Ramya: ಮೃಗಾಲಯ-ಸಫಾರಿಗಳಿಗೆ ಹೋಗುವುದನ್ನು ನಿಲ್ಲಿಸಿ ಎಂದ ರಮ್ಯಾ: ವನ್ಯಜೀವಿಗಳ ಪರ ದನಿ ಎತ್ತಿದ ನಟಿ..!

ಹೆಣ್ಣಾನೆಯ ಸಾವಿಗೆ ಕಂಬನಿ ಮಿಡಿದಿರುವ ನಟಿ ರಮ್ಯಾ, ವನ್ಯಜೀವಿಗಳ ಮೇಲೆ ಮನುಷ್ಯ ಯಾವೆಲ್ಲ ರೀತಿ ದೌರ್ಜನ್ಯವೆಸಗುತ್ತಿದ್ದಾನೆ ಎಂದು ವಿವರಿಸುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ. ವನ್ಯಜೀವಿಗಳ ಮನೆ, ಜಾನ, ನೀರು ಎಲ್ಲವನ್ನೂ ಕಿತ್ತುಕೊಳ್ಳುತ್ತಿರುವ ಮನುಷ್ಯ, ಅವುಗಳನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ನಟಿ ರಮ್ಯಾ

ನಟಿ ರಮ್ಯಾ

  • Share this:
ನಟಿ ರಮ್ಯಾ ಸಿನಿಮಾಗಳಿಂದ ಕೊಂಚ ದೂರವಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ರಮ್ಯಾ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಇನ್​ಸ್ಟಾಗ್ರಾಂ ಹಾಗೀ ಟ್ವಿಟರ್​ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಪ್ರಾಣಿಗಳ ಮೇಲಿನ ದೌರ್ಜನ್ಯ ಹಾಗೂ ಕ್ರೌರ್ಯವನ್ನು ಖಂಡಿಸುತ್ತಾ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ಪೋಸ್ಟ್​ ಮಾಡುತ್ತಿರುತ್ತಾರೆ. ಸಾಕು ಪ್ರಾಣಿ ಇರಲಿ, ವನ್ಯಜೀವಿಗಳಿರಲಿ, ಯಾವುದೇ ಜೀವಿಗಳ ವಿಷಯವಾಗಲಿ ರಮ್ಯಾ ಮೊದಲು ಅವರ ದನಿಯಾಗಲು ಬಯಸುತ್ತಾರೆ. ಇಂತಹ ಪ್ರಾಣಿ ಪ್ರೇಮಿ ರಮ್ಯಾ ಈಗ ಮತ್ತೊಮ್ಮೆ ವನ್ಯಜೀವಿಗಳ  ಪರ ದನಿ ಎತ್ತಿದ್ದಾರೆ. ಇತ್ತೀಚೆಗಷ್ಟೆ ತಮಿಳುನಾಡಿನಲ್ಲಿ ಆನೆಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದರು. ಅದರ ಪರಿಣಾಮದಿಂದ  ಆನೆ ಮೃತಪಟ್ಟಿದ್ದು, ಈ ಘಟನೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲೇ ಆರೋಪಿಗಳನ್ನು ಬಂಧಿಸುವಂತೆ ಅಭಿಯಾನ ಆರಂಭಿಸಲಾಗಿತ್ತು. ರಮ್ಯಾ ಸಹ ಈ ವಿಷಯವಾಗಿಯೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. 

ಹೆಣ್ಣಾನೆಯ ಸಾವಿಗೆ ಕಂಬನಿ ಮಿಡಿದಿರುವ ನಟಿ ರಮ್ಯಾ, ವನ್ಯಜೀವಿಗಳ ಮೇಲೆ ಮನುಷ್ಯ ಯಾವೆಲ್ಲ ರೀತಿ ದೌರ್ಜನ್ಯವೆಸಗುತ್ತಿದ್ದಾನೆ ಎಂದು ವಿವರಿಸುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ. ವನ್ಯಜೀವಿಗಳ ಮನೆ, ಜಾಗ, ಆಹಾರ, ನೀರು ಎಲ್ಲವನ್ನೂ ಕಿತ್ತುಕೊಳ್ಳುತ್ತಿರುವ ಮನುಷ್ಯ, ಅವುಗಳನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Actress Ramya post, Wildlife photography, Animals love, Ramya instagram post, ನಟಿ ರಮ್ಯಾ, ವನ್ಯಜೀವಿ ಚಿತ್ರೀಕರಣ, ಪ್ರಾಣಿ ಪ್ರೇಮ, ರಮ್ಯಾ ಇನ್‌ಸ್ಟಾಗ್ರಾಂ ಪೋಸ್ಟ್, Elephant,Ramya,Ramya Divya Spandana,Social Media,ಆನೆ,ರಮ್ಯಾ,ದಿವ್ಯಾ ಸ್ಪಂದನಾ,ಸೋಶಿಯಲ್ ಮೀಡಿಯಾB
ರಮ್ಯಾ ಅವರ ಇನ್​ಸ್ಟಾಗ್ರಾಂ ಸ್ಟೋರೀಸ್​


ಎಲ್ಲ ಸರಿಯಾಗಿದೆ ಅನ್ನೋ ಭ್ರಮೆಯಲ್ಲಿ ಜೀವಿಸುವುದನ್ನು ಬಿಡಬೇಕು. ಇಡೀ ಭೂಮಂಡಲವನ್ನೇ ಹಾಳು ಮಾಡುತ್ತಿರುವ ನಾವು, ಸತ್ಯವನ್ನು ಅರಿತುಕೊಂಡು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಇನ್ನು ವನ್ಯಜೀವಿಗಳನ್ನು ಅವುಗಳ ಪಾಡಿಗೆ ಇರಲು ಬಿಡಬೇಕು. ಅವುಗಳಿಗೆ ಬೇಕಾಗಿರುವುದು ಅವರ ಜಾಗ, ಪ್ರೀತಿ ಹಾಗೂ ಗೌರವ. ಅದನ್ನು ಕೊಟ್ಟರೆ ಸಾಕು. ಅವುಗಳನ್ನು ನೋಡಲು ಮೃಗಾಲಯ ಹಾಗೂ ಸಫಾರಿಗಳಿಗೆ ಹೋಗುವುದನ್ನು ನಿಲ್ಲಿಸಿ. ಅವುಗಳು ಮನುಷ್ಯರನ್ನು ನೋಡಲು ಇಷ್ಟ ಪಡೋದಿಲ್ಲ ಎಂದು ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಮನವಿ ಮಾಡಿದ್ದಾರೆ.
ಇನ್ನು ರಮ್ಯಾ ಕಳೆದ ಒಂದು ವರ್ಷದಿಂದ ಸಸ್ಯಾಹಾರಿಯಾಗಿ ಬದಲಾಗಿದ್ದಾರೆ. ಅವರಿಗೆ ತಮ್ಮ ಜೀವನವನ್ನು ಖುಷಿಯಿಂದ ಸಾಗಿಸಲು ಮಾಂಸಾಹಾರದ ಅಗತ್ಯ ಇಲ್ಲ ಎನ್ನುವುದು ಅರಿವಾಗಿದೆಯಂತೆ.


ತಾವು ಸಸ್ಯಾಹಾರಿಯಾದ ನಂತರ ತಮ್ಮ ಒಂದು ವಿಡಿಯೋ ಹಂಚಿಕೊಂಡು ಅದರ ಬಗ್ಗೆ ಅಭಿಮಾನಿಳೊಂದಿಗೆ ಹಂಚಿಕೊಂಡಿದ್ದರು. ಪ್ರಾಣಿ ಪ್ರೇಮಿಯಾಗಿರುವ ರಮ್ಯಾ ಆಗಾಗ ತಮ್ಮ ಸಾಕು ನಾಯಿಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
Published by:Anitha E
First published: