Pavitra Lokesh: ಮನೆಗೆ ಬಂದಿದ್ದು ಸತ್ಯ-ಊಟ ಬಡಿಸಿದ್ದು ನಿಜ, ಹೊಸ ಟರ್ನ್​ ಪಡೆದುಕೊಂಡ ಪವಿತ್ರಾ ಮದುವೆ ಪ್ರಕರಣ

ಪವಿತ್ರಾ ಲೋಕೇಶ್​ (Pavitra Lokesh) ಹಾಗೂ ನಟ ನರೇಶ್​ (Naresh) ಪ್ರಕರಣ ದಿನ್ಕಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸ್ವತಃ ಪವಿತ್ರಾ ಲೋಕೇಶ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಮ್ಯಾ (Ramya) ಅವರು ಸುದ್ದಿಗೋಷ್ಟಿ ಕರೆದು ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪವಿತ್ರಾ ಲೋಕೇಶ್​ (Pavitra Lokesh) ಹಾಗೂ ನಟ ನರೇಶ್​ (Naresh) ಪ್ರಕರಣ ದಿನ್ಕಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸ್ವತಃ ಪವಿತ್ರಾ ಲೋಕೇಶ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಮ್ಯಾ (Ramya) ಅವರು ಸುದ್ದಿಗೋಷ್ಟಿ ಕರೆದು ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಪವಿತ್ರಾ ಲೋಕೇಶ್ ಬಗ್ಗೆ ಮಾತನಾಡಿರುವ ರಮ್ಯಾ,  ಯಾವುದೇ ಕಾರಣಕ್ಕೂ ನರೇಶ್​ ಗೆ ಡಿವೋರ್ಸ್ ನೀಡುವುದಿಲ್ಲ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಗಳಿಗೆಗೊಂದು ಟ್ವಿಟ್ಸ್ ನೀಡುತ್ತಿದ್ದಾರೆ. ಇದಕ್ಕೂ ಮೊದಲು ಅಂದರೆ ನಿನ್ನೆ ನಟ ನರೇಶ್ ಅವರು ಸುದ್ದಿಗೋಷ್ಠಿ ಮಾಡಿ ಪ್ರಕರಣದ ಕುರಿತು ಮಾತನಾಡಿದ್ದರು.

ಅಷ್ಟಕ್ಕೂ ನನಗೆ ಡಿವೋರ್ಸ್ ಬೇಕಿಲ್ಲ:

ಇನ್ನು, ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಮಾತನಾಡಿದ ನಂತರ ಇದೀಗ ರಮ್ಯಾ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ, ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಪವಿತ್ರಾ ಲೋಕೇಶ್ ಅವರು ಮನೆಗೆ ಬಂದಿದ್ದು ಸತ್ಯ ಊಟ ಬಡಿಸಿದ್ದು ಸತ್ಯ. ಅವ್ರಿಗೆ ನಾನು ಯಾರು ಅಂತ ಗೊತ್ತಿಲ್ಲ ಅಂದ್ರೆ ಹೇಗೇ ಹೇಳೋಕೆ ಸಾದ್ಯ. ಪವಿತ್ರಾ ಯಾರು ನನ್ನ ಪ್ರಶ್ನೆ ಮಾಡೋಕೆ. ಇದರ ನಡುವೆ ನರೇಶ್ 3 ಕೋಟಿ ಕಮಿಟ್‌ಮೆಂಟ್ ಕೊಟ್ಟು ಡಿವೋರ್ಸ್ ಕೊಡಿ ಅಂತಾರೆ.

ನನ್ನ ಮಗ ವಾರಸುದಾರ ನನ್ನತ್ತೇ ಆಸ್ತಿ ಅದು ಅದನ್ನು ಹೇಗೆ ಕೊಡಕಾಗುತ್ತೆ. ಅಷ್ಟಕ್ಕೂ ನನಗೆ ಡಿವೋರ್ಸ್ ಬೇಕಿಲ್ಲ. ನಾನು ಹುಟ್ಟಿ ಬೆಳೆದಿರೋದೆ ಕರ್ನಾಟಕದಲ್ಲಿ ನನ್ನ ಮನೆ ಬಾಗಿಲಿಗೆ ಬಂದಿರೋದು ಅವಳು. ಇನ್ನು, ಪವಿತ್ರಾ ಲೋಕೇಶ್ ಅವರನ್ನು ಒಂದೇ ಒಂದು ಸತಿ ನೋಡಿದೀನಿ ಎಂದಿದ್ದಾರೆ. ಜೊತೆಗೆ ಪವಿತ್ರಾ ಲೋಕೇಶ್ ಗಂಡನೇ ಹೇಳಿದಾನೆ ನನ್ನ ಪತ್ನಿ ಆರು ತಿಂಗಳು ಪತ್ನಿ ಅಷ್ಟೇ ಎಂದಿದ್ದಾರೆ. ಪಾಪ ಅವ್ರು ಎಷ್ಟು ನೋಂದಿರಬಹುದು‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: Pavitra Lokesh: ರಮ್ಯಾ ಯಾರಂತಾನೇ ಗೊತ್ತಿಲ್ಲಾ, ಅವ್ರು ಹೇಳ್ತಿರೋದೆಲ್ಲಾ ಬರಿ ಓಳು ಎಂದ ಪವಿತ್ರಾ ಲೋಕೇಶ್

ಸ್ಪಷ್ಟನೆ ನೀಡಿದ ಪವಿತ್ರಾ ಲೋಕೇಶ್:

ಇನ್ನು, ರಮ್ಯಾ ಅವರಿಗಿಂತ ಮುಂಚಿತವಾಗಿ ಅಂದರೆ ಇಂದು ಬೆಳಗ್ಗೆ ನಟಿ ಪವಿತ್ರಾ ಲೋಕೇಶ್ ಅವರು ಮಾಧ್ಯಕ್ಕೆ ನೀಡಿದ ಮಾಹಿತಿಯಲ್ಲಿ ಈ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ್ದಾರೆ. ಅದರಂತೆ ನಾನೂ ಹಲವು ನಟರ ಜೊತೆ ಅಭಿನಯಿಸಿದ್ದೀನಿ ಹಾಗಂತ, ಎಲ್ಲರ ಜೊತೆ ಸಂಬಂಧ ಕಟ್ಟೋಕಾಗುತ್ತಾ. ಅಲ್ಲದೇ ಅವರು ಪರಿಚಯವಾದಾಗ ಅವರೊಬ್ಬರು ಸ್ಟಾರ್​ ಮಗ ಅನ್ನೋದೆ ನಂಗೆ ಗೊತ್ತಿರಲಿಲ್ಲ. ಆದರೆ ನಂತರದಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡುತ್ತಾ ನಾವು ಕ್ಲೋಸ್​ ಆದ್ವಿ. ಜೊತೆಗೆ ನಮ್ಮ ವಿಚಾರಗಳನ್ನು ಒಬ್ಬರಿಗೊಬ್ಬರು ಶೇರ್​ ಮಾಡಿಕೊಳ್ಳುತ್ತಿದ್ದೇವು.

ಇದನ್ನೂ ಓದಿ: Pavitra Lokesh: ರಮ್ಯಾ-ಪವಿತ್ರಾ ಲೋಕೇಶ್ ಬಗ್ಗೆ ಕ್ಲ್ಯಾರಿಟಿ ಕೊಟ್ಟ ನರೇಶ್, ಮುಂದೇನು?

ಈ ವೇಳೆ ನರೇಶ್​ ಅವರು ಮನೆಯಲ್ಲಿ ಯಾರು ಇಲ್ಲ ಎಂದು ನನ್ನ ಬಳಿ ಹೇಳಿದ್ದರು. ನರೇಶ್​ ತುಂಬಾ ಜನಪ್ರಿಯ ವ್ಯಕ್ತಿ. ಅವರು ಮಾ ಪ್ರೆಸಿಡೆಂಟ್ ಸಹ ಹೌದು. ಅವರು ಬೇರೆಯವರ ಸಮಸ್ಯೆ ಬಗೆಹರಿಸುವವರು, ಒಂದು ದೊಡ್ಡ ಸ್ಥಾನದಲ್ಲಿರೋ ವ್ಯಕ್ತಿ ಹೀಗೆಲ್ಲಾ ಮಾಡಲ್ಲ ಎಂದು ಹೇಳಿದ್ದಾರೆ. ಇದಲ್ಲದೇ ನರೇಶ್​ ನೂರಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಸಾಕಷ್ಟು ನಟಿಯರ ಜೊತೆ ಕೆಲಸ ಮಾಡಿದ್ದಾರೆ, ಅವ್ರೆಲ್ಲರ ಜೊತೆ ಸಂಬಂಧ ಕಟ್ಟೋಕಾಗುತ್ತಾ‘ ಎಂದು ಪ್ರಶ್ನಿಸಿದ್ದಾರೆ.
Published by:shrikrishna bhat
First published: