Ramya Gift: ಅಮೂಲ್ಯಗೆ ದುಬಾರಿ ಗಿಫ್ಟ್​ ಕೊಟ್ಟ ರಮ್ಯಾ! ‘ಪದ್ಮಾವತಿ‘ ಕೊಟ್ಟ ಉಡುಗೊರೆ ಏನು ಗೊತ್ತಾ?

ಸಿನಿಮಾರಂಗದಿಂದ ದೂರ ಉಳಿದಿದ್ದ ರಮ್ಯಾ ಇದೀಗ ಮತ್ತೆ ಸ್ಯಾಂಡಲ್​ವುಡ್​ ಪರಿವಾರ ಜೊತೆ ಕಾಣಿಸಿಕೊಳ್ತಿದ್ದಾರೆ. ನಟಿ ಅಮೂಲ್ಯ ಬೇಬಿ ಶವರ್​​ ಕಾರ್ಯಕ್ರಮಕ್ಕೆ ತಡವಾಗಿ ಬಂದ್ರು ವಿಶೇಷವಾಗಿ ವಿಶ್ ಮಾಡಿದ್ದಾರೆ.

ಅಮೂಲ್ಯ, ರಮ್ಯಾ

ಅಮೂಲ್ಯ, ರಮ್ಯಾ

  • Share this:
ಸ್ಯಾಂಡಲ್​ವುಡ್​ ನಟಿ ಅಮೂಲ್ಯ (Amulya) ಮತ್ತು ಪತಿ ಜಗದೀಶ್ (Jagdeesh) ಇಬ್ಬರೂ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಇತ್ತೀಚೆಗೆ ಅವರ ಸೀಮಂತ ಕಾರ್ಯ ಕೂಡ ಅದ್ದೂರಿಯಾಗಿ ನೆರವೇರಿದೆ. ಸ್ನೇಹಿತರು ಹಾಗೂ ಸ್ಯಾಂಡಲ್​ವುಡ್ (Sandalwood)​ ನಟಿಯರು ಅಮೂಲ್ಯ ಬೇಬಿ ಶವರ್ (Baby Shower)​​​ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಮೂಲ್ಯಗೆ ವಿಶ್ ಮಾಡ್ತಿದ್ದಾರೆ. ಹಲವು ಗಣ್ಯರು ಅಮೂಲ್ಯಗೆ ಗಿಫ್ಟ್​ ಕೊಟ್ಟು ಹೆರಿಗೆ ಸುಗಮವಾಗಿ ಆಗಲಿ ಎಂದು ವಿಶ್​ ಮಾಡ್ತಿದ್ದಾರೆ. ಇದೀಗ ಯುಎಸ್​ನಲ್ಲಿದ್ದ ಸ್ಯಾಂಡಲ್​ವುಡ್​ ನಟಿ ರಮ್ಯಾ (Ramya) ಕೂಡ ಅಮೂಲ್ಯ ಮನೆಗೆ ಆಗಮಿಸಿ ವಿಶ್​ ಮಾಡಿ ದುಬಾರಿ ಗಿಫ್ಟ್​ ನೀಡಿದ್ದಾರೆ. ಹಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದ ರಮ್ಯಾ ಇದೀಗ ಮತ್ತೆ ಸ್ಯಾಂಡಲ್​ವುಡ್​ ಪರಿವಾರ ಜೊತೆ ಕಾಣಿಸಿಕೊಳ್ತಿದ್ದಾರೆ. ಇದೀಗ ನಟಿ ಅಮೂಲ್ಯ ಬೇಬಿ ಶವರ್​​ ಕಾರ್ಯಕ್ರಮಕ್ಕೆ ತಡವಾಗಿ ಬಂದ್ರು ವಿಶೇಷವಾಗಿ ವಿಶ್ ಮಾಡಿದ್ದಾರೆ.

ಅಮೂಲ್ಯ ಬೇಬಿ ಶವರ್ ಕಾರ್ಯಕ್ರಮ

ಕೆಲವು ದಿನಗಳ ಹಿಂದೆ ಅಮೂಲ್ಯ ಫೋಟೋಗಳನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಜೊತೆಗೆ ಅವರ ಬೇಬಿ ಬಂಪ್ ಫೋಟೋ ಶೂಟ್‌ಕೂಡ ವೈರಲ್ ಆಗಿತ್ತು. ಇತ್ತೀಚೆಗೆ ಅಮೂಲ್ಯ ಅವರ ಈ ಸಂತಸವನ್ನು ಸ್ಯಾಂಡಲ್‌ವುಡ್ ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ. ಬಹಳ ಅದ್ಧೂರಿಯಾಗಿ ಆಯೋಜಿಸಿದ್ದ ಅಮೂಲ್ಯ ಬೇಬಿ ಶವರ್ ಕಾರ್ಯಕ್ರಮಕ್ಕೆ ಚಿತ್ರರಂಗದ ಸಾಕಷ್ಟು ತಾರೆಯರು ಆಗಮಿಸಿದ್ದರು. ಸ್ಯಾಂಡಲ್‌ವುಡ್ ಗಣ್ಯರು ಅಮೂಲ್ಯ ಅವರಿಗೆ ತರಹೇವಾರಿ ಗಿಫ್ಟ್‌ಗಳ ಜೊತೆಗೆ ಹೆರಿಗೆ ಸುಗಮವಾಗಿ ಆಗಲಿ ಎಂದು ಹರಸಿ ಹಾರೈಸಿದ್ದಾರೆ.

ಅಮೂಲ್ಯಗೆ ರಮ್ಯಾ ಸ್ಪೆಷಲ್​ ಗಿಫ್ಟ್​

ಅಮೂಲ್ಯ ಬೇಬಿ ಶವರ್ ಕಾರ್ಯಕ್ರಮಕ್ಕೆ ಯುಎಸ್‌ನಲ್ಲಿದ್ದ ಸ್ಯಾಂಡಲ್‌ವುಡ್ ನಟಿ ರಮ್ಯಾ ಕೂಡ ಆಗಮಿಸಿದ್ದರು. ಅಮೂಲ್ಯ ಮತ್ತು ರಮ್ಯಾ ಇಬ್ಬರು ಕೂಡ ಒಳ್ಳೆಯ ಸ್ನೇಹಿತೆಯರು. ಅಮೂಲ್ಯ ಈ ಹಿಂದೆ ಕೂಡ ರಮ್ಯಾ ಅವರ ಬಗ್ಗೆ ಸಾಕಷ್ಟು ಹೇಳಿಕೊಂಡಿದ್ದರು. ಇತ್ತೀಚೆಗೆ ನಡೆದ ಅಮೂಲ್ಯ ಬೇಬಿ ಶವರ್ ಕಾರ್ಯಕ್ರಮಕ್ಕೆಂದು ರಮ್ಯಾ ವಿದೇಶದಿಂದ ಬಂದಿದ್ದಾರೆ. ಕಾರ್ಯಕ್ರಮಕ್ಕೆ ತಡವಾಗಿ ಬಂದ್ರು ರಮ್ಯಾ, ಅಮೂಲ್ಯಗೆ ಸ್ಪೆಷಲ್ ಗಿಫ್ಟ್ ಒಂದನ್ನು ನೀಡಿ ವಿಶ್​ ಮಾಡಿದ್ದಾರೆ.

ಕನಕವಲ್ಲಿ ಸೀರೆ ಗಿಫ್ಟ್​ ಮಾಡಿದ ರಮ್ಯಾ

ನಟಿ ರಮ್ಯಾ ಸಿನಿಮಾಗಳಿಂದ ಇದೀಗ ದೂರವಾಗಿ ವರ್ಷಗಳೇ ಕಳೆದಿದೆ. ಆದರೂ ಸ್ಯಾಂಡಲ್‌ವುಡ್ ಮಂದಿಯ ನಂಟನು ಬಿಟ್ಟಿಲ್ಲ. ತನ್ನ ಆತ್ಮೀಯರ ಕಾರ್ಯಕ್ರಮಕ್ಕೆ ಬಂದು ಹೋಗುವ ರಮ್ಯಾ, ಅಮೂಲ್ಯ ಬೇಬಿ ಶವರ್‌ಗೂ ಆಗಮಿಸಿದ್ದಾರೆ. ಅಲ್ಲದೇ ತುಂಬು ಗರ್ಭಿಣಿ ಅಮೂಲ್ಯಾಗೆ ವಿಶೇಷವಾದ ಕನಕವಲ್ಲಿ ಬ್ರ್ಯಾಂಡ್‌ನ ಸೀರೆ ಒಂದನ್ನು ಗಿಫ್ಟ್​ ಆಗಿ ನೀಡಿದ್ದಾರೆ. ಸೀರೆಯೊಂದಿಗೆ ಗ್ರೀಟಿಂಗ್ ಕಾರ್ಡ್‌ನಲ್ಲಿ ಶುಭಾಶಯ ಕೂಡ ತಿಳಿಸಿದ್ದಾರೆ.

ಇದನ್ನೂ ಓದಿ: Ramya: ಮತ್ತೆ ಶುರುವಾಗುತ್ತಾ 'ರಮ್ಯ' ಚೈತ್ರಕಾಲ? "ಸಿನಿಮಾ ಮಾಡೇ ಪದ್ಮಾವತಿ" ಅಂತಿದ್ದಾರೆ ಫ್ಯಾನ್ಸ್

ಕನಕವಲ್ಲಿ ಬ್ರ್ಯಾಂಡ್‌ಸೀರೆ ಸ್ಪೆಷಾಲಿಟಿ ಏನು ಗೊತ್ತಾ?

ರಮ್ಯಾ, ಅಮೂಲ್ಯಗೆ ಪ್ರತಿಷ್ಟಿತ ಮತ್ತು ಸಾಕಷ್ಟು ವರ್ಷಗಳಿಂದಲೂ ಗ್ರಾಹಕರ ವಿಶ್ವಾಸ ಸಂಪಾದಿಸಿರುವ ಕನಕವಲ್ಲಿ ಬ್ರ್ಯಾಂಡ್‌ನ ಸೀರೆಯನ್ನು ಗಿಫ್ಟ್​ ಆಗಿ ನೀಡಿದ್ದಾರೆ. ಕನಕವಲ್ಲಿ ಸೀರೆಯಲ್ಲಿ ಸಾಕಷ್ಟು ಡಿಸೈನ್‌ಗಳು ಮತ್ತು ಮೆಟೀರಿಯಲ್‌ ಸೀರೆಗಳು ಲಭ್ಯ. ಸಾಕಷ್ಟು ಬಾಲಿವುಡ್ ಸೆಲೆಬ್ರೆಟಿಗಳಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಿಗಳು ಈ ಬ್ರ್ಯಾಂಡ್‌ನ ಸೀರೆಯನ್ನು ಇಷ್ಟ ಪಟ್ಟು ಕೊಂಡುಕೊಳ್ಳುತ್ತಾರೆ. ಹಾಗೇ ಕನಕವಲ್ಲಿ ಸೀರೆಗಳು ಬಹಳ ದುಬಾರಿ ಕೂಡ ಹೌದು. ಹೀಗಾಗಿ ರಮ್ಯಾ ಅಮೂಲ್ಯಗೆ ಈ ಸ್ಪೆಷಲ್ ಸೀರೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ.

‘ಧನ್ಯವಾದಗಳು ರಮ್ಯಾ ಮೇಡಂ’

ಅಮೂಲ್ಯ ಕೂಡ ಈ ಸೀರೆಯನ್ನು ಮೆಚ್ಚಿಕೊಂಡಿದ್ದಾರೆ. ತನ್ನ ಇನ್ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿಕೊಂಡಿರುವ ಅಮೂಲ್ಯ "ಧನ್ಯವಾದಗಳು ರಮ್ಯಾ ಮೇಡಂ. ನೀವು ನಮ್ಮ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ನನ್ನ ದಿನವನ್ನು ಮತ್ತಷ್ಟು ಖುಷಿ ಮಾಡಿದೆ. ನೀವು ನೀಡಿದ ಸೀರೆ ತುಂಬ ಇಷ್ಟವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ramya ಸ್ಯಾಂಡಲ್​ವುಡ್​ಗೆ ಕಮ್​ಬ್ಯಾಕ್​ ಮಾಡುವಂತೆ ರಚ್ಚು ರಿಕ್ವೆಸ್ಟ್​: ಡಿಂಪಲ್​ ಕ್ವೀನ್​ ಮನವಿಗೆ ಏನಂದ್ರು ನೋಡಿ ಮೋಹಕ ತಾರೆ!

ರಚಿತಾಗೂ ರಮ್ಯಾ ಕೊಟ್ಟಿದ್ರು ಗಿಫ್ಟ್​

ರಮ್ಯಾ ಅವರು ಕೇವಲ ಅಮೂಲ್ಯಗೆ ಮಾತ್ರವಲ್ಲದೆ ನಟಿ ರಚಿತಾ ರಾಮ್‌ ಹುಟ್ಟುಹಬ್ಬಕ್ಕೆ ಅವರಿಗೆ ಸೀರೆಯನ್ನು ನೀಡಿದ್ದರು. ಖಾಸಗಿ ಸಂದರ್ಶನದಲ್ಲಿ ಮಾತನಾಡುತ್ತಾ ರಚಿತಾ ರಾಮ್ ಇದನ್ನು ರಿವೀಲ್ ಮಾಡಿದ್ರು ಬರ್ತ್‌ಡೇಗೆ ರಮ್ಯಾ ಅವರಿಂದ ನನಗೆ ವಿಶೇಷವಾದ ಉಡುಗೊರೆ ಒಂದು ಬಂದಿದೆ. ಅದನ್ನು ನಾನು ಎಲ್ಲೂ ರಿವೀಲ್ ಮಾಡಿಲ್ಲ. ಸೀರೆಯನ್ನು ಗಿಫ್ಟ್​ ಆಗಿ ಕೊಟ್ಟಿದ್ದಾರೆ ಎಂದಿದ್ರು.
Published by:Pavana HS
First published: