Actress Ramya: ಡಾಕ್ಟರೇಟ್ ಪಡೆದ ರಮೇಶ್ ಅರವಿಂದ್‍ಗೆ ರಮ್ಯಾ ಶುಭಾಶಯ, ಜೊತೆಗೊಂದು ಪ್ರಶ್ನೆ

ಡಾಕ್ಟರೇಟ್ ಪಡೆದ ರಮೇಶ್ ಅರವಿಂದ್‍ಗೆ ನಟಿ ರಮ್ಯಾ ಶುಭಾಶಯ ತಿಳಿಸಿದ್ದಾರೆ. ಅಭಿನಂದನೆ ತಿಳಿಸಿ, ನಾನು ಚಿಕ್ಕ ಹುಡುಗಿಯಾಗಿದ್ದಾಗ, ಎರಡು ಬಾರಿ ಥಿಯೇಟರ್‍ನಲ್ಲಿ ನೋಡಿದ ಏಕೈಕ ಕನ್ನಡ ಚಿತ್ರ ಅಮೆರಿಕಾ ಅಮೆರಿಕಾ. ನಿಮ್ಮ ಮೆಚ್ಚಿನ ಚಿತ್ರ ಯಾವುದು ಎಂದು ಪ್ರಶ್ನೆ ಕೇಳಿದ್ದಾರೆ.

ರಮೇಶ್ ಅರವಿಂದ್

ರಮೇಶ್ ಅರವಿಂದ್

 • Share this:
  ಬೆಳಗಾವಿಯ ರಾಣಿ ಚನ್ನಮ್ಮ ವಿವಿಯಲ್ಲಿ (Belagavi Rani Channamma VV) 10ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಹೆಸರಾಂತ ಚಿತ್ರನಟ ರಮೇಶ್ ಅರವಿಂದ್ (Ramesh Aravind) ಸೇರಿ ಮೂವರಿಗೆ ಗೌರವ ಡಾಕ್ಟರೇಟ್ (Honorary Doctorate) ನೀಡಲಾಯಿತು. ಕನ್ನಡ (Kannada) ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ವಿವಿ ಗೌರವ ಡಾಕ್ಟರೇಟ್ ನೀಡಿತು. ಸಮಾಜ ಸೇವೆ ಕ್ಷೇತ್ರದಲ್ಲಿ ವಿ.ರವಿಚಂದರ್, ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈದ ಮಾತೆ ಅಕ್ಕ ಅನ್ನಪೂರ್ಣ ತಾಯಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. 30 ವರ್ಷ ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಟಿಕೆಟ್ ತೆಗೆದುಕೊಂಡು ಚಿತ್ರ ನೋಡಿದ ಪ್ರತಿ ಪ್ರೇಕ್ಷಕನಿಗೆ ನಾನು ಋಣಿ ಆಗಿರುವೆ ಎಂದು ಹೇಳಿದ್ದಾರೆ. ಇನ್ನು ಡಾಕ್ಟರೇಟ್ ಪಡೆದ ರಮೇಶ್ ಅರವಿಂದ್‍ಗೆ ನಟಿ ರಮ್ಯಾ (Ramya) ಶುಭಾಶಯ (Wish) ತಿಳಿಸಿದ್ದಾರೆ. ಅಲ್ಲದೇ ನಿಮ್ಮ ನೆಚ್ಚಿನ ಚಿತ್ರ (Film) ಯಾವುದು ಎಂದು ಕೇಳಿದ್ದಾರೆ.

  ರಮೇಶ್ ಅರವಿಂದ್‍ಗೆ ಗೌರವ ಡಾಕ್ಟರೇಟ್ ಪ್ರದಾನ

  ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ ರಮೇಶ್ ಅರವಿಂದ್‍ಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಚಿತ್ರನಟ ರಮೇಶ್ ಅರವಿಂದ್, ನನ್ನ ಈ ಸಂಭ್ರಮದ ಕ್ಷಣದಲ್ಲಿ ತಂದೆ ಇರಬೇಕಿತ್ತು. ನನಗೆ ಗೌರವ ಡಾಕ್ಟರೇಟ್ ಸಿಗ್ತಿದ್ದಂತೆ ಸಂಬಂಧಿಕರಿಗೆ ವಾಟ್ಸಪ್ ಮೆಸೇಜ್ ಮಾಡಿದೆ. ಅಭಿನಂದನೆಗಳು, ತಂದೆ ಇರಬೇಕಿತ್ತು ಎಂದು ಆ ಕಡೆಯಿಂದ ಪ್ರತಿಕ್ರಿಯೆ ಬಂತು ಎಂದ್ರು. ಇದೇ ವೇಳೆ ತಂದೆ ನೆನೆದು ರಮೇಶ್ ಅರವಿಂದ್ ಭಾವುಕರಾದರು.

  ಪ್ರೇಕ್ಷಕರಿಗೆ ನಾನು ಋಣಿಯಾಗಿರುವೆ

  30 ವರ್ಷ ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಟಿಕೆಟ್ ತೆಗೆದುಕೊಂಡು ಚಿತ್ರ ನೋಡಿದ ಪ್ರತಿ ಪ್ರೇಕ್ಷಕನಿಗೆ ನಾನು ಋಣಿ ಆಗಿರುವೆ. ಕರುನಾಡಿನ ಜನರು ನನ್ನ, ನನ್ನ ಚಿತ್ರ ನೋಡಿ ಪ್ರೋತ್ಸಾಹಿಸಿದರು. ನನ್ನ ಜೊತೆಗೆ ನಟಿಸಿರುವ ಹಲವು ನಾಯಕ-ನಟಿಯರನ್ನು ನಾನು ಸ್ಮರಿಸುವೆ. ಎಲ್ಲರ ಸಹಕಾರವೇ ನನ್ನ ಈ ಸಾಧನೆಗೆ ಕಾರಣ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.

  ಇದನ್ನೂ ಓದಿ: Kannadathi: ಸಾಯುವ ಡ್ರಾಮಾ ಮಾಡಿ ಭುವಿಯನ್ನ ದಾಳವಾಗಿಸಿಕೊಳ್ತಾಳಾ ಸಾನಿಯಾ? ಹರ್ಷನ ಮುಂದೆ ಠುಸ್ ಪಟಾಕಿಯಾದ ಆದಿ ಮಡದಿ

  ನಟಿ ರಮ್ಯಾ ಶುಭಾಶಯ
  ಡಾಕ್ಟರೇಟ್ ಪಡೆದ ರಮೇಶ್ ಅರವಿಂದ್‍ಗೆ ನಟಿ ರಮ್ಯಾ ಶುಭಾಶಯ ತಿಳಿಸಿದ್ದಾರೆ. ಅಭಿನಂದನೆ ತಿಳಿಸಿ, ನಾನು ಚಿಕ್ಕ ಹುಡುಗಿಯಾಗಿದ್ದಾಗ, ಎರಡು ಬಾರಿ ಥಿಯೇಟರ್‍ನಲ್ಲಿ ನೋಡಿದ ಏಕೈಕ ಕನ್ನಡ ಚಿತ್ರ ಅಮೆರಿಕಾ ಅಮೆರಿಕಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ಜೊತೆ ಸಿನಿಮಾ ಮಾಡಬೇಕೆನ್ನುವ ಕಾರಣಕ್ಕೆ ಅಮೃತಧಾರೆ ಮಾಡಿದೆ. ಡಾ. ರಮೇಶ್ ಅರವಿಂದ್, ನಿಮ್ಮ ಮೆಚ್ಚಿನ ಚಿತ್ರ ಯಾವುದು ಎಂದು ಪ್ರಶ್ನೆ ಕೇಳಿದ್ದಾರೆ.

  48 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪ್ರಧಾನ
  ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ವಹಿಸಿದ್ದರು. ವಿವಿಧ ವಿಭಾಗಗಳಲ್ಲಿ 48 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪ್ರಧಾನ ಮಾಡಲಾಯಿತು.  ಸ್ನಾತಕೋತ್ತರ-ಪದವಿಯ 163 ವಿದ್ಯಾರ್ಥಿಗಳಿಗೆ ಪದಕ ವಿತರಣೆ ಮಾಡಲಾಯಿತು. ಆಂಧ್ರದ ಕೇಂದ್ರಿಯ ಬುಡಕಟ್ಟು ವಿವಿ ಕುಲಪತಿ ಪ್ರೊ. ಟಿ.ವಿ ಕಟ್ಟಿಮನಿ ಅವರರು ಘಟಿಕೋತ್ಸವ ಭಾಷಣ ಮಾಡಿದರು.

  ಇದನ್ನೂ ಓದಿ: Puttakkana Makkalu: ಸ್ನೇಹಾಳನ್ನು ಪ್ರೀತಿಸ್ತಿರೋ ಶ್ರೀಗೆ ಪೂರ್ವಿ ಕೊಟ್ಲು ಶಾಕ್! ಕಂಠಿಗೆ ಬಿಸಿ ತುಪ್ಪವಾದ ಮದುವೆ ಮಾತುಕಥೆ

  11 ಸುವರ್ಣ ಪದಕ ಪ್ರದಾನ

  ವಿಶ್ವವಿದ್ಯಾಲಯದಿಂದ ಫಸ್ಟ್ ರ‍್ಯಾಂಕ್ ಪಡದುಕೊಂಡ 6 ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ವಿಷಯವಾರು ಅತೀ ಹೆಚ್ಚು ಅಂಕ ಗಳಿಸಿದ 4 ವಿದ್ಯಾರ್ಥಿನಿಯರಿಗೆ ಸೇರಿ 11 ಸುವರ್ಣ ಪದಕಗಳನ್ನು ಪ್ರದಾನ ಮಾಡಲಾಯಿತು.
  Published by:Savitha Savitha
  First published: