ಇತ್ತೀಚೆಗೆ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ನಟ ಜಗ್ಗೇಶ್ (Jaggesh) ಹಾಗೂ ಮೋಹಕತಾರೆ ರಮ್ಯಾ (Ramya) ಅಕ್ಕಪಕ್ಕ ಕುಳಿತು ಕಾಣಿಸಿಕೊಂಡಿದ್ದು ಎಲ್ಲರಿಗೂ ಅಚ್ಚರಿಮೂಡಿಸಿದೆ. ಕನ್ನಡದ ಈ ನಟ (Actor) ಹಾಗೂ ನಟಿಯ ನಡುವಿನ ಜಗಳ ಎಲ್ಲರಿಗೂ ಗೊತ್ತಿದೆ. ಅಂದು ಜಗ್ಗೇಶ್ ಬಿಜೆಪಿಯಲ್ಲಿದ್ದರೆ ರಮ್ಯಾ ಕಾಂಗ್ರೆಸ್ನಲ್ಲಿದ್ದರು. ಇವರಿಬ್ಬರೂ ಸೋಷಿಯಲ್ ಮೀಡಿಯಾದಲ್ಲಿ (Social Media) ಕಿತ್ತಾಡಿದ್ದು ಪರಸ್ಪರ ಟಾಂಗ್ ಕೊಟ್ಟಿದ್ದು ಎಲ್ಲರಿಗೂ ಗೊತ್ತು. ಆದರೆ ಈಗ ಅವರು ಒಂದಾಗಿದ್ದಾರೆ. ಒಟ್ಟಾಗಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿದ್ದು ಅದೂ ಅಕ್ಕಪಕ್ಕ ಕುಳಿತಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ರಮ್ಯಾ ಹಾಗೂ ಜಗ್ಗೇಶ್ ಮಧ್ಯೆ ಮೊದಲಿನಿಂದ ವೈಮನಸ್ಸು ಇರಲಿಲ್ಲ. ಉಳಿದ ಕಲಾವಿದರಂತೆ ಚೆನ್ನಾಗಿಯೇ ಇದ್ದರು. ಆದರೆ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಜಗ್ಗೇಶ್ ಕಾಲ್ ಮಾಡಿ ರಮ್ಯಾ ಕಾಲೆಳೆದ ವಿಡಿಯೋ ಅಂದು ಭಾರೀ ಚರ್ಚೆಯಾಗಿತ್ತು.
ನೀರ್ ದೋಸೆ ಜಗಳ ಅಂತಲೇ ಇವರ ನಡುವಿನ ವಾರ್ ಎಲ್ಲೆಡೆ ವೈರಲ್ ಆಗಿತ್ತು. 'ನೀರ್ ದೋಸೆ' ಸಿನಿಮಾ ಸಮಯದಲ್ಲಿ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಈ ಸಿನಿಮಾಗೆ ಮೊದಲು ರಮ್ಯಾ ಸೆಲೆಕ್ಟ್ ಆಗಿದ್ದರು. ಶೂಟಿಂಗ್ ಸ್ವಲ್ಪ ಆದಾಗ ರಮ್ಯಾ ಸಿನಿಮಾ ಮಾಡಲ್ಲ ಅಂತ ಹೊರಬಂದಿದ್ದರು.
ಇದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇದಕ್ಕೆ ಇತ್ತೀಚಿನ ಘಟನೆಯೂ ಉದಾಹರಣೆ. ನಟಿ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡು ಕೊನೆಘಳಿಗೆಯಲ್ಲಿ ಸಿನಿಮಾದಿಂದ ಹೊರಬಂದಿದ್ದಾರೆ.
ಜಗ್ಗೇಶ್ ಕುಳಿತಿದ್ದಲ್ಲಿ ಬಂದು ಮಾತನಾಡಿಸಿದ ರಮ್ಯಾ
ನಟಿ ರಮ್ಯಾ ಅವರು ಜಗ್ಗೇಶ್ ಕುಳಿತಿದ್ದಲ್ಲಿ ಬಂದು ಅವರ ಪಕ್ಕವೇ ಇದ್ದ ಸೀಟ್ನಲ್ಲಿ ಕುಳಿತುಕೊಂಡು ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಜಗ್ಗೇಶ್ ಅವರ ಕೈ ಹಿಡಿದು ಹ್ಯಾಂಡ್ ಶೇಕ್ ಮಾಡಿದ್ದಾರೆ. ಈ ಕಾರ್ಯಕ್ರಮದ ವಿಡಿಯೋವನ್ನು ಜಗ್ಗೇಶ್ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: Mrunal Thakur: ಸೀತಾ ರಾಮಂ ನಟಿಯ ಕ್ಯೂಟ್ ಫೋಟೋಸ್, ರೇಶ್ಮೆ ಸೀರೆಗಿಂತ ನಿಮ್ಮ ನಗುವೇ ಚಂದ ಎಂದ ನೆಟ್ಟಿಗರು
ಆದರೆ ಅಂದು ಸಿನಿಮಾದಿಂದ ರಮ್ಯಾ ಹೊರಬಂದಾಗ ಜಗ್ಗೇಶ್ ಜೊತೆ ಜಗಳ ಕೂಡಾ ಆಗಿತ್ತು. KCC (ಕರ್ನಾಟಕ ಚಲನಚಿತ್ರ ಕಪ್) ಮೂರನೇ ಸೀಸನ್ ಫೆ. 11 ಮತ್ತು 12 ರಂದು ಮೈಸೂರಿನಲ್ಲಿ ನಡೆಯುತ್ತಿದೆ. ಇದರ ಭಾಗವಾಗಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ನಟ ಸುದೀಪ್ , ಚಿತ್ರರಂಗದ ಇತರ ಗಣ್ಯರಿಗೆ ಆಹ್ವಾನ ನೀಡಿದ್ದರು. ಈ ವೇದಿಕೆಯಲ್ಲಿ ಎಲ್ಲರೂ ಒಟ್ಟಾಗಿದ್ದರು.
ಯಾರೆಲ್ಲ ಬಂದಿದ್ದರು?
ಸಚಿವ ಡಾ.ಕೆ. ಸುಧಾಕರ್, ಸಚಿವ ಮುನಿರತ್ನ, ನಟ ಶಿವರಾಜ್‌ಕುಮಾರ್, ಸುದೀಪ್, ಜಗ್ಗೇಶ್, ಗಣೇಶ್, ಧ್ರುವ ಸರ್ಜಾ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಸುಧಾರಾಣಿ, ರಮ್ಯಾ ಹಾಗೂ ಇನ್ನಿತರರು ಆಗಮಿಸಿದ್ದರು. ಈ ವೇಳೆ ಜಗ್ಗೇಶ್ ಹಾಗೂ ರಮ್ಯಾ ಪಕ್ಕ ಪಕ್ಕ ಕುಳಿತದ್ದು, ಮಾತನಾಡಿದ್ದು, ನಗಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಅಪರೂಪದ ದೃಶ್ಯ ನೋಡಿ ಸಿನಿಪ್ರಿಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಆಪಲ್ ಬಾಕ್ಸ್ ಸ್ಟುಡಿಯೋಸ್ ಎಂಬ ಪ್ರೊಡಕ್ಷನ್ ಹೌಸ್ ಆರಂಭಿಸಿರುವ ರಮ್ಯಾ ಅದರ ಮೂಲಕ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ನಿರ್ಮಾಣ ಮಾಡುತ್ತಿದ್ಧಾರೆ. ಜೊತೆಗೆ ಡಾಲಿ ಧನಂಜಯ್ ಜೊತೆಗೆ 'ಉತ್ತರಕಾಂಡ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ