• Home
  • »
  • News
  • »
  • entertainment
  • »
  • Shivaji Surathkal Trailer: ರಮೇಶ್​ ಅರವಿಂದ್​ ಜೀವನದಲ್ಲಿ 101 ಸಂಖ್ಯೆ ಏಕೆ ಮುಖ್ಯ ಗೊತ್ತಾ..?

Shivaji Surathkal Trailer: ರಮೇಶ್​ ಅರವಿಂದ್​ ಜೀವನದಲ್ಲಿ 101 ಸಂಖ್ಯೆ ಏಕೆ ಮುಖ್ಯ ಗೊತ್ತಾ..?

'ಶಿವಾಜಿ ಸುರತ್ಕಲ್' ಸಿನಿಮಾದ ಪೋಸ್ಟರ್​

'ಶಿವಾಜಿ ಸುರತ್ಕಲ್' ಸಿನಿಮಾದ ಪೋಸ್ಟರ್​

Shivaji Surathkal Trailer: ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್​ನಲ್ಲಿ ಕಣ್ಣಿಗೆ ಕಾಣದ ಕೊಲೆಗಾರನಿಗಾಗಿ ಹುಡುಕಾಟ ನಡೆಸುವ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ರಮೇಶ್​ ಅರವಿಂದ್  ಕಾಣಿಸಿಕೊಂಡಿದ್ದರು. ಟೀಸರ್​ನಲ್ಲಿ ಮೊದಲು ಕೊಲೆ ಪ್ರಕರಣದ ಪತ್ತೆಗಾಗಿ ನಡೆಸುವ ತನಿಖೆಗೆ ಒತ್ತು ನೀಡಲಾಗಿತ್ತು. ಈಗ ಟ್ರೈಲರ್​ನಲ್ಲಿ ಅದಕ್ಕೆ ದೆವ್ವದ ಟಚ್​ ಕೊಡಲಾಗಿದೆ.

ಮುಂದೆ ಓದಿ ...
  • Share this:

ರಮೇಶ್ ಅರವಿಂದ್ ನಾಯಕನಾಗಿರುವ ಸಿನಿಮಾ 'ಶಿವಾಜಿ ಸುರತ್ಕಲ್ - ದಿ ಕೇಸ್ ಆಫ್ ರಣಗಿರಿ ರಹಸ್ಯ'. ಈ ಚಿತ್ರದಲ್ಲಿ ಅವರು ಸರಣಿ ಕೊಲೆಗಳ ಹಿಂದಿನ ಕಾರಣ ಹುಡುಕುವ ಖಡಕ್ ಪೊಲೀಸ್ ಆಫೀಸರ್ ಆಗಿದ್ದಾರೆ.


ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್​ನಲ್ಲಿ ಕಣ್ಣಿಗೆ ಕಾಣದ ಕೊಲೆಗಾರನಿಗಾಗಿ ಹುಡುಕಾಟ ನಡೆಸುವ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ರಮೇಶ್​ ಅರವಿಂದ್  ಕಾಣಿಸಿಕೊಂಡಿದ್ದರು. ಟೀಸರ್​ನಲ್ಲಿ ಮೊದಲು ಕೊಲೆ ಪ್ರಕರಣದ ಪತ್ತೆಗಾಗಿ ನಡೆಸುವ ತನಿಖೆಗೆ ಒತ್ತು ನೀಡಲಾಗಿತ್ತು. ಈಗ ಟ್ರೈಲರ್​ನಲ್ಲಿ ಅದಕ್ಕೆ ದೆವ್ವದ ಟಚ್​ ಕೊಡಲಾಗಿದೆ.ರಮೇಶ್ ಅವರಿಗೆ 101 ಸಂಖ್ಯೆ ಅಂದ್ರೆ ಸದ್ಯಕ್ಕೆ ತುಂಬಾ ಇಷ್ಟ ಎನ್ನಬಹುದು. ಕಾರಣ ಇದು ಅವರ ಅಭಿನಯದ 101ನೇ ಚಿತ್ರವಾಗಿದೆ. ಅದಕ್ಕೆ ಇರಬೇಕು ಸಿನಿಮಾದಲ್ಲೂ ಅವರ ಶಿವಾಜಿ ಸುರತ್ಕಲ್​ ಪಾತ್ರಕ್ಕೆ 101 ಸಂಖ್ಯೆಯನ್ನು ಲಿಂಕ್​ ಮಾಡಲಾಗಿದೆ. ಶಿವಾಜಿ ಅವರ ವೃತ್ತಿ ಜೀವನದಲ್ಲಿ ಬಗೆಹರಿಸಲಾಗದ ಪ್ರಕರಣದ ಸಂಖ್ಯೆ 101.
ಆಕಾಶ್ ಶ್ರೀವತ್ಸ ಆ್ಯಕ್ಷನ್ ಕಟ್ ಹೇಳಿರುವ ಈ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ಅವಿನಾಶ್, ಅಮಿತಾ ರಂಗನಾಥ್ ಪ್ರಮುಖ ತಾರಾಗಣದಲ್ಲಿದ್ದಾರೆ.


ಇದನ್ನೂ ಓದಿ: Anushka Shetty Marriage: ಟೀಂ ಇಂಡಿಯಾದ ಕ್ರಿಕೆಟರ್​ ಜೊತೆ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ ವೈರಲ್​..!


ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಕೊಂಚ ಮಟ್ಟಿಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ 'ಶಿವಾಜಿ ಸುರತ್ಕಲ್ ದಿ ಕೇಸ್ ಆಫ್ ರಣಗಿರಿ ರಹಸ್ಯ', ಇದೇ ತಿಂಗಳ 21ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ.

Poonam Pandey: ಇನ್​ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಬೋಲ್ಡ್​ ಚಿತ್ರಗಳನ್ನು ಹಂಚಿಕೊಂಡ ಪೂನಂ ಪಾಂಡೆ..!


Published by:Anitha E
First published: