Ramesh Aravind Book: ಸ್ವರ್ಗ ಅನ್ನೋದು ದೂರದಲ್ಲಿ ಎಲ್ಲೋ ಇಲ್ಲ, ಅದು ನಮ್ಮ ತಲೆಯಲ್ಲಿಯೇ ಇದೆ: ಪ್ರೀತಿಯಿಂದ ಹೇಳಿದರು ರಮೇಶ್ ಅರವಿಂದ್

ಸೋಷಿಯಲ್ ಮೀಡಿಯಾದಲ್ಲಿ ನಾನು ಹೇಳುತ್ತಿದ್ದ ಮಾತುಗಳ ಚಂದದ ಸಮಗ್ರ ರೂಪವೇ ಈ ಪ್ರೀತಿಯಿಂದ ರಮೇಶ್ ಪುಸ್ತಕ. ಹಾಗಂತ ನನ್ನ ಮಾತಿನ ಜರ್ನಿ ನಿಲ್ಲೋದಿಲ್ಲ. ಸಾಮಾಜಿಕ ತಾಣದಲ್ಲಿ ಅದು ಮುಂದುವರೆಯುತ್ತಲೇ ಇರುತ್ತದೆ.

ರಮೇಶ್ ಅರವಿಂದ್ ಬರೆದ ಪುಸ್ತಕದ ಬಗ್ಗೆ ಸಂದರ್ಶನ

ರಮೇಶ್ ಅರವಿಂದ್ ಬರೆದ ಪುಸ್ತಕದ ಬಗ್ಗೆ ಸಂದರ್ಶನ

  • Share this:
ಪ್ರೀತಿಯಿಂದ ರಮೇಶ್ ಅವ್ರು ಸ್ಪೂರ್ತಿದಾಯಕ ಅದ್ಭುತ ಪುಸ್ತಕವೊಂದನ್ನ (Ramesh Aravind Book) ಬರೆದಿದ್ದಾರೆ. ಯುವ ಜನತೆಯ ಮನೋಬಲ ಹೆಚ್ಚಿಸೋ ಪುಸ್ತಕ ಇದು ಅಂದ್ರೆ ತಪ್ಪಾಗೋದಿಲ್ಲ. ವಿಶೇಷವೆಂದ್ರೆ ತಮ್ಮ ಬದುಕಿನ ಬದಲಾವಣೆಗಳನ್ನೆ ರಮೇಶ್ ಅರವಿಂದ್ (Ramesh Aravind) ಇಲ್ಲಿ ಹೇಳಿಕೊಂಡಿದ್ದಾರೆ. ಜೀವನದಲ್ಲಿ ತಾವು ಹಂತ ಹಂತವಾಗಿ ಬೆಳೆದು ಬಂದ ರೀತಿ, ಅದನ್ನ ನಿಭಾಯಿಸಿದ ರೀತಿ, ಎಲ್ಲವೂ ಇಲ್ಲಿ ಜೀವನದ ಸರಳ ಸೂತ್ರಗಳೇ ಆಗಿವೆ. ಪ್ರತಿಯೊಬ್ಬರ ಜೀವನದಲ್ಲಿ ಬರುವ ಏರಿಳಿತಗಳಿಗೆ ಇಲ್ಲಿ ಒಂದು ಹಂತಕ್ಕೆ ಪರಿಹಾರವೂ ಇದೆ ಅಂತಲೇ ಹೇಳಬಹುದು. ಸರಳ ಸ್ಪೂರ್ತಿದಾಯಕ ಸೂತ್ರಗಳ ಈ ಪುಸ್ತಕ ಭಾನುವಾರ (Book Released) ಬಿಡುಗಡೆ ಹೊಂದಿದೆ. ಈ ಹಿನ್ನೆಲೆಯಲ್ಲಿಯೇ ರಮೇಶ್ ಅರವಿಂದ್ ಪುಸ್ತಕದ ಹಿಂದಿನ ಅಸಲಿ ವಿಷಯ ಹೇಳಿಕೊಂಡಿದ್ದಾರೆ. ತಮ್ಮ ಪುಸ್ತಕದ ಬರವಣಿಗೆ ಹಿಂದಿನ ಸ್ಪೂರ್ತಿಯನ್ನೂ ಹೇಳಿಕೊಂಡಿದ್ದಾರೆ. ತಮ್ಮ ಪುಸ್ತಕ ಪ್ರೀತಿಯ ವಿವರಗಳೂ ಇಲ್ಲಿ ದೊರೆಯುತ್ತದೆ.

ರಮೇಶ್ ಅರವಿಂದ್ ಅವರಿಗೆ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರ ಕೊಟ್ಟಿದ್ದಾರೆ. ಆ ಉತ್ತರ ಮತ್ತು ನಮ್ಮ ಪ್ರಶ್ನೆಗಳು ಎರಡೂ ಇಲ್ಲಿವೆ ಓದಿ.

Ramesh Aravind Interview on his New Book
ರಮೇಶ್ ಅರವಿಂದ್ ಪುಸ್ತಕ ಪ್ರೀತಿಯಿಂದ ರಮೇಶ್ ಬಿಡುಗಡೆ ಸಮಾರಂಭದ ಸಮಯ


ಸರ್ ಪುಸ್ತಕ ಓದೋದು ಒಂದು ಖುಷಿ. ಪುಸ್ತಕ ಬರೆಯೋದು ಮತ್ತೊಂದು ಖುಷಿ. ಈ ಪ್ರಶ್ನೆಗೆ ನಿಮ್ಮ ಉತ್ತರ ?

ರಮೇಶ್ ಅರವಿಂದ್: ಒಳ್ಳೆ ಬರವಣಿಗೆಯ, ಒಳ್ಳೆ ಬರಹಗಾರರ ಪುಸ್ತಕ ಓದೋದೇ ಇನ್ನೊಂದು ಸಂತೋಷ. ಹೀಗೆ ಪುಸ್ತಕ ಓದೋದ್ರಿಂದ ಬೇರೆ ಬೇರೆ ಚಿಂತನೆ, ಹೊಸ ದೃಷ್ಟಿ ಕೋನ, ಹೊಸ ಪಾತ್ರಗಳ ಪರಿಚಯ ಆಗುತ್ತದೆ. ಪುಸ್ತಕ ಬರೆಯೋದು ಮತ್ತೊಂದು ಖುಷಿ. ಅದನ್ನ ಬರೆದು ಮುಗಿಸೋವರೆಗೂ ಅದು ಕಷ್ಟಾನೇ. ನೀವು ಅಂದುಕೊಂಡ ಹಾಗೆ ಪುಸ್ತಕ ಬಂದ್ರೆ, ಆ ಖುಷಿನೇ ಬೇರೆ. ನಿಮ್ಮನ್ನ, ನಿಮ್ಮ ಯೋಚನೆ ಮಾಡೋ ರೀತಿಯನ್ನ ಬ್ರಾಡ್​ಕಾಸ್ಟ್​ ಮಾಡೋ ಒಂದು ಲೌಡ್​ಸ್ಪೀಕರ್ ಆಗಿ ಬಿಡುತ್ತದೆ ನೀವು ಬರೆದ ನಿಮ್ಮ ಆ ಒಂದು ಪುಸ್ತಕ.

ನಿಮ್ಮ ಸ್ಪೂರ್ತಿದಾಯಕ ಮಾತುಗಳನ್ನ ನಾವು ಪುಟ್ಟ ವೀಡಿಯೋದಲ್ಲಿ ನೋಡ್ತಾನೆ ಇರುತ್ತೇವೆ. ಪುಸ್ತಕ ಬಂದ್ಮೇಲೆ ಅವೆಲ್ಲ ಮಿಸ್ ಆಗುತ್ತವೇಯೇ ?

ರಮೇಶ್ ಅರವಿಂದ್: ಟಿವಿಯಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ನಾನು ಹೇಳುತ್ತಿದ್ದ ಮಾತುಗಳ ಚಂದದ ಸಮಗ್ರ ರೂಪವೇ ಈ ಪ್ರೀತಿಯಿಂದ ರಮೇಶ್ ಪುಸ್ತಕ.ಹಾಗಂತ ನನ್ನ ಮಾತಿನ ಜರ್ನಿ ಅದು ನಿಲ್ಲೋದಿಲ್ಲ. ಸಾಮಾಜಿಕ ತಾಣದಲ್ಲಿ ಅದು ಮುಂದುವರೆಯುತ್ತಲೇ ಇರುತ್ತದೆ.

ಸದ್ಯದ ದಿನಗಳಲ್ಲಿ ಪ್ರತಿಯೊಬ್ಬರು ಒತ್ತಡದಲ್ಲಿಯೇ ಜೀವನ ಮಾಡುತ್ತಾರೆ. ನಿಮ್ಮ ಪುಸ್ತಕ ಹೊಸ ಉತ್ಸಾಹ ತುಂಬುತ್ತದೆ ಅನಿಸುತ್ತಿದೆ. ಇದಕ್ಕೆ ನಿಮ್ಮ ಅಭಿಪ್ರಾಯ ?

ರಮೇಶ್ ಅರವಿಂದ್: ಸ್ವರ್ಗ ಅನ್ನೋದು ದೂರ ಎಲ್ಲೋ ಇಲ್ಲ. ಅದು ನಮ್ಮ ತಲೆಯಲ್ಲಿಯೇ ಇದೆ. ನಮ್ಮ ಯೋಚನೆಗಳೇ ನಮ್ಮ ಜೀವನವನ್ನ ನಿರ್ಧಾರ ಮಾಡುತ್ತವೆ. ಹಾಗಾಗಿ ತುಂಬಾ ಒತ್ತಡದಲ್ಲಿ, ಬೇಡವಾದ ಚಿಂತೆಯಲ್ಲಿ, ಬೇಡವಾದ ಅನುಮಾನಗಳಲ್ಲಿ ಇದ್ದರೇ ಜೀವನ ನರಕ ಆಗಿಬಿಡುತ್ತದೆ. ನನ್ನ ಪುಸ್ತಕ ಇರೋದೇ ಪಾಸಿಟಿವಿಟಿ ಬಗ್ಗೇನೆ ಹೇಳುತ್ತದೆ. ಆರೋಗ್ಯಕರವಾದ ದೃಷ್ಟಿಕೋನ, ಆರೋಗ್ಯಕರವಾದ ಜೀವನಕ್ಕೆ ಕಾರಣ ಆಗುತ್ತದೆ ಅನ್ನೋದು ನನ್ನವಾದ, ಇಡೀ ಪುಸ್ತಕ ಇರೋದೇ ಇದರ ಬಗ್ಗೆ.

ನಿಮ್ಮ ಸ್ಪೂರ್ತಿದಾಯಕ ಮಾತುಗಳು ವೀಡಿಯೋ ಮೂಲಕ ಫ್ರೀಯಾಗಿಯೇ ಸಿಗುತ್ತವೆ. ನಿಮ್ಮ ಪುಸ್ತಕ ಎಲ್ಲರಿಗೂ ಖರೀದಿಸೋ ಬೆಲೆಯಲ್ಲಿಯೇ ಇರುತ್ತದೆಯೇ ?

ರಮೇಶ್ ಅರವಿಂದ್: ಪ್ರೀತಿಯಿಂದ ರಮೇಶ್ ಪುಸ್ತಕ 180 ಪುಟಗಳು ಇವೆ. ಇದನ್ನ ನಮ್ಮ ಪ್ರಕಾಶಕರು 225 ರೂಪಾಯಿಗೆ ಕೊಡ್ತಾಯಿದ್ದಾರೆ.

ನಿಮ್ಮ ಈ ಪುಸ್ತಕ ಅಧ್ಯಾಯದ ರೂಪದಲ್ಲಿ ಇದಿಯೇ? ಕಥೆ ರೂಪದಲ್ಲಿ ಹೇಳ್ತಾ ಹೋಗ್ತಿರಾ?

ರಮೇಶ್ ಅರವಿಂದ್: ಈ ಪುಸ್ತಕ ವಿಶೇಷವಾಗಿಯೇ ಡಿಸೈನ್ ಆಗಿದೆ. ಅಧ್ಯಾಯದ ರೂಪದಲ್ಲಿ ಎಲ್ಲವೂ ಇಲ್ಲಿ ಬರುತ್ತವೆ. ನನ್ನ ಜೀವನದ ಪ್ರತಿ ಹಂತವೂ ಇಲ್ಲಿ ಇದೆ. ನನಗೆ ಸಹಾಯವಾದ ಐದು ವಿಚಾರಗಳೂ ಇಲ್ಲಿವೆ. ಅವು ನಿಮಗೂ ಸಹಾಯ ಆಗಬಹುದು. ಬಹಳ ಸರಳವಾದ ರೀತಿಯಲ್ಲಿಯೇ ಬರೆದಿದ್ದೇನೆ. ಸ್ಕೂಲ್ ಮಕ್ಕಳು ಓದಿದರೂ ಅವರಿಗೂ ಇದು ಅರ್ಥವಾಗುತ್ತದೆ.

ರಮೇಶ್ ಅರವಿಂದ್ ತಮ್ಮ ಪುಸ್ತಕದ ವಿಶೇಷತೆಯ ಬಗ್ಗೆ ನಮ್ಮ ಜೊತೆಗೆ ಹೀಗೆ ಎಲ್ಲ ವಿಷಯಗಳನ್ನ ಹಂಚಿಕೊಂಡಿದ್ದಾರೆ.
First published: