• Home
  • »
  • News
  • »
  • entertainment
  • »
  • Actress Ramya: ರಾಜ್​ ಸಿನಿಮಾದಿಂದ ಹೊರಬಂದ ರಮ್ಯಾ! ಸೇರಿರೋದು ಯಾರ ಜೊತೆ?

Actress Ramya: ರಾಜ್​ ಸಿನಿಮಾದಿಂದ ಹೊರಬಂದ ರಮ್ಯಾ! ಸೇರಿರೋದು ಯಾರ ಜೊತೆ?

ರಮ್ಯಾ-ಸ್ವಾತಿ ಮುತ್ತಿನ ಮಳೆ ಹನಿಯೇ

ರಮ್ಯಾ-ಸ್ವಾತಿ ಮುತ್ತಿನ ಮಳೆ ಹನಿಯೇ

ರಮ್ಯಾ ಮತ್ತೆ ತೆರೆಯ ಮೇಲೆ ಬರೋದೇ ಇಲ್ವಾ? ಬಿಗ್​ ಸ್ಕ್ರೀನ್​ನಲ್ಲಿ ರಮ್ಯಾ ಅವರನ್ನು ನೋಡೋಕಾಗಲ್ವಾ ಎನ್ನುವ ಕಳವಳ ಅಭಿಮಾನಿಗಳದ್ದು. ಮತ್ತೆ ಕಮ್ ಬ್ಯಾಕ್ ಮಾಡುತ್ತೇನೆ ಎಂದು ಹೇಳುತ್ತಲೇ ಇದ್ದ ರಮ್ಯಾ ಅವರು ಇಷ್ಟು ಸಡನ್ನಾಗಿ ತಮ್ಮ ನಿರ್ಧಾರ ಬದಲಾಯಿಸಿದ್ದೇಕೆ?

  • News18 Kannada
  • Last Updated :
  • Bangalore, India
  • Share this:

ಸ್ಯಾಂಡಲ್​ವುಡ್ ಕ್ವೀನ್, ಮೋಹಕ ತಾರೆ ರಮ್ಯಾ (Ramya) ಅವರ ಕಮ್ ಬ್ಯಾಕ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಸ್ವಾತಿ ಮುತ್ತಿನ ಮಳೆ ಹನಿಯೇ  (Swathi Mutthina Malehaniye) ಚಿತ್ರದ ಮೂಲಕ ರಾಜ್ ಬಿ ಶೆಟ್ಟಿ (Raj B Shetty) ಜೊತೆ ಸ್ಯಾಂಡಲ್​​ವುಡ್​ನಲ್ಲಿ (Sandalwood) ಕಮ್ ಬ್ಯಾಕ್ ಮಾಡುತ್ತಾರೆ ಎಂದಿದ್ದ ರಮ್ಯಾ ಅವರು ಮೊದಲ ಬಾರಿ ಪ್ರೊಡ್ಯೂಸರ್ (Producer) ಹಾಗೂ ನಟಿಯಾಗಿ ಸಿನಿಮಾ ಮಾಡುವವರಿದ್ದರು. ಆದರೆ ಈಗ ಪ್ಲಾನ್ ಚೇಂಜ್ ಆಗಿದೆ. ಈ ಸಿನಿಮಾದಿಂದ ರಮ್ಯಾ ಹೊರಬಂದಿದ್ದಾರೆ. ಬದಲಾಗಿ ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ಪ್ರೊಡ್ಯೂಸರ್ ಆಗಿ ಮಾತ್ರ ಮುಂದುವರಿಯಲಿದ್ದಾರೆ. ಆ್ಯಪಲ್ ಬಾಕ್ಸ್ ಅಧಿಕೃತ ಇನ್​ಸ್ಟಾಗ್ರಾಮ್ ಪೇಜ್ ಮೂಲಕ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ರಮ್ಯಾ ಅವರು ಸಿನಿಮಾದಿಂದ ಹೊರಬಂದು, ಹೊಸ ಮುಖವನ್ನು ತಮ್ಮ ಪ್ರೊಡಕ್ಷನ್ ಮೂಲಕ ತೆರೆ ಮೇಲೆ ತರೋದಾಗಿ ಹೇಳಿದ್ದಾರೆ. ಇದರಲ್ಲಿ ಸಿರಿ ರವಿಕುಮಾರ್ ಎನ್ನುವ ನಟಿ ರಾಜ್​ಗೆ ಜೊತೆಯಾಗಲಿದ್ದಾರೆ.


ಸಡನ್ ಹೊರ ಬಂದಿದ್ದೇಕೆ ರಮ್ಯಾ?


ರಮ್ಯಾ ಮತ್ತೆ ತೆರೆಯ ಮೇಲೆ ಬರೋದೇ ಇಲ್ವಾ? ಬಿಗ್​ ಸ್ಕ್ರೀನ್​ನಲ್ಲಿ ರಮ್ಯಾ ಅವರನ್ನು ನೋಡೋಕಾಗಲ್ವಾ ಎನ್ನುವ ಕಳವಳ ಅಭಿಮಾನಿಗಳದ್ದು. ಮತ್ತೆ ಕಮ್ ಬ್ಯಾಕ್ ಮಾಡುತ್ತೇನೆ ಎಂದು ಹೇಳುತ್ತಲೇ ಇದ್ದ ರಮ್ಯಾ ಅವರು ಇಷ್ಟು ಸಡನ್ನಾಗಿ ತಮ್ಮ ನಿರ್ಧಾರ ಬದಲಾಯಿಸಿದ್ದೇಕೆ? ಸಿನಿಮಾ ಮಾಡಲ್ವಾ ಎಂಬ ಚರ್ಚೆ ಗಾಂಧೀನಗರದಲ್ಲಿ ಜೋರಾಗಿದೆ.
ಬೇರೆ ಸಿನಿಮಾ ಮಾಡ್ತಾರಾ?


ರಮ್ಯಾ ಸ್ಯಾಂಡಲ್​ವುಡ್ ಸ್ಟಾರ್ ನಟಿ. ಅವರು ಕಮ್ ಬ್ಯಾಕ್ ಮಾಡುತ್ತೇನೆಂದು ಹಲವು ಸಲ ಹೇಳಿರುವ ಕಾರಣ ನಟನೆಯಿಂದ ಹಿಂದೆ ಸರಿಯಲ್ಲ ಎನ್ನುವುದು ಕೆಲವರ ಚರ್ಚೆ. ಬಿಗ್ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿ ರಮ್ಯಾ ರೀ ಲಾಂಚ್ ಆಗಲು ಬಯಸುತ್ತಿದ್ದಾರೆ ಎನ್ನುತ್ತಿದ್ದಾರೆ ಜನ.


ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಗೆ ರಮ್ಯಾ ಈಗಲೂ ನಿರ್ಮಾಪಕಿ


ಹೀರೋಯಿನ್ ಆಗಿ ಸಿನಿಮಾದಿಂದ ಹೊರಬಂದಿದ್ದರೂ ಸಿನಿಮಾಗೆ ರಮ್ಯಾ ಬಂಡವಾಳ ಹೂಡಲಿರುವುದರಲ್ಲಿ ವ್ಯತ್ಯಾಸವಾಗಿಲ್ಲ. ಸಿನಿಮಾಗೆ ರಮ್ಯಾ ಅವರೇ ಹೂಡಿಕೆ ಮಾಡಲಿದ್ದು ಆ್ಯಪಲ್ ಬಾಕ್ಸ್ ಸಿನಿಮಾ ನಿರ್ಮಿಸಲಿದೆ. ಆದರೆ ನಟಿಯಾಗಿ ರಮ್ಯಾ ಹೊರಬಂದಿದ್ದು ಹೊಸ ನಟಿ ಸಿರಿ ತಂಡ ಸೇರಿದ್ದಾರೆ.
ಇದನ್ನೂ ಓದಿ: Ramya - Raj B Shetty: ರಾಜ್​ಗೆ ಕೈಕೊಟ್ರಾ ರಮ್ಯಾ? ಸ್ವಾತಿ ಮುತ್ತಿನಿಂದ ಪದ್ಮಾವತಿ ಔಟ್!


ರಾಜ್ ಬಿ ಶೆಟ್ಟಿಗೆ ಶಾಕ್


ರಾಜ್ ಬಿ ಶೆಟ್ಟಿ ಅವರು ಸಿನಿಮಾ ಶೂಟಿಂಗ್ ಒಂದೇ ಶೆಡ್ಯೂಲ್​ನಲ್ಲಿ ಮುಗಿಸಲು ಬಯಸಿದ್ದರು. ಸಿಂಗಲ್ ಶೆಡ್ಯೂಲ್​ನಲ್ಲಿ ಚಿತ್ರೀಕರಣ ಮುಗಿಸಲು ಬಯಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಆರಂಭವಾಗಲಿತ್ತು. ಆದರೆ ಅಷ್ಟೊತ್ತಿಗೆ ಈ ರೀತಿಯಾದ ಬೆಳವಣಿಗೆ ನಡೆದಿದೆ. ಆದರೆ ಶೂಟಿಂಗ್ ನಿಗದಿ ಮಾಡಿದಂತೆಯೇ ನಡೆಯಲಿದೆ ಎಂದು ಹೇಳಲಾಗಿದೆ.


ಮೈಸೂರು-ಊಟಿಯಲ್ಲಿ ಶೂಟಿಂಗ್


ಮೈಸೂರು ಹಾಗೂ ಊಟಿಯಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಲಾಗಿದ್ದು ಚಿತ್ರತಂಡ ಶೀಘ್ರವೇ ಲೊಕೇಷನ್​​ಗೆ ಶಿಫ್ಟ್ ಆಗಲಿದೆ. ದೀಪಾವಳಿ ನಂತರ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗಿದೆ.

Published by:Divya D
First published: