ರಮ್ಯಾ ಸ್ಯಾಂಡಲ್ ವುಡ್ನ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಆಳಿದ ನಟಿ. ಈಗಲೂ ಅದೇ ಚಾರ್ಮು. ಅದೇ ವರ್ಚಸ್ಸು. ಈ ನಟಿ ಹೂಂ ಅಂದರೆ ಸಾಕು ಈಗಲೂ ನಿರ್ಮಾಪಕರ ದಂಡೇ ಕ್ಯೂ ನಿಲ್ಲುತ್ತೆ. ಕಾಲ್ ಶೀಟ್ ಗಾಗಿ ಪೈಪೋಟಿ ಶುರುವಾಗುತ್ತೆ. ಆ ಮಟ್ಟಿಗೆ ಊರಿಗೆ ಒಬ್ಳೇ ಪದ್ಮಾವತಿಗೆ ಡಿಮ್ಯಾಂಡ್ ಇದೆ ಕನ್ನಡ ಚಿತ್ರರಂಗದಲ್ಲಿ.
ಇಂತಹ ರಮ್ಯಾ ದಿನೇ ದಿನೆ ಇನ್ನಷ್ಟು ಚಂದವಾಗುತ್ತಿದ್ದಾರೆ. ಅಂದದ ಅರಸಿಯಾಗುತ್ತಿದ್ದಾರೆ. ಅವರನ್ನ ನೋಡಿದರೆ ಅರೇ ನಿನ್ನೆ ಮೊನ್ನೆ ಮುಖಕ್ಕೆ ಬಣ್ಣ ಹಚ್ಚಲು ಶುರು ಮಾಡಿದಷ್ಟು ಕ್ಯೂಟ್ ನೆಸ್ ಉಳಿಸಿಕೊಂಡಿದ್ದಾರಲ್ಲಾ ಅನಿಸುತ್ತೆ.
ಹೌದು!. ರಿಸೆಂಟಾಗಿ ಲಕ್ಕಿ ಸ್ಟಾರ್, ಡಿಂಪಲ್ ಕ್ವೀನ್ ರಮ್ಯಾ ಸೆಲ್ಫಿಯೊಂದನ್ನ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಸಖತ್ ಮುದ್ದು ಮುದ್ದಾಗಿ ಕಾಣುತ್ತಿದ್ದಾರೆ. ಮುಖದ ಎಕ್ಸ್ ಪ್ರೆಶನ್ ಅಷ್ಟೇ ಪೋಕಸ್ ಆಗಿರೋ ಈ ಸೆಲ್ಫಿ ಸದ್ಯ ವೈರಲ್ ಆಗುತ್ತಿದೆ. ಎಷ್ಟೋ ಅಭಿಮಾನಿಗಳ ವಾಟ್ಸಾಪ್ ಸ್ಟೇಟಸ್, ಫೇಸ್ಬುಕ್ ಪೋಸ್ಟ್ ನಲ್ಲಿ ಈ ಫೋಟೋ ರಾರಾಜಿಸುತ್ತಿದೆ.
ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ರಾಜಕೀಯದ ಬಗೆಗಿನ ಪೋಸ್ಟ್ ಗಳಿಂದ ದೂರ ಇರುವ ರಮ್ಯಾ ತಮ್ಮ ಫೋಟೋಸ್ ಗಳನ್ನ ಹೆಚ್ಚು ಹೆಚ್ಚು ಶೇರ್ ಮಾಡುತ್ತಿದ್ದಾರೆ. ಆ ಮೂಲಕ ಅಭಿಮಾನಿಗಳ ಪ್ರೀತಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ