ನಟಿ (Actress) ಪವಿತ್ರಾ ಲೋಕೇಶ್ (Pavitra Lokesh), ತೆಲುಗು ನಟ (Telugu Actor) ನರೇಶ್ (Naresh) ಹಾಗೂ ಅವರ ಪತ್ನಿ ರಮ್ಯಾ ರಘುಪತಿ (Ramya Raghupati) ನಡುವಿನ ವಿವಾದಗಳು ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಇದೀಗ ಮೈಸೂರಿನಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಹೋಟೆಲ್ ಬಳಿ ಹೈಡ್ರಾಮವೇ ಆಗಿದೆ. ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಮ್ಯಾ ರಘುಪತಿ, ನನ್ನ ಪತಿ ನರೇಶ್ ನನಗೆ ಮೋಸ ಮಾಡಿದ್ದಾರೆ.ಈ ವಿಚಾರದಲ್ಲಿ ನಾನು ಪವಿತ್ರ ಲೋಕೇಶ್ ಅವರನ್ನು ದೂರುವುದಿಲ್ಲ. ನರೇಶ್ ನನ್ನನ್ನು ಮದುವೆಯಾಗಿದ್ದೇ ರಾಜಕೀಯ ಉದ್ದೇಶಕ್ಕಾಗಿ ಎಂದು ಆರೋಪಿಸಿದ್ದಾರೆ.
ನರೇಶ್ ನನಗೆ ಮೋಸ ಮಾಡಿದ್ದಾರೆ
ಇನ್ನು ಮದುವೆಯಾಗಿ ಎರಡು ವರ್ಷ ಮಾತ್ರ ನನ್ನ ಜೊತೆ ನರೇಶ್ ಅನ್ಯೋನ್ಯವಾಗಿದ್ದರು. ಆ ಬಳಿಕ ನನಗೆ ತೊಂದರೆ ಕೊಡುತ್ತಲೇ ಬಂದಿದ್ದಾರೆ. ಆದರೂ ನಾನು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ. ನನ್ನ ಮಗನಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇನೆ. ಆದರೀಗ ನನಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ. ನಾನು ಯಾವುದೇ ಕಾರಣಕ್ಕೂ ಡಿವೋರ್ಸ್ ಕೊಡುವುದಿಲ್ಲ ಎಂದಿದ್ದಾರೆ. ನಾನು ಒಳ್ಳೆಯ ಮನೆತನಕ್ಕೆ ಸೇರಿದವಳು. ನನ್ನ ಉಸಿರಿರುವವರೆಗೂ ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇನೆ ಎಂದಿದ್ದಾರೆ.
ಈ ನಡುವೆ ಮೈಸೂರಿನ ಹುಣಸೂರು ರಸ್ತೆಯ ಹೋಟೆಲ್ ಒಂದರಲ್ಲಿದ್ದ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರು ಹೊರ ಬರುತ್ತಿದ್ದಂತೆಯೇ, ರಮ್ಯಾ ಚಪ್ಪಲಿ ತೆಗೆದು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಆದರೆ ಅವರನ್ನು ಪೊಲೀಸರು ತಡೆದಿದ್ದಾರೆ. ಹೋಟೆಲ್ನ ಒಂದೇ ರೂಮ್ನಲ್ಲಿದ್ದ ಪವಿತ್ರಾ ಲೋಕೇಶ್ ಹಾಗೂ ನರೇಶ್ ವಿರುದ್ದ ರಮ್ಯಾ ರಘುಪತಿ ಸಿಟ್ಟಿಗೆದ್ದಿದ್ದು, ರೂಮ್ ಎದುರಿಗೆ ರಂಪಾಟ ಮಾಡಿದ್ದಾರೆ.
ಇನ್ನು ಈ ಮೊದಲು ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಮೈಸೂರಿನ ಒಂದೇ ಮನೆಯಲ್ಲಿದ್ದಾರೆ ಎನ್ನಲಾಗುತ್ತಿತ್ತು. ಕರ್ನಾಟಕದ ಮೈಸೂರಿನಲ್ಲಿರುವ ಪವಿತ್ರಾ ಮನೆಯಲ್ಲಿ ನರೇಶ್ ಇದ್ದಾರೆ ಎನ್ನುವ ಅನುಮಾನ ಶುರುವಾಗಿದೆ. ಕೆಲ ವಿಡಿಯೋಗಳನ್ನು ಗಮನಿಸಿರುವ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಡಿಯೋದಲ್ಲಿ ಪಿಲ್ಲೋ ಕವರ್ ಹಾಗೂ ವುಡ್ ಎಲ್ಲಾ ಸೇಮ್ ಇದೆ ಎಂದು ಕಾಮೆಂಟ್ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಸಂಬಂಧದ ಬಗ್ಗೆ ಹಲವಾರು ಸುದ್ದಿಗಳು ಬಹಿರಂಗವಾಗುತ್ತಿದೆ. ಯಾವುದು ಸತ್ಯ? ಯಾವುದು ಸುಳ್ಳು? ಎಂಬುದು ಮಾತ್ರ ಗೊತ್ತಿಲ್ಲ.
ಇದನ್ನೂ ಓದಿ: ಶಿವಣ್ಣನಿಗೂ ಟ್ರೋಲ್ಗಳ ಕಾಟ! ಬೇಸರಗೊಂಡು ಈ ರೀತಿ ನಿರ್ಧಾರ ಮಾಡಿದ್ರಾ ಹ್ಯಾಟ್ರಿಕ್ ಹೀರೋ?
ಪವಿತ್ರಾ ವಿರುದ್ದ ಆರೋಪಗಳ ಸುರಿಮಳೆ
ಇನ್ನು ಪವಿತ್ರಾ ಲೋಕೇಶ್ ವಿರುದ್ಧ ರಮ್ಯಾ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ನನ್ನ ಅತ್ತೆ 2014 ರಲ್ಲಿ ಖರೀದಿಸಿದ್ದ ನೆಕ್ಲೇಸ್ ಇದು. ನನ್ನ ಅತ್ತೆ ಪ್ರತಿ ಹುಟ್ಟುಹಬ್ಬಕ್ಕೂ ಚಿನ್ನಾಭರಣ ಖರೀದಿಸುತ್ತಿದ್ದರು . ಈಗ ಪವಿತ್ರಾ ಲೋಕೇಶ್ ಧರಿಸಿದ್ದ ನೆಕ್ಲೇಸ್ ನನ್ನ ಅತ್ತೆಯದ್ದು. ನನ್ನ ಅತ್ತೆ ಬಳಿಯಿದ್ದ ನೆಕ್ಲೇಸ್ ನಾನು ನೋಡಿದ್ದೇನೆ. ಪವಿತ್ರಾ ಲೋಕೇಶ್ ಅದೇ ನೆಕ್ಲೇಸ್ ಧರಿಸಿದ್ದರು ಎಂದು ಆರೋಪ ಮಾಡಿದ್ದಾರೆ.
ಆದರೆ ರಮ್ಯಾ ಆರೋಪ ಅಲ್ಲಗೆಳೆದಿರುವ ನಟಿ ಪವಿತ್ರಾ ಲೋಕೇಶ್, ನನಗೆ ಬೇಕಾದ ವಸ್ತು ಖರೀದಸುವ ಶಕ್ತಿ ನನಗಿದೆ ಕೇವಲ ಚಿನ್ನಾಭರಣ ಮಾತ್ರವಲ್ಲ, ಆಸ್ತಿಯನ್ನೂ ಮಾಡಿದ್ದೇನೆ. 2 ಫ್ಲ್ಯಾಟ್, ನಿವೇಶನಗಳನ್ನು ನಾನು ಖರೀದಿಸಿದ್ದೇನೆ. ಎಲ್ಲದ್ದಕ್ಕೂ ನನ್ನ ಬಳಿ ದಾಖಲೆಗಳಿವೆ ಎಂದಿದ್ದಾರೆ.
ಬೆಂಗಳೂರಿನಲ್ಲಿಯೇ ನಾನು ಚಿನ್ನಾಭರಣ ಖರೀದಿಸುತ್ತೇನೆ. ನನಗೆ ಪರಿಚಯವಿರುವ ವ್ಯಾಪಾರಿಗಳಿಂದ ಖರೀದಿಸುತ್ತೇನೆ ನನಗೆ ಯಾರು ಡೈಮಂಡ್ ನೆಕ್ಲೇಸ್ ಕೊಟ್ಟಿಲ್ಲ ಎಂದು ನಟಿ ಪವಿತ್ರಾ ಲೋಕೇಶ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಪವಿತ್ರಾ ಲೋಕೇಶ್ ಕತ್ತಲ್ಲಿ ನರೇಶ್ ಅಮ್ಮನ ನೆಕ್ಲೆಸ್ ಇದೆಯಾ? ರಮ್ಯಾ ರಘುಪತಿಯಿಂದ ಗಂಭೀರ ಆರೋಪ
ಆದರೆ ಪವಿತ್ರ ಲೋಕೇಶ್ ಧರಿಸಿರೋ ಡೈಮಂಡ್ ನೆಕ್ಲೆಸ್ ಬಗ್ಗೆ ಅನುಮಾನ ಹುಟ್ಟಿಕೊಂಡಿದ್ದು, ತೆಲುಗು ಹಾಸ್ಯನಟ ಆಲಿ ಬರ್ತ್ಡೇ ಪಾರ್ಟಿಯಲ್ಲಿ ಡೈಮಂಡ್ ನೆಕ್ಲೆಸ್ ಹಾಕಿಕೊಂಡು ಮಿಂಚಿರುವ ಪವಿತ್ರಾ ಫೋಟೋಗಳು ಸದ್ಯ ವೈರಲ್ ಆಗಿದೆ. ನರೇಶ್ ಹೋಗಿರುವ ಪಾರ್ಟಿಗೆ ಡೈಮಂಡ್ ನೆಕ್ಲೆಸ್ ಧರಿಸಿ ಪವಿತ್ರಾ ಹೋಗಿದ್ದು, ಪವಿತ್ರಾ ಲೋಕೇಶ್ ಗೆ ಡೈಮಂಡ್ ನೆಕ್ಲೇಸ್ ಕೊಟ್ಟಿದ್ದಾರಾ ನರೇಶ್ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ