• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Shivaji Surathkal-2 Review: ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ವಿಲನ್ ಯಾರು? ಇಲ್ಲಿದೆ ಕಂಪ್ಲೀಟ್​ ರಿವ್ಯೂ

Shivaji Surathkal-2 Review: ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ವಿಲನ್ ಯಾರು? ಇಲ್ಲಿದೆ ಕಂಪ್ಲೀಟ್​ ರಿವ್ಯೂ

ಚಿತ್ರದಲ್ಲಿ ಅಪ್ಪ-ಮಗಳ ಕಥೆ ಇದಿಯೇ?

ಚಿತ್ರದಲ್ಲಿ ಅಪ್ಪ-ಮಗಳ ಕಥೆ ಇದಿಯೇ?

ಚಿತ್ರದಲ್ಲಿ ದೆವ್ವ ಏನಾದರೂ ಇದೀಯೇ ಅನ್ನೋ ಅನುಮಾನವೂ ಬರುತ್ತದೆ. ಆಗೊಮ್ಮೆ ಈಗೊಮ್ಮೆ ಬರುವ ರಮೇಶ್ ಅರವಿಂದ್ ಅವರ ಹಾಸ್ಯಭರಿತ ಮಾತುಗಳು ಮಜಾಕೊಡುತ್ತವೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆ ಸಿನಿಮಾಗಳು (Shivaji Surathkal-2 Film Review) ಸಾಕಷ್ಟು ಬಂದಿವೆ. ಅದಕ್ಕೆ ಮತ್ತೊಂದು ಉದಾಹರಣೆ ಶಿವಾಜಿ ಸುರತ್ಕಲ್-2 ಅಂತ ಹೇಳಬಹುದು. ಈ ಚಿತ್ರದಲ್ಲಿ ಡೈರೆಕ್ಟರ್ ಆಕಾಶ್ ಶ್ರೀವತ್ಸ (Ramesh Aravind Movie) ಅದ್ಭುತವಾದ ಕೆಲಸವನ್ನ ಮಾಡಿದ್ದಾರೆ. ಕಥೆ ಹೇಳಿರೋ ರೀತಿ ಕೂಡ ಸ್ಪೆಷಲ್ ಆಗಿದೆ. ಈ ಚಿತ್ರದ ಮೂಲಕ ಸಿನಿ ಪ್ರೇಮಿಗಳು ಒಂದ್ ಒಳ್ಳೆ ಸಿನಿಮಾ ನೋಡಿದ ಖುಷಿಯಿಂದಲೇ (Shivaji Surathkal-2 Review) ಹೊರ ಬರುತ್ತಾರೆ. ಸಿನಿಮಾದಲ್ಲಿ ಬರೋ ಪ್ರತಿ ಎಲಿಮೆಂಟ್ಸ್‌ಗೂ ಇಲ್ಲಿ ಅರ್ಥ ಇದೆ. ಪ್ರತಿ ಸೀನ್‌ಗೂ ಲಿಂಕ್ ಇದೆ. ತುಂಬಾನೇ ಸೂಕ್ಷ್ಮವಾಗಿಯೇ ಈ ಚಿತ್ರವನ್ನ (Shivaji Surathkal-2 Movie) ಮಾಡಿದ್ದಾರೆ. ಇದರ ಕಂಪ್ಲೀಟ್ ರಿವ್ಯೂ ಇಲ್ಲಿದೆ ಓದಿ.


ಶಿವಾಜಿ ಸುರತ್ಕಲ್-2 ಸಿನಿಮಾ ಎಲ್ಲರಿಗೂ ಗೆಸ್ ಮಾಡಿದಂತೆ ಇದೊಂದು ಮರ್ಡರ್ ಮಿಸ್ಟರಿ ಸಿನಿಮಾ. ಇದನ್ನ ಎಲ್ಲ ಸಿನಿಮಾಗಳಲ್ಲೂ ಸಿನಿಪ್ರೇಮಿಗಳು ನೋಡಿದ್ದಾರೆ. ಅದರಲ್ಲಿ ಏನು ಹೊಸದು ಅಂತ ನೀವು-ನಾವು ಕೇಳಬಹುದು.


Ramesh Aravind Acted Kannada Shivaji Surathkal-2 Cinema Review Story
ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಏನ್ ವಿಶೇಷ?


ಶಿವಾಜಿ ಮನಸ್ಸಿನಲ್ಲಿ ಕಿಲ್ಲರ್ ಕೇಸ್ ರೋಮಿಂಗ್!


ಆದರೆ ಶಿವಾಜಿ ಸುರತ್ಕಲ್-2 ಸಿನಿಮಾದ ಚಿತ್ರಕಥೆ ಸೂಪರ್ ಆಗಿದೆ. ಪಾತ್ರಗಳಿಗೆ ಬರೆದ ಮಾತುಗಳೂ ತುಂಬಾ ಸ್ಪುಟವಾಗಿಯೇ ಇವೆ. ಹೆಚ್ಚು ಇಲ್ಲ, ಕಡಿಮೇನೂ ಇಲ್ಲ. ಇಲ್ಲಿ ನಾಯಕನ ತಲೆಯಲ್ಲಿ ಆ ಒಂದು ಕಿಲ್ಲರ್ ಕೇಸ್ ಓಡ್ತಾನೇ ಇರುತ್ತದೆ.




ಹೌದು, ಇಡೀ ಸಿನಿಮಾದಲ್ಲಿ ಸಾಕಷ್ಟು ವಿಷಯಗಳಿವೆ. ಕೊಲೆಗಾರನ ಕಿಲ್ಲಿಂಗ್ ಪ್ಯಾಟರ್ನ್‌ ಏನೂ ಅನ್ನೋದೇ ಇಲ್ಲಿ ಇಂಟ್ರಸ್ಟಿಂಗ್ ಆಗಿದೆ. ಇದನ್ನ ಬೆನ್ನಟ್ಟಿ ಹೊರಡುವ ಶಿವಾಜಿ ಸುರತ್ಕಲ್ ಕಥೆ ಇಲ್ಲಿ ಆ ಕೇಸ್‌ಗೂ ರಿಲೇಟ್ ಆಗಿದೆ ಅನ್ನೊದು ಸೆಕೆಂಡ್ ಹಾಫ್‌ ಆರಂಭದಲ್ಲಿಯೇ ತಿಳಿದು ಬಿಡುತ್ತದೆ.


ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಏನ್ ವಿಶೇಷ?


ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ಪಾರ್ಟ್‌ ಒನ್ ಪಾತ್ರಗಳೂ ಇವೆ. ಅದರಲ್ಲಿ ರಾಧಿಕಾ ನಾರಾಯಣ್ ಪಾತ್ರ ಸ್ಪೆಷಲ್ ಆಗಿಯೇ ಈ ಚಿತ್ರದಲ್ಲಿ ಬರುತ್ತದೆ. ಅದನ್ನ ತೆರೆ ಮೇಲೆ ನೋಡಬೇಕು. ಹಾಗಿದೆ ಅಂತಲೇ ಈಗ ಇಲ್ಲಿ ಹೇಳಬಹುದು ನೋಡಿ.


ಶಿವಾಜಿ ಸುರತ್ಕಲ್-2 ಚಿತ್ರದ ಮೊದಲಾರ್ಧದಲ್ಲಿ ಇಡೀ ಸಿನಿಮಾ ನೀಟ್ ಆಗಿಯೇ ಸಾಗುತ್ತದೆ. ಹೋಗ್ತಾ ಹೋಗ್ತಾ ಕಥೆಯಲ್ಲಿ ಇಂಟ್ರಸ್ಟ್ ಬರುತ್ತದೆ. ಇಡೀ ಕಥೆಯ ಹಿಂಟ್‌ ಅನ್ನ ಡೈರೆಕ್ಟರ್ ಆಕಾಶ್ ಶ್ರೀವತ್ಸ ಆರಂಭದಲ್ಲಿ ಜಾಣ್ಮೆಯಿಂದಲೇ ತಿಳಿಸಿದ್ದಾರೆ.


ಚಿತ್ರದಲ್ಲಿ ಅಪ್ಪ-ಮಗಳ ಕಥೆ ಇದಿಯೇ?


ಆದರೆ ಅದು ಪ್ರೇಕ್ಷಕರಿಗೆ ತಿಳಿಯೋದಿಲ್ಲ ಬಿಡಿ. ಅಪ್ಪ-ಮಗಳ ಸಾಮಾನ್ಯ ಕಥೆಯ ರೀತಿಯಲ್ಲಿಯೇ ಚಿತ್ರ ಹೋಗುತ್ತದೆ. ಮುಂದೆ ಕೊಲೆ ಆಗುತ್ತಲೇ ಹೋದಾಗ ಕಥೆಯಲ್ಲಿ ಇಡೀ ಸಿನಿಮಾದ ಚಿತ್ರಣವೇ ಬದಲಾಗುತ್ತಿದೆ. ಕಟ್ಟಕಡೆಯವರೆಗೂ ಕುತೂಹಲ ಮೂಡಿಸುತ್ತಲೇ ಹೋಗುವ ಶಿವಾಜಿ ಸುರತ್ಕಲ್-೨ ಎಲ್ಲೂ ಬೋರ್ ಹೊಡೆಯೋದಿಲ್ಲ.


ಶಿವಾಜಿ ಸುರತ್ಕಲ್-2 ಸಿನಿಮಾದಲ್ಲಿ ಒಂದು ವಿಶೇಷ ಹಾಡು ಕೂಡ ಇದೆ. ಇದರಲ್ಲಿ ಚಾರ್ಲಿ ನಟಿ ಸಂಗೀತಾ ಶೃಂಗೇರಿ ಕಾಣಿಸಿಕೊಂಡಿದ್ದಾರೆ. ಆದರೆ ಇಡೀ ಕಥೆಗೆ ಈ ಹಾಡಿನ ಅವಶ್ಯಕತೆ ಇದೆ ಅಂತ ಏನೂ ಅನಿಸೋದಿಲ್ಲ. ಆದರೂ ಚಿತ್ರದಲ್ಲಿ ಈ ಗೀತೆ ಇದೆ ನೋಡಿ.


ಶಿವಾಜಿ ಅಪ್ಪನ ಪಾತ್ರದಲ್ಲಿ ಹಿರಿಯ ನಟ ನಾಜರ್


ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ನಾಜರ್ ಪಾತ್ರ ಸ್ಪೆಷಲ್ ಆಗಿದೆ. ತುಂಬಾ ಚೆನ್ನಾಗಿಯೇ ನಾಜರ್ ಅವರು ಈ ರೋಲ್ ನಿಭಾಯಿಸಿದ್ದಾರೆ. ಶೋಭರಾಜ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಕೆಲಸ ಇಲ್ಲಿ ಜಾಸ್ತಿ ಏನೂ ಇಲ್ಲ ಬಿಡಿ.


ಆದರೆ ಮೇಘನಾ ಗಾಂವ್ಕರ್ ಇಡೀ ಚಿತ್ರದಲ್ಲಿದ್ದಾರೆ. ಶಿವಾಜಿಯ ಪ್ರತಿ ಹೆಜ್ಜೆಗೂ ಆರ್ಡರ್ ಕೊಡ್ತಾನೆ ಚಿತ್ರದ ಕಥೆಗೆ ಒಂದು ಭಾಗವಾಗಿದ್ದಾರೆ. ಶಿವಾಜಿ ಸುರತ್ಕಲ್ ಮಗಳಾಗಿ ನಟಿಸಿರೊ ಬಾಲ ನಟಿ ಕೂಡ ಇಷ್ಟ ಆಗುತ್ತಾರೆ. ಮಾತಾಡೋ ಗೊಂಬೆ ಹಾಡಲ್ಲಿ ಇನ್ನೂ ಆಪ್ತ ಅನಿಸುತ್ತಾಳೆ.


Ramesh Aravind Acted Kannada Shivaji Surathkal-2 Cinema Review Story
ಚಿತ್ರದಲ್ಲಿ ಅಪ್ಪ-ಮಗಳ ಕಥೆ ಇದಿಯೇ?


ಶಿವಾಜಿ ಸುರತ್ಕಲ್‌ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ


ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಡಾಲಿ ಧನಂಜಯ್ ಆತ್ಮೀಯ ಸ್ನೇಹಿತ ಪೂರ್ಣಚಂದ್ರ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಇನ್ನುಳಿದಂತೆ ಜುಡಾ ಸ್ಯಾಂಡಿ ಅವರ ಸಂಗೀತ ಇಡೀ ಚಿತ್ರಕ್ಕೆ ಪೂರಕವಾಗಿಯೇ ಇದೆ. ಉಳಿದಂತೆ ಶಿವಾಜಿ ಸುರತ್ಕಲ್-2 ಸಿನಿಮಾ ಎಲ್ಲರೂ ನೋಡಬಹುದಾದ ಸಿನಿಮಾನೇ ಆಗಿದೆ.


ಇದನ್ನೂ ಓದಿ: Weekend With Ramesh: ಡಾಲಿ ಮದುವೆ ಯಾವಾಗ? ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಗುಟ್ಟು ರಟ್ಟು?


ಆದರೆ ಆಗಾಗ ಅಲ್ಲಲ್ಲಿ ಈ ಚಿತ್ರದಲ್ಲಿ ದೆವ್ವ ಏನಾದರೂ ಇದೀಯೇ ಅನ್ನೋ ಅನುಮಾನವೂ ಬರುತ್ತದೆ. ಅದನ್ನ ತಿಳಿಯಲು ನೀವು ಇಡೀ ಸಿನಿಮಾ ನೋಡಬೇಕು. ಆಗ ಆಗೋ ಫೀಲ್ ನಿಜಕ್ಕೂ ಇಲ್ಲಿ ಇಂಟ್ರಸ್ಟಿಂಗ್ ಅನಿಸುತ್ತದೆ. ಆಗೊಮ್ಮೆ ಈಗೊಮ್ಮೆ ಬರುವ ರಮೇಶ್ ಅರವಿಂದ್ ಅವರ ಹಾಸ್ಯಭರಿತ ಮಾತುಗಳು ಮಜಾಕೊಡುತ್ತವೆ ಅಂತಲೇ ಹೇಳಬಹುದು.

First published: