಂಗ್ರೆಸ್​ಗೆ ಕೈ ಕೊಟ್ಟು ಕಮಲ ಹಿಡಿತಾರಾ 'ಪದ್ಮಾವತಿ'?

Ramya: ಸಚಿವೆ ಮಾಡುವುದಾಗಿ ನಟಿ ರಮ್ಯಾಗೆ ಆಫರ್ ಕೊಟ್ಟ ಬಿಜೆಪಿ! ಕಾಂಗ್ರೆಸ್​ಗೆ ಕೈ ಕೊಟ್ಟು ಕಮಲ ಹಿಡಿತಾರಾ 'ಪದ್ಮಾವತಿ'?

ನಟಿ ರಮ್ಯಾ

ನಟಿ ರಮ್ಯಾ

ಸಂದರ್ಶನದಲ್ಲಿ ಮಾತಾಡಿದ ನಟಿ ರಮ್ಯಾ ಬಿಜೆಪಿಯಿಂದಲೂ ಆಫರ್ ಬಂದಿತ್ತು, ಸಚಿವೆ ಮಾಡುವ ಆಫರ್ ಅನ್ನು ಸಹ ನೀಡಿದ್ರು ಎಂದಿದ್ದಾರೆ.

 • News18 Kannada
 • 2-MIN READ
 • Last Updated :
 • Karnataka, India
 • Share this:

ಹಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ (Sandalwood Queen Ramya) ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಜತೆಗೆ 'ಆಪಲ್ ಬಾಕ್ಸ್ ಸ್ಟುಡಿಯೋಸ್' ನಿರ್ಮಾಣ ಸಂಸ್ಥೆ ಮೂಲಕ ಹೊಸ ಸಿನಿಮಾಗಳ (New Movie) ನಿರ್ಮಾಣಕ್ಕೆ ಮುಂದಾಗಿದ್ದಾರೆ. ರಾಜ್ಯ ರಾಜಕೀಯದಿಂದಲೂ ದೂರ ಉಳಿದಿದ್ದ ರಮ್ಯಾ ಇದೀಗ ಮತ್ತೆ ರಾಜಕೀಯದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ವಿಧಾನಸಭೆ ಚುನಾವಣಾ (Assembly Election) ಅಖಾಡಕ್ಕೆ ನಟಿ ರಮ್ಯಾ ಅವರನ್ನು ಇಳಿಸಲು ರಾಜಕೀಯ ಪಕ್ಷಗಳು ನಾನಾ ರಣತಂತ್ರ ರೂಪಿಸಿತ್ತು. ಕಾಂಗ್ರೆಸ್​ ಪಕ್ಷ ನಟಿ ರಮ್ಯಾಗೆ 6 ಕ್ಷೇತ್ರಗಳ ಟಿಕೆಟ್ ಆಫರ್ ಕೊಟ್ಟಿದ್ರೆ. ಬಿಜೆಪಿ ದೊಡ್ಡ ಆಮಿಷವನ್ನೇ ನಟಿ ರಮ್ಯಾ ಮುಂದಿಟ್ಟಿದೆ. 


ಕಾಂಗ್ರೆಸ್​ನಿಂದ 6 ಕ್ಷೇತ್ರಗಳ​ ಟಿಕೆಟ್​  


ಕಾಂಗ್ರೆಸ್​ ಪಕ್ಷದಿಂದಲೇ  ಲೋಕಸಭೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದೆಯಾಗಿದ್ದ ನಟಿ ರಮ್ಯಾ ಅವರನ್ನು ಈ ಬಾರಿ ವಿಧಾನಸಭಾ ಚುನಾವಣೆ ಅಖಾಡಕ್ಕಿಳಿಸಲು ಕಾಂಗ್ರೆಸ್ ನಾನಾ ಕಸರತ್ತು ಮಾಡಿತು. ಕಾಂಗ್ರೆಸ್ ರಮ್ಯಾಗೆ ಟಿಕೆಟ್ ಸಹ ಆಫರ್ ಮಾಡಿತ್ತು, ಅಲ್ಲದೆ ಬರೋಬ್ಬರಿ ಆರು ಕ್ಷೇತ್ರದ ಆಯ್ಕೆಯನ್ನು ನೀಡಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿತ್ತು ಎಂದು ನಟಿ ರಮ್ಯಾ ಅವರೇ ಹೇಳಿದ್ದಾರೆ.


ನಟಿ ರಮ್ಯಾ


ಬಿಜೆಪಿ ಕೊಟ್ಟಿದೆ ಸಚಿವೆ ಮಾಡುವ ಆಫರ್


ಸಂದರ್ಶನದಲ್ಲಿ ಮಾತಾಡಿದ ನಟಿ ರಮ್ಯಾ ಬಿಜೆಪಿಯಿಂದಲೂ ಆಫರ್ ಬಂದಿತ್ತು ಎಂದಿದ್ದಾರೆ. ಬಿಜೆಪಿಯಿಂದಲೂ ಟಾಪ್ ಹಂತದ ವ್ಯಕ್ತಿಯೇ ನೇರವಾಗಿ ನನ್ನ ಬಳಿ ಮಾತನಾಡಿ ಪಕ್ಷಕ್ಕೆ ಆಹ್ವಾನಿಸಿದರು. ಸಚಿವೆ ಮಾಡುವ ಆಫರ್ ಅನ್ನು ಸಹ ನೀಡಿತ್ತು ಎಂದು ರಮ್ಯಾ ಹೇಳಿದ್ದಾರೆ.


ಬಿಜೆಪಿ ನಾಯಕರಿಂದ ರಮ್ಯಾಗೆ ಆಹ್ವಾನ


ನಾನು ಕೆಲವು ಬಾರಿ ಕಾಂಗ್ರೆಸ್​ನ ಕೆಲ ನಡೆಗಳನ್ನು ಟೀಕಿಸಿದ್ದಾಗ, ನನಗೂ ಕಾಂಗ್ರೆಸ್​ಗೂ ಭಿನ್ನಮತ ಇದೆ ಎಂದು ಅವರು ಭಾವಿಸಿದ್ದರು ಹಾಗಾಗಿ ಬಿಜೆಪಿ ನಾಯಕರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದರು ಎಂದು ರಮ್ಯಾ ಹೇಳಿದ್ದಾರೆ.


ಜೆಡಿಎಸ್​ನಿಂದಲೂ ಬಂದಿತ್ತು ರಮ್ಯಾಗೆ ಆಫರ್​


ಜೆಡಿಎಸ್ ಪಕ್ಷದಿಂದಲೂ ನನಗೆ ಆಫರ್ ಬಂದಿತ್ತು ಎಂದು ರಮ್ಯಾ ಹೇಳಿದ್ದಾರೆ. ಕುಮಾರಸ್ವಾಮಿ ಹಾಗೂ ನಾನೂ ಆಕಸ್ಮಿಕವಾಗಿ ಸೆಲೂನ್ ಒಂದರಲ್ಲಿ ಭೇಟಿಯಾದೆವು. ಪ್ರೀತಿಯಿಂದ ಮಾತಾಡಿಸಿದ ಕುಮಾರಸ್ವಾಮಿ ಅವರು ರಾಜಕೀಯದ ಬಗ್ಗೆ ಮಾತಾಡಿದ್ರು. ನೀವು ರಾಜಕೀಯದಿಂದ ದೂರ ಇರಬಾರದು, ನಿಮಗೆ ಶಕ್ತಿ, ಬುದ್ಧಿ ಇದೆ ನೀವು ಹೀಗೆ ಸುಮ್ಮನೆ ಕೂರುವುದು ಸರಿಯಲ್ಲ ಎಂದು ಹೇಳಿದ್ರು. ಕುಮಾರಸ್ವಾಮಿ ಅವರು ಕೂಡ ಸಕ್ರಿಯರಾಗುವಂತೆ ಒತ್ತಿ ಒತ್ತಿ ಹೇಳುತ್ತಿದ್ದರು ಎಂದು ರಮ್ಯಾ ಹೇಳಿದ್ದಾರೆ.


ನಾನು ಕಾಂಗ್ರೆಸ್​ನಿಂದ ದೂರವಾಗಿಲ್ಲ


ಕಾಂಗ್ರೆಸ್ ಪಕ್ಷದ ಸ್ಟಾರ್​ ಪ್ರಚಾರಕಿ ರಮ್ಯಾ ಅವರು ನಾನು ಕಾಂಗ್ರೆಸ್​ನಿಂದ ದೂರಾಗಿಲ್ಲ. ಕೆಲವು ವಿಷಯಗಳ ಬಗ್ಗೆ ಕೆಲವು ನಾಯಕರ ನಿರ್ದಿಷ್ಟ ಹೇಳಿಕೆಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದೆ ಅಷ್ಟೆ. ಅಲ್ಲದೆ ಈ ಬಾರಿ ಕೆಸಿ ವೇಣುಗೋಪಾಲ್ ಹಾಗೂ ಸುರ್ಜೆವಾಲಾ ಅವರುಗಳು ನನ್ನನ್ನು ಸಂಪರ್ಕಿಸಿ ಪ್ರಚಾರ ಮಾಡುವಂತೆ ಕೇಳಿದರು. ನಾನು ಸಹ ಒಪ್ಪಿಕೊಂಡಿದ್ದೇನೆ. ಪ್ರಚಾರ ಮಾಡಿ ಯಾರನ್ನಾದರೂ ಗೆಲ್ಲಿಸಲು ಸಾಧ್ಯವಾಯಿತೆಂದರೆ ಅದು ನನ್ನ ಪರವಾಗಿ ಮಾಡಿದ ಸೇವೆ ಎಂದು ಭಾವಿಸುತ್ತೇನೆ ಎಂದು ರಮ್ಯಾ.
ರಾಜಕೀಯ ಕ್ಷೇತ್ರದಲ್ಲಿ ರಮ್ಯಾ  


ರಮ್ಯಾ ಅವರು ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ರಾಜಕೀಯ ಕ್ಷೇತ್ರದಲ್ಲೂ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಇವರು 2011 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು 2013ರ ಉಪಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮೊದಲ ಬಾರಿಗೆ ಲೋಕಸಭಾ ಪ್ರವೇಶ ಮಾಡಿದರು.

top videos
  First published: