Ramesh Aravind: ಬೆಸ್ಟ್​ ಫ್ರೆಂಡ್ ಆಗಿರುವ ಮಡದಿಗೆ ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷವಾಗಿ ಶುಭ ಕೋರಿದ ರಮೇಶ್​ ಅರವಿಂದ್​..!

Ramesh Aravind And Archana: ರಮೇಶ್​ ಹಾಗೂ ಅರ್ಚನಾ 30 ವರ್ಷಗಳ ಕಾಲ ಖುಷಿಯಿಂದ ಯಶಸ್ವಿಯಾಗಿ ಜೀವನದ ಬಂಡಿಯನ್ನು ಎಳೆದಿದ್ದಾರೆ. ರಮೇಶ್​ ಸಿನಿ ಜೀವನದಂತೆಯೇತಮ್ಮ ವೈಯಕ್ತಿಕ ಜೀವನದಲ್ಲೂ ಪರ್ಫೆಕ್ಟ್​ ಎನಿಸಿಕೊಂಡಿದ್ದಾರೆ.

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಮೇಶ್​ ಅರವಿಂದ್​ ದಂಪತಿ

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಮೇಶ್​ ಅರವಿಂದ್​ ದಂಪತಿ

  • Share this:
ಸ್ಯಾಂಡಲ್​ವುಡ್​ ತ್ಯಾಗರಾಜ ನಟ ರಮೇಶ್ ಅರವಿಂದ್​ ಅವರ ಜೀನದಲ್ಲಿ ಇಂದು ವಿಶೇಷ ದಿನ. ಅವರ ದಾಂಪತ್ಯ ಜೀವನ ಆರಂಭವಾದ ದಿನ. ಹೌದು, ಅರ್ಚನಾ ಅವರನ್ನು ಪ್ರೀತಿಸಿ ವಿವಾಹವಾದ ರಮೇಶ್​ ಅರವಿಂದ್​ ಅವರ ದಾಂಪತ್ಯಕ್ಕೆ ಈಗ 30ರ ಸಂಭ್ರಮ. 1991ರ ಜುಲೈ 7ರಂದು ಅರ್ಚನಾ ಹಾಗೂ ರಮೇಶ್ ಅರವಿಂದ್​ ಅವರು ಸಪ್ತಪದಿ ತುಳಿದು ನವದಾಂಪತ್ಯಕ್ಕೆ ಕಾಲಿಟ್ಟರು. ರಮೇಶ್ ಅರವಿಂದ್​ ಹಾಗೂ ಅರ್ಚನಾ ಅವರು ಇಂದು 30ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ರಮೇಶ್​ ಸ್ಟಾರ್​ ನಟನಾಗುವ ಮೊದಲು ಅರ್ಚನಾ ಅವರನ್ನು ಭೇಟಿ ಮಾಡಿದ್ದು. ನಂತರ ಸ್ನೇಹ ಬೆಳೆದು ಅದು ಪ್ರೀತಿಯಾಗಿ ಬದಲಾಯಿತು. ಅರ್ಚನಾ ಮೂಲತಃ ಉತ್ತರಭಾರತದವರು. ರಮೇಶ್ ಹಾಗೂ ಅರ್ಚನಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗಷ್ಟೆ ರಮೇಶ್ ಹಾಗೂ ಅರ್ಚನಾ ತಮ್ಮ ಮಗಳಿಗೆ ಮದುವೆ ಮಾಡಿದ್ದಾರೆ. 

ರಮೇಶ್​ ಹಾಗೂ ಅರ್ಚನಾ 30 ವರ್ಷಗಳ ಕಾಲ ಖುಷಿಯಿಂದ ಯಶಸ್ವಿಯಾಗಿ ಜೀವನದ ಬಂಡಿಯನ್ನು ಎಳೆದಿದ್ದಾರೆ. ರಮೇಶ್​ ಸಿನಿ ಜೀವನದಂತೆಯೇತಮ್ಮ ವೈಯಕ್ತಿಕ ಜೀವನದಲ್ಲೂ ಪರ್ಫೆಕ್ಟ್​ ಎನಿಸಿಕೊಂಡಿದ್ದಾರೆ. ಆದಷ್ಟು ಲೈಮ್​ ಲೈಟ್​ನಿಂದ ದೂರ ಇರುತ್ತಾರೆ ಅರ್ಚನಾ ಅವರು.

Kichcha Sudeep, Yash, Sumalatha, Prajwal Devaraj, Ragini, SriiMurali, ramesh aravind, ramesh aravind daughter marriage reception, Sudeep, Yash and Sumalatha Ambareesh visit reception, Sudeep and Yash dance, ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆ, ನಿಹಾರಿಕಾ ಆರತಕ್ಷತೆಯಲ್ಲಿ ಸುದೀಪ್, ಯಶ್ ಮತ್ತು ಸುಮಲತಾ ಅಂಬರೀಶ್, ಒಂದೇ ಫ್ರೇಮಿನಲ್ಲಿ ಸೆರೆಯಾದ ಸುಮಲತಾ, ಯಶ್ ಮತ್ತು ಸುದೀಪ್, ಸುದೀಪ್ ಮತ್ತು ಯಶ್ ಡ್ಯಾನ್ಸ್
ರಮೇಶ್​ ಅರವಿಂದ್ ಅವರ ಮಗಳ ಮದುವೆಯ ಚಿತ್ರ


ರಮೇಶ್ ಅವರ ಯಶಸ್ಸಿನ ಹಿಂದಿರುವ ಶಕ್ತಿ ಎಂದರೆ ಅದು ಅರ್ಚನಾ ಅಂತೆ ಹೀಗೆಂದು ರಮೇಶ್ ಅರವಿಂದ್ ಅವರೇ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಪ್ರತಿ ವರ್ಷ ರಮೇಶ್ ಅರವಿಂದ್​ ತಮ್ಮ ಮದುವೆ ಹಾಗೂ ತಮ್ಮ ಆರತಕ್ಷತೆ ನಡೆದಿದ್ದ ದಿನದಂದು ತೆಗೆದ ಚಿತ್ರಗಳನ್ನು ರಮೇಶ್​ ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: Arjun Sarja: ಚೆನ್ನೈನಲ್ಲಿ ಅರ್ಜುನ್ ಸರ್ಜಾ ನಿರ್ಮಿಸಿರುವ ಆಂಜನೇಯ ದೇವಾಲಯದ ಚಿತ್ರಗಳು

ಈ ಸಲವೂ ಸಹ ಮಡದಿ ಅರ್ಚನಾ ಅವರ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿರುವ ನಟ, ವಿವಾಹ ವಾರ್ಷಿಕೋತ್ಸವಕ್ಕೆ ವಿಶ್​ ಮಾಡಿದ್ದಾರೆ.




July7... ಅಂದು Best friend ಹೆಂಡತಿಯಾದರು. ಇಂದು ಹೆಂಡತಿಯೇ Bestfriend ಕೂಡ ಎಂದು ಬರೆಯುವ ಮೂಲಕ ವಿಶೇಷವಾಗಿ ಶುಭ ಕೋರಿದ್ದಾರೆ ರಮೇಶ್​ ಅರವಿಂದ್​. ರಮೇಶ್​ ಹಾಗೂ ಅರ್ಚನಾ ಅವರಿಗೆ ನಿಹಾರಿಕಾ ಹಾಗೂ ಅರ್ಜುನ್​ ಎಂಬ ಮಕ್ಕಳಿದ್ದಾರೆ.

ಇದನ್ನೂ ಓದಿ: RIP Dilip Kumar: ಮೊಹಮ್ಮದ್​ ಯೂಸುಫ್​ ಖಾನ್ ಟ್ರಾಜಿಡಿ ಕಿಂಗ್​​ ದಿಲೀಪ್​ ಕುಮಾರ್ ಆದ ಕಥೆ..!

ಕಳೆದ ವರ್ಷ ಡಿಸೆಂಬರ್​ನಲ್ಲಿ ರಮೇಶ್​ ಅವರ ಮಗಳು ನಿಹಾರಿಕಾ ಅವರ ಮದುವೆ ನಡೆಯಿತು. ಜೊತೆಯಲ್ಲೇ ಕೆಲಸ ಮಾಡುವ ಅಕ್ಷಯ್​ ಅವರೊಂದಿಗೆ ನಿಹಾರಿಕಾ ಸಪ್ತಪದಿ ತುಳಿದಿದ್ದಾರೆ.

ಇದನ್ನೂ ಓದಿ: Bigg Boss 8 Kannada: ವೈಷ್ಣವಿಗೆ ಮದುವೆಯಾಗಬೇಡಿ ಎಂದು ಸಲಹೆ ಕೊಟ್ಟ ಚಕ್ರವರ್ತಿ ಚಂದ್ರಚೂಡ..!

ರಮೇಶ್ ಅರವಿಂದ್ ಅವರು ಸಿನಿಮಾಗಳ ಜತೆಗೆ ಕಿರುತೆರೆಯಲ್ಲೂ ಸಕ್ರಿಯವಾಗಿದ್ದಾರೆ. ಈಗ ವೆಬ್​ ಸರಣಿಯತ್ತ ಗಮನ ಹರಿಸಿರುವ ರಮೇಶ್​ ಅರವಿಂದ್ ಅದಕ್ಕೆ ಬೇಕಾದ ತಯಾರಿಯಲ್ಲಿ ತೊಡಗಿದ್ದಾರೆ. ಇನ್ನು ಅವರ ಹೊಸ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿ ನಿಂತಿವೆ. ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ನಿರ್ದೇಶನ ಹಾಗೂ ನಿರ್ಮಾಣದಲ್ಲೂ ರಮೇಶ್ ಅರವಿಂದ್ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Anitha E
First published: