Ramachari 2: ಮತ್ತೆ ಬರ್ತಿದ್ದಾನೆ ರಾಮಾಚಾರಿ, ಈ ಸಲ ಮುಖ್ಯಪಾತ್ರದಲ್ಲಿ ಯಾರಿರುತ್ತಾರೆ?

ರಾಮಾಚಾರಿ 2.0 ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈಗ ಪೋಸ್ಟ್ ಪ್ರೋಡಕ್ಷನ್ ಕೆಲಸ ನಡೀತಾ ಇದೆ. ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಪ್ಲಾನ್ ಆಗಿದೆ.ಸದ್ಯ ಟೀಸರ್ ಹೊರ ಬಂದಿದೆ.

ರಾಮಾಚಾರಿ 2.0 ಡಿಸೆಂಬರ್ ರಿಲೀಸ್

ರಾಮಾಚಾರಿ 2.0 ಡಿಸೆಂಬರ್ ರಿಲೀಸ್

  • Share this:
ರಾಮಾಚಾರಿ Ramachari ಅಂದಾಕ್ಷಣ ನಮಗೆ ಇಬ್ಬರು ಸೂಪರ್ ಸ್ಟಾರ್ ಗಳು ನೆನಪಿಗೆ ಬರುತ್ತಾರೆ. ನಾಗರಹಾವು ರಾಮಾಚಾರಿ ರೆಬಲ್ ಆಗಿಯೇ ಇಷ್ಟ ಆಗುತ್ತಾರೆ. ಪೆದ್ದು ಮುದ್ದು ರಾಮಾಚಾರಿ ಆಗಿ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಕಣ್ಮುಂದೆ ಬಂದೇ ಬಿಡ್ತಾರೆ. ಆದರೆ ಕನ್ನಡದಲ್ಲಿ ಈಗ ಇನ್ನೂ ಒಬ್ಬ ರಾಮಾಚಾರಿ ಬರ್ತಿದ್ದಾರೆ. ಈ ರಾಮಾಚಾರಿ ಪೆದ್ದು ಅಲ್ಲ. ಸಿಡುಕನೂ ಅಲ್ಲ. ಈತ (Intelligent)ಬುದ್ದಿವಂತ. ಈತನ ಲುಕ್ ಬೇರೆ ಇದೆ. ಖದರ್ ಮಾಸ್ ಆಗಿಯೇ ಇದೆ. ಮೊನ್ನೆ ಈ ರಾಮಾಚಾರಿಯ ಟೀಸರ್ ಹೊರಬಿದ್ದಿದೆ. ಈ ರಾಮಾಚಾರಿ ತಮ್ಮ ಚಿತ್ರದ ಕುರಿತು ನಮ್ಮ ಜೊತೆಗೆ ಒಂದಷ್ಟು ಅಪ್​ಡೇಟ್ಸ್ ಹಂಚಿಕೊಂಡಿದ್ದಾರೆ.

ಕನ್ನಡಿಗರ ರಾಮಾಚಾರಿ ಎಲ್ಲ ಯಂಗ್ ಹೀರೋಗಳಿಗೂ ಸ್ಪೂರ್ತಿನೇ. ರಾಮಾಚಾರಿ ಹೆಸರಿನಲ್ಲಿಯೇ ಕೆಜಿಎಫ್ ರಾಕಿಂಗ್ ಸ್ಟಾರ್ ಯಶ್ ಕೂಡ ಮಿಂಚಿದ್ದು ಗೊತ್ತೇ ಇದೆ. ಆದರೆ, ಈಗ ಬರ್ತಿರೋ 2.0 ರಾಮಾಚಾರಿ ವಿಶೇಷವಾಗಿಯೇ ಇದ್ದಾನೆ. ಈತ ಬುದ್ದಿವಂತ. ಈತನ ಲುಕ್ ವಿಭಿನ್ನವಾಗಿಯೇ ಇದೆ. ಈ ರಾಮಾಚಾರಿಯ ಓಟ ಬೇರೆ. ನೋಟವೂ ಬೇರೆ. ಒಂದು ರೀತಿ ಕಾರ್ಪೋರೇಟ್ ರಾಮಾಚಾರಿನೇ ಬಿಡಿ. ಇಂತಹ ಈ ರಾಮಾಚಾರಿ ಈಗ ಶೂಟಿಂಗ್ ಮುಗಿಸಿಕೊಂಡಿದ್ದಾನೆ.

ಆ ರಾಮಾಚಾರಿಗೂ ಈ ರಾಮಾಚಾರಿಗೂ ಲಿಂಕ್ ಇದಿಯೇ

ಹೌದು. ನವ ನಟ ತೇಜ್ ಈ ಸಲ ಕನ್ನಡದ ರಾಮಾಚಾರಿಯ ಮೊಮ್ಮಗನಾಗಿಯೇ ಬರ್ತಿದ್ದಾರೆ. ನಾಗರಹಾವು ರಾಮಾಚಾರಿಯ ಮೊಮ್ಮಗನಾಗಿಯೇ ನಿಮಗೆ ಇಲ್ಲಿ ಕಾಣಿಸಿಕೊಳ್ತಾರೆ. ಇಷ್ಟು ಬಿಟ್ಟರೇ, ಆ ರಾಮಾಚಾರಿಗೂ ಈ ರಾಮಾಚಾರಿಗೂ ಎಲ್ಲೂ ಲಿಂಕ್ ಇಲ್ಲ. ಈ ರಾಮಾಚಾರಿ ಕಂಪ್ಲೀಟ್ ಬೇರೆನೆ ಇದೆ. ಮೊನ್ನೆ ಈ ಚಿತ್ರದ ಟೀಸರ್ ಹೊರ ಬಂದಿದೆ. ಅದರಲ್ಲಿ ರಾಮಾಚಾರಿ 2.0 ಪಾತ್ರದ ಪರಿಚಯ ಸಿಗುತ್ತದೆ. ಇಡೀ ರಾಮಾಚಾರಿ ಖದರ್ ಕೂಡ ನಿಮ್ಮನ್ನ ಸೆಳೆಯೋ ಕೆಲಸ ಮಾಡುತ್ತದೆ.

ಇದನ್ನೂ ಓದಿ: Actress Ramya: ಎಷ್ಟು ಚಂದ ಕಾಣ್ತಾರೆ ನೋಡಿ ರಮ್ಯಾ! ಪ್ಲೀಸ್ ಮೂವಿ ಮಾಡಿ ಅಂತಿದ್ದಾರೆ ಫ್ಯಾನ್ಸ್

ರಾಮಾಚಾರಿ-2.0 ಸಿನಿಮಾದ ಈ ಹೀರೋ ಯಾರು?

ರಾಮಾಚಾರಿ 2.0 ಸಿನಿಮಾದ ಈ ಹೊಸ ರಾಮಾಚಾರಿ ಯಾರು ಅಂತ ಹೇಳೋದಾದ್ರೆ, ನಟಿ ಮೇಘನಾರಾಜ್ ಅವರ ರಿಲೇಟಿವ್ ಈ ರಾಮಾಚಾರಿ. ಹೆಸರು ತೇಜ್. ವಿಶೇಷವೆಂದ್ರೆ, ಈ ರಾಮಾಚಾರಿ ಚಿತ್ರಕ್ಕಾಗಿಯೇ ಸೂಕ್ತ ತಯಾರಿನೂ ಮಾಡಿಕೊಂಡಿದ್ದು, ಈ ಒಂದೇ ಚಿತ್ರಕ್ಕಾಗಿಯೇ ಮೂರು, ಮೂರು ಕೆಲಸವನ್ನ ಮಾಡಿಕೊಂಡು ರಿಲೀಸ್ ಗೆ ರೆಡಿ ಆಗುತ್ತಿದ್ದಾರೆ.

Ramachari 2.0 film is now under post production
ರಾಮಾಚಾರಿ 2.0 ಡಿಸೆಂಬರ್ ತಿಂಗಳಲ್ಲಿ ರಿಲೀಸ್


ರಾಮಾಚಾರಿ 2.0 ಚಿತ್ರಕ್ಕೆ ರಾಮಾಚಾರಿನೇ ಎಲ್ಲ

ಹೌದು. ರಾಮಾಚಾರಿ ಚಿತ್ರವನ್ನ ನಾಯಕ ನಟ ತೇಜ್ ಡೈರೆಕ್ಟ್ ಮಾಡಿದ್ದಾರೆ. ತಾವೇ ತಮ್ಮ ಚಿತ್ರಕ್ಕೆ ಬಂಡವಾಳ ಕೂಡ ಹಾಕಿದ್ದಾರೆ. ವಿಶೇಷವೆಂದ್ರೆ ತೆರೆ ಮೇಲೆ ಬಂದು ಈ ಮೂರು ಕೆಲಸವನ್ನೂ ಈಗಾಗಲೇ ಸಮರ್ಥವಾಗಿಯೇ ನಿಭಾಹಿಸಿದ್ದಾರೆ.

ಇದನ್ನೂ ಓದಿ: Actor Dwarakish: ಹಾಸ್ಯ ಕಲಾವಿದ ಹೀರೋ ಆದ್ರೆ ಚಿತ್ರ ಹಿಟ್, ಹೀರೋ ಕಾಮಿಡಿ ಮಾಡಿದ್ರೆ ಸೂಪರ್ ಡೂಪರ್ ಹಿಟ್!

ಡಿಸೆಂಬರ್ ತಿಂಗಳಲ್ಲಿ ರಾಮಾಚಾರಿ 2.0 ರಿಲೀಸ್ ಪ್ಲಾನ್

ರಾಮಾಚಾರಿ 2.0 ಚಿತ್ರದ ಚಿತ್ರೀಕರಣದ ಕೆಲಸ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಾ ಇದೆ. ಇದೇ ತಿಂಗಳು ಡಬ್ಬಿಂಗ್ ಕೂಡ ಆರಂಭಗೊಳ್ಳುತ್ತದೆ. ಡಿಸೆಂಬರ್ ತಿಂಗಳಲ್ಲಿ ಸಿನಿಮಾ ರಿಲೀಸ್ ಪ್ಲಾನ್ ಹಾಕಲಾಗಿದೆ.

ರಾಮಾಚಾರಿ 2.0 ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅಭಿನಯ

ರಾಮಾಚಾರಿ 2.0 ಸಿನಿಮಾದಲ್ಲಿ ಫ್ಯಾಮಿಲಿ ಡ್ರಾಮಾ ಕೂಡ ಇದೆ. ಈ ಒಂದು ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸ್ಪರ್ಶ ರೇಖಾ, ಚಂದನಾ ಸ್ವಾತಿ, ವಿಜಯ್ ಚಂಡೂರ ಕೂಡ ಮುಖ್ಯ ಪಾತ್ರದಲ್ಲಿಯೇ ನಟಿಸಿದ್ದಾರೆ. ಇಷ್ಟೆಲ್ಲಾ ಕಲಾವಿದರ ಈ ಸಿನಿಮಾ ರಾಮಾಚಾರಿ ಅನ್ನೋ ಟೈಟಲ್ ಮೂಲಕವೇ ಸೆಳೆಯುತ್ತಿದ್ದು, ಹೆಚ್ಚು ಕಡಿಮೆ ಕಳೆದ ಎರಡು ವರ್ಷದ ಹಿಂದೆಯೇ ಈ ಚಿತ್ರ ಸೆಟ್ಟೇರಿತ್ತು. ಈಗ ಎಲ್ಲ ಕೆಲಸ ಮುಗಿಸಿಕೊಂಡು ರಿಲೀಸ್ ಗೆ ರೆಡಿ ಆಗುತ್ತಿದೆ.
First published: