ಅಕ್ಟೊಬರ್ 15ರಿಂದ ಥಿಯೇಟರ್ ಓಪನ್ ಆಗಿವೆ. ಕೋವಿಡ್ ನಿಯಮಾನುಸಾರ ಒಂದು ಸೀಟ್ ಖಾಲಿ ಬಿಟ್ಟು, ಶೇಕಡಾ ೫೦ ರಷ್ಟು ಫಿಲ್ಲಿಂಗ್ ಕೆಪಾಸಿಟಿಯಂತೆ ಶೋ ನಡೆಸಲಾಗುತ್ತಿದೆ. ಆದರೆ ಕಳೆದ ಏಳು ತಿಂಗಳಿನಿಂದ ಥಿಯೇಟರ್ ನಿಂದ ದೂರವಿದ್ದು, ಓಟಿಟಿಗಳಿಗೆ ಅಂಟಿಕೊಂಡಿರೋ, ಬೆರಳ ತುದಿಯಲ್ಲೇ ಸಿನಿಮಾ ನೋಡ್ತಿರುವ ಸಿನಿಮಾ ಪ್ರೇಮಿಗಳು ಮೊದಲಿನಷ್ಟು ಉತ್ಸಾಹದಲ್ಲಿ ಸಿನಿಮಾ ಮಂದಿರದತ್ತ ಬರುತ್ತಿಲ್ಲ. ಹೀಗಾಗಿ ಸಿನಿಮಾರಂಗ ಕೊಂಚ ಆತಂಕದಲ್ಲಿತ್ತು. ಅಯ್ಯೋ ಇನ್ಮುಂದೆ ಜನ ಥಿಯೇಟರ್ ಗೆ ಬರೋದು ಕಷ್ಟನಾ?. ಹೀಗೆ ಆದರೆ ಥಿಯೇಟರ್ ಕಲ್ಚರ್ ನಶಿಸಿ ಹೋಗುತ್ತಾ ಎಂಬ ಭಯದಲ್ಲಿದ್ದರು. ಆಸರೀಗ ಕೊಂಚ ಭರವಸೆ ಎಂಬಂತೆ ನಿಧಾನಕ್ಕೆ ಪ್ರೇಕ್ಷಕರು ಥಿಯೇಟರ್ನತ್ತ ಬರುತ್ತಿದ್ದಾರೆ. ಸಿನಿಮಾ ಚೆನ್ನಾಗಿದ್ದರೆ, ಈಗಾಗಲೇ ಕಿರುತೆರೆಯಲ್ಲಿ ಪ್ರದರ್ಶನ ಕಂಡಿರೋ, ಓಟಿಟಿ ಫ್ಲಾಟ್ ಫಾರಂನಲ್ಲಿರುವ ಸಿನಿಮಾನಾ ಕೂಡ ಬೆಳ್ಳಿ ತೆರೆ ಮೇಲೆ ನೋಡಿ ಆನಂದಿಸುತ್ತೇವೆ ಎಂಬ ಸೂಚನೆನಾ ಕೊಡುತ್ತಿದ್ದಾರೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಶಿವಾಜಿ ಸುರತ್ಕಲ್ ಸಿನಿಮಾ.
ಆಕಾಶ್ ಶ್ರೀವತ್ಸ ನಿರ್ದೇಶನದ ರಮೇಶ್ ಅರವಿಂದ್ ನಟನೆಯ ಈ ಸಿನಿಮಾ ಕೋವಿಡ್ ಪೂರ್ವದಲ್ಲಿ ರಿಲೀಸ್ ಆಗಿತ್ತು. ವಿಮರ್ಶಕರಿಂದ ಅದ್ಧುತ ಪ್ರಶಂಸೆ ಪಡೆಯೋದರ ಜೊತೆ ನೋಡುಗರ ಮೆಚ್ಚುಗೆಯನ್ನ ಕೂಡ ಗಳಿಸಿತ್ತು. ಹಾಗೆಯೇ ಬಾಕ್ಸಾಫಿಸ್ ನಲ್ಲಿ ಸಹ ಉತ್ತಮವಾದ ಗಳಿಕೆ ಕಂಡಿತ್ತು.
ಈಗ ಕೊರೋನಾ ನಂತರದಲ್ಲಿ ಮತ್ತೆ ರಿ-ರಿಲೀಸ್ ಆಗಿದೆ 'ಶಿವಾಜಿ ಸುರತ್ಕಲ್' ಸಿನಿಮಾ. ಈಗಾಗಲೇ ಕಿರುತೆರೆಯಲ್ಲಿ ಪ್ರದರ್ಶನ ಕಂಡಿದ್ದರು ಸಹ, ಓಟಿಟಿ ಫ್ಲಾಟ್ ಫಾರಂನಲ್ಲಿ ಲಭ್ಯವಿದ್ದರು ಸಹ ಶಿವಾಜಿ ಸುರತ್ಕಲ್ ಸಿನಿಮಾಗೆ ಅದ್ಧುತ ಪ್ರತಿಕ್ರಿಯೆ ಸಿಗುತ್ತಿದೆ.
ಭಾನುವಾರ ಕೆಲವು ಮಲ್ಟಿಪ್ಲೆಕ್ಸ್ ಗಳಲ್ಲಿ ಬಹುತೇಕ ಟಿಕೆಟ್ ಗಳು ಖಾಲಿಯಾಗಿವೆ. ಆ ಮೂಲಕ ಕಳೆದ ಮೂರು ದಿನಗಳಲ್ಲಿ ಖಾಲಿ ಥಿಯೇಟರ್ ನೋಡಿ ಬೇಸತ್ತಿದ್ದವರಿಗೆ ಈಗ ಹೊಸ ಹೊಳಪು ಕಂಡಂತಾಗಿದೆ.
ವರ್ತೂರು ಪ್ರಕಾಶ್ಗೆ ಭೂ ಸಂಕಷ್ಟ? ಕೋಲಾರ ಮಾಜಿ ತಹಶೀಲ್ದಾರ್ ವಿರುದ್ಧ ತನಿಖೆಗೆ ಆದೇಶ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ