News18 India World Cup 2019

'ಸಂಜು ದಿ ರಿಯಲ್ ಸ್ಟೋರಿ' ಸಿನಿಮಾ ಮತ್ತೆ ತೆರೆಗೆ: ರಾಮ್​ಗೋಪಾಲ್​ ವರ್ಮಾ

news18
Updated:July 21, 2018, 1:30 PM IST
'ಸಂಜು ದಿ ರಿಯಲ್ ಸ್ಟೋರಿ' ಸಿನಿಮಾ ಮತ್ತೆ ತೆರೆಗೆ: ರಾಮ್​ಗೋಪಾಲ್​ ವರ್ಮಾ
news18
Updated: July 21, 2018, 1:30 PM IST
ನ್ಯೂಸ್​ 18 ಕನ್ನಡ 

ಬಾಲಿವುಡ್‍ನ 'ಸಂಜು' ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುವುದರೊಂದಿಗೆ ಬಾಕ್ಸಾಫಿಸ್​ಚಿಂದಿ ಮಾಡುತ್ತಿದೆ. ಇತ್ತೀಚೆಗೆ ಈ ಸಿನಿಮಾವನ್ನ ಖ್ಯಾತ ನಿರ್ದೇಶಕ ರಾಮ್​ಗೋಪಾಲ್ ವರ್ಮಾ ವೀಕ್ಷಿಸಿದ್ದು, ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗೇಯೇ ಆಸಕ್ತಿಕರ ವಿಷಯವೊಂದನ್ನು ಹೇಳಿಕೊಂಡಿದ್ದಾರೆ.

300ಕೋಟಿಗೂ ಮೀರಿ ಗಳಿಕೆ ಮಾಡುತ್ತಾ ಮುನ್ನುಗ್ಗುತ್ತಿರುವ 'ಸಂಜು' ಸಿನಿಮಾ ಎಲ್ಲರಿಗೂ ಮೋಡಿ ಮಾಡುತ್ತಿದೆ. ರಾಜ್​ಕುಮಾರ್ ಹಿರಾನಿ ಸಂಜಯ್ ದತ್ ಬಗ್ಗೆ ಸಿನಿಮಾ ಮಾಡಿರುವುದರಲ್ಲಿ ಒಂದಷ್ಟು ವಿಷಯಗಳನ್ನು ಕೈಬಿಟ್ಟಿದ್ದಾರೆ. ಹೀಗಾಗಿ ಸಂಜಯ್ ದತ್ ಕುರಿತಾದ ಮತ್ತೊಂದು ಸಿನಿಮಾವನ್ನು ತಾನೇ ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದಾರೆ.

1993 ಬಾಂಬ್​ ಸ್ಫೋಟದ ಪ್ರಕರಣ ಹಾಗೂ ಪರವಾನಗಿ ರಹಿತ ಎಕೆ 56 ಗನ್ ಕುರಿತು ಮಾತ್ರ ಈ ಚಿತ್ರದಲ್ಲಿ ಕಥೆ ಹೆಣೆಯಲು ವರ್ಮಾ ತೀರ್ಮಾನಿಸಿದ್ದಾರೆ. ಹಾಗೇ ಚಿತ್ರಕ್ಕೆ 'ಸಂಜು ದಿ ರಿಯಲ್ ಸ್ಟೋರಿ' ಎಂದು ಶೀರ್ಷಿಕೆ ನೀಡುವುದಾಗಿಯೂ ಹಾಗೂ ಈ ಕುರಿತಂತೆ ಈಗಾಗಲೇ ಸಂಶೋಧನೆ ಆರಂಭಿಸಿರೋದಾಗಿ ಮುಂಬೈ ಮಿರರ್​ಗೆ ನೀಡಿರುವ ಸಂದರ್ಶನಲ್ಲಿ ಹೇಳಿಕೊಂಡಿದ್ದಾರೆ ವರ್ಮಾ.
First published:July 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...