ಮತ್ತೊಂದು ಖಡಕ್ ಪಾತ್ರದಲ್ಲಿ ಕೆಜಿಎಫ್ ಗರುಡ!; ಕನ್ನಡದಲ್ಲಿ ಅವರ ಮುಂದಿನ ಚಿತ್ರ ಯಾವುದು ಗೊತ್ತಾ?

KGF Garuda | Ramachandra Raju: ಕೆಜಿಎಫ್​ ತೆರೆಕಂಡ ನಂತರ ರಾಮಚಂದ್ರ ರಾಜು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ತಿ ಅಭಿನಯದ ‘ಸುಲ್ತಾನ್​’ ಸಿನಿಮಾದಲ್ಲಿ ರಾಮಚಂದ್ರ ವಿಲನ್​. ಈಗ ಅವರು ಸ್ಯಾಂಡಲ್​ವುಡ್​ನಲ್ಲಿ ಖಡಕ್​ ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಮಚಂದ್ರ ರಾಜು

ರಾಮಚಂದ್ರ ರಾಜು

  • Share this:
ಭಾರತದ ಚಿತ್ರರಂಗವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ್ದು ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​ ಚಿತ್ರ. ಈ ಸಿನಿಮಾದಲ್ಲಿ ಪ್ರಮುಖ ವಿಲನ್​ ಆಗಿ ಕಾಣಿಸಿಕೊಂಡಿದ್ದು ಗರುಡ ಪಾತ್ರಧಾರಿ ರಾಮಚಂದ್ರ ರಾಜು. ಈಗ ಅವರಿಗೆ ಸ್ಯಾಂಡಲ್​ವುಡ್​ ಮಾತ್ರವಲ್ಲದೆ ಬೇರೆ ಭಾಷೆಗಳಿಂದಲೂ ಆಫರ್​ಗಳು ಬರುತ್ತಿವೆ. ‘ಕೆಜಿಎಫ್’​ ನಂತರ ಈಗ ಅವರು ಕನ್ನಡದಲ್ಲಿ ಮತ್ತೊಂದು ಖಡಕ್​ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ.

ಹಾಗಿದ್ದರೆ ಯಾವುದು ಆ ಚಿತ್ರ? ಧನ್ವಿರ್​ ನಟನೆಯ ‘ಬಂಪರ್​’. ಸಿಂಪಲ್​ ಸುನಿ ನಿರ್ದೇಶನದ ‘ಬಜಾರ್​’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ಧನ್ವೀರ್​ ಮುಂದಿನ ಸಿನಿಮಾ ‘ಬಂಪರ್​’. ಹರಿ ಸಂತೋಷ್​ ನಿರ್ದೇಶನದ ಈ ಚಿತ್ರದಲ್ಲಿ ವಿಲನ್​ ಪಾತ್ರಕ್ಕೆ ರಾಮಚಂದ್ರ ರಾಜು ಜೀವ ತುಂಬಲಿದ್ದಾರೆ.

‘ಬಂಪರ್​’ ಸಿನಿಮಾಗೆ ಒಂದೊಳ್ಳೆಯ ಖಡಕ್​ ವಿಲನ್​ ಹುಡುಕಾಟದಲ್ಲಿ ತೊಡಗಿದ್ದಾಗ ನಿರ್ದೇಶಕರಿಗೆ ಹೊಳೆದಿದ್ದು ರಾಮಚಂದ್ರ ರಾಜು ಹೆಸರು. ಈಗಾಗಲೇ ‘ಕೆಜಿಎಫ್’​ ಮೂಲಕ ಮನೆ ಮಾತಾಗಿರುವ ರಾಮಚಂದ್ರ ‘ಬಂಪರ್​’ ಕತೆ ಕೇಳಿದ್ದು, ಪಾತ್ರ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಬಜಾರ್ ಅಂಗಳದಲ್ಲಿ ಸಿಕ್ಕ ಧನ್ವೀರ್​

‘ಕಾಲೇಜ್​ ಕುಮಾರ್​’ ಸಿನಿಮಾವನ್ನು ತಮಿಳು ಹಾಗೂ ತೆಲುಗಿಗೆ ರಿಮೇಕ್​ ಮಾಡಿದ್ದರು ನಿರ್ದೇಶಕ ಹರಿ ಸಂತೋಷ್​. ಇತ್ತೀಚೆಗೆ ತೆರೆಕಂಡ ‘ಬಿಚ್ಚುಗತ್ತಿ ಚಾಪ್ಟರ್​ 1- ದಳವಾಯಿ ದಂಗೆ’  ಹೆಸರಿನ ಐತಿಹಾಸಿಕ ಸಿನಿಮಾ ಮಾಡುವ ಮೂಲಕ ಅವರು ಭರವಸೆ ಮೂಡಿಸಿದ್ದರು.

ಕೆಜಿಎಫ್​ ತೆರೆಕಂಡ ನಂತರ ರಾಮಚಂದ್ರ ರಾಜು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ತಿ ಅಭಿನಯದ ‘ಸುಲ್ತಾನ್​’ ಸಿನಿಮಾದಲ್ಲಿ ರಾಮಚಂದ್ರ ವಿಲನ್​. ಇನ್ನೂ ಕೆಲ ತಮಿಳು ಚಿತ್ರಗಳಿಗೆ ಅವರು ಸಹಿ ಹಾಕಿದ್ದಾರೆ. ಇದರ ಜೊತೆ ಜೊತೆಗೆ ಬಂಪರ್​ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ.
First published: