ರಾಮಾಚಾರಿ (Ramachari) ಸೀರಿಯಲ್ (Serial) ನಟಿ ಮೌನ ಗುಡ್ಡೆಮನೆ (Mouna Guddemane) ಸೋಷಿಯಲ್ ಮಿಡಿಯಾದಲ್ಲಿ (Social Media) ಸಖತ್ ಆ್ಯಕ್ಟಿವ್ ಆಗಿದ್ದಾರೆ. ವಿಡಿಯೋ, ಫೋಟೋಸ್, ರೀಲ್ಸ್, ಸ್ಟೋರಿಗಳನ್ನು ಅಪ್ಡೇಟ್ ಮಾಡುತ್ತಾ ಇನ್ಸ್ಟಾಗ್ರಾಮ್ (Insgtaram) ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುತ್ತಾರೆ. ರಾಮಾಚಾರಿ ಸೀರಿಯಲ್ನಲ್ಲಿ ಚಾರು (Charu) ಪಾತ್ರ ಮಾಡಿ ಕನ್ನಡಿಗರ ಪ್ರೀತಿ ಗಳಿಸುತ್ತಿರುವ ಯುವ ನಟಿ ಮೌನ ಅವರು ಈಗ ಶಾಕುಂತಲೆಯಾಗಿ (Shakaunthale) ಬದಲಾಗಿದ್ದಾರೆ. ಹೌದು ಇದು ತೆಲುಗು ಸಿನಿಮಾ ಶಾಕುಂತಲಂ (Shaakuntalam) ಅಲ್ಲ, ಕನ್ನಡದ ನಟಿಯ ಶಾಕುಂತಲೆ ರೀಲ್ಸ್.
ರೀಲ್ಸ್ ಶೇರ್ ಮಾಡಿದ ಚಾರು
ಮೌನ ಗುಡ್ಡೆಮನೆ ಸುಂದರವಾದ ರೀಲ್ಸ್ ಒಂದನ್ನು ಶೇರ್ ಮಾಡಿದ್ದಾರೆ. ಶಾಕುಂತ್ಲೆ ಸಿಕ್ಕಳು, ಸುಮ್ ಸುಮ್ನೆ ನಕ್ಕಳು ಹಾಡಿಗೆ ಮೌನ ಅವರು ಸುಂದರ ಸಲ್ವಾರ್ ಧರಿಸಿ ಅಭಿನಯಿಸಿದ್ದಾರೆ.
ಸಿಂಪಲ್ ಆಗಿರುವ ಬ್ಲೂ ಕಲರ್ ಸಲ್ವಾರ್ ಧರಿಸಿದ ನಟಿ ತುಂಬಾ ಸಿಂಪಲ್ ಆಗಿ ರೆಡಿಯಾಗಿದ್ದರು. ದುಪಟ್ಟಾವನ್ನು ಬೀಸಿ ಮುಗುಳುನಗೆ ಬೀರಿ ಪಡ್ಡೆ ಹುಡುಗರ ನಿದ್ದೆ ಕದ್ದುಬಿಟ್ಟಿದ್ದಾರೆ ಚಾರು.
ವೈರಲ್ ಆಯ್ತು ಚಾರು ವಿಡಿಯೋ
ನಟಿಯ ಈ ವಿಡಿಯೋಗೆ ಎಂಟೂವರೆ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು 50ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ಜನರು ಕಮೆಂಟ್ ಮಾಡಿ ನೀವು ನಿಜಕ್ಕೂ ಶಾಕುಂತಲೆ, ನಿಮ್ಮ ಜೊತೆ ನಾವು ಕಾಫಿ ಕುಡಿಯಬೇಕು, ರಾಮಾಚಾರಿ ಸೀರಿಯಲ್ ಸೂಪರ್ ಆಗಿ ಬರುತ್ತಿದೆ ಎಂದು ಹೊಗಳಿದ್ದಾರೆ.
View this post on Instagram
View this post on Instagram
ಹಣದ ಮದ ತಲೆಗೇರಿಸಿಕೊಂಡ ರಿಚ್ ಬ್ಯೂಟಿ ಪಾತ್ರ ಮಾಡುತ್ತಿರುವ ಮೌನ ಅವರು ಹೀರೋ ರಾಮಾಚಾರಿಗೆ ಸೆಡ್ಡು ಹೊಡೆಯುತ್ತಾರೆ. ಶ್ರೀಮಂತ ಮನೆತನದ ಯುವತಿಯಾಗಿ ಅಹಂಕಾರದಿಂದ ವರ್ತಿಸುವ ಚಾರು ಪಾತ್ರ ಮಾಡಿರುವ ಮೌನ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಅದೇ ರೀತಿ ಇತ್ತೀಚಿನ ಎಪಿಸೋಡ್ಗಳಲ್ಲಿ ಚಾರು ಪಾತ್ರ ಸ್ವಲ್ಪ ಪಾಸಿಟಿವ್ ಶೇಡ್ ಪಡೆಯುತ್ತಿದೆ. ಚಾರು ಬದಲಾಗುವುದನ್ನು ಹಾಗೂ ರಾಮಾಚಾರಿ ಪ್ರೀತಿಗಾಗಿ ಹಪಹಪಿಸುವುದನ್ನು ತೋರಿಸಲಾಗಿದೆ.
ಜನಮೆಚ್ಚಿದ ಸ್ಟೈಲ್ ಐಕಾನ್
ಅನುಬಂಧ ಅವಾರ್ಡ್ಸ್ 2022 | ಜನ ಮೆಚ್ಚಿದ STYLE ICON (FEMALE) - ಚಾರು (ರಾಮಾಚಾರಿ) ಆಗಿ ಪಾರು ಖ್ಯಾತಿಯ ಮೌನ ಗುಡ್ಡೆಮನೆ ಆಯ್ಕೆಯಾಗಿದ್ದರು. ಕಂಪ್ಲೀಟ್ ರೆಡ್ ಗೌನ್ ಹಾಗೂ ಬಿಳಿ ಸ್ಟೋನ್ಡ್ ಜ್ಯುವೆಲ್ಲರಿ ಧರಿಸಿದ್ದ ನಟಿ ಕ್ಯೂಟ್ ಆಗಿ ಸ್ಟೇಜ್ನಲ್ಲಿ ಮಿಂಚಿದ್ದರು.
ಇದನ್ನೂ ಓದಿ: Ramachari: ಚಾರುಳನ್ನು ಸುಮ್ನೆ ಬಿಡ್ತಾನಾ ಕೋದಂಡ, ಇವತ್ತೇ ಕೊನೆ ದಿನನಾ?
ನಟಿ ಅವಾರ್ಡ್ ಫಂಕ್ಷನ್ನ ಪ್ರೋಮೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಆಗಾಗ ಫೋಟೋ ಶೂಟ್ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಲವಾರು ಕಾನ್ಸೆಪ್ಟ್ನಲ್ಲಿ ನಟಿ ವಿಭಿನ್ನ ಫೋಟೋಶೂಟ್ಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಇದೀಗ ಚಾರು ಪೋಸ್ಟ್ ಮಾಡಿರುವ ಶಾಕುಂತಲೆ ವಿಡಿಯೋವನ್ನು ನೆಟ್ಟಿಗರು ನೋಡಿ ಮೆಚ್ಚಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟಿಯ ರೀಲ್ಸ್ಗೆ ಲೈಕ್, ಕಮೆಂಟ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ